ETV Bharat / technology

ಇನ್ಮುಂದೆ X​ನಲ್ಲೂ ಸಂಪೂರ್ಣ ಸಿನಿಮಾ ಪೋಸ್ಟ್ ಮಾಡಿ: ಮಸ್ಕ್​​ - X USERS CAN POST MOVIES

'ಎಕ್ಸ್'​​ ಬಳಕೆದಾರರಿಗೆ ನಾವೀನ್ಯತೆಯ ವೈಶಿಷ್ಟ್ಯಗಳನ್ನು ಪರಿಚಯಿಸುವ ಮೂಲಕ ಹಣ ಗಳಿಕೆಯ ಮಾರ್ಗಕ್ಕೆ ಕೂಡ ಅವಕಾಶವನ್ನು ನೀಡಲು ಮಸ್ಕ್​ ಮುಂದಾಗಿದ್ದಾರೆ.

SpaceX CEO Elon Musk said X subscribed users can post movies
SpaceX CEO Elon Musk said X subscribed users can post movies (File photo)
author img

By ETV Bharat Karnataka Team

Published : May 10, 2024, 12:05 PM IST

ನವದೆಹಲಿ: ಹಲವು ಜನಪ್ರಿಯ ಡಿಜಿಟಲ್​ ಫ್ಲಾಟ್​​ಫಾರ್ಮ್​ಗಳಿಗೆ ಸವಾಲು ಹಾಕುವ ರೀತಿ ತಮ್ಮ 'ಎಕ್ಸ್'​ ಬಳಕೆದಾರರಿಗೆ ಹೊಸ ಹೊಸ ವೈಶಿಷ್ಟ್ಯವನ್ನು ಟೆಕ್​ ಬಿಲಿಯನೇರ್​ ಎಲೋನ್​ ಮಸ್ಕ್​ ಪರಿಚಯಿಸುತ್ತಲೇ ಇದ್ದಾರೆ. ಇತ್ತೀಚಿಗಷ್ಟೆ ಯೂಟ್ಯೂಬ್​ ರೀತಿ ವಿಡಿಯೋ ಸ್ಟ್ರಿಮಿಂಗ್​ಗೆ ಅವಕಾಶ ನೀಡುವ ಕುರಿತು ಘೋಷಿಸಿದ್ದರು. ಈಗ ಇದನ್ನು ಕಾರ್ಯರೂಪಕ್ಕೆ ತಂದಿರುವ ಅವರು ತಮ್ಮ ಫ್ಲಾಟ್​​ಫಾರ್ಮ್​ ಅನ್ನು ಯಾವುದೇ ಮನರಂಜನೆ ವೇದಿಕೆಗಿಂತ ಕಡಿಮೆ ಇಲ್ಲ ಎಂದು ಸಾರಲು ಸಜ್ಜಾಗಿದ್ದಾರೆ.

ಇನ್ನು ಮುಂದೆ ಎಕ್ಸ್​​ ಚಂದಾದಾರರು ದೀರ್ಘಾವಧಿಯ ಸಂಪೂರ್ಣ ಸಿನಿಮಾವನ್ನೇ ಪೋಸ್ಟ್​ ಮಾಡಬಹುದು. ಅಷ್ಟೇ ಅಲ್ಲ, ಈ ರೀತಿ ಸಿನಿಮಾ ಪೋಸ್ಟ್​ ಮಾಡುವ ಮೂಲಕ ಹಣವನ್ನು ಗಳಿಸಬಹುದಾಗಿದೆ ಎಂದು ಟೆಸ್ಲಾ ಸಂಸ್ಥಾಪಕ ಮಸ್ಕ್​ ಘೋಷಿಸಿದ್ದಾರೆ.

'ಎಕ್ಸ್​ನಲ್ಲಿ ಚಂದಾದಾರಿಕೆ ಪಡೆಯುವ ಮೂಲಕ ನೀವು ನಿಮ್ಮ ಸಿನಿಮಾ, ಟಿವಿ ಸೀರಿಸ್​ ಅಥವಾ ಪೋಡಕಾಸ್ಟ್​​ಗಳನ್ನು ನಮ್ಮ ಫ್ಲಾಟ್​ಫಾರ್ಮ್​ನಲ್ಲಿ ಹಂಚಿಕೊಂಡು ಹಣ ಗಳಿಸಬಹುದು' ಎಂದು ಮಸ್ಕ್​ ಎಕ್ಸ್​ ಪೋಸ್ಟ್​ ಮಾಡಿದ್ದಾರೆ.

ಮಸ್ಕ್​ ಅವರ ಈ ಹೊಸ ಪ್ರಯತ್ನಕ್ಕೆ ಬಳಕೆದಾರರಿಂದ ಕೂಡ ಮೆಚ್ಚುಗೆ ವ್ಯಕ್ತವಾಗಿದ್ದಾರೆ. ಎಕ್ಸ್​​ ಚಂದದಾರರು ಪೋಸ್ಟ್​ ಮಾಡಿದ ಸಿನಿಮಾದಿಂದ ಇತರೆ ಬಳಕೆದಾರರು, ಸಬ್​ಸ್ಕೈಬ್​ ಮಾಡದೆಯೇ ಚಲನಚಿತ್ರವನ್ನು ಖರೀದಿಸಬಹುದು. ಎಕ್ಸ್ ನಿಜವಾದ ಚಲನಚಿತ್ರ ವೇದಿಕೆಯಾಗುತ್ತದೆ ಎಂದಿದ್ದಾರೆ.

ಮಸ್ಕ್​ ಸಹೋದರಿ ಮತ್ತು ಫಾಷನ್​​ ಫ್ಲಿಕ್ಸ್​ ಪ್ರಸಾರ ಸೇವೆಯ ಸಹ ಸಂಸ್ಥಾಪಕಿಯಾಗಿರುವ ಟೊಸ್ಕಾ ಮಸ್ಕ್​, ಎಕ್ಸ್​ನಲ್ಲಿ ಸಂಪೂರ್ಣ ಸಿನಿಮಾವನ್ನು ಪೋಸ್ಟ್​ ಮಾಡಬಹುದು. ಜನರು ಎಕ್ಸ್​ನಲ್ಲಿ ನನ್ನ ಸಿನಿಮಾ ನೋಡುವುದು ಖುಷಿ ತರಲಿದೆ ಎಂದು ಪೋಸ್ಟ್​ ಮಾಡಿದ್ದಾರೆ.

ಈ ಹಿಂದೆ ಈ ಕುರಿತು ಮಾತನಾಡಿದ್ದ ಮಸ್ಕ್​, ಸಣ್ಣ ಪರದೆಯಿಂದ ದೊಡ್ಡ ಪರದೆಗೆ. ಎಕ್ಸ್​​ ಎಲ್ಲವನ್ನೂ ಬದಲಾಯಿಸುತ್ತಿದೆ. ಶೀಘ್ರದಲ್ಲೇ ನಿಮ್ಮ ನೈಜ ಸಮಯದಲ್ಲಿ ನಿಮ್ಮನ್ನು ಮಗ್ನಗೊಳಿಸುವ ವಿಷಯವನ್ನು ಹೊತ್ತು ಎಕ್ಸ್​ ಟಿವಿ ಆ್ಯಪ್​ ಜೊತೆಗೆ ಬರಲಿದ್ದೇವೆ. ಉತ್ತಮ ಗುಣಮಟ್ಟ, ಅದ್ಭುತ ಮನರಂಜನೆಯ ಅನುಭವವನ್ನು ದೊಡ್ಡ ಪರದೆಯಲ್ಲಿ ಪಡೆಯಬಹುದು ಎಂದು ಮಾಹಿತಿ ನೀಡಿದ್ದಾರೆ.

ವಿಡಿಯೋ ಪ್ರಸಾರದ ಹೊರತಾಗಿ ಮಸ್ಕ್​ ಎಐ ಅಡಿಯನ್ಸ್​ ವೈಶಿಷ್ಟ್ಯ ಶೀಘ್ರದಲ್ಲೇ ಬರುವುದಾಗಿ ಕೂಡ ತಮ್ಮ ಬೆಂಬಲಿಗರಿಗೆ ತಿಳಿಸಿದ್ದಾರೆ. ನಿಮ್ಮ ಜಾಹೀರಾತು ಮತ್ತು ನಮ್ಮ ಎಐ ವ್ಯವಸ್ಥೆ ನಮ್ಮ ಎಕ್ಸ್​ ಬಳಕೆದಾರರನ್ನು ಗುರಿಯಾಗಿಸಿಕೊಂಡು ಪೂಲ್​ ರಚಿಸಲಿದೆ ಎಂದು ಚಿಕ್ಕದಾಗಿ ವಿವರಿಸಿದ್ದಾರೆ. (ಐಎಎನ್​ಎಸ್​)

ಇದನ್ನೂ ಓದಿ: AI ತಂತ್ರಜ್ಞಾನದೊಂದಿಗೆ ಗೂಗಲ್ ಪಿಕ್ಸೆಲ್ 8A ಫೋನ್ ಭಾರತದಲ್ಲಿ ಬಿಡುಗಡೆ; ಬೆಲೆ ಎಷ್ಟು, ವೈಶಿಷ್ಠ್ಯಗಳೇನೇನು?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.