ETV Bharat / technology

ನಿಮ್ಮವರ ವಾಟ್ಸ್‌ಆ್ಯಪ್​ ಸ್ಟೇಟಸ್​ ಮಿಸ್​ ಆಗ್ತಿದೀರಾ?: ಇದನ್ನು ನಿವಾರಿಸಲು ಬರಲಿದೆ 'ನೋಟಿಫಿಕೇಶನ್​' - WhatsApp Notifications - WHATSAPP NOTIFICATIONS

ಕೋಟ್ಯಂತರ ಬಳಕೆದಾರರ ಸ್ನೇಹಿಯಾಗಿರುವ ವಾಟ್ಸ್‌ಆ್ಯಪ್​ ಹೊಸ ಫೀಚರ್​ ಅನ್ನು ಪರಿಚಯಿಸಲು ಮುಂದಾಗಿದೆ.

ವಾಟ್ಸಪ್​ ಸ್ಟೇಟಸ್
ವಾಟ್ಸಪ್​ ಸ್ಟೇಟಸ್
author img

By ETV Bharat Karnataka Team

Published : Apr 11, 2024, 9:14 PM IST

ಹೈದರಾಬಾದ್: ಜನಪ್ರಿಯ ಮೈಕ್ರೋಬ್ಲಾಗಿಂಗ್​ ಆಗಿರುವ ವಾಟ್ಸ್​ಆ್ಯಪ್​ ಅತಿದೊಡ್ಡ ಚಾಟಿಂಗ್​ ವೇದಿಕೆಯೂ ಹೌದು. ಕೋಟ್ಯಂತರ ಬಳಕೆದಾರರನ್ನು ಹೊಂದಿರುವ ಸಾಮಾಜಿಕ ಜಾಲತಾಣವು ಹೊಸ ಹೊಸ ವೈಶಿಷ್ಟ್ಯಗಳನ್ನು ಪರಿಚಯಿಸುತ್ತಲೇ ಇದೆ. ಅಂಥದ್ದೇ ಮಹತ್ವದ ಇನ್ನೊಂದು ಬದಲಾವಣೆಗೆ ಆ್ಯಪ್​ ಸಜ್ಜಾಗುತ್ತಿದೆ.

ನಿಜ, ಬಳಕೆದಾರರ ಸ್ನೇಹಿಯಾಗಿರುವ ವಾಟ್ಸ್​ಆ್ಯಪ್​ ಒಳ್ಳೆಯ ಸುದ್ದಿಯನ್ನು ಹೊರತಂದಿದೆ. ಅದೇನೆಂದರೆ, ಇನ್ನು ಮುಂದೆ ನಮ್ಮ ಕಾಂಟ್ಯಾಕ್ಟ್​ ಲಿಸ್ಟ್​ನಲ್ಲಿರುವ ಜನರು ಸ್ಟೋರಿ ಅಥವಾ ಸ್ಟೇಟಸ್​ ಹಾಕಿಕೊಂಡಾಗ ಅದನ್ನು ತಿಳಿಸುವ ನೋಟಿಫಿಕೇಶನ್​ ನಮಗೆ ರವಾನೆಯಾಗಲಿದೆ. ಇದರಿಂದ ಯಾರಾದರೂ ಹೊಸದಾಗಿ ಸ್ಟೇಟಸ್​ ಹಾಕಿದಲ್ಲಿ ಅದು ನಮಗೆ ತಿಳಿದುಬರಲಿದೆ. ಈ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವ ಕುರಿತು ಶೋಧಗಳು ನಡೆಯುತ್ತಿವೆ.

ಏನು ಲಾಭ?: ವಾಟ್ಸ್​​ಆ್ಯಪ್​ನಲ್ಲಿ ಅಳವಡಿಸಿಕೊಳ್ಳಲು ಉದ್ದೇಶಿಸಿರುವ ​ನೋಟಿಫಿಕೇಶನ್​ ವೈಶಿಷ್ಟ್ಯವು ಹಲವು ವಿಧದಲ್ಲಿ ಬಳಕೆದಾರರಿಗೆ ನೆರವಾಗಲಿದೆ. ಇದನ್ನು ಅಭಿವೃದ್ಧಿಪಡಿಸುವ ಹಂತದಲ್ಲಿ ಮೆಟಾ ತಾಂತ್ರಿಕವಾಗಿ ಶೋಧ ನಡೆಸುತ್ತಿದೆ. ಇದರ ಅಳವಡಿಕೆಯ ಬಳಿಕ ಕಾಂಟ್ಯಾಕ್ಟ್​​ ಲಿಸ್ಟ್​​ನಲ್ಲಿರುವವರು ಸ್ಟೇಟಸ್ ಅಪ್‌ಡೇಟ್ ಮಾಡಿದಲ್ಲಿ ಅದರ ಮಾಹಿತಿಯು ನೋಟಿಫಿಕೇಶನ್​ ಮೂಲಕ ಇನ್ನೊಬ್ಬ ಬಳಕೆದಾರರ ಗಮನಕ್ಕೆ ಬರುತ್ತದೆ. ಈ ಮೊದಲು ಯಾರೇ ಸ್ಟೇಟಸ್​​ ಹಾಕಿಕೊಂಡಲ್ಲಿ ಅದು ನಾವು ಅದನ್ನು ನೋಡುವ ಹೊರತು ಗಮನಕ್ಕೆ ಬರುವುದಿಲ್ಲ.

ಇದರಿಂದ ಕೆಲವೊಮ್ಮೆ ನಮ್ಮ ಪ್ರೀತಿಪಾತ್ರರು ಹಂಚಿಕೊಂಡ ಮಾಹಿತಿಯು ತಪ್ಪಿಹೋಗುವ ಸಾಧ್ಯತೆ ಇರುತ್ತದೆ. ಆದರೆ, ನೋಟಿಫಿಕೇಶನ್​ ವೈಶಿಷ್ಟ್ಯ ಅಳವಡಿಸಿದಲ್ಲಿ, ಅದರಿಂದ ಮಾಹಿತಿ ರವಾನೆಯಾಗಲಿದೆ. ಪ್ರತಿ ಸ್ಟೇಟಸ್​ ಅನ್ನು ಸುಲಭವಾಗಿ ವೀಕ್ಷಿಸಲು ಸಾಧ್ಯವಾಗುತ್ತದೆ. ಇದು ಬಳಕೆದಾರರಿಗೆ ಇನ್ನೂ ಪ್ರಯೋಜನಗಳನ್ನು ಒದಗಿಸುವ ಉದ್ದೇಶದಿಂದ WhatsApp ಈ ವೈಶಿಷ್ಟ್ಯವನ್ನು ಪ್ರಾರಂಭಿಸುತ್ತಿದೆ. ಇದು ಇನ್ನೂ ಅಭಿವೃದ್ಧಿ ಹಂತದಲ್ಲಿದ್ದು, ಮುಂದಿನ ದಿನಗಳಲ್ಲಿ ಸಾಕಾರವಾಗಲಿದೆ ಎಂದು ಮೆಟಾದ ಮೂಲಗಳು ತಿಳಿಸಿವೆ.

ಬಳಕೆದಾರರಿಗೆ ಹೊಸ ಸೌಲಭ್ಯ: WhatsAppನ ಹೊಸ ವೈಶಿಷ್ಟ್ಯದಿಂದ ಇದು ಇನ್ನಷ್ಟು ಬಳಕೆದಾರ ಸ್ನೇಹಿಯಾಗಲಿದೆ. ಕೆಲವೊಮ್ಮೆ ಕೆಲಸದ ಒತ್ತಡ ಮತ್ತು ಬಿಡುವಿಲ್ಲದ ಸಮಯದ ಕಾರಣ, ಕೆಲವು ಬಳಕೆದಾರರು ಸಂದೇಶಗಳನ್ನು ಹೊರತುಪಡಿಸಿ ಸ್ಟೋರಿಗಳು ಅಥವಾ ಸ್ಟೇಟಸ್‌ ಅನ್ನು ನೋಡುವುದಿಲ್ಲ. ಅಂತಹ ಪರಿಸ್ಥಿತಿಯಲ್ಲಿ ಈ ಹೊಸ ವೈಶಿಷ್ಟ್ಯದಿಂದ ಯಾವುದೇ ಸ್ನೇಹಿತರು ಅಥವಾ ಕುಟುಂಬದವರ ಹಂಚಿಕೊಂಡ ಮಾಹಿತಿಯು ನೋಟಿಫಿಕೇಶನ್​ ಮೂಲಕ ತಿಳಿದುಬರಲಿದೆ.

ಇದನ್ನೂ ಓದಿ: ಸ್ವಿಚ್ಡ್​ ಆಫ್ ಆಗಿದ್ದರೂ ನಿಮ್ಮ ಫೋನ್ ಪತ್ತೆ ಮಾಡಬಹುದು: ಗೂಗಲ್ ಹೊಸ ಅಪ್​ಡೇಟ್ - Google Find My Device Network

ETV Bharat Logo

Copyright © 2025 Ushodaya Enterprises Pvt. Ltd., All Rights Reserved.