WhatsApp New Feature: ವಾಟ್ಸಾಪ್ ಪ್ರಪಂಚದಾದ್ಯಂತ ಅತ್ಯಂತ ಜನಪ್ರಿಯ ತ್ವರಿತ ಸಂದೇಶ ಅಪ್ಲಿಕೇಶನ್‌ಗಳಲ್ಲಿ ಒಂದಾಗಿದೆ. ಕಂಪನಿಯು ಬಳಕೆದಾರರ ಅನುಭವವನ್ನು ಸುಧಾರಿಸುವಲ್ಲಿ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದೆ. ಇತ್ತೀಚೆಗೆ ಕಂಪನಿಯು ಅಪ್ಲಿಕೇಶನ್‌ನಲ್ಲಿ ಕೆಲವು ವೈಶಿಷ್ಟ್ಯಗಳನ್ನು ಸೇರಿಸಿದೆ. ಇದು ಬಳಕೆದಾರರನ್ನು ಕ್ರೇಜಿಯನ್ನಾಗಿ ಮಾಡುತ್ತಿದೆ.
ಈ ಅಪ್ಲಿಕೇಶನ್ ಇತ್ತೀಚೆಗೆ ಅತ್ಯುತ್ತಮ ಅಪ್ಲಿಕೇಶನ್ ಪ್ರಶಸ್ತಿಯನ್ನು ಪಡೆದಿರುವುದು ಗೊತ್ತಿರುವ ಸಂಗತಿ. ಇದು ಅದರ ಜನಪ್ರಿಯತೆಯನ್ನು ತೋರಿಸುತ್ತದೆ. ವಾಟ್ಸಾಪ್ನ ಈ ವೈಶಿಷ್ಟ್ಯವನ್ನು ಆಂಡ್ರಾಯ್ಡ್ ಬಳಕೆದಾರರಿಗಾಗಿ ತರಲಾಗುತ್ತಿದೆ. ಈ ಹೊಸ ವೈಶಿಷ್ಟ್ಯವನ್ನು ಪರಿಚಯಿಸಿದ ನಂತರ, ಬಳಕೆದಾರರು ಸ್ಟಿಕ್ಕರ್‌ಗಳನ್ನು ಕಳುಹಿಸುವಲ್ಲಿ ಹೊಸ ಅನುಭವವನ್ನು ಪಡೆಯುತ್ತಾರೆ. ವಾಟ್ಸಾಪ್ ಸುಮಾರು 4 ವರ್ಷಗಳ ಹಿಂದೆ ಅಪ್ಲಿಕೇಶನ್‌ಗೆ ಸ್ಟಿಕ್ಕರ್ ವೈಶಿಷ್ಟ್ಯವನ್ನು ಸೇರಿಸಿತ್ತು. ಇದರ ಮೂಲಕ ಬಳಕೆದಾರರು ತಮ್ಮ ಭಾವನೆಗಳನ್ನು ಉತ್ತಮ ರೀತಿಯಲ್ಲಿ ಅನುಭವಿಸುತ್ತಿದ್ದಾರೆ. ಈ ಅಂತರ್ನಿರ್ಮಿತ ಸ್ಟಿಕ್ಕರ್‌ಗಳ ಹೊರತಾಗಿ, ಬಳಕೆದಾರರು ತಮ್ಮ ಪ್ರೀತಿಪಾತ್ರರಿಗೆ ಹೊಸ ರೀತಿಯಲ್ಲಿ ಮೂರನೇ ವ್ಯಕ್ತಿಯ ಸ್ಟಿಕ್ಕರ್‌ಗಳನ್ನು ಕಳುಹಿಸಲು ಅನುಮತಿಸಲಾಗುತ್ತಿದೆ.
ಆಂಡ್ರಾಯ್ಡ್ ಬಳಕೆದಾರರಿಗಾಗಿ ಮಾತ್ರ: WABetaInfo ವರದಿಯ ಪ್ರಕಾರ, ಈ ವೈಶಿಷ್ಟ್ಯವನ್ನು ಮೆಟಾದ ತ್ವರಿತ ಸಂದೇಶ ಅಪ್ಲಿಕೇಶನ್‌ಗಾಗಿ ವಾಟ್ಸಾಪ್ ಬೀಟಾ ಆವೃತ್ತಿ 2.24.25.2 ನಲ್ಲಿ ನೋಡಲಾಗಿದೆ. ಈ ವೈಶಿಷ್ಟ್ಯವನ್ನು ಪ್ರಸ್ತುತ ಆಂಡ್ರಾಯ್ಡ್ ಬಳಕೆದಾರರಿಗಾಗಿ ಅಭಿವೃದ್ಧಿಪಡಿಸಲಾಗಿದೆ. ಈ ಹೊಸ ಫೀಚರ್ನಲ್ಲಿ ಬಳಕೆದಾರರು ಕಸ್ಟಮ್ ಸ್ಟಿಕ್ಕರ್ ಪ್ಯಾಕ್‌ಗಳನ್ನು ರಚಿಸುವ ಆಯ್ಕೆಯನ್ನು ಸಹ ಪಡೆಯುತ್ತಾರೆ.
ಬಳಕೆದಾರರು ಒಂದೇ ಸ್ಟಿಕ್ಕರ್ ಬದಲಿಗೆ ಸಂಪೂರ್ಣ ಪ್ಯಾಕ್ ಅನ್ನು ತಮ್ಮ ಸಂಪರ್ಕಗಳೊಂದಿಗೆ ಹಂಚಿಕೊಳ್ಳಬಹುದು. ಬಳಕೆದಾರರು ಈಗ ತಮ್ಮ ನೆಚ್ಚಿನ ಸಂಗ್ರಹವನ್ನು ತಮ್ಮ ಪ್ರೀತಿ ಪಾತ್ರರೊಂದಿಗೆ ಹಂಚಿಕೊಳ್ಳಲು ಸಾಧ್ಯವಾಗುತ್ತದೆ. ಈ ಹೊಸ ವೈಶಿಷ್ಟ್ಯದಲ್ಲಿ, ಸ್ಟಿಕ್ಕರ್ ಪ್ಯಾಕ್ ಅನ್ನು ಹಂಚಿಕೊಳ್ಳುವುದರ ಜೊತೆಗೆ ಬಳಕೆದಾರರು ಅದನ್ನು ಲೈಬ್ರರಿಯಿಂದ ಡಿಲಿಟ್ ಆಪ್ಷನ್ ಸಹ ಹೊಂದಿರುತ್ತಾರೆ.
ವಾಟ್ಸಾಪ್ನಲ್ಲಿ ಸ್ಟಿಕ್ಕರ್ ಪ್ಯಾಕ್‌ಗಳನ್ನು ರಚಿಸಿದ ನಂತರ ನೀವು ನೇರ ಲಿಂಕ್ ಅನ್ನು ಹಂಚಿಕೊಳ್ಳಲು ಸಾಧ್ಯವಾಗುತ್ತದೆ. ಈ ಲಿಂಕ್ ಅನ್ನು ಯಾರಿಗೆ ಕಳುಹಿಸಲಾಗುತ್ತದೆಯೋ ಅವರು ಅದರ ಸಹಾಯದಿಂದ ಸಂಪೂರ್ಣ ಪ್ಯಾಕ್ ಅನ್ನು ಡೌನ್‌ಲೋಡ್ ಮಾಡಲು ಸಾಧ್ಯವಾಗುತ್ತದೆ. ಬಳಕೆದಾರರು ತಮ್ಮ ಪ್ರೀತಿಪಾತ್ರರೊಂದಿಗೆ ಮೂರನೇ ವ್ಯಕ್ತಿಯ ಸ್ಟಿಕ್ಕರ್ ಪ್ಯಾಕ್‌ಗಳನ್ನು ಹಂಚಿಕೊಳ್ಳಲು ಸಾಧ್ಯವಾಗುತ್ತದೆ. ವಾಟ್ಸಾಪ್ನ ಈ ಹೊಸ ವೈಶಿಷ್ಟ್ಯವನ್ನು ಕೆಲವು ಆಯ್ದ ಬೀಟಾ ಪರೀಕ್ಷಕರಿಗೆ ಮಾತ್ರ ಬಿಡುಗಡೆ ಮಾಡಲಾಗಿದೆ. ಈ ವೈಶಿಷ್ಟ್ಯವನ್ನು ಮುಂಬರುವ ಸಮಯದಲ್ಲಿ ಎಲ್ಲ ಬಳಕೆದಾರರಿಗಾಗಿ ಹೊರತರಲಾಗುವುದು.
17 ಸಾವಿರ ವಾಟ್ಸಪ್ ಖಾತೆಗಳು ನಿಷೇಧ: ವಾಟ್ಸಾಪ್ಗೆ ಸಂಬಂಧಿಸಿದ ಇತರ ಸುದ್ದಿಗಳ ಕುರಿತು ಮಾತನಾಡುವುದಾದ್ರೆ, ಸರ್ಕಾರವು ಇತ್ತೀಚೆಗೆ ಡಿಜಿಟಲ್ ಅರೆಸ್ಟ್ ಘಟನೆಗಳ ಮೇಲೆ ಪ್ರಮುಖ ಕ್ರಮ ಕೈಗೊಂಡಿದೆ. ಈಗ ಸುಮಾರು 17 ಸಾವಿರಕ್ಕೂ ಹೆಚ್ಚು ವಾಟ್ಸಾಪ್ ಖಾತೆಗಳನ್ನು ನಿರ್ಬಂಧಿಸಿದೆ. ಈ ಖಾತೆಗಳು ವಿದೇಶಿ ಮೊಬೈಲ್ ಸಂಖ್ಯೆಗಳಿಂದ ಕಾರ್ಯನಿರ್ವಹಿಸುತ್ತಿವೆ. ಇತ್ತೀಚೆಗೆ ಡಿಜಿಟಲ್ ಅರೆಸ್ಟ್ ಹಲವು ಪ್ರಕರಣಗಳು ಬೆಳಕಿಗೆ ಬಂದಿದ್ದು, ಇದಕ್ಕಾಗಿ ಜನರನ್ನು ಎಚ್ಚರಿಸಲು ಸರ್ಕಾರ ಸೂಚನೆಗಳನ್ನು ನೀಡಿದೆ.
ಓದಿ: ಡೈರೆಕ್ಟ್-ಟು-ಡಿವೈಸ್ ಸರ್ವೀಸ್ ಎಂದರೇನು?, ಈ ಸೇವೆಯಿಂದ ಮೂಲೆ-ಮೂಲೆಯಲ್ಲಿ ಸಿಗಲಿದೆ ಬಿಎಸ್ಎನ್ಎಲ್ನ ನೆಟ್ವರ್ಕ್!