ಹೈದರಾಬಾದ್: ವಿಶ್ವದ ಅತಿ ಜನಪ್ರಿಯ ಮೈಕ್ರೋಬ್ಲಾಗಿಂಗ್ ಮೆಸೆಂಜರ್ ಆದ ವಾಟ್ಸಾಪ್ಗೆ ಕೋಟ್ಯಂತರ ಬಳಕೆದಾರರಿದ್ದಾರೆ. ಇದರ ಬಳಕೆ ಉಳಿದೆಲ್ಲ ಮೆಸೆಂಜರ್ಗಳಿಗಿಂತ ಹೆಚ್ಚೇ ಎಂದು ಹೇಳಬಹುದು. ಜನರು ಆ್ಯಪ್ ಅನ್ನು ತುಂಬಾ ಸಲೀಸಾಗಿ ಬಳಸಲು ಏನೇನೋ ವೈಶಿಷ್ಟ್ಯ(ಫೀಚರ್)ಗಳನ್ನು ಪರಿಚಯಿಸುತ್ತಿರುತ್ತದೆ. ಅದರ ಸಾಲಿನಲ್ಲಿ ಮತ್ತೊಂದು ವೈಶಿಷ್ಟ್ಯವನ್ನು ಇದೀಗ ತರಲು ವಾಟ್ಸಾಪ್ ಮುಂದಾಗಿದೆ.
ವಾಟ್ಸಾಪ್ ನಿರಂತರವಾಗಿ ತನ್ನ ವೈಶಿಷ್ಟ್ಯಗಳನ್ನು ಬದಲಾಯಿಸುತ್ತಿರುತ್ತದೆ. ಅದನ್ನು ಅನುಷ್ಠಾನ ಮಾಡಲೂ ಪರೀಕ್ಷೆ ಮಾಡುತ್ತಿರುತ್ತದೆ. ಅವುಗಳನ್ನು ಪಡೆದ ಬಳಿಕ ಹೆಚ್ಚಿನ ಅನುಕೂಲವನ್ನು ಪಡೆಯುತ್ತಾರೆ. ಇದೀಗ ತರಲು ಉದ್ದೇಶಿಸಿರುವ ಈ ವೈಶಿಷ್ಟ್ಯವು ಬಳಕೆದಾರರಿಗೆ ಹೊಸ ಅನುಭವ ನೀಡಲಿದೆ.
ಟ್ಯಾಪ್ ಮಾಡೋದು ನಿಲ್ಲುತ್ತೆ: ಬಳಕೆದಾರರು ತಮ್ಮ ಮೊಬೈಲ್ ವಾಟ್ಸಾಪ್ಗೆ ಬರುವ ವಿಡಿಯೋ ಅಥವಾ ಫೋಟೋಗೆ ಪ್ರತಿಕ್ರಿಯಿಸಲು ಟ್ಯಾಪ್ ಮಾಡಬೇಕಾಗುತ್ತದೆ. ಕೆಲ ಸೆಕೆಂಡುಗಳ ಕಾಲ ನಿರ್ದಿಷ್ಟ ವಿಡಿಯೋ ಅಥವಾ ಫೋಟೋವನ್ನು ಒತ್ತಿ ಹಿಡಿದರೆ ಪ್ರತಿಕ್ರಿಯಿಸಲು ಸಾಧ್ಯವಾಗುತ್ತದೆ.
ಇದನ್ನು ಹೋಗಲಾಡಿಸಲು ಮತ್ತು ಸಲೀಸಾಗಿ ಪ್ರತಿಕ್ರಿಯಿಸಲು ವಾಟ್ಸಾಪ್ ಹೊಸ ತಂತ್ರಕ್ಕೆ ಮೊರೆ ಹೋಗಿದೆ. ಅದೇನೆಂದರೆ, ಚಿತ್ರದ ಮೇಲೆ ಒತ್ತಿ ಹಿಡಿಯುವ ಬದಲಿಗೆ, ನೇರವಾಗಿ ಪ್ರತಿಕ್ರಿಯಿಸಲು ಬಯಸುವ ಚಿತ್ರ ಅಥವಾ ವಿಡಿಯೋದ ಮುಂದೆ ಹೊಸ ಬಾರ್ ನೀಡಲು ಮುಂದಾಗಿದೆ.
ನಾವು ಪ್ರತಿಕ್ರಿಯಿಸಲು ಬಯಸುವ ಫೋಟೋದ ಬಲಭಾಗದಲ್ಲಿ ಮೂರು ಬಟನ್ಗಳ ಬಾರ್ ನೀಡಲಾಗುತ್ತಿದ್ದು, ಅದನ್ನು ಒತ್ತಿದ ಬಳಿಕ ಅಲ್ಲಿ ಇಮೋಜಿ ತೆರೆದುಕೊಳ್ಳುತ್ತದೆ. ಅದನ್ನು ಬಳಸಿ ಏನನ್ನು ಕಳುಹಿಸಬೇಕು ಎಂಬುದನ್ನು ಆಯ್ಕೆ ಮಾಡಿಕೊಳ್ಳಬಹುದು. ಒಂದು ವೇಳೆ ಆ ಬಾರ್ ಗೋಚರಿಸದಿದ್ದರೆ, ನೀವು + ಬಟನ್ ಅನ್ನು ಒತ್ತಿದಾಗ ಪ್ರತಿಕ್ರಿಯಿಸುವ ಬಾರ್ ಓಪನ್ ಆಗುತ್ತದೆ.
ವಾಟ್ಸಾಪ್ ಡೆವಲಪರ್‌ಗಳು ಅಪ್ಲಿಕೇಶನ್‌ಗೆ ಹಲವು ಹೊಸ ವೈಶಿಷ್ಟ್ಯಗಳನ್ನು ಸೇರಿಸಿದ್ದಾರೆ. ಹೊಸ ಬದಲಾವಣೆಯಲ್ಲಿ ನೀವು, ಪ್ರತಿ ಮೂರು ಚಾಟ್ ಸಂದೇಶಗಳನ್ನು ಪಿನ್ ಮಾಡಲು ಸಾಧ್ಯವಾಗುತ್ತದೆ.
ಇದನ್ನೂ ಓದಿ: WhatsApp ಬಳಕೆದಾರರಿಗೆ ಗುಡ್ ನ್ಯೂಸ್; ಶೀಘ್ರವೇ ಬರಲಿದೆ ಈ ಹೊಸ ವೈಶಿಷ್ಟ್ಯ - WhatsApp In App Dialer