ETV Bharat / technology

ನಿಮ್ಮ ಮೊಬೈಲ್​ ಇಂಟರ್ನೆಟ್​ ವೇಗಗೊಳಿಸಲು ಇಲ್ಲಿವೆ ಸುಲಭ ಮಾರ್ಗಗಳು! - Boost Internet Speed on Smartphones

author img

By ETV Bharat Karnataka Team

Published : Aug 31, 2024, 7:39 PM IST

Improve Internet Speed on Mobile: ಇಂದಿನ ಕಾಲದಲ್ಲಿ ಇಂಟರ್ನೆಟ್ ಇಲ್ಲದೆ ಜನರು ಬದುಕಲು ಸಾಧ್ಯವಿಲ್ಲ. ಸ್ಮಾರ್ಟ್‌ಫೋನ್‌ಗಳ ಯುಗದಲ್ಲಿ ಇಂಟರ್ನೆಟ್ ನಮ್ಮ ಜೀವನದ ಪ್ರಮುಖ ಭಾಗವಾಗಿದೆ. ಆದರೆ ಕೆಲವೊಮ್ಮೆ ನಮ್ಮ ಫೋನ್‌ಗಳಲ್ಲಿ ಇಂಟರ್ನೆಟ್ ನಿಧಾನವಾಗಿ ಕಾರ್ಯ ನಿರ್ವಹಿಸುತ್ತದೆ. ಆಗ ನಾವು ಬೇಸರ ವ್ಯಕ್ತಪಡಿಸುತ್ತೇವೆ. ಹೀಗಾಗಿ ನಿಮ್ಮ ಫೋನ್‌ನ ಇಂಟರ್ನೆಟ್ ವೇಗವನ್ನು ಹೆಚ್ಚಿಸುವ ಕೆಲವು ತಂತ್ರಗಳು ಇಲ್ಲವೆ..

BOOST INTERNET SPEED  SMARTPHONES INTERNET PROBLEM  HOW TO BOOST INTERNET SPEED  INTERNET SPEED RELATED NEWS
ನಿಮ್ಮ ಮೊಬೈಲ್​ ಇಂಟರ್ನೆಟ್​ ವೇಗಗೊಳಿಸಲು ಇಲ್ಲವೆ ಹಲವು ಮಾರ್ಗಗಳು (Getty Images)

Improve Internet Speed on Mobile: ಈಗ ಜನರು ತಮ್ಮ ಸ್ಮಾರ್ಟ್‌ಫೋನ್‌ಗಳಲ್ಲಿ 5G ನೆಟ್‌ವರ್ಕ್ ಅನ್ನು ಆನಂದಿಸುತ್ತಿದ್ದಾರೆ. ಆದರೆ ನಿಧಾನಗತಿಯ ಇಂಟರ್ನೆಟ್ ಸಮಸ್ಯೆ ದೇಶದ ಹಲವು ಭಾಗಗಳಲ್ಲಿ ಇನ್ನೂ ಇದೆ. ಇದಲ್ಲದೆ ಕೆಲವೊಮ್ಮೆ ಫೋನ್‌ನಿಂದಾಗಿ ವೇಗದ ಇಂಟರ್ನೆಟ್ ಬಳಸುವಲ್ಲಿ ಸಮಸ್ಯೆ ಉಂಟಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ ನೀವು ವಿಡಿಯೋಗಳನ್ನು ಸ್ಟ್ರೀಮಿಂಗ್ ಮಾಡಲು, ಸಾಮಾಜಿಕ ಮಾಧ್ಯಮವನ್ನು ಬ್ರೌಸ್ ಮಾಡಲು ಅಥವಾ ಪ್ರಯಾಣದಲ್ಲಿರುವಾಗ ಕೆಲಸ ಮಾಡಲು ಸಾಕಷ್ಟು ತೊಂದರೆಗಳನ್ನು ಎದುರಿಸಬೇಕಾಗುತ್ತದೆ.

ಸ್ಮಾರ್ಟ್‌ಫೋನ್‌ನಲ್ಲಿ ನಿಧಾನಗತಿಯ ಇಂಟರ್ನೆಟ್‌ಗೆ ಅನೇಕ ಕಾರಣಗಳಿರಬಹುದು. ನಿಮ್ಮ ಸ್ಮಾರ್ಟ್‌ಫೋನ್‌ನ ಇಂಟರ್ನೆಟ್ ಕಾರ್ಯಕ್ಷಮತೆಯನ್ನು ಸುಧಾರಿಸುವುದರ ಬಗ್ಗೆ ಹಲವು ಮಾರ್ಗಗಳಿವೆ. ಆ ಮಾರ್ಗಗಳನ್ನು ಅನುಸರಿಸುವ ಮೂಲಕ ನಿಮ್ಮ ಫೋನ್‌ನ ಇಂಟರ್ನೆಟ್ ವೇಗವನ್ನು ಹೆಚ್ಚಿಸಬಹುದು.

1. ಫೋನ್ ರಿಸ್ಟಾರ್ಟ್​: ನಿಮ್ಮ ಫೋನ್ ಸಾಫ್ಟ್‌ವೇರ್ ಗ್ಲಿಚ್‌ಗಳನ್ನು ಎದುರಿಸುವುದರಿಂದ ಇಂಟರ್ನೆಟ್​ ನಿಧಾನಗೊಳ್ಳಲು ಕಾರಣವಾಗಬಹುದು. ನಿರಂತರ ಕಾರ್ಯಾಚರಣೆಯಲ್ಲಿದ್ದರೂ ಫೋನ್‌ನ ಸಾಫ್ಟ್‌ವೇರ್ ಅಸಮರ್ಪಕವಾಗಿ ಕಾರ್ಯನಿರ್ವಹಿಸಬಹುದು. ಸಾಫ್ಟ್‌ವೇರ್ ಅನ್ನು ರಿಫ್ರೆಶ್ ಮಾಡಲು ನಿಮ್ಮ ಫೋನ್ ಅನ್ನು ನೀವು ರಿಸ್ಟಾರ್ಟ್​ ಮಾಡಬೇಕು. ಆಗ ನಿಮ್ಮ ಫೋನ್​ ಇಂಟರ್ನೆಟ್​ ಅನ್ನು ಸರಿಯಾಗಿ ರನ್ ಆಗುವಂತೆ ಮಾಡುತ್ತದೆ.

2. ಬ್ಯಾಕ್​ಗ್ರೌಂಡ್​ ಆ್ಯಪ್ಸ್​ಗಳನ್ನು ಕ್ಲೋಸ್​ ಮಾಡಿ: ಹಲವು ಬಾರಿ ನಿಮ್ಮ ಫೋನ್‌ನಲ್ಲಿ ಅನೇಕ ಬ್ಯಾಕ್​ಗ್ರೌಂಡ್​ ಅಪ್ಲಿಕೇಶನ್‌ಗಳು ಕಾರ್ಯನಿರ್ವಹಿಸುತ್ತಲೇ ಇರುತ್ತವೆ. ಅದು ನಿಮ್ಮ ಫೋನ್‌ನಲ್ಲಿ ಬಹಳಷ್ಟು ಡೇಟಾವನ್ನು ಕಡಿತಗೊಳಿಸುತ್ತಿರುತ್ತದೆ. ಇದು ನಿಮ್ಮ ಫೋನ್‌ನ ಇಂಟರ್ನೆಟ್ ಅನ್ನು ನಿಧಾನಗೊಳಿಸುತ್ತದೆ. ಡೇಟಾವನ್ನು ಉಳಿಸಲು ಮತ್ತು ನಿಮ್ಮ ಇಂಟರ್ನೆಟ್ ವೇಗವನ್ನು ಹೆಚ್ಚಿಸಲು ನೀವು ಬಳಸದ ಅಪ್ಲಿಕೇಶನ್‌ಗಳನ್ನು ನೀವು ಕ್ಲೋಸ್​ ಮಾಡಬೇಕಾಗುತ್ತದೆ.

3. ಜಾಹೀರಾತು ಬ್ಲಾಕರ್ ಬಳಕೆ: ಚಿತ್ರಗಳು ಮತ್ತು ಲಿಂಕ್‌ಗಳಂತಹ ಅನೇಕ ರೀತಿಯ ಜಾಹೀರಾತು ಪಾಪ್-ಅಪ್‌ಗಳು ಸ್ಮಾರ್ಟ್‌ಫೋನ್‌ನಲ್ಲಿ ಕಾಣಿಸಿಕೊಳ್ಳುತ್ತಲೇ ಇರುತ್ತವೆ. ಇವುಗಳಿಂದಾಗಿ ನಿಮ್ಮ ಸ್ಮಾರ್ಟ್‌ಫೋನ್‌ನ ಡೇಟಾವೂ ಬಳಕೆಯಾಗುತ್ತದೆ. ಆಗ ಇಂಟರ್ನೆಟ್ ವೇಗ ನಿಧಾನವಾಗುತ್ತದೆ. ಈ ಜಾಹೀರಾತುಗಳನ್ನು ಬಂದ್​ ಮಾಡಲು ನೀವು ಜಾಹೀರಾತು ಬ್ಲಾಕರ್ ಅಪ್ಲಿಕೇಶನ್‌ಗಳನ್ನು ಬಳಸಬಹುದು. ನೀವು Google Play Store ನಲ್ಲಿ ಹಲವಾರು ರೀತಿಯ ಜಾಹೀರಾತು ಬ್ಲಾಕರ್ ಅಪ್ಲಿಕೇಶನ್‌ಗಳನ್ನು ಕಾಣಬಹುದು. ಅದರಲ್ಲಿ ನೀವು ಉತ್ತಮ ಅಪ್ಲಿಕೇಶನ್ ಅನ್ನು ಆಯ್ಕೆ ಮಾಡಬಹುದು.

4. ಸಾಫ್ಟ್‌ವೇರ್ ಅಪ್​ಡೇಟ್​ ಪರಿಶೀಲಿಸುವುದು: ನಿಮ್ಮ ಸುತ್ತಲಿನ ನೆಟ್‌ವರ್ಕ್ ಸಾಕಷ್ಟು ಪ್ರಬಲವಾಗಿದ್ದರೂ ಸಹ ಕಳಪೆ ಇಂಟರ್ನೆಟ್ ಕಾರ್ಯಕ್ಷಮತೆಗೆ ಹಳೆಯ ಸಾಫ್ಟ್‌ವೇರ್ ಸಾಮಾನ್ಯ ಕಾರಣವಾಗಿರಬಹುದು. ಆದ್ದರಿಂದ, ನೀವು ಯಾವಾಗಲೂ ಸಾಫ್ಟ್‌ವೇರ್ ಅಥವಾ ಅಪ್ಲಿಕೇಶನ್ ಅಪ್​ಡೇಟ್​ಗಳ ಮೇಲೆ ಕಣ್ಣಿಡಬೇಕು ಮತ್ತು ಉತ್ತಮ ಕಾರ್ಯಕ್ಷಮತೆಗಾಗಿ ಅವುಗಳನ್ನು ತಕ್ಷಣವೇ ಇನ್​ಸ್ಟಾಲ್​ ಮಾಡಿಕೊಳ್ಳಬೇಕು.

5. ಇನ್ನೊಂದು ನೆಟ್‌ವರ್ಕ್‌ಗೆ ಕನೆಕ್ಟ್​ ಮಾಡಿ: ನಿಮ್ಮ ಪ್ರಸ್ತುತ ನೆಟ್‌ವರ್ಕ್ ನಿಧಾನಗತಿಯ ವೇಗವನ್ನು ಒದಗಿಸುತ್ತಿದ್ದರೆ ಸಾರ್ವಜನಿಕ ವೈ-ಫೈ ಹಾಟ್‌ಸ್ಪಾಟ್ ಅಥವಾ ಸೆಲ್ಯುಲಾರ್ ನೆಟ್‌ವರ್ಕ್‌ನಂತಹ ಮತ್ತೊಂದು ನೆಟ್‌ವರ್ಕ್‌ಗೆ ಸಂಪರ್ಕಿಸಲು ಪ್ರಯತ್ನಿಸಿ. ನಿಮ್ಮ ಫೋನ್ ಅಥವಾ ನಿಮ್ಮ ನೆಟ್‌ವರ್ಕ್‌ನಲ್ಲಿ ಸಮಸ್ಯೆ ಇದೆಯೇ ಎಂದು ಗುರುತಿಸಲು ಇದು ನಿಮಗೆ ಸಹಾಯ ಮಾಡುತ್ತದೆ.

6. ನಿಮ್ಮ Cache ಮತ್ತು Cookies ಕ್ಲಿಯರ್​ ಮಾಡಿ: ನಿಮ್ಮ ಫೋನ್ ಅಪ್ಲಿಕೇಶನ್‌ಗಳಿಂದ ಡೇಟಾವನ್ನು ಸಂಗ್ರಹಿಸುತ್ತಲೇ ಇರುತ್ತದೆ. ಇದು ನಿಮ್ಮ ನೆಟ್‌ವರ್ಕ್‌ನ ಮೇಲೆ ಪರಿಣಾಮ ಬೀರುತ್ತದೆ. ಆಗ ಇಂಟರ್ನೆಟ್ ವೇಗ ನಿಧಾನಗೊಳ್ಳುತ್ತದೆ. ಹೀಗಾಗಿ ಆಗಾಗ ನಿಮ್ಮ Cache ಮತ್ತು Cookies ಕ್ಲೀಯರ್​ ಮಾಡುತ್ತಲೇ ಇರಬೇಕು. ಆಗ ಮಾತ್ರ ನಿಮ್ಮ ಫೋನ್‌ನ ಇಂಟರ್ನೆಟ್ ಕಾರ್ಯಕ್ಷಮತೆಯನ್ನು ಹೆಚ್ಚಿಸಬಹುದು.

7. VPN ಅನ್ನು ಬಳಸಿ: VPN ಗಳು ನಿಮ್ಮ ಇಂಟರ್ನೆಟ್ ವೇಗವನ್ನು ನಿಧಾನಗೊಳಿಸುತ್ತದೆ ಎಂದು ಭಾವಿಸಲಾಗಿದೆ. ಕೆಲವು ಸಂದರ್ಭಗಳಲ್ಲಿ ವಿಪಿಎನ್​ ಬಳಸುವುದರಿಂದ ಇಂಟರ್ನೆಟ್ ವೇಗವನ್ನು ಸುಧಾರಿಸಬಹುದು. ಇದು ಕೆಲವೊಮ್ಮೆ ಹೆಚ್ಚು ಸ್ಥಿರ ಮತ್ತು ವೇಗವಾದ ಸಂಪರ್ಕವನ್ನು ಒದಗಿಸುತ್ತದೆ.

8. ಗರಿಷ್ಠ ಡೇಟಾ ಲೋಡಿಂಗ್ ಆಯ್ಕೆ: ಆಂಡ್ರಾಯ್ಡ್ ಫೋನ್‌ಗಳಲ್ಲಿ, ವೈರ್‌ಲೆಸ್ ಮತ್ತು ನೆಟ್‌ವರ್ಕ್ ಸೆಟ್ಟಿಂಗ್‌ಗಳ ಅಡಿಯಲ್ಲಿ 'GPRS to Data Prefer' ಎಂಬ ವೈಶಿಷ್ಟ್ಯವನ್ನು ಒದಗಿಸಲಾಗಿದೆ. ಇದನ್ನು ಗರಿಷ್ಠ ಡೇಟಾ ಲೋಡಿಂಗ್ ಆಯ್ಕೆ ಎಂದೂ ಕರೆಯಲಾಗುತ್ತದೆ. ಇದು ನಿಮ್ಮ ಫೋನ್‌ಗೆ ಪ್ರತಿ ಸೈಟ್‌ನಲ್ಲಿ ಹೆಚ್ಚಿನ ಡೇಟಾವನ್ನು ಡೌನ್‌ಲೋಡ್ ಮಾಡಲು ಅನುಮತಿಸುತ್ತದೆ. ಅಷ್ಟೇ ಅಲ್ಲ, ಇದು ಇಂಟರ್ನೆಟ್ ವೇಗವನ್ನು ಹೆಚ್ಚಿಸುತ್ತದೆ ಮತ್ತು ಬ್ರೌಸರ್ ಲೋಡ್ ಸಮಯವನ್ನು ಸುಧಾರಿಸುತ್ತದೆ.

ಓದಿ: ಸೇನೆಗೆ ಆನೆ ಬಲದಂತಿರುವ Mi-17V5 ಹೆಲಿಕಾಪ್ಟರ್; ಇದರ ವೈಶಿಷ್ಟ್ಯತೆ ಹಲವು - IAF Mi17V5 helicopter

ETV Bharat Logo

Copyright © 2024 Ushodaya Enterprises Pvt. Ltd., All Rights Reserved.