ETV Bharat / technology

ಬೆಂಗಳೂರಿನಲ್ಲಿ ಸಿದ್ಧವಾಗುತ್ತಿದೆ ವಂದೇಭಾರತ್ ಸ್ಲೀಪರ್; ರೈಲಿನಲ್ಲಿ ಸ್ನಾನ ಸೌಲಭ್ಯ, ಹಲವು ವೈಶಿಷ್ಟ್ಯಗಳು! - Vande Bharat Sleeper Train - VANDE BHARAT SLEEPER TRAIN

Vande Bharat Sleeper Train: ವಂದೇ ಭಾರತ್ ಎಕ್ಸ್‌ಪ್ರೆಸ್ ಸ್ಲೀಪರ್ ರೈಲು ಬೆಂಗಳೂರಿನ BEML ಕಾರ್ಖಾನೆಯಲ್ಲಿ ತಯಾರಾಗುತ್ತಿದೆ. ಈ ರೈಲಿನಲ್ಲಿ ಪ್ರಯಾಣಿಕರಿಗೆ ಹಲವು ರೀತಿಯ ಆಧುನಿಕ ಸೌಲಭ್ಯಗಳು ದೊರೆಯಲಿವೆ.

VANDE BHARAT SLEEPER  SHOWER FACILITY IN THE TRAIN  VANDE BHARAT TRAINS
ಬೆಂಗಳೂರಿನ BEMLನಲ್ಲಿ ಸಿದ್ಧವಾಗುತ್ತಿದೆ ವಂದೇಭಾರತ್ ಸ್ಲೀಪರ್ ರೈಲು (Social Media)
author img

By ETV Bharat Tech Team

Published : Sep 3, 2024, 11:07 AM IST

Vande Bharat Sleeper Train: ವಂದೇಭಾರತ್ ಸ್ಲೀಪರ್ ರೈಲು ಶೀಘ್ರದಲ್ಲೇ ಹಳಿಗಳ ಮೇಲೆ ಸಂಚರಿಸಲಿದೆ. ಬಸ್, ರೈಲು ಅಥವಾ ವಿಮಾನ ಮುಂತಾದ ಸಾರಿಗೆ ವಿಧಾನಗಳಲ್ಲಿ ಪ್ರಯಾಣಿಕರಿಗೆ ಸ್ನಾನದ ಸೌಲಭ್ಯಗಳಿಲ್ಲ. ಆದರೆ, ಈ ರೈಲಿನ ಎಸಿ ಪ್ರಥಮ ದರ್ಜೆಯಲ್ಲಿ ಬಿಸಿ ನೀರಿನ ಶವರ್ ಒದಗಿಸಲಾಗಿದೆ. ರಾತ್ರಿಯಿಡೀ ಪ್ರಯಾಣಿಸಿ ಬೆಳಗ್ಗೆದ್ದು ಸ್ನಾನ ಮಾಡಿದ ನಂತರವೇ ಪ್ರಯಾಣಿಕರು ರೈಲಿನಿಂದ ಹೊರಬರಲು ಸಾಧ್ಯವಿದೆ. ಇದರಿಂದ ಹೋಟೆಲ್‌ನಲ್ಲಿ ಪ್ರಯಾಣಿಕರಿಗೆ ತಗಲುವ ವೆಚ್ಚವೂ ಉಳಿತಾಯವಾಗುತ್ತದೆ.

ಗಂಟೆಗೆ 160 ಕಿ.ಮೀ ವೇಗದ ಪ್ರಯಾಣ: ವಂದೇಭಾರತ್ ಸ್ಲಿಪರ್ ಕೋಚ್ ಗಂಟೆಗೆ 160 ಕಿ.ಮೀ ವೇಗದಲ್ಲಿ ಚಲಿಸಲಿದೆ. ಈ ಸ್ಲಿಪರ್ ಕೋಚ್ ಅನ್ನು ಬೆಂಗಳೂರಿನ BEML ಕಾರ್ಖಾನೆಯಲ್ಲಿ ತಯಾರಿಸಲಾಗುತ್ತಿದೆ.

ಇದರಲ್ಲಿರುವ ಅಪಘಾತ ತಡೆ ವ್ಯವಸ್ಥೆಯಿಂದಾಗಿ ಎರಡು ವಾಹನಗಳ ನಡುವೆ ಡಿಕ್ಕಿಯಂಥ ಸಂದರ್ಭಗಳು ಕಡಿಮೆಯಾಗಲಿವೆ. ದಿವ್ಯಾಂಗ ಪ್ರಯಾಣಿಕರಿಗಾಗಿ ವಿಶೇಷ ಬರ್ತ್‌ಗಳು ಮತ್ತು ಶೌಚಾಲಯಗಳಿವೆ. ಶೌಚಾಲಯದಲ್ಲಿ ದುರ್ವಾಸನೆ ಬರದಂತೆ ವ್ಯವಸ್ಥೆ ಇದೆ. ಲಗೇಜ್​ಗಳನ್ನು ಸಂಗ್ರಹಿಸಲು ವಿಶೇಷ ವ್ಯವಸ್ಥೆ ಲಭ್ಯ. ಇದಲ್ಲದೇ ಲೊಕೊ ಕ್ಯಾಬ್​ನಲ್ಲಿಯೇ ಲೊಕೊ ಪೈಲಟ್​ಗೆ ಶೌಚಾಲಯವಿದೆ.

ಮೊದಲ ವಂದೇ ಭಾರತ್ ಸ್ಲೀಪರ್ ರೈಲು: ಭಾರತೀಯ ರೈಲ್ವೇ ಮುಂದಿನ ಎರಡು ತಿಂಗಳಲ್ಲಿ ವಂದೇ ಭಾರತ್ ಸ್ಲೀಪರ್ ರೈಲುಗಳನ್ನು ಪ್ರಾರಂಭಿಸಲು ರೆಡೆಯಾಗಿದೆ. ಈ ಸ್ಲೀಪರ್ ರೈಲು ಭಾರತೀಯ ರೈಲ್ವೆ ಪರಿಚಯಿಸಿದ ಆಧುನಿಕ ಮತ್ತು ಆರಾಮದಾಯಕ ರೈಲು. ದೂರ ಪ್ರಯಾಣವನ್ನು ಅನುಕೂಲಕರ ಮತ್ತು ಆರಾಮದಾಯಕವಾಗಿಸುವ ಉದ್ದೇಶ ಇದರ ಹಿಂದಿದೆ.

ವಂದೇ ಭಾರತ್ ಸ್ಲೀಪರ್ ರೈಲು ರಾಜಧಾನಿ ಎಕ್ಸ್‌ಪ್ರೆಸ್ ಮತ್ತು ತೇಜಸ್ ಎಕ್ಸ್‌ಪ್ರೆಸ್, ಶತಾಬ್ದಿ ಎಕ್ಸ್‌ಪ್ರೆಸ್‌ಗಿಂತ ವೇಗವಾಗಿರುತ್ತದೆ. ಸಮಯ ಮತ್ತು ದಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಈ ರೈಲುಗಳನ್ನು ನಿರ್ವಹಿಸಲಾಗುವುದು. ದೂರದ ಪ್ರಯಾಣಿಕರಿಗಾಗಿ ಈ ರೈಲನ್ನು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ. ಮಾಧ್ಯಮ ವರದಿಗಳ ಪ್ರಕಾರ, ಟಿಕೆಟ್ ದರಗಳು ಸಾಮಾನ್ಯ ಜನರಿಗೆ ಕೈಗೆಟುಕುವಂತಿರಲಿದೆ.

ರೈಲಿನೊಳಗೆ ಇರುವ ವ್ಯವಸ್ಥೆಗಳು: ಆರಾಮದಾಯಕ ಬರ್ತ್‌ಗಳು, ಸ್ವಚ್ಛ ಮತ್ತು ಆಧುನಿಕ ಶೌಚಾಲಯಗಳು, ಹೆಚ್ಚಿನ ವೇಗದ ವೈ-ಫೈ, ಓದುವ ಲ್ಯಾಂಪ್​ಗಳು ಮತ್ತು ಹೆಚ್ಚಿನ ವೇಗದ ಮೊಬೈಲ್ ಚಾರ್ಜಿಂಗ್ ಪಾಯಿಂಟ್‌ಗಳಂತಹ ಸೌಲಭ್ಯಗಳನ್ನು ರೈಲು ಹೊಂದಿರುತ್ತದೆ.

ಕೇಂದ್ರ ರೈಲ್ವೇ ಸಚಿವರ ಮಾತು: ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಪ್ರತಿಕ್ರಿಯಿಸಿ, "ವಂದೇ ಭಾರತ್ ಸ್ಲೀಪರ್ ರೈಲು ತಯಾರಿ ಕೆಲಸ ಭರದಿಂದ ಸಾಗುತ್ತಿದೆ. ಎರಡು ತಿಂಗಳಲ್ಲಿ ಮೊದಲ ರೈಲು ಹಳಿ ತಲುಪಲಿದೆ. ತಾಂತ್ರಿಕ ಕಾರ್ಯ ಅಂತಿಮ ಹಂತದಲ್ಲಿದೆ. ಬೆಂಗಳೂರಿನಲ್ಲಿರುವ BEML ಲಿಮಿಟೆಡ್‌ನಿಂದ ಸಿದ್ಧಪಡಿಸಲಾದ ಕೋಚ್ ಅನ್ನು ಕ್ರ್ಯಾಶ್ ಬಫರ್‌ಗಳು ಮತ್ತು ಸಂಯೋಜಕಗಳನ್ನು ಒಳಗೊಂಡಂತೆ ಉತ್ತಮ ಗುಣಮಟ್ಟದ ಆಸ್ಟೆನಿಟಿಕ್ ಸ್ಟೇನ್‌ಲೆಸ್ ಸ್ಟೀಲ್‌ನಿಂದ ತಯಾರಿಸಲಾಗುತ್ತದೆ" ಎಂದು ಹೇಳಿದರು.

ಸುಧಾರಿತ ತಂತ್ರಜ್ಞಾನ ಬಳಕೆ: ಸುರಕ್ಷತೆಯ ದೃಷ್ಟಿಯಿಂದ ರೈಲಿನಲ್ಲಿ ಸುಧಾರಿತ ತಂತ್ರಜ್ಞಾನವನ್ನು ಅಳವಡಿಸಲಾಗಿದೆ. ಸಿಸಿಟಿವಿ ಕ್ಯಾಮೆರಾಗಳಂತೆ ಬೆಂಕಿ ಪತ್ತೆ ವ್ಯವಸ್ಥೆ ಈ ರೈಲನ್ನು ಇನ್ನಷ್ಟು ವಿಶೇಷಗೊಳಿಸುತ್ತದೆ. ವಂದೇ ಭಾರತ್ ಸ್ಲೀಪರ್ 160 ಕಿ.ಮೀ ವೇಗದ ಅರೆ-ಹೈ ವೇಗದ ರೈಲು ಆಗಿದ್ದು, ರಾಜಧಾನಿ ಎಕ್ಸ್‌ಪ್ರೆಸ್‌ಗಿಂತ ಉತ್ತಮ ಸೌಲಭ್ಯಗಳೊಂದಿಗೆ ಬರಲಿದೆ.

ರೈಲಿನ ಪ್ರಯೋಗ ಗಂಟೆಗೆ 180 ಕಿ.ಮೀ ವೇಗದಲ್ಲಿ ನಡೆಯಲಿದೆ. BEML ತಯಾರಿಸಿದ ಮೊದಲ ಮಾದರಿ ಒಟ್ಟು 16 ಕೋಚ್‌ಗಳನ್ನು ಹೊಂದಿರುತ್ತದೆ. ಇದು 11 ಎಸಿ 3 ಟೈಯರ್ ಕೋಚ್‌ಗಳು, 4 ಎಸಿ 2 ಟೈರ್ ಕೋಚ್‌ಗಳು ಮತ್ತು ಒನ್​ ಎಸಿ ಫಸ್ಟ್ ಕ್ಲಾಸ್ ಕೋಚ್‌ಗಳನ್ನು ಹೊಂದಿರುತ್ತದೆ. ಎಸ್‌ಎಲ್‌ಆರ್‌ಗಳಿಗೆ ಎರಡು ಕಂಪಾರ್ಟ್‌ಮೆಂಟ್‌ಗಳೂ ಇರುತ್ತವೆ. 16 ಬೋಗಿಗಳ ರೈಲನ್ನು ಒಟ್ಟು 823 ಪ್ರಯಾಣಿಕರು ಸಾಗಿಸಲು ವಿನ್ಯಾಸಗೊಳಿಸಲಾಗಿದೆ. ಇದರಲ್ಲಿ ಎಸಿ 3 ಟೈಯರ್‌ನಲ್ಲಿ 611 ಬರ್ತ್‌ಗಳು, ಎಸಿ 2 ಟೈರ್‌ನಲ್ಲಿ 188 ಬರ್ತ್‌ಗಳು ಮತ್ತು ಎಸಿ 1 ರಲ್ಲಿ 24 ಬರ್ತ್‌ಗಳಿವೆ.

ಇದನ್ನೂ ಓದಿ: ಟಾಟಾ ಮೋಟಾರ್ಸ್​ ಕರ್ವ್​ ಐಸ್​ ಬಿಡುಗಡೆ: ಇದರ ವೈಶಿಷ್ಟ್ಯತೆ, ಬೆಲೆ ಎಷ್ಟು? - Tata Curvv ICE Version Launched

ETV Bharat Logo

Copyright © 2024 Ushodaya Enterprises Pvt. Ltd., All Rights Reserved.