ಫ್ಲೋರಿಡಾ, ಅಮೆರಿಕ: ಅಸಭ್ಯತೆ ಎಂದರೆ ಅದು ಅಂತರ್ಗತವಾಗಿ ವಿರೋಧಿಯಾಗಿರುತ್ತದೆ. ಅಷ್ಟೇ ಅಲ್ಲ ಇದು ಸಾಮಾಜಿಕ ಸಮತೋಲನಕ್ಕೆ ಅಡಚಣೆಯನ್ನುಂಟು ಮಾಡುತ್ತದೆ. ಅಸಭ್ಯತೆ ವಿಶೇಷವಾಗಿ ಮಾತಿನ ವಿಷಯದಲ್ಲಿ ಹೇಳಬೇಕಾದರೆ ತನ್ನ ಕೇಂದ್ರದಲ್ಲಿ ಅಗತ್ಯವಾಗಿ ವಿರೋಧಿಯಾಗಿರುತ್ತದೆ. ನಾವು ಕೆಲಸ ಮಾಡುವ ಸ್ಥಳಗಳಲ್ಲಿ ಅದು ಸಹ ಆರೋಗ್ಯ ಕ್ಷೇತ್ರಗಳಲ್ಲಿ ಇದು ಬಹಳ ಪರಿಣಾಮಕಾರಿಯಾಗಿ ಪ್ರಭಾವ ಬೀರುತ್ತದೆ ಎಂದು ಸಂಶೋಧರು ಅಭಿಪ್ರಾಯಪಟ್ಟಿದ್ದಾರೆ.
ಇತ್ತೀಚಿನ ಸಂಶೋಧನೆ ಮೂಲಕ ನಾವು ಕಂಡುಕೊಂಡಿದ್ದು ಏನಂದ್ರೆ, ಕೆಲಸದ ಸ್ಥಳದಲ್ಲಿ ಅಸಭ್ಯತೆ ಕೇವಲ ಅಹಿತಕರ ಮಾತ್ರವಲ್ಲ, ಸಂಪೂರ್ಣವಾಗಿ ಅಪಾಯಕಾರಿ ಎಂದು ತಿಳಿಸುತ್ತದೆ. ಫ್ಲೋರಿಡಾ ವಿಶ್ವವಿದ್ಯಾನಿಲಯ, ಇಂಡಿಯಾನಾ ವಿಶ್ವವಿದ್ಯಾನಿಲಯ ಮತ್ತು ಅಮೆರಿಕ , ಇಸ್ರೇಲ್‌ನ ಇತರ ವಿಶ್ವವಿದ್ಯಾನಿಲಯಗಳ ತಂಡಗಳು ಇತ್ತೀಚೆಗೆ ಅಸಭ್ಯತೆಯ ಬಗ್ಗೆ ಕಣ್ಣು ತೆರೆಸುವ ಅಧ್ಯಯನಗಳನ್ನು ನಡೆಸಿವೆ.
ಅಸಭ್ಯತೆಯ ನಡವಳಿಕೆಯು ಉದ್ಯೋಗಿಗಳ ಕಾರ್ಯಕ್ಷಮತೆಯನ್ನು ಗಮನಾರ್ಹವಾಗಿ ಕುಂಠಿತಗೊಳಿಸಬಹುದು. ಇದು ಆರೋಗ್ಯ ರಕ್ಷಣೆಯಂತಹ ನಿರ್ಣಾಯಕ ಕ್ಷೇತ್ರಗಳಲ್ಲಿ ಜೀವಕ್ಕೆ ಅಪಾಯಕಾರಿ ಪರಿಣಾಮಗಳನ್ನು ಉಂಟುಮಾಡಬಹುದು ಎಂದು ಸಂಶೋಧನೆ ಬಹಿರಂಗಪಡಿಸಿದೆ.
ಅನೇಕ ಕೆಲಸದ ಸ್ಥಳಗಳು ಅಸಭ್ಯತೆಯನ್ನು ಸಣ್ಣ ಸಮಸ್ಯೆಯಾಗಿ ಪರಿಗಣಿಸುತ್ತವೆ. ಇದು ಉತ್ಪಾದಕತೆ ಮತ್ತು ಸುರಕ್ಷತೆಗೆ ಪ್ರಮುಖ ಬೆದರಿಕೆ ಎಂದು ನಮ್ಮ ಸಂಶೋಧನೆ ತೋರಿಸುತ್ತದೆ ಎಂದು ಫ್ಲೋರಿಡಾ ವಿಶ್ವವಿದ್ಯಾಲಯದ ವಾರಿಂಗ್ಟನ್ ಕಾಲೇಜ್ ಆಫ್ ಬ್ಯುಸಿನೆಸ್‌ನ ಪ್ರೊಫೆಸರ್ ಅಮೀರ್ ಎರೆಜ್ ಅಭಿಪ್ರಾಯ ಪಟ್ಟಿದ್ದಾರೆ.
ಅಸಭ್ಯ ಕಾಮೆಂಟ್‌ಗಳು ಕಾರ್ಯಕ್ಷಮತೆ ಕುಸಿತಕ್ಕೆ ಕಾರಣವಾಗುತ್ತೆ: ಜರ್ನಲ್ ಆಫ್ ಅಪ್ಲೈಡ್ ಸೈಕಾಲಜಿಯಲ್ಲಿ ತಮ್ಮ ಸಂಶೋಧನೆಗಳನ್ನು ಪ್ರಕಟಿಸಿದ ಎರೆಜ್ ಮತ್ತು ಅವರ ಸಹ ಸಂಶೋಧಕರು ಹೇಳುವ ಪ್ರಕಾರ, ಅಸಭ್ಯ ವರ್ತನೆಗೆ ಒಡ್ಡಿಕೊಳ್ಳುವುದರಿಂದ ತಂಡದ ಕಾರ್ಯಚಟುವಟಿಕೆಯು ನಾಟಕೀಯವಾಗಿ ಕಡಿಮೆಯಾಗುತ್ತದೆ. ಅಸಭ್ಯ ಕಾಮೆಂಟ್‌ಗಳು ವೈದ್ಯಕೀಯ ತಂಡಗಳ ಕಾರ್ಯಕ್ಷಮತೆಯ ಗುಣಮಟ್ಟವನ್ನು ಕುಸಿಯುವಂತೆ ಮಾಡುತ್ತದೆ ಎಂಬ ವಿಚಾರವನ್ನು ಅಧ್ಯಯನದ ಮೂಲಕ ಕಂಡುಕೊಳ್ಳಲಾಗಿದೆ.
ಅಸಭ್ಯತೆಯು ಸಾಮಾಜಿಕ ಬೆದರಿಕೆಯಾಗಿ ಕಾರ್ಯನಿರ್ವಹಿಸುತ್ತದೆ. ತಂಡದ ಸದಸ್ಯರಲ್ಲಿ ರಕ್ಷಣಾತ್ಮಕ ಪ್ರತಿಕ್ರಿಯೆಗಳನ್ನು ಪ್ರಚೋದಿಸುತ್ತದೆ. ಇದು ವ್ಯಕ್ತಿಗಳನ್ನು ಹೆಚ್ಚು ಸ್ವಾರ್ಥಿಗಳಾಗುವಂತೆ ಮಾಡುತ್ತದೆ. ಪರಿಣಾಮಕಾರಿ ಟೀಮ್‌ವರ್ಕ್‌ಗೆ ಅಗತ್ಯವಾದ ಸಹಕಾರ ಮತ್ತು ಸಮನ್ವಯವನ್ನು ನೀಡುವುದನ್ನು ತಡೆಯುತ್ತದೆ. ನಿರ್ದಿಷ್ಟವಾಗಿ ಹೇಳುವುದಾದರೆ ಅಸಭ್ಯತೆಗೆ ಒಡ್ಡಿಕೊಂಡ ತಂಡಗಳು ಕಡಿಮೆ ಪರ್ಫಾಮೆನ್ಸ್ ತೋರಿವೆ ಎಂದು ಅಧ್ಯಯನಗಳು ಹೇಳುತ್ತವೆ.
ಕೆಲಸದ ಮೇಲೆ ಅಸಭ್ಯತೆಯು ಬೀರಬಹುದಾದ ಪರಿಣಾಮವನ್ನು ಅರ್ಥಮಾಡಿಕೊಳ್ಳಲು ಸಂಶೋಧನೆಯು ನಮಗೆ ಸಹಾಯ ಮಾಡಿದೆ. ವಿಶೇಷವಾಗಿ ಆರೋಗ್ಯ ರಕ್ಷಣೆಯಂತಹ ತುರ್ತು ಸಂದರ್ಭಗಳಲ್ಲಿ ಇದು ಹೆಚ್ಚು ಕಂಡು ಬಂದಿದೆ ಎಂದು ಇಂಡಿಯಾನಾ ಯೂನಿವರ್ಸಿಟಿಯ ಸಹಾಯಕ ಪ್ರಾಧ್ಯಾಪಕ ಜೇಕ್ ಗೇಲ್ ಹೇಳಿದ್ದಾರೆ.
ಸ್ವಯಂ ಕೇಂದ್ರಿತ ನಡವಳಿಕೆಗಳನ್ನು ಹೇಗೆ ಪ್ರಚೋದಿಸುತ್ತದೆ? : ಅಸಭ್ಯತೆಯು ಸ್ವಯಂ-ಕೇಂದ್ರಿತ ನಡವಳಿಕೆಗಳನ್ನು ಹೇಗೆ ಪ್ರಚೋದಿಸುತ್ತದೆ ಮತ್ತು ಸಂವಹನವನ್ನು ದುರ್ಬಲಗೊಳಿಸುತ್ತದೆ ಎಂಬುದನ್ನು ಅರ್ಥಮಾಡಿಕೊಂಡಿದ್ದೇವೆ. ನಾವು ಕೇವಲ ಶೈಕ್ಷಣಿಕ ಜ್ಞಾನವನ್ನು ಅಭಿವೃದ್ಧಿಪಡಿಸುತ್ತಿಲ್ಲ. ಜೀವಗಳನ್ನು ಉಳಿಸಬಹುದಾದ ಒಳನೋಟಗಳನ್ನು ನಾವು ಬಹಿರಂಗಪಡಿಸುತ್ತಿದ್ದೇವೆ. ನಾವು ಪರಸ್ಪರ ಸಂವಹನ ನಡೆಸುವ ವಿಧಾನವು ನೈಜ - ಪ್ರಪಂಚದ ಪರಿಣಾಮಗಳನ್ನು ಹೊಂದಿವೆ. ವಿಶೇಷವಾಗಿ ನಿರ್ಣಾಯಕ ಸಂದರ್ಭಗಳಲ್ಲಿ ಇದು ಪ್ರಬಲವಾದ ಅಂಶವಾಗಿದೆ ಎಂಬುದು ಸಂಶೋಧಕರು ಹೇಳುತ್ತಾರೆ.
ವೈದ್ಯಕೀಯ ಕ್ಷೇತ್ರದಲ್ಲಿನ ಅಸಭ್ಯತೆಯಿಂದಾಗಿ ರೋಗಿಗಳ ಮೇಲೆ ಮಾರಣಾಂತಿಕ ಪರಿಣಾಮಗಳನ್ನು ಬೀರಬಹುದು. ಅಸಭ್ಯತೆಯು ವಿವಿಧ ಕೈಗಾರಿಕೆಗಳಾದ್ಯಂತ ತಂಡಗಳಿಗೆ ತೀವ್ರ ಪರಿಣಾಮಗಳನ್ನು ಉಂಟುಮಾಡಬಹುದು. ಅಸಭ್ಯತೆಯು ಮೇಲ್ವಿಚಾರಕರು, ಸಹೋದ್ಯೋಗಿಗಳು ಅಥವಾ ಗ್ರಾಹಕರಿಂದ ಬಂದರೂ ಸಹ, ಇದು ತಂಡದ ಸಹಕಾರ ಮತ್ತು ಸಮನ್ವಯವನ್ನು ಕುಗ್ಗಿಸುತ್ತದೆ. ಇದು ತಂಡದ ಫಲಿತಾಂಶಗಳ ಮೇಲೆ ಸತತವಾಗಿ ಋಣಾತ್ಮಕ ಪರಿಣಾಮಗಳಿಗೆ ಕಾರಣವಾಗುತ್ತದೆ ಎಂದು ಸಂಶೋಧನೆಗಳು ತೋರಿಸುತ್ತವೆ.
ಇದನ್ನು ಗಮನದಲ್ಲಿಟ್ಟುಕೊಂಡು ಅಸಭ್ಯತೆಯಂತಹ ಬೆದರಿಕೆಯ ಸಂದರ್ಭಗಳನ್ನು ಎದುರಿಸಲು ತಂಡಗಳಿಗೆ ಸಹಾಯ ಮಾಡುವ ಪರಿಹಾರಗಳನ್ನು ಕಾರ್ಯಗತಗೊಳಿಸಲು ಸಂಸ್ಥೆಗಳು ಪ್ರಯತ್ನಿಸುತ್ತವೆ ಎಂದು ಸಂಶೋಧಕರು ಹೇಳಿದ್ದಾರೆ.