ETV Bharat / technology

ವ್ಯಕ್ತಿ ಮೃತಪಟ್ಟ ಮೇಲೆ ಆಧಾರ್ ಕಾರ್ಡ್​ ಏನಾಗುತ್ತೆ?: ಸರಂಡರ್​ ಮಾಡಬೇಕಾ? ಇರುವ ಮಾರ್ಗಗಳೇನು? - What Happens Aadhaar After Death - WHAT HAPPENS AADHAAR AFTER DEATH

ವ್ಯಕ್ತಿಯ ಸಾವಿನ ನಂತರ ಆಧಾರ್ ಕಾರ್ಡ್‌ ಕಥೆ ಏನು?: ಸಾವಿನ ನಂತರ ಅವರ ಆಧಾರ್ ಸಂಖ್ಯೆ ಏನಾಗುತ್ತದೆ? ಅದನ್ನು ಕುಟುಂಬದ ಸದಸ್ಯರು ಸಂಬಂಧಪಟ್ಟ ಇಲಾಖೆಗೆ ವಾಪಸ್​ ಮಾಡಬೇಕೇ? ಅಥವಾ ಖಾತೆ ಮುಚ್ಚಬೇಕೆ? ಇಂತಹ ಸಂದೇಹ ಅನೇಕರಲ್ಲಿ ಇದೆ. ಸಾವಿನ ನಂತರ ಅವರ ಆಧಾರ್ ಸಂಖ್ಯೆ ಎಲ್ಲಿಗೆ ಹೋಗುತ್ತೆ?

What Happens To an Aadhaar Card After A Person's Death
ಹೌದು ವ್ಯಕ್ತಿ ಸತ್ತಮೇಲೆ ಆತನ ಆಧಾರಕಾರ್ಡ್​ ಏನಾಗುತ್ತೆ?: ಅದನ್ನ ಸರಂಡರ್​ ಮಾಡಬೇಕಾ? ಅಥವಾ ಇದಕ್ಕಿರೋ ಮಾರ್ಗಗಳೇನು? (ETV Bharat)
author img

By ETV Bharat Karnataka Team

Published : May 21, 2024, 5:54 PM IST

ಹೈದರಾಬಾದ್​: ಆಧಾರ್ ಭಾರತೀಯ ನಾಗರಿಕರಿಗೆ ನೀಡುವ ಪ್ರಾಥಮಿಕ ಗುರುತಿನ ಚೀಟಿಯಾಗಿದೆ. ಆಧಾರ್ 12 ಅಂಕಿಗಳ ವಿಶಿಷ್ಟ ಸಂಖ್ಯೆಯಾಗಿದೆ. ಇದು ನಿಮ್ಮ ಹೆಸರು, ವಿಳಾಸ, ಬೆರಳಚ್ಚು, ಐರಿಸ್ ಮುಂತಾದ ಅತ್ಯಂತ ಸೂಕ್ಷ್ಮ ಮಾಹಿತಿಯನ್ನು ಒಳಗೊಂಡಿದೆ. ಸರ್ಕಾರದ ಯೋಜನೆಗಳನ್ನು ಪಡೆದುಕೊಳ್ಳುವುದರಿಂದ ಹಿಡಿದು ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವವರೆಗೂ ಎಲ್ಲದಕ್ಕೂ ಆಧಾರ್ ಅಗತ್ಯವಿದೆ.

ಮಕ್ಕಳು ಆಧಾರ್ ಕಾರ್ಡ್ ಪಡೆಯಬಹುದು. ಆದರೆ, ಇಂದು ಆನ್‌ಲೈನ್ ವಂಚನೆಗಳು ಮತ್ತು ಸೈಬರ್ ಅಪರಾಧಗಳು ಹೆಚ್ಚುತ್ತಿವೆ. ಈ ಹಂತದಲ್ಲಿ ಸೈಬರ್ ಅಪರಾಧಿಗಳ ಕೈಗೆ ನಿಮ್ಮ ಆಧಾರ್ ಕಾರ್ಡ್ ಸಿಕ್ಕರೆ, ಅದನ್ನು ದುರುಪಯೋಗಪಡಿಸಿಕೊಳ್ಳಲು ಅವಕಾಶವಿದೆ. ಅದಕ್ಕಾಗಿಯೇ ನಿಮ್ಮ ಆಧಾರ್ ಕಾರ್ಡ್ ವಿವರಗಳು ಇತರರಿಗೆ ಸಿಕ್ಕಿ ಬೀಳದಂತೆ ನೀವು ಎಚ್ಚರಿಕೆ ವಹಿಸಬೇಕು. ನಿಮಗೆ ಗೊತ್ತಿರುವ ಯಾರಾದರೂ ತೀರಿಕೊಂಡರೆ, ಅವನ ಅಥವಾ ಅವಳ ಆಧಾರ್ ಕಾರ್ಡ್‌ಗೆ ಏನಾಗುತ್ತದೆ? ಇದು ಮಾನ್ಯವಾಗಿರುತ್ತದೆಯೇ? ಅಥವಾ ಆ ಆಧಾರ್ ಕಾರ್ಡ್​ ಅನ್ನು ಸರಂಡರ್​​ ಮಾಡುವ ವ್ಯವಸ್ಥೆ ಏನಾದರೂ ಇದೆಯೇ, ಅಥವಾ ಮುಚ್ಚಬೇಕೆ? ಹೀಗೆ ಹತ್ತು ಹಲವು ಅನುಮಾನಗಳಿವೆ. ಈ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳೋಣ

ಸತ್ತ ವ್ಯಕ್ತಿಯ ಆಧಾರ್‌ನೊಂದಿಗೆ ಏನು ಮಾಡಬೇಕು?: UIDAI ಆಧಾರ್ ಕಾರ್ಡ್ ನೀಡುವ ವ್ಯವಸ್ಥೆ ರೂಪಿಸಿದೆ. ಈ UIDAI ನಿಂದ ಪ್ರತಿಯೊಬ್ಬ ಭಾರತೀಯನಿಗೂ ಆಧಾರ್ ಕಾರ್ಡ್ ನೀಡಲಾಗುತ್ತದೆ. ಆದರೆ ಆಧಾರ್ ಅನ್ನು ಸರಂಡರ್ ಮಾಡಲು ಅಥವಾ ರದ್ದುಗೊಳಿಸಲು ಯಾವುದೇ ವ್ಯವಸ್ಥೆ ಇದುವರೆಗೂ ಮಾಡಲಾಗಿಲ್ಲ. ಆದರೆ ಅದರ ಭದ್ರತೆಗೆ ಸಂಬಂಧಿಸಿದಂತೆ ಕೆಲವು ವಿಶೇಷ ವ್ಯವಸ್ಥೆಗಳನ್ನು ಮಾಡಲಾಗಿದೆ.

ಆಧಾರ್ ಕಾರ್ಡ್ ಅನ್ನು ಸರೆಂಡರ್ ಮಾಡಲು ಅಥವಾ ರದ್ದುಗೊಳಿಸಲು ಸಾಧ್ಯವಿಲ್ಲ. ಆದರೆ, ಅದನ್ನು ಲಾಕ್ ಮಾಡಬಹುದು. ಒಮ್ಮೆ ಲಾಕ್ ಮಾಡಿದ ನಂತರ ಆಧಾರ್ ಡೇಟಾವನ್ನು ಇತರರು ಪ್ರವೇಶಿಸಲು ಯಾವುದೇ ಕಾರಣಕ್ಕೂ ಸಾಧ್ಯವಿಲ್ಲ. ಆಧಾರ್ ಬಳಸಬೇಕಾದರೆ, ಅದನ್ನು ಅನ್ಲಾಕ್ ಮಾಡಬೇಕು. ಆದಾಗ್ಯೂ, ಸತ್ತವರ ಕುಟುಂಬ ಸದಸ್ಯರು ಮಾತ್ರ ಅದನ್ನು ಅನ್ಲಾಕ್ ಮಾಡಬಹುದು.

ಆಧಾರ್ ಕಾರ್ಡ್ ಲಾಕ್ ಮಾಡುವುದು ಹೇಗೆ?

  • ಮೊದಲಿಗೆ, ನೀವು UIDAI ಅಧಿಕೃತ ವೆಬ್‌ಸೈಟ್ uidai.gov.in ಗೆ ಭೇಟಿ ನೀಡಬೇಕು.
  • ಆ ನಂತರ My Aadhaar ಆಯ್ಕೆಯನ್ನು ಕ್ಲಿಕ್ ಮಾಡಿ.
  • ನಂತರ 'My Aadhaar' ನಲ್ಲಿ ಆಧಾರ್ ಸೇವೆಗಳ ಮೇಲೆ ಕ್ಲಿಕ್ ಮಾಡಿ.
  • ಅಲ್ಲಿರುವ ಆಯ್ಕೆಗಳಿಂದ 'ಲಾಕ್/ಅನ್‌ಲಾಕ್ ಆಧಾರ್ ಬಯೋಮೆಟ್ರಿಕ್ಸ್' ಆಯ್ಕೆಮಾಡಿ.
  • ಇದರೊಂದಿಗೆ ಹೊಸ ಪುಟ ತೆರೆದುಕೊಳ್ಳುತ್ತದೆ.
  • ಇದಕ್ಕೆ ಲಾಗ್ ಇನ್ ಮಾಡಲು, ನಿಮ್ಮ 12-ಅಂಕಿಯ ಆಧಾರ್ ಸಂಖ್ಯೆ, ಕ್ಯಾಪ್ಚಾ ಕೋಡ್ ಅನ್ನು ನೀವು ನಮೂದಿಸಬೇಕಾಗುತ್ತದೆ.
  • ನಂತರ Send OTP ಮೇಲೆ ಕ್ಲಿಕ್ ಮಾಡಿ.
  • ನಿಮ್ಮ ಫೋನ್‌ನಲ್ಲಿ ಸ್ವೀಕರಿಸಿದ OTP ನಮೂದಿಸಿ.
  • ನಂತರ ನೀವು ಲಾಕ್/ಅನ್ಲಾಕ್ ಬಯೋಮೆಟ್ರಿಕ್ ಡೇಟಾ ಆಯ್ಕೆಯನ್ನು ನೋಡುತ್ತೀರಿ.
  • ನಿಮಗೆ ಬೇಕಾದ ಆಯ್ಕೆಯನ್ನು ಮಾಡಿ.

ಇದನ್ನು ಓದಿ: ಚಪ್ಪಲಿ ವ್ಯಾಪಾರಿಗಳ ಮನೆಗಳ ಮೇಲೆ ಐಟಿ ದಾಳಿ: 100 ಕೋಟಿಗೂ ಹೆಚ್ಚು ನಗದು, ಚಿನ್ನಾಭರಣ ಪತ್ತೆ: ಹಣ ಎಣಿಕೆ ಮಾಡಿ ಸುಸ್ತಾದ ಯಂತ್ರಗಳು!! - IT Raids On Agra Shoe Trader

ALERT: ನಿಮ್ಮ ಫೋನ್​ ಕರೆಗಳನ್ನು ಬೇರೆ ಯಾರೋ ಕೇಳಿಸಿಕೊಳ್ಳುತ್ತಿದ್ದಾರೆಯೇ: ಈ ಟಿಪ್ಸ್​ ಮೂಲಕ ಪತ್ತೆ ಮಾಡಿ! ​ - How To Check Call Forwarding

ETV Bharat Logo

Copyright © 2024 Ushodaya Enterprises Pvt. Ltd., All Rights Reserved.