ETV Bharat / technology

ಸೂಕ್ಷ್ಮ ಮಾಹಿತಿ ಕಳವು ಆರೋಪ: ರಷ್ಯಾದ ಕ್ಯಾಸ್ಪರ್​ಸ್ಕಿ ಆ್ಯಂಟಿವೈರಸ್​ ಸಾಫ್ಟ್​ವೇರ್​ಗೆ ಅಮೆರಿಕ ನಿರ್ಬಂಧ - US bans Kaspersky

author img

By ETV Bharat Karnataka Team

Published : Jun 22, 2024, 12:42 PM IST

ಅಮೆರಿಕ ಸರ್ಕಾರ ಹಾಗೂ ನಾಗರಿಕರ ಸೂಕ್ಷ್ಮ ಮಾಹಿತಿಗಳನ್ನು ಸಂಗ್ರಹಿಸುತ್ತಿರುವ ಆರೋಪದ ಮೇಲೆ ಅಮೆರಿಕ ರಷ್ಯಾದ ಕ್ಯಾಸ್ಪರ್​ಸ್ಕಿ ಆ್ಯಂಟಿವೈರಸ್​ ಸಾಫ್ಟ್​ವೇರ್​ ಅನ್ನು ನಿಷೇಧಿಸಿದೆ.

ಕ್ಯಾಸ್ಪರ್​ಸ್ಕಿ ಆ್ಯಂಟಿವೈರಸ್​ ಸಾಫ್ಟ್​ವೇರ್​ಗೆ ಅಮೆರಿಕ ನಿರ್ಬಂಧ
ಕ್ಯಾಸ್ಪರ್​ಸ್ಕಿ ಆ್ಯಂಟಿವೈರಸ್​ ಸಾಫ್ಟ್​ವೇರ್​ಗೆ ಅಮೆರಿಕ ನಿರ್ಬಂಧ (IANS)

ವಾಷಿಂಗ್ಟನ್, ಅಮೆರಿಕ : ರಷ್ಯಾದ ಸೈಬರ್ ಸೆಕ್ಯುರಿಟಿ ಕಂಪನಿ ಕ್ಯಾಸ್ಪರ್​ಸ್ಕಿ ಲ್ಯಾಬ್​ನ 12 ಹಿರಿಯ ಅಧಿಕಾರಿಗಳ ವಿರುದ್ಧ ಅಮೆರಿಕದ ಖಜಾನೆ ಇಲಾಖೆ ನಿರ್ಬಂಧಗಳನ್ನು ಘೋಷಿಸಿದೆ. ದೇಶದ ವಾಣಿಜ್ಯ ಇಲಾಖೆಯು ಅಮೆರಿಕದಲ್ಲಿ ಕ್ಯಾಸ್ಪರ್​ಸ್ಕಿಯ ಆಂಟಿವೈರಸ್ ಸಾಫ್ಟ್​ವೇರ್​ಗಳ ಮಾರಾಟವನ್ನು ನಿಷೇಧಿಸಿದ ಒಂದು ದಿನದ ನಂತರ ಅದರ ಹಿರಿಯ ಅಧಿಕಾರಿಗಳ ಮೇಲೆ ನಿರ್ಬಂಧ ವಿಧಿಸಲಾಗಿದೆ.

"ನಮ್ಮ ಸೈಬರ್ ಕ್ಷೇತ್ರದ ಸಮಗ್ರತೆಯನ್ನು ರಕ್ಷಿಸಲು ಮತ್ತು ದುರುದ್ದೇಶಪೂರಿತ ಸೈಬರ್ ಬೆದರಿಕೆಗಳಿಂದ ನಾಗರಿಕರನ್ನು ರಕ್ಷಿಸುವ ನಮ್ಮ ಬದ್ಧತೆಗೆ ಅನುಗುಣವಾಗಿ ಕ್ಯಾಸ್ಪರ್​ಸ್ಕಿ ಲ್ಯಾಬ್​ನ ಹಿರಿಯ ಅಧಿಕಾರಿಗಳ ವಿರುದ್ಧ ನಿರ್ಬಂಧಕ ಕ್ರಮಗಳನ್ನು ಕೈಗೊಳ್ಳಲಾಗಿದೆ" ಎಂದು ಭಯೋತ್ಪಾದನೆ ಮತ್ತು ಹಣಕಾಸು ಗುಪ್ತಚರ ಖಜಾನೆ ಅಧೀನ ಕಾರ್ಯದರ್ಶಿ ಬ್ರಿಯಾನ್ ನೆಲ್ಸನ್ ಶುಕ್ರವಾರ ಹೇಳಿದರು. ನಿರ್ಬಂಧಕ್ಕೊಳಗಾದ ಕಂಪನಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸೇರಿದಂತೆ 12 ಕ್ಯಾಸ್ಪರ್​ಸ್ಕಿ ಅಧಿಕಾರಿಗಳ ಹೆಸರುಗಳನ್ನು ಅವರು ಇದೇ ಸಂದರ್ಭದಲ್ಲಿ ಬಹಿರಂಗಪಡಿಸಿದರು.

"ಇಂಥ ಚಟುವಟಿಕೆಗಳಿಗೆ ಅನುಕೂಲ ಮಾಡಿಕೊಡಲು ಪ್ರಯತ್ನಿಸುವ ಅಥವಾ ಅಂಥ ಚಟುವಟಿಕೆಗಳನ್ನು ನಡೆಸುವ ಯಾರೇ ಆದರೂ ಅವರ ವಿರುದ್ಧ ಯುಎಸ್ ಕ್ರಮ ತೆಗೆದುಕೊಳ್ಳುತ್ತದೆ" ಎಂದು ನೆಲ್ಸನ್ ಹೇಳಿದರು.

"ಕ್ಯಾಸ್ಪರ್​ಸ್ಕಿ ರಷ್ಯಾ ಸರ್ಕಾರದ ನ್ಯಾಯಾಂಗ, ನಿಯಂತ್ರಣ ಅಥವಾ ನಿರ್ದೇಶನಕ್ಕೆ ಒಳಪಟ್ಟಿರುವ ಕಂಪನಿಯಾಗಿದೆ. ಇದು ಅಮೆರಿಕ ನಾಗರಿಕರ ವೈಯಕ್ತಿಕ ಮಾಹಿತಿ ಸೇರಿದಂತೆ ಸೂಕ್ಷ್ಮ ಮಾಹಿತಿಗಳನ್ನು ಕದಿಯಲು ತನ್ನ ಅಸ್ತಿತ್ವವನ್ನು ಬಳಸಿಕೊಳ್ಳಬಹುದು ಅಥವಾ ಸೈಬರ್ ಭದ್ರತಾ ಕ್ರಮಗಳನ್ನು ಬೈಪಾಸ್ ಮಾಡಬಹುದು. ಆ ಮೂಲಕ ಅಮೆರಿಕದ ರಾಷ್ಟ್ರೀಯ ಭದ್ರತೆ ಅಥವಾ ಅಮೆರಿಕದ ವ್ಯಕ್ತಿಗಳ ಸುರಕ್ಷತೆ ಮತ್ತು ಭದ್ರತೆಗೆ ಅಪಾಯವನ್ನುಂಟು ಮಾಡಬಹುದು" ಎಂದು ಸ್ಟೇಟ್ ಡಿಪಾರ್ಟ್​ಮೆಂಟ್​ ವಕ್ತಾರ ಮ್ಯಾಥ್ಯೂ ಮಿಲ್ಲರ್ ಹೇಳಿದರು.

"ಕ್ಯಾಸ್ಪರ್​ಸ್ಕಿ ಇನ್ನು ಮುಂದೆ ತನ್ನ ಸಾಮಾನ್ಯ ಚಟುವಟಿಕೆಗಳನ್ನು ನಡೆಸಲು ಸಾಧ್ಯವಾಗುವುದಿಲ್ಲ ಮಾತ್ರವಲ್ಲದೇ, ಅಮೆರಿಕದ ಒಳಗೆ ತನ್ನ ಸಾಫ್ಟ್​ವೇರ್​ ಅನ್ನು ಮಾರಾಟ ಮಾಡಲು ಅಥವಾ ಈಗಾಗಲೇ ಬಳಕೆಯಲ್ಲಿರುವ ಸಾಫ್ಟ್​ವೇರ್​ಗಳಿಗೆ ಅಪ್ಡೇಟ್​ಗಳನ್ನು ಒದಗಿಸಲು ಸಾಧ್ಯವಾಗುವುದಿಲ್ಲ" ಎಂದು ವಾಣಿಜ್ಯ ಇಲಾಖೆಯ ಬ್ಯೂರೋ ಆಫ್ ಇಂಡಸ್ಟ್ರಿ ಅಂಡ್ ಸೆಕ್ಯುರಿಟಿ ಹೇಳಿಕೆಯಲ್ಲಿ ತಿಳಿಸಿದೆ.

ಅಮೆರಿಕದ ಸೂಕ್ಷ್ಮ ಮಾಹಿತಿಯನ್ನು ಸಂಗ್ರಹಿಸಲು ಕ್ಯಾಸ್ಪರ್​ಸ್ಕಿ ಲ್ಯಾಬ್​ನಂಥ ಕಂಪನಿಗಳಿಗೆ ರಷ್ಯಾ ಕುಮ್ಮಕ್ಕು ನೀಡುತ್ತಿರುವುದು ಮಾತ್ರವಲ್ಲದೆ, ಪದೇ ಪದೆ ಅಂಥ ಚಟುವಟಿಕೆಗಳನ್ನು ನಡೆಸುವ ದುರುದ್ದೇಶದ ವರ್ತನೆಗಳನ್ನು ತೋರಿಸಿದ್ದಕ್ಕೆ ಪ್ರತಿಕ್ರಿಯೆಯಾಗಿ ಇಲಾಖೆಯು ಮೊದಲ ಬಾರಿಗೆ ಇಂಥ ಕ್ರಮಗಳನ್ನು ಕೈಗೊಂಡಿದೆ ವಾಣಿಜ್ಯ ಕಾರ್ಯದರ್ಶಿ ಗಿನಾ ರೈಮೊಂಡೊ ಹೇಳಿದ್ದಾರೆ.

ಇದನ್ನೂ ಓದಿ : ಭಾರತದಲ್ಲಿ 3600ಕ್ಕೇರಿದ ಡೀಪ್​ಟೆಕ್​ ಸ್ಟಾರ್ಟ್​ಅಪ್​ಗಳ ಸಂಖ್ಯೆ: ವಿಶ್ವದಲ್ಲಿ 6ನೇ ಸ್ಥಾನ - Deeptech Startups

ETV Bharat Logo

Copyright © 2024 Ushodaya Enterprises Pvt. Ltd., All Rights Reserved.