ETV Bharat / snippets

ಬೆಂಗಳೂರು ಜಿಲ್ಲೆಯ ಏಕೈಕ‌ ಹೆಬ್ಬಗೋಡಿ ನಗರಸಭೆ ಬಿಜೆಪಿ ತೆಕ್ಕೆಗೆ

author img

By ETV Bharat Karnataka Team

Published : Sep 6, 2024, 10:55 PM IST

hebbagodi
ಗೆದ್ದವರಿಗೆ ಅಭಿನಂದಿಸಿದ ಸಂಸದ ಡಾ. ಸಿ.ಎನ್. ಮಂಜುನಾಥ್, ಇತರರು (ETV Bharat)

ಆನೇಕಲ್: ಬೆಂಗಳೂರು ನಗರ ಜಿಲ್ಲೆಯ ಏಕೈಕ‌ ನಗರಸಭೆಯನ್ನು ಬಿಜೆಪಿ ತನ್ನ ತೆಕ್ಕೆಗೆ ಪಡೆದಿದೆ. ಆನೇಕಲ್ ತಾಲೂಕಿನ ಹೆಬ್ಬಗೋಡಿ ನಗರಸಭೆಯಲ್ಲಿ ಕಮಲಪಡೆ ಮೇಲುಗೈ ಸಾಧಿಸಿದೆ.

ನಗರಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಜಿದ್ದಾಜಿದ್ದಿನ ಪೈಪೋಟಿ ಇತ್ತು. ಕೊನೆಗೂ, ಬಿಜೆಪಿಯ ಪ್ರಮೀಳಾ ರಾಮಚಂದ್ರ ಅಧ್ಯಕ್ಷರಾದರೆ, ಉಪಾಧ್ಯಕ್ಷರಾಗಿ ಸುಜಾತ ಕೆ.ಪಿ. ರಾಜು ಅವರು ಅಯ್ಕೆಯಾಗಿದ್ದಾರೆ. ಬಿಜೆಪಿ ಮತ್ತು ಜೆಡಿಎಸ್ ಹೊಂದಾಣಿಕೆಯಿಂದ ನಗರಸಭೆ ಕೇಸರಿ ಪಕ್ಷದ ತೆಕ್ಕೆಗೆ ಜಾರಿದೆ.

ಒಟ್ಟು 31 ಸದಸ್ಯರನ್ನು ಹೊಂದಿದ್ದ ಹೆಬ್ಬಗೋಡಿ ನಗರಸಭೆಯ ಚುನಾವಣೆ ಫಲಿತಾಂಶ ಘೋಷಣೆಯಾಗುತ್ತಿದ್ದಂತೆ ಭಾರತೀಯ ಜನತಾ ಪಕ್ಷ ಹಾಗೂ ಜಾತ್ಯತೀತ ಜನತಾ ದಳದ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು. ಈ ವೇಳೆ ಸಂಸದ ಡಾ. ಸಿ.ಎನ್. ಮಂಜುನಾಥ್, ಕೇಂದ್ರ ಮಾಜಿ ಸಚಿವ ಎ.ನಾರಾಯಣಸ್ವಾಮಿ, ಶಾಸಕರಾದ ಎಂ.ಕೃಷ್ಣಪ್ಪ ಇತರರು ಹಾಜರಿದ್ದು, ಜಯಶಾಲಿಗಳಿಗೆ ಅಭಿನಂದಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.