ಬಂಡೀಪುರ: ಕೆರೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದ ಹುಲಿಯನ್ನು ಅಟ್ಟಾಡಿಸಿದ ಗಜರಾಜ- ವಿಡಿಯೋ - Elephant chased Tiger

By ETV Bharat Karnataka Team

Published : Jun 27, 2024, 3:52 PM IST

thumbnail
ಬಂಡೀಪುರ: ಕೆರೆಯಲ್ಲಿ ಮಲಗಿದ್ದ ಹುಲಿಯನ್ನು ಅಟ್ಟಾಡಿಸಿದ ಗಜರಾಜ (ETV Bharat)

ಚಾಮರಾಜನಗರ: ಬಂಡೀಪುರ ಅಭಯಾರಣ್ಯದ ಕೆರೆಯಲ್ಲಿ ರಿಲ್ಯಾಕ್ಸ್​ ಮೂಡ್​ನಲ್ಲಿದ್ದ ಹುಲಿಯನ್ನು ಆನೆಯೊಂದು ಓಡಿಸಿದ ದೃಶ್ಯ ಸೆರೆಯಾಗಿದೆ. ಆನೆ ನೋಡಿ ಭಯಗೊಂಡ ಹುಲಿ ಕಂಗೆಟ್ಟು ಓಡಿದೆ. ಹುಲಿರಾಯ ಪೇರಿ ಕಿತ್ತಿರುವುದನ್ನು ಕಂಡ ಸಫಾರಿಗರು ಅರೆಕ್ಷಣ ರೋಮಾಂಚನಗೊಂಡಿದ್ದಾರೆ. 

ಬಂಡೀಪುರ ಅರಣ್ಯದಲ್ಲಿರುವ ಜಲಾಗಾರಗಳಲ್ಲಿ ಬಿಸಿಲ ತಾಪ ಸಹಿಸಲಾರದೇ ಹುಲಿಯೊಂದು ಕೆರೆಗೆ ಇಳಿದು ವಿಶ್ರಾಂತಿ ಪಡೆಯುತ್ತಿತ್ತು.‌ ಈ ಸಂದರ್ಭದಲ್ಲಿ ದಾಹ ತಣಿಸಿಕೊಳ್ಳಲು ಆನೆ ಕೂಡಾ ಅಲ್ಲಿಗೆ ಬಂದಿದೆ. ಈ ಸಂದರ್ಭದಲ್ಲಿ ಕೆರೆಯಲ್ಲಿ ಹುಲಿಯನ್ನು ಕಂಡ ಕೂಡಲೇ ದಾಳಿ ಮಾಡುವಂತೆ ಮುನ್ನುಗ್ಗಿ ಬಂದಿದೆ. ಹುಲಿಯನ್ನು ಅಟ್ಟಾಡಿಸಿದೆ.

ಪೇರಿ ಕಿತ್ತಿದ್ದ ಹುಲಿ, ಆನೆ ಹೋದ ಬಳಿಕ ತಾನೇ ರಾಜ ಎಂಬಂತೆ ಮತ್ತೆ ಕೆರೆಗೆ ಇಳಿದು ದಣಿವಾರಿಸಿಕೊಂಡಿತು. ಈ ದೃಶ್ಯವನ್ನು ಸಫಾರಿಗರು ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಕೂತೂಹಲ ಮೂಡಿಸಿದೆ.

ಇದನ್ನೂ ನೋಡಿ: ಮದ್ಯದ ವಾಸನೆಗೆ ಹತ್ತಿರ ಬಂದ ವ್ಯಕ್ತಿಯನ್ನ ಎತ್ತಿ ಎಸೆದ ಕುಕ್ಕೆ ಸುಬ್ರಹ್ಮಣ್ಯ ದೇವಳದ ಆನೆ! ವಿಡಿಯೋ - Elephant threw away a person

ABOUT THE AUTHOR

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.