ETV Bharat / snippets

ಕಳವು ಮಾಲು ಸ್ವೀಕಾರ ಆರೋಪ: ಗೋಲ್ಡ್​​ ಕಂಪನಿಯ ಬಾಬು ಬಂಧನ

author img

By ETV Bharat Karnataka Team

Published : Jun 27, 2024, 1:06 PM IST

Updated : Jun 27, 2024, 1:52 PM IST

ಅಟ್ಟಿಕಾ ಗೋಲ್ಡ್​​ ಕಂಪನಿಯ ಮಾಲೀಕ ಬಾಬು ಬಂಧನ
ಅಟ್ಟಿಕಾ ಗೋಲ್ಡ್​​ ಕಂಪನಿಯ ಮಾಲೀಕ ಬಾಬು ಬಂಧನ (ETV Bharat)

ತುಮಕೂರು: ಕಳವು ಮಾಲು ಸ್ವೀಕರಿಸಿದ ಆರೋಪದ ಮೇರೆಗೆ ಅಟ್ಟಿಕಾ ಗೋಲ್ಡ್ ಕಂಪನಿಯ ನಿರ್ದೇಶಕ ಬಾಬು ಅಲಿಯಾಸ್ ಪಿ.ಎಸ್.ಅಯ್ಯೂಬ್​ ಅವರನ್ನು ತುಮಕೂರು ಪೊಲೀಸರು ಬುಧವಾರ ಬಂಧಿಸಿದ್ದಾರೆ. ಬೆಂಗಳೂರಿನ ನಿವಾಸದ ಬಳಿಯೇ ಬಾಬು ಅವರನ್ನು ವಶಕ್ಕೆ ಪಡೆದಿರುವ ಬಗ್ಗೆ ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಮಾಹಿತಿ ನೀಡಿದ್ದಾರೆ.

ಈ ಬಗ್ಗೆ ಪ್ರಕಟಣೆ ನೀಡಲಾಗಿದ್ದು, ಕಳವು ಮಾಲು ಸ್ವೀಕರಿಸಿರುವ ಬಗ್ಗೆ ತುರುವೇಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಸಂಬಂಧ ತುರುವೇಕೆರೆ ಪೊಲೀಸ್ ವೃತ್ತ ನಿರೀಕ್ಷಕ ಲೋಹಿತ್ ಬಿ.ಎನ್ ಮತ್ತು ಸಿಬ್ಬಂದಿ ಹಿರಿಯ ಪೊಲೀಸ್​ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಬೆಂಗಳೂರಿನ ಪ್ರೆಜರ್ ಟೌನ್​ನ ಮರಿಯಮ್ಮ ಅಪಾರ್ಟ್​ಮೆಂಟ್​ ಬಳಿ ಜೂನ್ 26ರಂದು ಸಂಜೆ 6 ಗಂಟೆಗೆ ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಚಿನ್ನ ಕಳ್ಳಸಾಗಣೆ ಯತ್ನ: ಕಸ್ಟಮ್ಸ್ ಅಧಿಕಾರಿಗಳ ಬಲೆಗೆ ಮೂವರು ಸ್ಮಗ್ಲರ್ಸ್

Last Updated : Jun 27, 2024, 1:52 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.