ಈ ರಸ್ತೆಯಲ್ಲಿ ಆನೆಯೇ ಚೆಕ್ಕಿಂಗ್ ಆಫೀಸರ್: ಪ್ರತಿ ವಾಹನ ತಪಾಸಣೆ ನಡೆಸಿದ ಸಲಗ!
🎬 Watch Now: Feature Video
Published : Jan 30, 2024, 5:07 PM IST
ಚಾಮರಾಜನಗರ : ರಾಷ್ಟ್ರೀಯ ಹೆದ್ದಾರಿಗಳಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ, ಪೊಲೀಸರು ತಪಾಸಣೆ ನಡೆಸುವುದು ಸಾಮಾನ್ಯ. ಆದರೆ, ಇಲ್ಲೊಂದು ಆನೆ ಎಲ್ಲ ವಾಹನಗಳನ್ನು ಚೆಕ್ ಮಾಡಿ ಬಿಟ್ಟಿದೆ.
ಹೌದು.. ಕರ್ನಾಟಕದ ಗಡಿಭಾಗದಲ್ಲಿರುವ ತಮಿಳುನಾಡಿನ ಗೇರುಮಾಳ ರಸ್ತೆಯಲ್ಲಿ ಎಂಟ್ರಿ ಕೊಟ್ಟ ಒಂಟಿ ಸಲಗವೊಂದು ಆಹಾರಕ್ಕಾಗಿ ಎಲ್ಲ ವಾಹನಗಳನ್ನು ತಪಾಸಣೆ ಮಾಡಿ ಕಳುಹಿಸಿಕೊಟ್ಟಿದೆ.
ಪಿಕ್ಅಪ್ ವಾಹನ, ಲಾರಿ, ಬಸ್ ಅನ್ನೂ ಬಿಡದ ಒಂಟಿ ಸಲಗ ಸೊಂಡಿಲನ್ನು ಚಾಚಿ ಕಬ್ಬು, ತರಕಾರಿ ಸೇರಿದಂತೆ ಇತರ ಆಹಾರ ಪದಾರ್ಥಕ್ಕೆ ತಡಕಾಡುವ ವಿಡಿಯೋವನ್ನು ಬಸ್ನಲ್ಲಿದ್ದ ಪ್ರಯಾಣಿಕರೊಬ್ಬರು ಸೆರೆಹಿಡಿದು ಸಾಮಾಜಿಕ ಜಾಲತಾಣಕ್ಕೆ ಹರಿಬಿಟ್ಟಿದ್ದಾರೆ. ಸೋಮವಾರ ಸಂಜೆ ಈ ಆನೆ ತಪಾಸಣೆ ನಡೆಸಿರುವ ಘಟನೆ ನಡೆದಿದ್ದು, ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದೆ. ಇನ್ನು ಅರಣ್ಯದಿಂದ ಆನೆ ರಸ್ತೆಗೆ ಬಂದಿದ್ದರಿಂದ ಕೆಲ ಗಂಟೆಗಳ ಕಾಲ ವಾಹನ ಸಂಚಾರವೂ ಅಸ್ತವ್ಯಸ್ತವಾಗಿತ್ತು.
ಆನೆಯೊಂದಿಗೆ ಸೆಲ್ಫಿಗೆ ಮುಗಿಬಿದ್ದ ಪ್ರವಾಸಿಗರು : ಕರ್ನಾಟಕದ ಕಾಶ್ಮೀರ ಅಂತಲೇ ಕರೆಯುವ ಗುಂಡ್ಲುಪೇಟೆ ತಾಲೂಕಿನ ಗೋಪಾಲಸ್ವಾಮಿ ಬೆಟ್ಟದಲ್ಲಿ (ಜನವರಿ- 4 -24) ಕಾಡಾನೆ ಜೊತೆ ಪ್ರವಾಸಿಗರು ಸೆಲ್ಫಿಗೆ ಮುಗಿಬಿದ್ದ ಘಟನೆ ನಡೆದಿತ್ತು.
ಇದನ್ನೂ ಓದಿ : ಗೋಪಾಲಸ್ವಾಮಿ ಬೆಟ್ಟದಲ್ಲಿ ದಿಢೀರ್ ಕಾಡಾನೆ ಎಂಟ್ರಿ: ಸೆಲ್ಫಿಗೆ ಮುಗಿಬಿದ್ದ ಪ್ರವಾಸಿಗರು