ಉತ್ತರಾಖಂಡ: ಮಂಜಿನ ಮಳೆಯಲ್ಲಿ ಮಿಂದೆದ್ದ ಮಂದಿ-ವಿಡಿಯೋ - ತೆಹ್ರಿ ಹಿಮಪಾತ
🎬 Watch Now: Feature Video
Published : Feb 1, 2024, 12:16 PM IST
|Updated : Feb 1, 2024, 2:22 PM IST
ತೆಹ್ರಿ(ಉತ್ತರಾಖಂಡ): ಇಲ್ಲಿನ ತೆಹ್ರಿಯ ಗಂಗಿ ಎಂಬ ಗ್ರಾಮದಲ್ಲಿ ಭಾರೀ ಹಿಮಪಾತವಾಗಿದ್ದು ಗ್ರಾಮಸ್ಥರು ಕುಣಿದು ಕುಪ್ಪಳಿಸಿದರು. ಬಹಳ ದಿನಗಳಿಂದ ಹಿಮ ಮಳೆಗೆ ಕಾಯುತ್ತಿದ್ದ ಜನತೆ ಆಕಾಶದಿಂದ ಹಿಮ ಬೀಳುವುದನ್ನು ಕಂಡ ಕೂಡಲೇ ಮನೆಯಿಂದ ಹೊರಬಂದು ಸಂಭ್ರಮಿಸಿದರು. ರಾಜ್ಯದಲ್ಲಿ ಸಕಾಲದಲ್ಲಿ ಹಿಮಪಾತ, ಮಳೆಯಾಗದೇ ಬೆಳೆಗಳು ಹಾಳಾಗುತ್ತಿದ್ದವು. ಆದರೆ ಈಗ ಮಂಜಿನ ಜೊತೆ ಮಳೆಯೂ ಆಗುತ್ತಿದ್ದು ಇನ್ನಾದರೂ ಬೆಳೆಗಳು ಉತ್ತಮ ಫಸಲು ನೀಡಲಿ ಎಂದು ರೈತಾಪಿ ವರ್ಗ ಆಶಿಸುತ್ತಿದೆ.
ಇನ್ನು ಮಹಿಳೆಯರು, ಪುರುಷರು ಹಾಗು ಮಕ್ಕಳೆಲ್ಲರೂ ಜೊತೆಯಾಗಿ ಕುಣಿಯುತ್ತಾ ಹಿಮಗಡ್ಡೆಯನ್ನು ಒಬ್ಬರ ಮೇಲೊಬ್ಬರು ಬಿಸಾಡುತ್ತಾ ನಲಿದಾಡಿದರು. ಇಂದು ಮುಂಜಾವಿನ ವೇಳೆ ಸುರ್ಕಂದ ದೇವಸ್ಥಾನ, ಧನೌಲ್ತಿ ಹಾಗೂ ತೆಹ್ರಿ ಜಿಲ್ಲೆಯ ಎತ್ತರದ ಪ್ರದೇಶಗಳಲ್ಲಿ ಹಿಮಪಾತವಾಗಿದೆ. ಹೀಗಾಗಿ ಧನೌಲ್ತಿ ಪ್ರದೇಶದಲ್ಲಿ ಪ್ರವಾಸಿಗರ ಆಗಮನ ಹೆಚ್ಚಾಗುವ ಸಾಧ್ಯತೆಯೂ ಗೋಚರಿಸಿದೆ.
ಎರಡು-ಮೂರು ತಿಂಗಳಿನಿಂದ ನಿರಂತರವಾಗಿ ಜಿಲ್ಲೆಯ ವಿವಿಧೆಡೆ ವಾಡಿಕೆಗಿಂತ ಕಡಿಮೆ ಮಳೆಯಾಗುತ್ತಿದ್ದುದರಿಂದ ಬೆಳೆಗಳ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗುತ್ತಿದ್ದರೆ, ಇನ್ನೊಂದೆಡೆ ಒಣ ಚಳಿಯಿಂದಾಗಿ ಜನರು ತೊಂದರೆ ಅನುಭವಿಸುತ್ತಿದ್ದಾರೆ. ಇದೀಗ ಕಳೆದ ಕೆಲವು ದಿನಗಳ ನಂತರ ಎಡಬಿಡದೆ ಸುರಿದ ಮಳೆಯಿಂದ ಜನತೆಗೆ ನೆಮ್ಮದಿ ಸಿಕ್ಕಿದೆ. ಮೊದಲೇ ಉತ್ತರಾಖಂಡದ ಗುಡ್ಡಗಾಡು ಜಿಲ್ಲೆಗಳಲ್ಲಿ ಹಿಮಪಾತವಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿತ್ತು.
ಇದನ್ನೂ ಓದಿ: ಭಾರತದಲ್ಲಿವೆ 718 ಹಿಮ ಚಿರತೆಗಳು: ಲಡಾಖ್‌ನಲ್ಲಿ ಅತೀ ಹೆಚ್ಚು