ETV Bharat / technology

ಹೊಸ ಕಾಲಿಂಗ್​ ಫೀಚರ್​ ಪರಿಚಯಿಸಿದ WhatsApp - ಹೀಗಿದೆ ಇದರ ಕೆಲಸ! - WHATSAPP NEW FEATURES

WhatsApp Features: ಬಳಕೆದಾರರ ಕಮ್ಯುನಿಕೇಶನ್​ ಅನ್ನು ಸುಧಾರಿಸಲು ವಾಟ್ಸ್​ಆ್ಯಪ್​​ ಹೊಸ ವೈಶಿಷ್ಟ್ಯಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. ಈಗ ಹೊಸ ಫೀಚರ್​ ಅನ್ನು ಪರಿಚಯಿಸುತ್ತಿದ್ದು, ಬಳಕೆದಾರರ ಅನುಭವವನ್ನು ಮತ್ತಷ್ಟು ಹೆಚ್ಚಸಲಿದೆ.

WHATSAPP FEATURES  GEMINI AI ON ANDROID  CALLING ON DESKTOP  WHATSAPP NEW CALLING FEATURES
ಹೊಸ ಕಾಲಿಂಗ್​ ಫೀಚರ್​ ಅನ್ನು ಪರಿಚಯಿಸಿದ ವಾಟ್ಸಾಪ್ (WHATSAPP)
author img

By ETV Bharat Tech Team

Published : 3 hours ago

WhatsApp New Features: ವಾಟ್ಸ್​ಆ್ಯಪ್​ ​ ತನ್ನ ಬಳಕೆದಾರರಿಗೆ ಹೊಸ ವೈಶಿಷ್ಟ್ಯಗಳನ್ನು ಪರಿಚಯಿಸುತ್ತಲೇ ಇದೆ. ಈಗ ಹೊಸ ಕಾಲಿಂಗ್​ ವೈಶಿಷ್ಟ್ಯವನ್ನು ಪರಿಚಯಿಸಲಿದ್ದು, ಇದು ಬಳಕೆದಾರರಿಗೆ ಬಹಳಷ್ಟು ಸಹಾಯವಾಗಲಿದೆ. ಬಳಕೆದಾರರ ಸಂವಹನವನ್ನು ಸುಧಾರಿಸಲು ವಾಟ್ಸ್​ಆ್ಯಪ್​ ​ ಹೊಸ ವೈಶಿಷ್ಟ್ಯಗಳನ್ನು ಹೊರ ತರಲು ಕಾರ್ಯನಿರ್ವಹಿಸುತ್ತಿದೆ ಎಂದು ಕಂಪನಿಯು ಹೇಳಿದೆ.

ಬಳಕೆದಾರರ ಸಂವಹನವನ್ನು ಸುಧಾರಿಸಲು ಹೊಸ ಕಾಲಿಂಗ್​ ಮತ್ತು ಚಾಟ್ ಮೆಸೇಜ್​ ಟ್ರಾನ್ಸ್​ಲೆಟ್​ ಫೀಚರ್​ ತರುತ್ತಿದ್ದೇವೆ ಎಂದು ಕಂಪನಿ ಹೇಳಿದೆ. ಇದು ಗ್ರೂಪ್​ ಕಾಲಿಂಗ್​ನಲ್ಲಿ ಭಾಗವಹಿಸುವವರನ್ನು ಆಯ್ಕೆ ಮಾಡಲು ಮತ್ತು ವಿಡಿಯೋ ಕರೆಗಳ ಸಮಯದಲ್ಲಿ Snap ಮತ್ತು Insta ತರಹದ ಪಪ್ಪಿ ಇಯರ್​ಗಳಂತಹ ಮೋಜಿನ ಪರಿಣಾಮಗಳನ್ನು ಬಳಸಲು ಬಳಕೆದಾರರಿಗೆ ಅನುವು ಮಾಡಿಕೊಡುತ್ತಿದೆ.

ನಿಮ್ಮಿಷ್ಟದ ಆಯ್ಕೆ ಮಾಡಿಕೊಳ್ಳಬಹುದು: ಈ ಹಿಂದೆ ವಾಟ್ಸ್​​ಆ್ಯಪ್​ ಗ್ರೂಪ್​ನಲ್ಲಿ ಕರೆ ಮಾಡಿದಾಗ ಗ್ರೂಪಿನಲ್ಲಿ ಇರುವ ಎಲ್ಲಾ ಸದಸ್ಯರಿಗೆ ಏಕಕಾಲದಲ್ಲಿ ನೋಟಿಫಿಕೇಶನ್ ಹೋಗುತ್ತಿತ್ತು. ಆಗ ಯಾರು ಬೇಕಾದರೂ ವಿಡಿಯೋ ಕಾಲಿಂಗ್​ನಲ್ಲಿ ಭಾಗಿಯಾಗಬಹುದಿತ್ತು. ಆದರೆ ಈಗ ವಾಟ್ಸ್​ಆ್ಯಪ್​ ನೀವು ಪಾಲ್ಗೊಳ್ಳುವವರ ಆಯ್ಕೆ ಮಾಡಿಕೊಳ್ಳುವ ಸೌಲಭ್ಯವನ್ನು ನೀಡಿದೆ. ಇದರ ಪ್ರಯೋಜನವೆಂದರೆ ಇಡೀ ಗ್ರೂಪ್​ಗೆ ಈ ಕರೆಯಿಂದ ಯಾವುದೇ ತೊಂದರೆಯಾಗುವುದಿಲ್ಲ. ಇದರಲ್ಲಿ ನೀವು ಆಯ್ಕೆ ಮಾಡಿದ ಜನರು ಮಾತ್ರ ಅಧಿಸೂಚನೆಯನ್ನು ಪಡೆಯುತ್ತಾರೆ.

ವಾಟ್ಸ್​ಆ್ಯಪ್​​ ​ಈಗ ವಿಡಿಯೋ ಕರೆಗಳನ್ನು ಹೆಚ್ಚು ಮೋಜುಗೊಳಿಸುವ ಪ್ರಯತ್ನ ಮಾಡುತ್ತಿದೆ. ಈಗ ನೀವು ವಿಡಿಯೋ ಕರೆ ಸಮಯದಲ್ಲಿ ವಿವಿಧ ಟೂಲ್​ಗಳನ್ನು ಆಯ್ಕೆ ಮಾಡಬಹುದು. ಈಗ ನೀವು ಕರೆಗಾಗಿ ಲಿಂಕ್ ಕ್ರಿಯೆಟ್​ ಮಾಡಲು ಅಥವಾ ಡೈರೆಕ್ಟ್​ ನಂಬರ್​ ಡಯಲ್ ಮಾಡಲು ಎಲ್ಲಾ ರೀತಿಯ ಸೌಲಭ್ಯಗಳನ್ನು ಸುಲಭವಾಗಿ ಪಡೆಯುತ್ತೀರಿ.

ಉತ್ಕೃಷ್ಟ ವಿಡಿಯೋ ಗುಣಮಟ್ಟ: ಇದಲ್ಲದೇ ವಾಟ್ಸ್​​ಆ್ಯಪ್​ ವಿಡಿಯೋ ಗುಣಮಟ್ಟವನ್ನು ಇನ್ನಷ್ಟು ಉತ್ತಮಗೊಳಿಸಿದೆ. ನಿಮ್ಮ ಮೊಬೈಲ್ ಅಥವಾ ಡೆಸ್ಕ್‌ಟಾಪ್ ಅಪ್ಲಿಕೇಶನ್‌ನಿಂದ ನೀವು ವಿಡಿಯೋ ಕರೆ ಮಾಡಿದರೆ ಮೊದಲಿಗಿಂತ ಹೆಚ್ಚಿನ ರೆಸಲ್ಯೂಶನ್ ಹೊಂದಿರುವ ವಿಡಿಯೋ ಚಿತ್ರವನ್ನು ನೀವು ಕಾಣುವಿರಿ. ಹೀಗೆ ಅನೇಕ ಸೌಲಭ್ಯಗಳನ್ನು ವಾಟ್ಸ್​​ಆ್ಯಪ್​ ​ ತನ್ನ ಗ್ರಾಹಕರಿಗೆ ಒದಿಗಿಸುತ್ತಲೇ ಇರುತ್ತದೆ.

ಈ ತಿಂಗಳ ಆರಂಭದಲ್ಲಿ ಗೂಗಲ್ ತನ್ನ ಜೆಮಿನಿ ಎಐ ಸಹಾಯಕಕ್ಕಾಗಿ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳಲ್ಲಿ ಹೊಸ ವಾಟ್ಸ್​ಆ್ಯಪ್​ ವಿಸ್ತರಣೆಯನ್ನು ಹೊರತರಲು ಪ್ರಾರಂಭಿಸಿತು. ಈ ವಿಸ್ತರಣೆಯು ಬಳಕೆದಾರರಿಗೆ ಎಐ ಅಸಿಸ್ಟೆಂಟ್‌ನಿಂದ ನೇರವಾಗಿ ಸಂದೇಶಗಳನ್ನು ಕಳುಹಿಸಲು ಮತ್ತು ವಾಟ್ಸಾಪ್ ಕರೆಗಳನ್ನು ಮಾಡಲು ಅನುಮತಿಸುತ್ತದೆ.

ಜೆಮಿನಿ ಮೊಬೈಲ್ ಅಪ್ಲಿಕೇಶನ್‌ನಲ್ಲಿ ಸಕ್ರಿಯಗೊಳಿಸಿದ ನಂತರ ಬಳಕೆದಾರರು ಎಐ ಅನ್ನು ಕರೆ ಮಾಡಲು ಅಥವಾ WhatsApp ಮೂಲಕ ಸಂದೇಶವನ್ನು ಕಳುಹಿಸಲು ಕೇಳಬಹುದು. ಉದಾಹರಣೆಗೆ, ಬಳಕೆದಾರರು, “Can you call [Contact Name] on WhatsApp?” ಅಥವಾ “Send a WhatsApp message to Contact Name.” ಎಂದು ಹೇಳಬಹುದು. ಆಗ ಎಐ ಸಹಾಯದಿಂದ ಡೈರೆಕ್ಟ್​ ಅವರಿಗೆ ಕಾಲ್ ಅಥವಾ ಮೆಸೇಜ್​ ಹೋಗುತ್ತದೆ.

ಓದಿ: ಕೈಗೆಟುಕುವ ದರ, ಸೂಪರ್​ ಫೀಚರ್​: ಈ CNG ಕಾರುಗಳ ಮೇಲೆ ಒಂದು ಲುಕ್!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.