ಕೋಳಿಗಳನ್ನು ಸಾಯಿಸಿ ಮೊಟ್ಟೆ ನುಂಗಿ ಹಾಯಾಗಿ ಮಲಗಿದ್ದ ನಾಗರಹಾವು ಸೆರೆ - Snake Captured
🎬 Watch Now: Feature Video
ಚಿಕ್ಕಮಗಳೂರು: ಮೂರು ಕೋಳಿ ಸಾಯಿಸಿ, ಮೂರು ಮೊಟ್ಟೆ ನುಂಗಿ ಹಾಯಾಗಿ ಮಲಗಿದ್ದ ಭಾರೀ ಗಾತ್ರದ ನಾಗರಹಾವನ್ನು ಜಿಲ್ಲೆಯಲ್ಲಿ ಸುರಕ್ಷಿತವಾಗಿ ಸೆರೆ ಹಿಡಿಯಲಾಗಿದೆ. ಮೂಡಿಗೆರೆ ತಾಲೂಕಿನ ಜಾವಳಿ ಸಮೀಪದ ದೊಡ್ಡಿನ ಕೊಪ್ಪ ಗ್ರಾಮದ ನಾಗೇಶ್ ಎಂಬವರ ಮನೆಯ ಕೋಳಿಗೂಡು ಪ್ರವೇಶಿಸಿದ್ದ ನಾಗರ ಅಲ್ಲಿದ್ದ ಮೊಟ್ಟೆಗಳನ್ನು ನುಂಗಿ ಗೂಡಿನಲ್ಲಿಯೇ ಮಲಗಿತ್ತು.
ಇದನ್ನು ಗಮನಿಸಿದ ಮನೆ ಮಾಲೀಕರು ಬೆಚ್ಚಿ ಬಿದ್ದು, ಕೂಡಲೇ ಉರಗ ತಜ್ಞ ಆರಿಫ್ ಅವರಿಗೆ ಕರೆ ಮಾಡಿ ತಿಳಿಸಿದ್ದಾರೆ. ಕೋಳಿ ಗೂಡು ಒಡೆದು ಒಂದು ಗಂಟೆ ಕಾರ್ಯಾಚರಣೆ ನಡೆಸಿದ ಬಳಿಕ ಹಾವನ್ನು ಸೆರೆ ಹಿಡಿಯಲಾಯಿತು. ಈ ನಡುವೆ ತಿಂದಿದ್ದ ಮೊಟ್ಟೆಗಳನ್ನು ಹಾವು ಹೊರಹಾಕಿದೆ.
ಸದ್ಯ ಹಾವು ಸೆರೆಯಾಗಿದ್ದು ಕುಟುಂಬ ಸದಸ್ಯರು ನಿಟ್ಟುಸಿರು ಬಿಟ್ಟಿದ್ದಾರೆ. ಚಾರ್ಮಾಡಿ ಘಾಟ್ ಕಾಡಿನಲ್ಲಿ ಸೆರೆಹಿಡಿದ ಹಾವನ್ನು ಉರಗ ತಜ್ಞ ಆರಿಫ್ ಸುರಕ್ಷಿತವಾಗಿ ಬಿಟ್ಟು ಬಂದಿದ್ದಾರೆ. ಇವರು ಈವರೆಗೂ ಸಾವಿರಾರು ಹಾವುಗಳನ್ನು ರಕ್ಷಿಸಿದ್ದು, ಸ್ಥಳೀಯರ ಮೆಚ್ಚುಗೆ ಗಳಿಸಿದ್ದಾರೆ.
ಇದನ್ನೂ ಓದಿ: ವಿಡಿಯೋ: ಆನೆ ಆರ್ಭಟಕ್ಕೆ ಹೆದರಿ ಕೆರೆಯಿಂದ ಪೇರಿ ಕಿತ್ತ ಹುಲಿರಾಯ! - Tiger Escapes