ಕರ್ತವ್ಯ ಪಥದಲ್ಲಿ 'ಆವಾಹನ': 112 ಮಹಿಳೆಯರಿಂದ ಸಂಗೀತ ವಾದ್ಯಗಳ ಪರೇಡ್- ವಿಡಿಯೋ - 75ನೇ ಗಣರಾಜ್ಯೋತ್ಸವ
🎬 Watch Now: Feature Video
Published : Jan 26, 2024, 11:46 AM IST
ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ 75ನೇ ಗಣರಾಜ್ಯೋತ್ಸವ ಸಂಭ್ರಮ ಮೇಳೈಸಿತು. ಕರ್ತವ್ಯ ಪಥದಲ್ಲಿ ಇದೇ ಮೊದಲ ಬಾರಿಗೆ 'ಆವಾಹನ' ಎಂಬ ಭಾರತದ ಸಾಂಪ್ರದಾಯಿಕ ಸಂಗೀತ ವಾದ್ಯಗಳ ಪರೇಡ್ ವಿಶೇಷವಾಗಿ ಗಮನ ಸೆಳೆಯಿತು. ದೇಶದ ಉದ್ದಗಲದ 112 ಮಂದಿ ಮಹಿಳಾ ಕಲಾವಿದರು ಇದರಲ್ಲಿ ಭಾಗವಹಿಸಿದ್ದರು. ಶಂಖ, ನಾದಸ್ವರ, ನಗದ ಇತ್ಯಾದಿ ಸಂಗೀತ ಉಪಕರಣಗಳೊಂದಿಗೆ ಈ ವರ್ಷದ ಗಣರಾಜ್ಯೋತ್ಸವ ಪರೇಡ್ ಆರಂಭವಾಯಿತು.
ಗುಲಾಬಿ ಕೆಂಪು ಬಣ್ಣದ ಸೀರೆಗೆ ಚಿನ್ನದ ಬಣ್ಣದ ರವಿಕೆ, ಬಿಳಿ ಬಣ್ಣದ ಶಾಲು ಧರಿಸಿರುವ ಮಹಿಳೆಯರು ಕರ್ತವ್ಯ ಪಥದಲ್ಲಿ ನೆರೆದಿದ್ದ ಎಲ್ಲರ ಗಮನ ಸೆಳೆದರು. ಮಹಿಳೆಯರು ಡೋಲು, ಕಹಳೆ ಮುಂತಾದ ವಿವಿಧ ಸ್ವರ ಸಾಧನಗಳಿಂದ ಸೊಗಸಾಗಿ ಸ್ವರ ಹೊಮ್ಮಿಸಿದರು.
ಇದಾದ ಬಳಿಕ ಭೂಸೇನೆ, ವಾಯುಸೇನೆ, ನೌಕಾಸೇನೆ ಹಾಗು ವಿವಿಧ ಭದ್ರತಾ ಪಡೆಗಳು ಸ್ವದೇಶಿ ನಿರ್ಮಿತ, ಅತ್ಯಾಧುನಿಕ ಶಸ್ತ್ರಾಸ್ತ್ರಗಳು, ಕ್ಷಿಪಣಿಗಳು, ಡ್ರೋನ್ ಜಾಮರ್‌ಗಳು, ಸರ್ವೆಲೆನ್ಸ್ ವ್ಯವಸ್ಥೆಗಳನ್ನು ಪ್ರದರ್ಶಿಸಿದವು.
ಈ ಬಾರಿಯ ಗಣರಾಜ್ಯೋತ್ಸವದಲ್ಲಿ ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದು ಫ್ರೆಂಚ್ ಸೇನಾ ಬ್ಯಾಂಡ್ ಕೂಡಾ ಪರೇಡ್ನಲ್ಲಿ ಭಾಗವಹಿಸಿತು.
ಇದನ್ನೂ ಓದಿ: ದೆಹಲಿಯ ಕರ್ತವ್ಯ ಪಥದಲ್ಲಿ ಗಣರಾಜ್ಯೋತ್ಸವ ವೈಭವ: ಭಾರತದ ಮಿಲಿಟರಿ, ಮಹಿಳಾ ಶಕ್ತಿ ಅನಾವರಣ