ಹೈದರಾಬಾದ್: ಎರಡು ವರ್ಷದ ಹಿಂದೆ ಟ್ವಿಟರ್ನಿಂದ ಮಾಲೀಕತ್ವ ಪಡೆದ ಬಳಿಕ ಎಲೋನ್ ಮಸ್ಕ್, ಸಂಸ್ಥೆಯಲ್ಲಿ ಒಂದೊಂದೇ ಬದಲಾವಣೆ ನಡೆಸುತ್ತಾ ತಮ್ಮ ಹಿಡಿತ ಸಾಧಿಸಿದರು. ಲೋಗೋದಿಂದ ಹಲವು ವಿಷಯಗಳಲ್ಲಿ ಮಾರ್ಪಾಡುಗಳನ್ನು ಮಾಡಿದರು. ಆದರೆ, ಇದರ ಯುಆರ್ಎಲ್ ಮಾತ್ರ ಬದಲಾವಣೆ ಕಂಡಿರಲಿಲ್ಲ. ಇದೀಗ ಮಸ್ಕ್ ಯುಆರ್ಎಲ್ ಒಡೆತನ ಸಾಧಿಸುವಲ್ಲಿ ಕೂಡ ಯಶಸ್ವಿಯಾಗಿದ್ದಾರೆ. ಇನ್ಮುಂದೆ ಟ್ವಿಟರ್.ಕಾಂ ನಿಂದ ಎಕ್ಸ್.ಕಾಂಗೆ ಸಂಪೂರ್ಣವಾಗಿ ಬದಲಾಗಿದೆ.
ಡೊಮೈನ್ ಹಿಡಿತ ಪಡೆದ ಮಸ್ಕ್: ಡೊಮೈನ್ ಯುಆರ್ಎಲ್ ಎಂಬುದು ಸಾಮಾಜಿಕ ಜಾಲತಾಣದ ವೆಬ್ಸೈಟ್ಗಳ ಮೂಲವನ್ನು ತಿಳಿಸುತ್ತದೆ. ಯಾವುದೇ ಒಂದು ಸಂಸ್ಥೆಯ ವೆಬ್ಸೈಟ್ ಈ ಡೊಮೈನ್ಗಳ ಹಿಡಿತ ಸಾಧಿಸುವುದು ಅವಶ್ಯ. ಅದರ ಅನುಸಾರವಾಗಿ ಬ್ರೌಸಿಂಗ್ನಲ್ಲಿ ಇಷ್ಟು ದಿನ Twitter.com ಆಗಿದ್ದ ಎಕ್ಸ್ ಇನ್ಮುಂದೆ ಅಧಿಕೃತವಾಗಿ X.com ಆಗಿರಲಿದೆ. X ಲಾಗಿನ್ ಯುಆರ್ಎಲ್ನಿಂದ ಟ್ವಿಟರ್ ಸಂಪೂರ್ಣವಾಗಿ ಕಣ್ಮರೆಯಾಗಲಿದೆ. ಈ ಮೂಲಕ ಡೊಮೈನ್ ಒಡೆತನವನ್ನು ಇದೀಗ ಮಸ್ಕ್ ಪಡೆದಿದ್ದಾರೆ.
ಈ ಕುರಿತು ತಿಳಿಸಿರುವ ಮಸ್ಕ್, 'ಇದೀಗ ಟ್ವಿಟರ್ ಸಂಪೂರ್ಣವಾಗಿ ಎಕ್ಸ್.ಕಾಮ್ ವಲಸೆ ಬಂದಿದೆ. ಸಂಪೂರ್ಣವಾಗಿ ಟ್ವಿಟರ್ ಬ್ರೌಸರ್ನಿಂದ ಎಕ್ಸ್ ಡೊಮೈನ್ ಬಂದಿದೆ. ಎಲ್ಲಾ ಕೋರ್ ವ್ಯವಸ್ಥೆ ಇದೀಗ ಎಕ್ಸ್.ಕಾಂ ಆಗಿರಲಿದೆ. ಇನ್ಮುಂದೆ ಬ್ರೌಸಿಂಗ್ ವೇಳೆ ಟ್ವಿಟರ್ ಬದಲಾಗಿ ಎಕ್ಸ್ ಡೊಮೈನ್ ಕಾರ್ಯ ನಿರ್ವಹಿಸಲಿದೆ' ಎಂದು ಪೋಸ್ಟ್ ಮೂಲಕ ತಿಳಿಸಿದ್ದಾರೆ.
2022ರಲ್ಲಿ ಅಕ್ಟೋಬರ್ ಟ್ವಿಟರ್ ಅನ್ನು 44 ಬಿಲಿಯನ್ಗೆ ಮಸ್ಕ್ ಖರೀದಿಸಿದ್ದರು. ಉದ್ಯಮ ಜಗತ್ತಿನಲ್ಲಿಯೇ ಇದು ದೊಡ್ಡ ಡೀಲ್ ಆಗಿ ಸದ್ದು ಮಾಡಿತ್ತು ಕೂಡ. ಮಾಲೀಕತ್ವ ಪಡೆದ ಬಳಿಕ ಹಲವು ನಾವೀನ್ಯತೆಗೆ ಮುನ್ನುಡಿ ಬರೆದ ಅವರು, ಕೆಲವೇ ದಿನಗಳ ಬಳಿಕ ಜನಪ್ರಿಯ ಹಕ್ಕಿ ಲೋಗೋವನ್ನು ಬದಲಾಯಿಸಿ, ಹರಾಜಿಗೆ ಇಟ್ಟಿದ್ದರು. ಅದರ ಬದಲಾಗಿ ಅಧಿಕೃತವಾಗಿ ಎಕ್ಸ್ ಅಕ್ಷರವನ್ನು ಲೋಗೋವಾಗಿ ಪರಿಚಯಿಸಿದರು. ಇದಾದ ಬಳಿಕ ಟ್ವೀಟ್ಗೆ ಬದಲಾಗಿ ಪೋಸ್ಟ್, ರಿಟ್ವೀಟ್ಗೆ ಬದಲಾಗಿ ರೀ ಪೋಸ್ಟ್ ಎಂದು ಮರು ನಾಮಕರಣ ಮಾಡಿದರು. ಜೊತೆಗೆ ಬ್ಲೂಟಿಕ್ನಲ್ಲಿ ಹಲವು ಬದಲಾವಣೆಗಳನ್ನು ಮಾಡಿದರು. ಇತ್ತೀಚಿಗೆ ವಿಡಿಯೋ ಹಂಚಿಕೆ ಆಯ್ಕೆಯ ಅವಕಾಶವನ್ನು ಅವರು ನೀಡಿದರು.
ಇಷ್ಟಾದರೂ ಮಸ್ಕ್ ಅದರ ಡೊಮೈನ್ಗಾಗಿ ಹೋರಾಟ ನಡೆಸುತ್ತಿದ್ದರು. ಇದೀಗ ಎರಡು ವರ್ಷಗಳ ಬಳಿಕ ಮಸ್ಕ್ ಡೊಮೈನ್ ಒಡೆತನವನ್ನು ಸಾಧಿಸಿದ್ದಾರೆ.
ಇದನ್ನೂ ಓದಿ: ಇನ್ಮುಂದೆ Xನಲ್ಲೂ ಸಂಪೂರ್ಣ ಸಿನಿಮಾ ಪೋಸ್ಟ್ ಮಾಡಿ: ಮಸ್ಕ್