ಹಾಸನ; ಕೋಳಿ ತಿನ್ನಲು ಬಂದು ಉರುಳಿಗೆ ಸಿಲುಕಿ ಪರದಾಡಿದ ಚಿರತೆ - Leopard spotted - LEOPARD SPOTTED
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/11-05-2024/640-480-21441125-thumbnail-16x9-vny.jpg)
![ETV Bharat Karnataka Team](https://etvbharatimages.akamaized.net/etvbharat/prod-images/authors/karnataka-1716535795.jpeg)
Published : May 11, 2024, 11:28 AM IST
ಬೇಲೂರು: ಕೋಳಿ ತಿನ್ನಲು ಬಂದ ಚಿರತೆಯೊಂದು ಉರುಳಿಗೆ ಸಿಲುಕಿ ಎಂಟು ಗಂಟೆಗಳ ಕಾಲ ಪರದಾಡಿ ಜೀವ ಉಳಿಸಿಕೊಂಡು ಪರಾರಿಯಾಗಿರುವ ಘಟನೆ ಬೇಲೂರು ತಾಲ್ಲೂಕು ಹಗರೆ ಸಮೀಪದ ಮಲ್ಲಿಕಾರ್ಜುನಪುರ ಗ್ರಾಮದಲ್ಲಿ ನಡೆದಿದೆ. ಮಲ್ಲಿಕಾರ್ಜುನಪುರ ಗ್ರಾಮಕ್ಕೆ ಶುಕ್ರವಾರ (ನಿನ್ನೆ) ರಾತ್ರಿ ಆಹಾರ ಅರಸಿ ಬಂದಿದ್ದ ಚಿರತೆ ಕೋಳಿ ತಿನ್ನಲೆಂದು ಗ್ರಾಮದ ಚಂದ್ರಯ್ಯ ಎಂಬುವರ ಮನೆಯ ಕೊಟ್ಟಿಗೆ ಬಳಿ ಬಂದಿತ್ತು. ಚಿರತೆ ನೋಡಿದ ಕೋಳಿಗಳು ಹೆದರಿ ಮರಕ್ಕೆ ಹಾರಿವೆ. ಚಿರತೆಯು ಸಹ ಕೋಳಿಗಳನ್ನು ಬೇಟೆಯಾಡುವ ಭರದಲ್ಲಿ ಮರವನ್ನು ಹತ್ತಿದೆ.
ಈ ವೇಳೆ ಕೋಳಿ ರಕ್ಷಣೆಗೆಂದು ಇಟ್ಟಿದ್ದ ಉರುಳಿನ ತಂತಿಗೆ ಚಿರತೆಯ ಮುಂಗಾಲು ಸಿಲುಕಿಕೊಂಡಿದೆ. ಇದನ್ನು ಕಂಡ ನಾಯಿಗಳು ಜೋರಾಗಿ ಬೊಗಳತೊಡಗಿದ್ದರಿಂದ ಗ್ರಾಮದ ಜನರು ಹೊರಬಂದು ನೋಡಿದಾಗ ಚಿರತೆ ಕಂಡು ಬಂದಿದೆ. ಕೂಡಲೇ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಈ ಬಗ್ಗೆ ಮಾಹಿತಿ ನೀಡಿದ್ದರು.
ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕಾಗಮಿಸುವ ವೇಳೆಗೆ ಚಿರತೆ ಉರುಳಿನಿಂದ ಬಿಡಿಸಿಕೊಂಡು ಪರಾರಿಯಾಗಿದೆ. ಚಿರತೆ ಕಂಡ ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದ್ದು, ಅದನ್ನು ಸೆರೆ ಹಿಡಿಯುವಂತೆ ಒತ್ತಾಯಿಸಿದ್ದಾರೆ. ಸದ್ಯ ಸೆರೆಗಾಗಿ ಬೋನನ್ನು ಇರಿಸಲಾಗಿದೆ.
ಇದನ್ನೂ ಓದಿ: ಗಂಗಾವತಿ: ಕುರಿದೊಡ್ಡಿಗೆ ನುಗ್ಗಿ ಎರಡು ಕುರಿಗಳನ್ನು ಬಲಿ ಪಡೆದು ಎಸ್ಕೇಪ್ ಆದ ಚಿರತೆ - leopard spotted