ETV Bharat / technology

Mentions ಎಂಬ ಹೊಸ ಫೀಚರ್​ ಬಳಕೆಗೆ ತಂದ ವಾಟ್ಸ್​ಆ್ಯಪ್​​ : ಇದರ ಉಪಯೋಗ ಹೇಗೆ? - WHATSAPP MENTIONS FEATURE

Whatsapp Mentions Feature: ಕೆಲ ದಿನಗಳಿಂದ ವಾಟ್ಸ್​ಆ್ಯಪ್​​​​​​​ನಲ್ಲಿ ಮತ್ತೊಂದು ಹೊಸ ಫೀಚರ್ 'ಮೆನ್ಷನ್' ಎಂದು ಗೋಚರಿಸುತ್ತಿದೆ. ಈ ವೈಶಿಷ್ಟ್ಯವನ್ನು ಯಾವರೀತಿ ಬಳಸುವುದು ಎಂದು ತಿಳಿಯೋಣ ಬನ್ನಿ..

WHATSAPP NEW FEATURE  WHATSAPP MENTIONS FEATURE WORK  MENTIONS FEATURE ROLLS OUT
ಮೆನ್ಷನ್ ಎಂಬ ಹೊಸ ಫೀಚರ್​ ಬೆಳಕಿಗೆ ತಂದ ವಾಟ್ಸಾಪ್ (ANI)
author img

By ETV Bharat Tech Team

Published : Nov 2, 2024, 1:52 PM IST

Whatsapp Mentions Feature: ಹೊಸ ಫೀಚರ್​ಗಳೊಂದಿಗೆ ಬಳಕೆದಾರರನ್ನು ಸೆಳೆಯುತ್ತಿರುವ ಜನಪ್ರಿಯ ಮೆಸೇಜಿಂಗ್ ಆಪ್ ವಾಟ್ಸ್​​ಆ್ಯಪ್​​​​​​​​ನಲ್ಲಿ ಮತ್ತೊಂದು ಸೌಲಭ್ಯ ಬಂದಿದೆ. ಕಳೆದ ಕೆಲವು ದಿನಗಳಿಂದ WhatsApp ಕೂಡ 'ಮೆನ್ಷನ್' ವೈಶಿಷ್ಟ್ಯವನ್ನು ಸೇರಿಸಲು ನೋಡುತ್ತಿದೆ. ಇತ್ತೀಚೆಗೆ ಇದನ್ನು ಎಲ್ಲ ಬಳಕೆದಾರರಿಗೆ ಲಭ್ಯವಾಗುವಂತೆ ಮಾಡಲಾಗಿದೆ. ಇದನ್ನು ಬಳಸುವುದು ಹೇಗೆ ಎಂಬುದನ್ನು ತಿಳಿಯೋಣ ಬನ್ನಿ..

ಸಾಮಾನ್ಯವಾಗಿ ಇನ್​ಸ್ಟಾಗ್ರಾಮ್​ನಲ್ಲಿ ಸ್ಟೋರಿಯನ್ನು ಅಪ್ಲೋಡ್​​ ಮಾಡುವಾಗ ನಾವು ಇಷ್ಟಪಡುವ ಜನರನ್ನು '@' ಸಹಾಯದಿಂದ ಟ್ಯಾಗ್ ಮಾಡುತ್ತೇವೆ. ಅಂದರೆ ನಾವು ಸ್ಟೋರಿಯನ್ನು ಪೋಸ್ಟ್ ಮಾಡಿದ್ದೇವೆ ಎಂದು ಆ ವ್ಯಕ್ತಿಗೆ ನೋಟಿಫಿಕೇಶನ್​ ಹೋಗುತ್ತದೆ. ಆಗ ಅವರು ನಮ್ಮ ಸ್ಟೋರಿಯನ್ನು ನೋಡುತ್ತಾರೆ. ಈಗ ವಾಟ್ಸ್​​​​ಆ್ಯಪ್​​ ಅಂತಹ ಸೌಲಭ್ಯವನ್ನು ಸೇರಿಸಿದೆ. ಇದರೊಂದಿಗೆ ವಾಟ್ಸ್​ಆ್ಯಪ್​​​​​ನಲ್ಲಿ ಸ್ಟೇಟಸ್ ಸೇರಿಸುವಾಗ ಸಂಪರ್ಕದಲ್ಲಿರುವ ನೀವು ಇಷ್ಟಪಡುವ ಜನರಿಗೆ ಟ್ಯಾಗ್ ಮಾಡಬಹುದು.

ವಾಟ್ಸ್​​ಆ್ಯಪ್​​​​​ನಲ್ಲಿ ಸ್ಟೇಟಸ್ ಅಪ್ಲೋಡ್​​ ಮಾಡುವಾಗ, 'ಆ್ಯಡ್​ ಕ್ಯಾಪ್ಶನ್' ಬಾರ್‌ನ ಬಲಭಾಗದಲ್ಲಿ '@' ಐಕಾನ್ ಕಾಣಿಸಿಕೊಳ್ಳುತ್ತದೆ. ಅದರ ಮೇಲೆ ಕ್ಲಿಕ್ ಮಾಡಿದಾಗ ನಿಮ್ಮ ಎಲ್ಲಾ ವಾಟ್ಸ್​​ಆ್ಯಪ್​​ ​ ಕಾಂಟ್ಯಾಕ್ಟ್​ ಕಾಣಿಸುತ್ತದೆ. ಅವುಗಳಲ್ಲಿ ನೀವು ಇಷ್ಟಪಡುವ ಜನರಿಗೆ ಟ್ಯಾಗ್​ ಮಾಡಬಹುದಾಗಿದೆ.

ಸ್ಟೇಟಸ್ ಅಪ್‌ಡೇಟ್‌ನಲ್ಲಿ ಉಲ್ಲೇಖಿಸಲಾದ ವ್ಯಕ್ತಿಯು ಅದರ ಬಗ್ಗೆ ನೋಟಿಫಿಕೇಶನ್​ ಸ್ವೀಕರಿಸುತ್ತಾರೆ. ಆದರೆ ಟ್ಯಾಗ್ ಮಾಡಲಾದ ವ್ಯಕ್ತಿಯ ಹೆಸರು Insta ನಂತೆ ಎಲ್ಲರಿಗೂ ಗೋಚರಿಸುವುದಿಲ್ಲ ಎಂದು ಮೆಸೇಜಿಂಗ್ ಅಪ್ಲಿಕೇಶನ್ ಈಗಾಗಲೇ ಘೋಷಿಸಿದೆ. ಬಳಕೆದಾರರ ಗೌಪ್ಯತೆಯನ್ನು ರಕ್ಷಿಸಲು ಈ ವೈಶಿಷ್ಟ್ಯವನ್ನು ವಿನ್ಯಾಸಗೊಳಿಸಲಾಗಿದೆ. 'ಮೆನ್ಷನ್' ವೈಶಿಷ್ಟ್ಯವು ಬಹುತೇಕ ಎಲ್ಲಾ ಬಳಕೆದಾರರಿಗೆ ಈಗಾಗಲೇ ಲಭ್ಯವಿದೆ.

ಓದಿ: ಹೊಸ ಲಿಸ್ಟ್ಸ್​ ಎಂಬ ವೈಶಿಷ್ಟ್ಯ ಪರಿಚಯಿಸಿದ ವಾಟ್ಸ್​ಆ್ಯಪ್​​ , ಏನಿದರ ವಿಶೇಷತೆ?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.