ಪ್ರಕಟವಾಗದ ಕೆಪಿಎಸ್‌ಸಿ ಫಲಿತಾಂಶ: ಪರೇಡ್ ಮಧ್ಯೆ ಮೈದಾನಕ್ಕೆ ನುಗ್ಗಿ ವ್ಯಕ್ತಿಯ ಆಕ್ರೋಶ - ಮೈದಾನಕ್ಕೆ ನುಗ್ಗಿದ ವ್ಯಕ್ತಿ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/26-01-2024/640-480-20598134-thumbnail-16x9-meg.jpg)
![ETV Bharat Karnataka Team](https://etvbharatimages.akamaized.net/etvbharat/prod-images/authors/karnataka-1716535795.jpeg)
Published : Jan 26, 2024, 2:16 PM IST
ಬೆಂಗಳೂರು: ಗಣರಾಜ್ಯೋತ್ಸವ ಹಿನ್ನೆಲೆಯಲ್ಲಿ ಇಂದು ನಗರದ ಮಾಣಿಕ್ ಶಾ ಪರೇಡ್ ಮೈದಾನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭದ್ರತಾ ಲೋಪವಾದ ಪ್ರಸಂಗವಾಗಿದೆ. ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಮತ್ತಿತರ ಗಣ್ಯರು ಉಪಸ್ಥಿತರಿದ್ದ ಕಾರ್ಯಕ್ರಮದಲ್ಲಿ ಬಿಗಿ ಭದ್ರತೆಯ ನಡುವೆಯೂ ವ್ಯಕ್ತಿಯೋರ್ವ ಪರೇಡ್ ಮೈದಾನಕ್ಕೆ ನುಗ್ಗಿದ್ದಾರೆ.
ಮೈದಾನಕ್ಕೆ ನುಗ್ಗಿದ ವ್ಯಕ್ತಿ, ತನ್ನ ಪ್ಯಾಂಟ್ ಜೇಬಿನಿಂದ ಭಿತ್ತಿ ಪತ್ರವನ್ನು ತೆಗೆದು ಮುಖ್ಯಮಂತ್ರಿಗಳ ಗ್ಯಾಲರಿಯತ್ತ ಎಸೆದಿದ್ದಾರೆ. ವ್ಯಕ್ತಿ ಮೈದಾನಕ್ಕೆ ನುಗ್ಗಿದ ತಕ್ಷಣ ಸ್ಥಳದಲ್ಲಿದ್ದ ಪೊಲೀಸ್ ಸಿಬ್ಬಂದಿ ಸಿಎಂ ಗ್ಯಾಲರಿಯತ್ತ ಓಡುತ್ತಿದ್ದ ವ್ಯಕ್ತಿಯನ್ನು ವಶಕ್ಕೆ ಪಡೆದರು. ಆರೋಪಿಯನ್ನು ಪುರುಷೋತ್ತಮ್ ಎಂದು ಗುರುತಿಸಲಾಗಿದೆ.
ಪತ್ರಕರ್ತನ ಸೋಗಿನಲ್ಲಿ ಮಾಧ್ಯಮ ಸಿಬ್ಬಂದಿ ಗ್ಯಾಲರಿಗೆ ಬಂದಿದ್ದ ಆರೋಪಿಯು ಕಾರ್ಯಕ್ರಮದ ನಡುವೆ ಮೈದಾನಕ್ಕೆ ಜಿಗಿದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಯ ಅಳಿಯ ಕೆಪಿಎಸ್‌ಸಿ ಪರೀಕ್ಷೆ ಬರೆದಿದ್ದು, ಇನ್ನೂ ಫಲಿತಾಂಶ ಪ್ರಕಟವಾಗದೇ ಇರುವ ಬೇಸರದಿಂದ ಹೀಗೆ ಮಾಡಿರುವುದಾಗಿ ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ.
ಇದನ್ನೂ ಓದಿ: ಕರ್ತವ್ಯ ಪಥದಲ್ಲಿ 'ಆವಾಹನ': 112 ಮಹಿಳೆಯರಿಂದ ಸಂಗೀತ ವಾದ್ಯಗಳ ಪರೇಡ್- ವಿಡಿಯೋ