ಚಾಮರಾಜನಗರದಲ್ಲಿಂದು 'ಯುವ' ಟೈಟಲ್ ಸಾಂಗ್ ರಿಲೀಸ್; ಕಾರ್ಯಕ್ರಮಕ್ಕೆ ಭರ್ಜರಿ ಸಿದ್ಧತೆ - Yuva title song

🎬 Watch Now: Feature Video

thumbnail

By ETV Bharat Karnataka Team

Published : Mar 2, 2024, 12:17 PM IST

Updated : Mar 2, 2024, 2:34 PM IST

ಚಾಮರಾಜನಗರ: ಕನ್ನಡ ಚಿತ್ರರಂಗದಲ್ಲಿ ಬಹು ನಿರೀಕ್ಷೆ ಹುಟ್ಟು ಹಾಕಿರುವ ಯುವ ರಾಜ್​​ಕುಮಾರ್ ನಟನೆಯ ಚೊಚ್ಚಲ ಚಿತ್ರ 'ಯುವ'ನ ಟೈಟಲ್ ಸಾಂಗ್ ಇಂದು ಚಾಮರಾಜನಗರದಲ್ಲಿ ಅದ್ಧೂರಿಯಾಗಿ ಅನಾವರಣಗೊಳ್ಳಲಿದೆ. ಚಾಮರಾಜನಗರದ ಚಾಮರಾಜೇಶ್ವರ ದೇಗುಲದ ಮುಂಭಾಗದಲ್ಲಿ ಸಮಾರಂಭ ನಡೆಯಲಿದ್ದು, ವೇದಿಕೆ ನಿರ್ಮಾಣ ಮಾಡಲಾಗಿದೆ. ಇಂದು ಸಂಜೆ 6ಕ್ಕೆ " ಒಬ್ಬನೇ ಶಿವ - ಒಬ್ಬನೇ ಯುವ" ಎಂಬ ಚಿತ್ರದ ಟೈಟಲ್​​​ ಸಾಂಗ್​​​ ಬಿಡುಗೆಯಾಗಲಿದೆ. 

ಕಾರ್ಯಕ್ರಮದಲ್ಲಿ ಹ್ಯಾಟ್ರಿಕ್ ಹೀರೋ ಶಿವ ರಾಜ್​​​ಕುಮಾರ್​, ಅಶ್ವಿನಿ ಪುನೀತ್ ರಾಜ್‍ಕುಮಾರ್ ಹಾಗೂ ರಾಘಣ್ಣ ಕುಟುಂಬ ಭಾಗಿಯಾಗಲಿದೆ. ಹಾಡನ್ನು ವಿಶೇಷ ಅತಿಥಿಯೊಬ್ಬರು ಬಿಡುಗಡೆ ಮಾಡಲಿದ್ದಾರೆ ಎಂದಷ್ಟೇ ಚಿತ್ರತಂಡ ಹೇಳಿದ್ದು, ಯಾರು ಆ ವಿಶೇಷ ಆತಿಥಿ ಎಂಬುದನ್ನು ಸಸ್ಪೆನ್ಸ್ ಆಗಿಯೇ ಇಟ್ಟಿದೆ. ಒಟ್ಟಿನಲ್ಲಿ ರಾಜ್​ಕುಮಾರ್​ ಕುಟುಂಬದ ಮೂರನೇ ತಲೆಮಾರಿನ ಕುಡಿ ಯುವ ರಾಜ್​ಕುಮಾರ್‌ ಅವರ ಮೊದಲ ಚಿತ್ರದ ಮೊದಲ ಹಾಡು ಬಿಡುಗಡೆಯಾಗುತ್ತಿರುವುದು ಅಭಿಮಾನಿಗಳಲ್ಲಿ ಸಂತಸ ಮೂಡಿಸಿದೆ. 'ಯುವ' ಸಿನಿಮಾ ಇದೇ ಮಾರ್ಚ್ 28 ರಂದು ಚಿತ್ರಮಂದಿರ ಪ್ರವೇಶಿಸಲಿದೆ.  

ಇದನ್ನೂ ಓದಿ: 'ಯುವ' ರಾಜ್​ಕುಮಾರ್ ಚೊಚ್ಚಲ ಚಿತ್ರಕ್ಕೆ ಸಿಗಲಿದೆ ವಿಶೇಷ ವ್ಯಕ್ತಿಯ ಆಶೀರ್ವಾದ

Last Updated : Mar 2, 2024, 2:34 PM IST

ABOUT THE AUTHOR

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.