ಹುಬ್ಬಳ್ಳಿ: ಅವಳಿ ನಗರ ಹುಬ್ಬಳ್ಳಿ- ಧಾರವಾಡದಲ್ಲಿ ವ್ಹೀಲಿಂಗ್ ಹಾವಳಿ ಜೋರಾಗಿದೆ. ಯುವಕ - ಯುವತಿಯರು ಜನನಿಬಿಡದ ಪ್ರದೇಶದಲ್ಲಿ ವ್ಹೀಲಿಂಗ್ ಮಾಡುವ ಮೂಲಕ ಸಾರ್ವಜನಿಕರಿಗೆ ಕಿರಿಕಿರಿಯನ್ನುಂಟು ಮಾಡುತ್ತಿದ್ದವರ ಮೇಲೆ ಪೊಲೀಸರು ಕ್ರಮ ಕೈಗೊಳ್ಳುತ್ತಿದ್ದಾರೆ.
ಧಾರವಾಡದ ಯುವಕನೊಬ್ಬ ಯುವತಿಯೊಂದಿಗೆ ಕೆಟಿಎಂ ಡ್ಯೂಕ್ 350 ಬೈಕ್ ಮೇಲೆ, ಹಾವೇರಿ ಜಿಲ್ಲೆಯ ರಾಣಿಬೆನ್ನೂರಿನ ಯುವತಿ ಕೆಟಿಎಂ ಡ್ಯೂಕ್-250 ಬೈಕ್ನಲ್ಲಿ ವ್ಹೀಲಿಂಗ್ನಲ್ಲಿ ತೊಡಗಿದ್ದಳು. ಇದನ್ನು ಗಮನಿಸಿದ ಧಾರವಾಡ ಸಂಚಾರಿ ಠಾಣೆಯ ಪೊಲೀಸರು ಎರಡೂ ಬೈಕ್ಗಳನ್ನು ವಶಕ್ಕೆ ಪಡೆದು ಸೂಕ್ತ ಕಾನೂನು ಕ್ರಮ ಕೈಗೊಂಡಿದ್ದಾರೆ. ಯುವಕ ಹಾಗೂ ಯುವತಿ ಜಂಟಿಯಾಗಿ ವ್ಹೀಲಿಂಗ್ ಮಾಡುತ್ತಿದ್ದರು. ಸಾರ್ವಜನಿಕರಿಗೆ ಕಿರಿಕುಳ ನೀಡುವವರಿಗೆ ಈ ಮೂಲಕ ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ: ಏರ್ಪೋರ್ಟ್ ರಸ್ತೆಯಲ್ಲಿ ಬೈಕ್ ವ್ಹೀಲಿಂಗ್ ಹುಚ್ಚಾಟ: 44 ಯುವಕರು ವಶಕ್ಕೆ, 33 ಪ್ರಕರಣ ದಾಖಲು - Bike Wheeling