ETV Bharat / snippets

ಅಥಣಿ ಬಸ್ ನಿಲ್ದಾಣದಲ್ಲಿ ಶರ್ಟ್ ಬಿಚ್ಚಿ ರೀಲ್ಸ್ ಮಾಡಿದ ಯುವಕನಿಗೆ ಬುದ್ಧಿ ಕಲಿಸಿದ ಪೊಲೀಸರು

author img

By ETV Bharat Karnataka Team

Published : Jul 2, 2024, 4:25 PM IST

ಶರ್ಟ್ ಬಿಚ್ಚಿ ರೀಲ್ಸ್ ಮಾಡಿದ ಯುವಕ
ಶರ್ಟ್ ಬಿಚ್ಚಿ ರೀಲ್ಸ್ ಮಾಡಿದ ಯುವಕ (ETV Bharat)

ಚಿಕ್ಕೋಡಿ: ರೀಲ್ಸ್ ಹುಚ್ಚಿನಿಂದ ಯುವಕ ಯುವತಿಯರು ಅತಿರೇಕದಿಂದ ವರ್ತಿಸಿ ಜನರ ಕೆಂಗಣ್ಣಿಗೆ ಗುರಿಯಾಗುತ್ತಿರುವ ಘಟನೆಗಳು ಅಲ್ಲಲ್ಲಿ ನಡೆಯುತ್ತಿವೆ. ಅಥಣಿ ಬಸ್​ ಸ್ಟ್ಯಾಂಡ್​ನಲ್ಲಿ ರೀಲ್ಸ್​ಗಾಗಿ ಶರ್ಟ್ ಇಲ್ಲದೇ ಪೋಸ್ ನೀಡಿದ ಯುವಕನಿಗೆ ಪೊಲೀಸರು ಬುದ್ಧಿ ಕಲಿಸಿದ್ದಾರೆ. ಶಿನಾಳ ಗ್ರಾಮದ ಬಾಳೇಶ್ ದುರ್ಗಿ ಎಂಬ ಯುವಕ ಶರ್ಟ್ ಇಲ್ಲದೇ ಬಸ್​ ನಿಲ್ದಾಣದಲ್ಲಿ ರೀಲ್ಸ್ ಮಾಡಿರುವುದನ್ನು ಪೊಲೀಸರು ಸಿಸಿಟಿವಿ ಮೂಲಕ ನೋಡಿದ್ದಾರೆ.

ಬಳಿಕ ಯುವಕನನ್ನು ಪೊಲೀಸ್ ಠಾಣೆಗೆ ಕರೆಯಿಸಿ ತಿಳುವಳಿಕೆ ಹೇಳಿದ್ದಾರೆ. ಜೊತೆಗೆ ಅದೇ ಯುವಕನಿಂದ ತಪ್ಪೊಪ್ಪಿಗೆ ಹೇಳಿಕೆಯ ವಿಡಿಯೋ ಮಾಡಿಸಿ, ಸಾಮಾಜಿಕ ಜಾಲತಾಣದಲ್ಲಿ ಅಪ್​ಲೋಡ್ ಮಾಡಿದ್ದಾರೆ. ಸಾರ್ವಜನಿಕ ಸ್ಥಳದಲ್ಲಿ ಯಾರೂ ಸಹ ಈ ರೀತಿಯ ವರ್ತನೆ ಮಾಡದಂತೆ ಯುವಕ ವಿಡಿಯೋದಲ್ಲಿ ಯುವಕ ತಿಳಿಸಿದ್ದಾನೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.