ಆರು ಅಡಿ ಉದ್ದದ ಎರಡು ನಾಗರಹಾವು ರಕ್ಷಿಸಿದ ಸ್ನೇಕ್ ಬಸವರಾಜ್ : ವಿಡಿಯೋ
🎬 Watch Now: Feature Video
Published : Oct 19, 2024, 8:21 PM IST
ದಾವಣಗೆರೆ : ತಾಲೂಕಿನ ಎರಡು ಗ್ರಾಮಗಳಲ್ಲಿ ಆರು ಅಡಿ ಉದ್ದದ ಎರಡು ನಾಗರಹಾವುಗಳನ್ನ ಸ್ನೇಕ್ ಬಸವರಾಜ್ ಎಂಬುವವರು ರಕ್ಷಿಸಿದ್ದಾರೆ. ತಾಲೂಕಿನ ಆನಗೋಡು ಬಳಿಯ ಉಳುಪನಹಟ್ಟಿ ಗ್ರಾಮದ ಮನೆಯಲ್ಲಿ ಒಂದು ಹಾವು ಹಾಗೂ ತಾಲೂಕಿನ ಅಗಸನಕಟ್ಟೆ ಗ್ರಾಮದ ದನದ ಕೊಟ್ಟಿಗೆಯಲ್ಲಿ ಅವಿತು ಕುಳಿತಿದ್ದ ಇನ್ನೊಂದು ಹಾವು ಸೇರಿ ಒಟ್ಟು ಎರಡು ನಾಗರಹಾವುಗಳನ್ನು ಸೆರೆಹಿಡಿಯಲಾಗಿದೆ.
ಹಾವುಗಳನ್ನ ಕಂಡು ತಡಮಾಡದೆ ಎರಡೂ ಗ್ರಾಮಗಳ ಜನರು ಸ್ನೇಕ್ ಬಸವರಾಜ್ ಅವರಿಗೆ ಕರೆ ಮಾಡಿದ್ದರು. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಬಸವರಾಜ್ ಅವರು ಅಗಸನಕಟ್ಟೆ ಗ್ರಾಮದ ದನದ ಕೊಟ್ಟಿಗೆಯಲ್ಲಿ ಕುಳಿತಿದ್ದ ಹಾವನ್ನ ಹಾಗೂ ಉಳುಪನಹಟ್ಟಿ ಗ್ರಾಮದ ಮನೆಯೊಂದಕ್ಕೆ ನುಗ್ಗಿದ್ದ ನಾಗರಹಾವನ್ನು ಹಿಡಿದು ರಕ್ಷಿಸುವಲ್ಲಿ ಯಶಸ್ವಿಯಾದರು.
ಈ ಬಗ್ಗೆ ಈಟಿವಿ ಭಾರತದೊಂದಿಗೆ ಮಾತನಾಡಿದ ಸ್ನೇಕ್ ಬಸವರಾಜ್, ಎರಡು ಹಾವುಗಳನ್ನು ರಕ್ಷಣೆ ಮಾಡಿದ್ದು, ಎರಡು ಹಾವುಗಳು ಬರೋಬ್ಬರಿ ಆರು ಅಡಿ ಉದ್ದ ಇವೆ ಎಂದಿದ್ದಾರೆ. ಈ ಹಾವುಗಳನ್ನು ಇಂದು ಆನಗೋಡು ಕಾಡಿಗೆ ಬಿಡುವುದಾಗಿ ತಿಳಿಸಿದರು.
ಇದನ್ನೂ ಓದಿ : ಸರ್ಕಾರಿ ಶಾಲೆ ಆವರಣದಲ್ಲಿ 15 ಅಡಿ ಉದ್ದದ ಕಾಳಿಂಗ ಸರ್ಪ ಪ್ರತ್ಯಕ್ಷ - King Cobra Rescued