ETV Bharat / technology

ಸ್ಪೇಸ್​ಟೆಕ್​ ಸ್ಟಾರ್ಟ್​ಅಪ್​ ಕ್ಷೇತ್ರಕ್ಕೆ ದಾಖಲೆಯ 126 ಮಿಲಿಯನ್ ಡಾಲರ್ ಫಂಡಿಂಗ್​​ - Indian spacetech startups - INDIAN SPACETECH STARTUPS

ಭಾರತದ ಬಾಹ್ಯಾಕಾಶ ತಂತ್ರಜ್ಞಾನ ಸ್ಟಾರ್ಟ್​​ಅಪ್ ವಲಯಕ್ಕೆ 126 ಮಿಲಿಯನ್ ಡಾಲರ್ ಫಂಡಿಂಗ್ ಹರಿದು ಬಂದಿದೆ.

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ (IANS)
author img

By ETV Bharat Karnataka Team

Published : Jul 30, 2024, 4:15 PM IST

ನವದೆಹಲಿ: 2023 ರಲ್ಲಿ ಭಾರತದ ಬಾಹ್ಯಾಕಾಶ ತಂತ್ರಜ್ಞಾನ ಕ್ಷೇತ್ರಕ್ಕೆ ದಾಖಲೆಯ 126 ಮಿಲಿಯನ್ ಡಾಲರ್ ಫಂಡಿಂಗ್ ಹರಿದು ಬಂದಿದೆ. ಇದು 2022 ರಲ್ಲಿ ಆಗಿದ್ದ 118 ಮಿಲಿಯನ್ ಡಾಲರ್​ ಫಂಡಿಂಗ್​ಗಿಂತ ಶೇಕಡಾ 7 ರಷ್ಟು ಹೆಚ್ಚಾಗಿದೆ ಮತ್ತು 2021 ರಲ್ಲಿ ಆಗಿದ್ದ 37.6 ಮಿಲಿಯನ್ ಡಾಲರ್​ಗೆ ಹೋಲಿಸಿದರೆ ಶೇಕಡಾ 235 ರಷ್ಟು ಹೆಚ್ಚಾಗಿದೆ ಎಂದು ವರದಿಯೊಂದು ಮಂಗಳವಾರ ತಿಳಿಸಿದೆ. 2024 ರಲ್ಲಿ ಈವರೆಗೆ ಈ ವಲಯಕ್ಕೆ 10.8 ಮಿಲಿಯನ್ ಡಾಲರ್ ಫಂಡಿಂಗ್ ಸಿಕ್ಕಿದೆ.

ಜಾಗತಿಕವಾಗಿ ಒಟ್ಟಾರೆ ಫಂಡಿಂಗ್ ಮಂದಗತಿಯಲ್ಲಿದ್ದರೂ, ಸರ್ಕಾರದ ಬೆಂಬಲ ಮತ್ತು ಗಮನಾರ್ಹ ಆವಿಷ್ಕಾರಗಳಿಂದ ಬಾಹ್ಯಾಕಾಶ ತಂತ್ರಜ್ಞಾನ ಕ್ಷೇತ್ರಕ್ಕೆ ಫಂಡಿಂಗ್ ಪ್ರಮಾಣ ಹೆಚ್ಚಾಗಿದೆ ಎಂದು ಮಾರುಕಟ್ಟೆ ವಿಶ್ಲೇಷಕ ಸಂಸ್ಥೆ ಟ್ರಾಕ್ಸ್​ ಎನ್ ಒದಗಿಸಿದ ಅಂಕಿ - ಅಂಶಗಳು ತಿಳಿಸಿವೆ.

ಸದ್ಯ ಭಾರತದಲ್ಲಿ 100 ಕ್ಕೂ ಹೆಚ್ಚು ಸ್ಪೇಸ್ ಟೆಕ್ ಸ್ಟಾರ್ಟ್ಅಪ್​ಗಳಿವೆ. ಇವುಗಳಲ್ಲಿ ಹೆಚ್ಚಿನ ಸ್ಟಾರ್ಟ್​ ಅಪ್​ಗಳು ಕಳೆದ 5 ವರ್ಷಗಳಲ್ಲಿ ಆರಂಭವಾಗಿವೆ. ಬಾಹ್ಯಾಕಾಶ ತಂತ್ರಜ್ಞಾನ ವಲಯಕ್ಕೆ ಈ ಬಾರಿಯ ಕೇಂದ್ರ ಬಜೆಟ್​ನಲ್ಲಿ 1,000 ಕೋಟಿ ರೂ.ಗಳ ಅನುದಾನ ಮೀಸಲಿಟ್ಟಿರುವುದರಿಂದ ಈ ಉದ್ಯಮಕ್ಕೆ ಗಮನಾರ್ಹ ಉತ್ತೇಜನ ಸಿಗುವ ನಿರೀಕ್ಷೆಯಿದೆ. ಪ್ರಸ್ತುತ ದೇಶವು ಸಂವಹನ, ಹವಾಮಾನ ಮತ್ತು ಭೂ ವೀಕ್ಷಣಾ ಉಪಗ್ರಹಗಳು ಸೇರಿದಂತೆ 55 ಸಕ್ರಿಯ ಬಾಹ್ಯಾಕಾಶ ಸ್ವತ್ತುಗಳನ್ನು ಹೊಂದಿದೆ.

"ಪ್ರಸ್ತುತ ಭಾರತದ ಬಾಹ್ಯಾಕಾಶ ತಂತ್ರಜ್ಞಾನ ವಲಯಕ್ಕೆ ಹರಿದು ಬರುತ್ತಿರುವ ಧನಸಹಾಯ ಮತ್ತು ಕಾರ್ಯತಂತ್ರದ ಹೂಡಿಕೆಗಳು ಭಾರತವು ಜಾಗತಿಕ ಬಾಹ್ಯಾಕಾಶ ಉದ್ಯಮದಲ್ಲಿ ಪ್ರಮುಖ ದೇಶವಾಗುವತ್ತ ಮುನ್ನಡೆಯುತ್ತಿದೆ" ಎಂದು ಟ್ರಾಕ್ಸ್ ಎನ್ ಸಹ ಸಂಸ್ಥಾಪಕಿ ನೇಹಾ ಸಿಂಗ್ ಹೇಳಿದರು.

2023 ರಲ್ಲಿ, ಆರಂಭಿಕ ಹಂತದ ಸುತ್ತುಗಳಲ್ಲಿ ಸಂಗ್ರಹಿಸಲಾದ ಒಟ್ಟು 126 ಮಿಲಿಯನ್ ಡಾಲರ್ ಫಂಡಿಂಗ್​​ನಲ್ಲಿ 120 ಮಿಲಿಯನ್ ಡಾಲರ್ ಫಂಡಿಂಗ್ ಈ ಕ್ಷೇತ್ರಕ್ಕೆ ಬಂದಿದೆ. ಇದು 2022 ರಲ್ಲಿ ಆಗಿದ್ದ 114 ಮಿಲಿಯನ್ ಡಾಲರ್​ಗೆ ಹೋಲಿಸಿದರೆ ಗಮನಾರ್ಹ ಬೆಳವಣಿಗೆಯಾಗಿದೆ. 2024 ರಲ್ಲಿ, ಆರಂಭಿಕ ಹಂತದ ಫಂಡಿಂಗ್ ಇಲ್ಲಿಯವರೆಗೆ 8.5 ಮಿಲಿಯನ್ ಡಾಲರ್​ಗೆ ತಲುಪಿದೆ.

ಸೀಡ್​ - ಹಂತದ ಫಂಡಿಂಗ್​ನಲ್ಲಿ ಕೂಡ ಗಮನಾರ್ಹ ಏರಿಕೆಯಾಗಿದೆ. ಇದು 2022 ರಲ್ಲಿ ಇದ್ದ 4.3 ಮಿಲಿಯನ್ ಡಾಲರ್​ನಿಂದ 2023 ರಲ್ಲಿ 5.3 ಮಿಲಿಯನ್ ಡಾಲರ್​ ಅಂದರೆ ಶೇಕಡಾ 24 ರಷ್ಟು ಹೆಚ್ಚಳವಾಗಿದೆ. ಆದರೆ, ಆರಂಭಿಕ ಹಂತದ ಮತ್ತು ಸೀಡ್​ - ಹಂತದ ಫಂಡಿಂಗ್​​ನಲ್ಲಿ ಈ ಬೆಳವಣಿಗೆಯ ಹೊರತಾಗಿಯೂ, ಭಾರತದ ಖಾಸಗಿ ವಲಯದ ಬಾಹ್ಯಾಕಾಶ ತಂತ್ರಜ್ಞಾನ ಸ್ಟಾರ್ಟ್ಅಪ್​ಗಳಿಗೆ ಈವರೆಗೂ ಯಾವುದೇ ಕೊನೆಯ ಹಂತದ ಫಂಡಿಂಗ್ ಬಂದಿಲ್ಲ ಎಂದು ವರದಿ ತಿಳಿಸಿದೆ.

ಸ್ಕೈರೂಟ್ ಏರೋಸ್ಪೇಸ್ ಒಟ್ಟಾರೆ 99.8 ಮಿಲಿಯನ್ ಡಾಲರ್ ಫಂಡಿಂಗ್​​ನೊಂದಿಗೆ ಭಾರತದಲ್ಲಿ ಅತಿ ಹೆಚ್ಚು ಫಂಡಿಂಗ್​​ ಪಡೆದ ಸಕ್ರಿಯ ಬಾಹ್ಯಾಕಾಶ ತಂತ್ರಜ್ಞಾನ ಸ್ಟಾರ್ಟ್ಅಪ್ ಆಗಿ ಅಗ್ರಸ್ಥಾನದಲ್ಲಿದ್ದರೆ, ಪಿಕ್ಸೆಲ್ 71.7 ಮಿಲಿಯನ್ ಡಾಲರ್ ಮತ್ತು ಅಗ್ನಿಕುಲ್ 61.5 ಮಿಲಿಯನ್ ಡಾಲರ್ ಫಂಡಿಂಗ್ ಪಡೆದುಕೊಂಡಿವೆ. ಈ ವಿಭಾಗದಲ್ಲಿ ಬೇರೆ ಯಾವುದೇ ಸ್ಟಾರ್ಟ್ಅಪ್ 50 ಮಿಲಿಯನ್ ಡಾಲರ್​ಗಿಂತ ಹೆಚ್ಚಿನ ಹಣವನ್ನು ಸಂಗ್ರಹಿಸಿಲ್ಲ.

ಇದನ್ನೂ ಓದಿ : ಫಿನ್​ಟೆಕ್​ ಎನ್​ಬಿಎಫ್​ಸಿಗಳಿಂದ 98 ಸಾವಿರ ಕೋಟಿ ಮೊತ್ತದ 9 ಕೋಟಿ ಸಾಲ ಬಟವಾಡೆ: ವರದಿ - Indian Fintech NBFC

ETV Bharat Logo

Copyright © 2024 Ushodaya Enterprises Pvt. Ltd., All Rights Reserved.