ಹಿಮಾಚಲ ಪ್ರದೇಶ: ಹಿಮದ ಹೊದಿಕೆಯಲ್ಲಿ ಕುಲ್ಲು-Video - HIMACHAL PRADESH SNOWFALL - HIMACHAL PRADESH SNOWFALL

🎬 Watch Now: Feature Video

thumbnail

By ETV Bharat Karnataka Team

Published : Apr 30, 2024, 2:50 PM IST

ಕುಲ್ಲು(ಹಿಮಾಚಲ ಪ್ರದೇಶ): ಕುಲ್ಲುವಿನ ತಗ್ಗು ಪ್ರದೇಶದಲ್ಲಿ ಸೋಮವಾರ ಮಳೆಯಾಗಿದ್ದರೆ, ಮೇಲಿನ ಪ್ರದೇಶಗಳಲ್ಲಿ ಹಿಮಪಾತ ಮುಂದುವರೆದಿದೆ. ಪ್ರವಾಸಿ ನಗರಿ ಮನಾಲಿಯ ಪಕ್ಕದಲ್ಲಿರುವ ಅಟಲ್ ಸುರಂಗದಲ್ಲಿ 7 ಇಂಚು ಹಿಮಪಾತವಾಗಿದೆ. ಹಿಮಪಾತವನ್ನು ಎಂಜಾಯ್ ಮಾಡಲು ಬಂದ 1000ಕ್ಕೂ ಹೆಚ್ಚು ವಾಹನಗಳು ರಸ್ತೆಯಲ್ಲೆ ಸಿಲುಕಿಕೊಂಡವು.

ಹಿಮಪಾತಕ್ಕೆ ರಸ್ತೆ ಸಂಪೂರ್ಣ ಹಿಮದ ಕಲ್ಲಿನಂತಾಗಿದೆ. ವಾಹನಗಳ ಚಕ್ರಗಳು ರಸ್ತೆ ಮೇಲೆ ಹಿಡಿದ ಸಿಗದೇ ಜಾರುತ್ತಾ ಹೋಗಿದೆ. ಬಳಿಕ ಮನಾಲಿ ಪೊಲೀಸ್ ತಂಡವು ಪ್ರವಾಸಿಗರ ನೆರವಿಗೆ ತೆರಳಿದೆ. ರಾತ್ರಿ ವೇಳೆಗೆ ಎಲ್ಲಾ ವಾಹನಗಳನ್ನು ಸುರಕ್ಷಿತವಾಗಿ ಸ್ಥಳಾಂತರಿಸಿ ಮನಾಲಿ ಕಡೆಗೆ ಕಳುಹಿಸಿದೆ. ಇನ್ನೂ ಹಿಮಪಾತ ಅಧಿಕವಾಗುವ ಸಾಧ್ಯತೆ ಇದ್ದು ಪ್ರವಾಸಿಗರ ಸಹಾಯಕ್ಕಾಗಿ ಸ್ಥಳದಲ್ಲಿ ಪೊಲೀಸ್ ತಂಡವನ್ನು ನಿಯೋಜಿಸಲಾಗಿದೆ. ಹಾಗೇ ಎಲ್ಲಾ ವಾಹನಗಳನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ ಎಂದು ಮನಾಲಿ ಡಿಎಸ್ಪಿ ಕೆ.ಡಿ. ಶರ್ಮಾ ತಿಳಿಸಿದ್ದಾರೆ.

ಯೆಲ್ಲೋ ಅಲರ್ಟ್​: ಇಂದಿನವರೆಗೆ ಹವಾಮಾನ ಇಲಾಖೆ, ಶಿಮ್ಲಾ ಹಿಮಾಚಲ ಪ್ರದೇಶದಲ್ಲಿ ಮಳೆ ಮತ್ತು ಹಿಮಪಾತವಾಗುವ ಬಗ್ಗೆ ಹಳದಿ ಅಲರ್ಟ್ ನೀಡಿದೆ. ಕಾಂಗ್ರಾ, ಹಮೀರ್‌ಪುರ್, ಉನಾ, ಸೋಲನ್ ಮತ್ತು ಸಿರ್ಮೌರ್ ರಾಜ್ಯದಲ್ಲಿ ಮಳೆ ಮತ್ತು ಹಿಮಪಾತದ ಪ್ರಾರಂಭವಾಗಿದೆ. ಹೀಗಾಗಿ ತಾಪಮಾನವೂ ಗಣನೀಯವಾಗಿ ತಗ್ಗಿದೆ.

ಇದನ್ನೂ ಓದಿ: ದೇಶಾದ್ಯಂತ ಬಿಸಿಗಾಳಿ; ಉತ್ತರಾಖಂಡದಲ್ಲಿ ಭಾರಿ ಹಿಮಪಾತ - snowfall

ABOUT THE AUTHOR

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.