ನಂಜನಗೂಡು ಪರಶುರಾಮ ದೇಗುಲಕ್ಕೆ ಜಲ ದಿಗ್ಬಂಧನ: ವಿಡಿಯೋ - Nanjangudu Parashurama Temple - NANJANGUDU PARASHURAMA TEMPLE

🎬 Watch Now: Feature Video

thumbnail

By ETV Bharat Karnataka Team

Published : Jul 17, 2024, 2:24 PM IST

ಮೈಸೂರು: ಕಪಿಲಾ ನದಿಯಲ್ಲಿ ನೀರಿನ ಹೊರಹರಿವು ಹೆಚ್ಚಾಗಿದೆ. ಹೀಗಾಗಿ, ದಕ್ಷಿಣ ಕಾಶಿ ಪ್ರಸಿದ್ಧಿಯ ನಂಜನಗೂಡಿನಲ್ಲಿ ಕಪಿಲಾ ನದಿ ತೀರದಲ್ಲಿರುವ ಪರಶುರಾಮ ದೇವಾಲಯ ಜಲಾವೃತವಾಗಿದೆ. ಅಷ್ಟೇ ಅಲ್ಲದೇ, ನಂಜುಂಡಸ್ವಾಮಿ ದೇವಾಲಯದ ಸ್ನಾನಘಟ್ಟ, ಮುಡಿಕಟ್ಟೆ ಕೂಡಾ ಸಂಪೂರ್ಣವಾಗಿ ನೀರಿನಲ್ಲಿ ಮುಳುಗಿದೆ. 

ಮೈದುಂಬಿ ಹರಿಯುತ್ತಿರುವ ನದಿಯನ್ನು ಕಣ್ತುಂಬಿಕೊಳ್ಳಲು ನೂರಾರು ಸಂಖ್ಯೆಯಲ್ಲಿ ಜನರು ದೇವಾಲಯದ ಸ್ನಾನಘಟ್ಟದ ಬಳಿ ಆಗಮಿಸುತ್ತಿದ್ದಾರೆ. ನದಿ ಸಮೀಪ ತೆರಳದಂತೆ ಪೊಲೀಸರು ಧ್ವನಿವರ್ಧಕದ ಮೂಲಕ ಎಚ್ಚರಿಕೆ ನೀಡುತ್ತಿದ್ದಾರೆ. ಹೀಗಿದ್ದರೂ ಸಹ ಆಗಮಿಸುತ್ತಿರುವ ಜನರನ್ನು ನಿಯಂತ್ರಿಸುವುದು ಪೊಲೀಸರಿಗೆ ಸವಾಲಾಗುತ್ತಿದೆ. 

ಹದಿನಾರು ಕಾಲು ಮಂಟಪ, ಪರಶುರಾಮ ದೇವಾಲಯದ ಸಮೀಪ ನದಿ ದಡದಲ್ಲಿ ಹಗ್ಗ ಕಟ್ಟಿ, ಬ್ಯಾರಿಕೇಡ್ ಹಾಕಿ ಅಪಾಯದ ಕುರಿತು ಸಂದೇಶ ನೀಡುವ ಮೂಲಕ ಜನರು ನದಿ ನೀರಿನಲ್ಲಿ ಮುಂದೆ ಸಾಗದಂತೆ ಎಚ್ಚರಿಕೆ ನೀಡಿದ್ದಾರೆ. ಯಾವುದೇ ಕ್ಷಣದಲ್ಲೂ ಹೊರಹರಿವು ಹೆಚ್ಚಳವಾಗುವ ಸಾಧ್ಯತೆ ಇರುವುದರಿಂದ ನಗರದ ಹಳ್ಳದಕೇರಿ ನಿವಾಸಿಗಳಿಗೆ ನಗರಸಭೆಯಿಂದ ಮುನ್ನೆಚ್ಚರಿಕೆ ನೀಡಲಾಗಿದೆ. ಇದರ ಜೊತೆಗೆ, ತಾತ್ಕಾಲಿಕ ಗಂಜಿ ಕೇಂದ್ರ ತೆರೆಯಲು ಅಗತ್ಯ ಸಿದ್ಧತೆ ಕೈಗೊಳ್ಳಲಾಗಿದೆ. 

ಇದನ್ನೂ ಓದಿ: ತುಂಗಭದ್ರಾ ನದಿ ಭರ್ತಿ: ಉಕ್ಕಡಗಾತ್ರಿ ಸ್ನಾನಘಟ್ಟ, ಸೇತುವೆಗಳು ಜಲಾವೃತ - Davanagere Rain 

ABOUT THE AUTHOR

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.