ಚಿಕ್ಕಬಳ್ಳಾಪುರ: 2200 ಅಡಿ ಉದ್ದದ ತ್ರಿವರ್ಣ ಧ್ವಜ ಪ್ರದರ್ಶನ - ವಿಡಿಯೋ - ಎಂ ಸಿ ಸುಧಾಕರ್
🎬 Watch Now: Feature Video
Published : Jan 26, 2024, 3:33 PM IST
ಚಿಕ್ಕಬಳ್ಳಾಪುರ : ಇಂದು 75ನೇ ಗಣರಾಜ್ಯೋತ್ಸವದ ನಿಮಿತ್ತ 2200 ಅಡಿಗಳ ರಾಷ್ಟಧ್ವಜವನ್ನು ಇಲ್ಲಿನ ಆರ್ಯ ವೈಶ್ಯಮಂಡಳಿ ಪ್ರದರ್ಶಿಸಿದ್ದು, ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಹಾಗೂ ಉನ್ನತ ಶಿಕ್ಷಣ ಸಚಿವ ಡಾ ಎಂ.ಸಿ ಸುಧಾಕರ್ ಮೆರವಣಿಗೆಗೆ ಚಾಲನೆ ನೀಡಿದರು. ಕಳೆದ 2013 ರಲ್ಲಿ ನಗರದ ಕೊರ‍್ಲಬಳಗ, ವಾಸವಿ ಯವಜನ ಸಂಘ ಮತ್ತು ಲಯನ್ಸ್ ಕ್ಲಬ್ ಚಿಂತಾಮಣಿಯವರು 1100 ಅಡಿಗಳ ರಾಷ್ಟಧ್ವಜದ ಮೆರವಣಿಗೆ ನಡೆಸಿದರು. ಈ ಮೆರವಣಿಗೆಯಲ್ಲಿ ಸುಮಾರು ಎರಡು ಸಾವಿರ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ನಗರದ ಬೆಂಗಳೂರು ಜೋಡಿರಸ್ತೆ ಮೂಲಕ ಆರಂಭವಾದ ಮೆರವಣಿಗೆ ಎಂ.ಜಿ ರಸ್ತೆಗೆ ಹೊಂದಿಕೊಂಡಿರುವ ಪಿಸಿಆರ್ ಕಾಂಪ್ಲೆಕ್ಸ್ ವರೆಗೂ ಸಾಗಿ ನಂತರ ಅಲ್ಲಿಂದ ಮತ್ತೆ ಹಿಂತಿರುಗಿ ವರಸಿದ್ದಿ ವಿನಾಯಕ ದೇವಾಲದಯದ ಬಳಿಗೆ ವಾಪಸ್ ಬಂದಿದೆ. ತ್ರಿವರ್ಣ ಧ್ವಜವನ್ನು ಹೊತ್ತು ನಡೆಯುವ ವೇಳೆ ಸಾರ್ವಜನಿಕರು, ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಈ ಕಾರ್ಯಕ್ರಮದಿಂದ ಮಕ್ಕಳ ಮನಸ್ಸಿನಲ್ಲಿ ರಾಷ್ಟಪ್ರೇಮ, ಅಭಿಮಾನ, ಸಹಕಾರ ಗೌರವದ ಭಾವ ಇಮ್ಮಡಿಗೊಂಡಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ : ಕರ್ತವ್ಯ ಪಥದಲ್ಲಿ 'ಆವಾಹನ': 112 ಮಹಿಳೆಯರಿಂದ ಸಂಗೀತ ವಾದ್ಯಗಳ ಪರೇಡ್- ವಿಡಿಯೋ