ಭಾರತದಲ್ಲಿ ಕೋವಿಡ್ ನಂತರ ಅನೇಕ ಗ್ರಾಹಕರು ಆಟೋಮ್ಯಾಟಿಕ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ಕಾರುಗಳ ಮೊರೆ ಹೋಗುತ್ತಿದ್ದಾರೆ. ಈ ಕಾರಗಳನ್ನು ಚಾಲನೆ ಮಾಡುವುದು ಸುಲಭ. ವಿಶೇಷವಾಗಿ ಟ್ರಾಫಿಕ್ ಪ್ರದೇಶಗಳಲ್ಲಿ ಆಗಾಗ್ಗೆ ಗೇರ್ ಬದಲಾವಣೆ ಮಾಡುವುದು ಮತ್ತು ಕ್ಲಚಿಂಗ್ ಮಾಡುವ ಅಗತ್ಯ ಇರಲಿಲ್ಲ. ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ವಾಹನಗಳಿಗೆ ಉತ್ತಮ ಬೇಡಿಕೆ ಹೊರತಾಗಿಯೂ ಕೆಲವು ವರದಿಗಳ ಪ್ರಕಾರ, ದೇಶದ ಬಹುಪಾಲು ಜನರು ಮ್ಯಾನುವಲ್ ಟ್ರಾನ್ಸ್‌ಮಿಷನ್ ಕಾರುಗಳ ಖರೀದಿಯ ಆಸಕ್ತಿ ಹೊಂದಿದ್ದಾರೆ.
ಕಾರುಗಳ ಬೆಲೆಯಲ್ಲಿ ವ್ಯತ್ಯಾಸ: ದೇಶದಲ್ಲಿ ಹೆಚ್ಚು ಜನರು ಮ್ಯಾನುವಲ್ ಕಾರುಗಳನ್ನು ಆಯ್ಕೆ ಮಾಡಿಕೊಳ್ಳಲು ಬೆಲೆಯೇ ಪ್ರಮುಖ ಕಾರಣ. ಆಟೋಮ್ಯಾಟಿಕ್ ಕಾರುಗಳಿಗೆ ಹೋಲಿಸಿದರೆ, ಮ್ಯಾನುವಲ್ ಕಾರುಗಳ ಬೆಲೆ ಕಡಿಮೆ ಎನ್ನುತ್ತಾರೆ ತಜ್ಞರು. ಸೆಕೆಂಡ್ ಹ್ಯಾಂಡ್ ಕಾರುಗಳನ್ನು ಖರೀದಿಸಲು ಮತ್ತು ಮಾರಾಟ ಮಾಡುವಲ್ಲಿ ಗ್ರಾಹಕರ ವಿಶ್ವಾಸ ಗಳಿಸಿರುವ 'ಸ್ಪಿನ್ನಿ' ಎಂಬ ಸಂಸ್ಥೆಯ ವರದಿಯ ಪ್ರಕಾರ, ಮ್ಯಾನುವಲ್ ಗೇರ್ ಬಾಕ್ಸ್ ಕಾರುಗಳಿಗೆ ಹೋಲಿಸಿದರೆ, ಆಟೋಮ್ಯಾಟಿಕ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ವೇರಿಯಂಟ್ಗೆ ಸುಮಾರು 80,000 ರೂ. ಹೆಚ್ಚಾಗುತ್ತದೆ. ಖರೀದಿದಾರರು ಮ್ಯಾನ್ಯುವಲ್ ವೇರಿಯಂಟ್ಗಿಂತ ಆಟೋಮ್ಯಾಟಿಕ್ ವೆರಿಯಂಟ್ಗೆ ಹಣ ಹೆಚ್ಚು ಪಾವತಿಸಬೇಕಾಗುತ್ತದೆ.
ವಿಮಾ ವೆಚ್ಚಗಳು: ಆಟೋಮ್ಯಾಟಿಕ್ ಗೇರ್‌ಬಾಕ್ಸ್ ತಂತ್ರಜ್ಞಾನದಿಂದಾಗಿ ಕಾರಿನ ಹೆಚ್ಚಿನ ವೆಚ್ಚವು ಖರೀದಿದಾರರಿಗೆ ವಿಮಾ ವೆಚ್ಚವನ್ನೂ ಹೆಚ್ಚಿಸುತ್ತದೆ. ಇದರಿಂದ ವಾಹನ ಖರೀದಿ ಮೊತ್ತ ಹೆಚ್ಚು ದುಬಾರಿಯಾಗಿಸುತ್ತದೆ. ಈ ವ್ಯತ್ಯಾಸವು ಆರಂಭಿಕ ಹಂತದ ವಾಹನಗಳಲ್ಲಿ ಸ್ಪಷ್ಟವಾಗಿ ಕಂಡು ಬರುತ್ತದೆ. ಇದೇ ಕಾರಣಕ್ಕಾಗಿ ಅನೇಕ ಗ್ರಾಹಕರು ಸ್ಟಿಕ್ಕರ್ ಬೆಲೆ ಮತ್ತು ವಿಮಾ ವೆಚ್ಚಗಳಲ್ಲಿ ಹಣವನ್ನು ಉಳಿಸಲು ಮ್ಯಾನುವಲ್ ವೇರಿಯಂಟ್ ಕಾರಗಳನ್ನೇ ಆಯ್ಕೆ ಮಾಡಲು ಆಸಕ್ತಿ ತೋರುತ್ತಿದ್ದಾರೆ.
ನಿರ್ವಹಣಾ ವೆಚ್ಚ: ಹೆಚ್ಚಿನ ಜನರು ಮ್ಯಾನ್ಯುವಲ್ ಕಾರುಗಳತ್ತ ಆಸಕ್ತಿ ತೋರಲು ನಿರ್ವಹಣಾ ವೆಚ್ಚವೂ ಒಂದು ಕಾರಣ ಎನ್ನುತ್ತಾರೆ ತಜ್ಞರು. ಏಕೆಂದರೆ, ಮ್ಯಾನುವಲ್ ಗೇರ್ ಬಾಕ್ಸ್ ವಾಹನಗಳಿಗಿಂತ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಕಾರುಗಳ ನಿರ್ವಹಣೆ ದುಬಾರಿಯಾಗಿದೆ. ಅಲ್ಲದೇ, ಆಟೋಮ್ಯಾಟಿಕ್ ಟ್ರಾನ್ಸ್ಮಿಷನ್ಗಳು, ಮ್ಯಾನುವಲ್ ಟ್ರಾನ್ಸ್ಮಿಷನ್ಗಳಿಗಿಂತ ಹೆಚ್ಚು ಸಂಕೀರ್ಣವಾದ ರಚನೆ ಹೊಂದಿವೆ. ಇದರ ಪರಿಣಾಮವಾಗಿ ಮಾಲೀಕರಿಗೆ ನಿರ್ವಹಣಾ ವೆಚ್ಚವು ಹೆಚ್ಚಾಗುತ್ತದೆ. ಅದೇ ರೀತಿ, ಆಟೋಮ್ಯಾಟಿಕ್ ಕಾರುಗಳಿಗೆ ಹೋಲಿಸಿದರೆ ಮ್ಯಾನುಯಲ್ ಕಾರುಗಳಲ್ಲಿ ಆಯಿಲ್ ಬದಲಾವಣೆಯ ವೆಚ್ಚವೂ ಕಡಿಮೆಯಾಗಿದೆ ಅಂತೆ.
ವಿಶ್ವಾಸಾರ್ಹತೆ: ಆಟೋಮ್ಯಾಟಿಕ್ ಗೇರ್‌ಬಾಕ್ಸ್, ಮ್ಯಾನುಯಲ್ ಗೇರ್‌ಬಾಕ್ಸ್‌ಗಿಂತ ಕಡಿಮೆ ವಿಶ್ವಾಸಾರ್ಹತೆ ಹೊಂದಿದೆ. ದೇಶದ ಹೆಚ್ಚು ಜನರು ಮ್ಯಾನುವಲ್ ಕಾರುಗಳನ್ನು ಖರೀದಿಸಲು ಇದು ಮತ್ತೊಂದು ಪ್ರಮುಖ ಕಾರಣವಾಗಿದೆ ಎಂದು ತಜ್ಞರು ಹೇಳುತ್ತಾರೆ. ಅಲ್ಲದೇ, ಮ್ಯಾನುವಲ್ ಗೇರ್ ಬಾಕ್ಸ್ ತಾಂತ್ರಿಕವಾಗಿ ಮುಂದುವರೆದಿದೆ. ಇದು ಹೆಚ್ಚು ಸಮಯದಿಂದ ಕಾರ್ಯನಿರ್ವಹಿಸುತ್ತಿದೆ.
ಗೇರ್ ಬಾಕ್ಸ್ ಸಮಸ್ಯೆಗಳು: ಮ್ಯಾನುವಲ್ ಕಾರುಗಳಲ್ಲಿನ ಗೇರ್ ಬಾಕ್ಸ್ ವ್ಯವಸ್ಥೆಗಿಂತ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಕಾರಿನಲ್ಲಿರುವ ಗೇರ್ ಬಾಕ್ಸ್ ವ್ಯವಸ್ಥೆ ಹೆಚ್ಚು ಜಟಿಲವಾಗಿದೆ. ವಿಶೇಷವಾಗಿ ಆಟೋಮ್ಯಾಟಿಕ್ ಕಾರಿನಲ್ಲಿ ಯಾವುದೇ ಗೇರ್ ಬಾಕ್ಸ್ ಸಮಸ್ಯೆ ಉಂಟಾದಾಗ ಮೆಕ್ಯಾನಿಕ್ಗಳನ್ನು ಹುಡುಕುವುದು ತುಂಬಾ ಕಷ್ಟ. ಅದೇ ಮ್ಯಾನ್ಯುವಲ್ ಗೇರ್ ಬಾಕ್ಸ್ಗೆ ಮೆಕ್ಯಾನಿಕ್ ಹುಡುಕುವುದು ಸುಲಭ. ಮ್ಯಾನುವಲ್ ಕಾರುಗಳು ಹಲವು ವರ್ಷಗಳಿಂದ ಮಾರುಕಟ್ಟೆಯಲ್ಲಿ ಇರುವುದರಿಂದ ಪ್ರತಿಯೊಬ್ಬ ಮೆಕ್ಯಾನಿಕ್ ಈ ಕಾರುಗಳ ಗೇರ್ ಬಾಕ್ಸ್ ಬಗ್ಗೆ ಕನಿಷ್ಠ ಜ್ಞಾನವನ್ನು ಹೊಂದಿರುತ್ತಾನೆ. ಯಾವುದೇ ರಿಪೇರಿ ಸುಲಭವಾಗಿ ಮಾಡಲಾಗುತ್ತದೆ.
ಅಧಿಕ ಬಿಸಿಯಾಗುವಿಕೆ, ಜರ್ಕಿ ರೈಡ್‌ಗಳು: ಭಾರಿ ಟ್ರಾಫಿಕ್ ಪರಿಸ್ಥಿತಿಗಳಲ್ಲಿ ಸ್ವಯಂಚಾಲಿತ ಗೇರ್‌ಬಾಕ್ಸ್ ಅನ್ನು ಚಾಲನೆ ಮಾಡುವುದರಿಂದ ಟ್ರಾನ್ಸ್ಮಿಷನ್ಗಳು ಅಧಿಕ ಬಿಸಿಯಾಗಲು ಕಾರಣವಾಗಬಹುದು. ಡ್ರೈವ್ ಮೋಡ್‌ನಲ್ಲಿರುವಾಗ ಚಾಲಕನು ತನ್ನ ಪಾದವನ್ನು ಬ್ರೇಕ್ ಮೇಲೆ ಇರಿಸುವ ಮೂಲಕ ನಿಧಾನಗೊಳಿಸಬೇಕು. ಅದೇ ಮ್ಯಾನುವಲ್ ಗೇರ್ ಬಾಕ್ಸ್ ವ್ಯವಸ್ಥೆಯಲ್ಲಿ ಇಂತಹ ಸಮಸ್ಯೆಗಳು ಇರಲ್ಲ. ಅನೇಕ ಕಾರು ಮಾಲೀಕರು ಮ್ಯಾನುವಲ್ ಗೇರ್‌ಬಾಕ್ಸ್‌ಗಳ ಕಾರುಗಳಿಗೆ ಆದ್ಯತೆ ನೀಡುವ ಇನ್ನೊಂದು ಕಾರಣ ಎಂದರೆ, ವಾಹನದ ಚಾಲನಾ ಅನುಭವದ ಮೇಲೆ ಚಾಲಕನಿಗೆ ಹೆಚ್ಚಿನ ನಿಯಂತ್ರಣ ಇರುತ್ತದೆ.
ಇದನ್ನೂ ಓದಿ: 2 ಮತ್ತು 3ನೇ ಶ್ರೇಣಿಯ ನಗರಗಳಲ್ಲಿ ಅತ್ಯಧಿಕ ಆನ್ಲೈನ್ ಬಸ್ ಟಿಕೆಟ್ ಬುಕ್ಕಿಂಗ್