ಹೈದರಾಬಾದ್: ನೀವು ಸಣ್ಣ ವ್ಯಾಪಾರವನ್ನು ಪ್ರಾರಂಭಿಸಲು ಹೊರಟಿದ್ದರೆ ಮತ್ತು ಸಣ್ಣ ಸರಕು ವಾಹಕದ ಅಗತ್ಯವಿದ್ದರೆ ಪ್ರಸ್ತುತ ನಿಮಗೆ ಹಲವಾರು ಆಯ್ಕೆಗಳಿವೆ. ನೀವು ಅವುಗಳನ್ನು ಕಡಿಮೆ ಬೆಲೆಗೆ ಖರೀದಿಸಬಹುದು ಮತ್ತು ಉತ್ತಮ ಸರಕು ವಾಹನಗಳು ಮಾರುಕಟ್ಟೆಯಲ್ಲಿ ಹೆಚ್ಚಿನ ಬೆಲೆಗೆ ಲಭ್ಯ ಇವೆ. ಆದರೆ ನಿಮ್ಮ ಸಣ್ಣ ವ್ಯಾಪಾರದ ಅನುಕೂಲಕ್ಕೆ ತಕ್ಕಂತಹ ಐದು ವಾಹನಗಳ ಬಗ್ಗೆ ಮಾಹಿತಿ ಇಲ್ಲಿದೆ. ಅವುಗಳ ಬೆಲೆ 10 ಲಕ್ಷಕ್ಕಿಂತ ಕಡಿಮೆಯಾಗಿದೆ.
ಟಾಟಾ ಏಸ್ ಗೋಲ್ಡ್: ಟಾಟಾ ಕಮರ್ಷಿಯಲ್ ವೆಹಿಕಲ್ಸ್‌ನ ಈ ಸಣ್ಣ ಸರಕು ವಾಹನವು ಜನರ ಮೊದಲ ಆಯ್ಕೆಯಾಗಿದೆ. ಜನರು ಇದನ್ನು 'ಛೋಟಾ ಹಾಥಿ' ಎಂಬ ಹೆಸರಿನಿಂದಲೂ ಕರೆಯುತ್ತಾರೆ. ಈ ವಾಹನವು 694 cc ಮಲ್ಟಿ-ಪಾಯಿಂಟ್ ಫ್ಯೂಲ್ ಇಂಜೆಕ್ಷನ್, 4-ಸ್ಟ್ರೋಕ್ ವಾಟರ್-ಕೂಲ್ಡ್ ಎಂಜಿನ್ ಅನ್ನು ಹೊಂದಿದೆ. ಇದು 30 HP ಪವರ್ ಮತ್ತು 55 ನ್ಯೂಟನ್ ಮೀಟರ್ ಟಾರ್ಕ್ ಅನ್ನು ಒದಗಿಸುತ್ತದೆ. ಈ ವಾಹಕವು CNG (1630 ಕೆಜಿ ಒಟ್ಟು ವಾಹನ ತೂಕ) ಮತ್ತು ಪೆಟ್ರೋಲ್ (1615 ಕೆಜಿ ಒಟ್ಟು ವಾಹನ ತೂಕ) ಆಯ್ಕೆಗಳೊಂದಿಗೆ ಲಭ್ಯವಿದೆ. ಇದನ್ನು ಮಾರುಕಟ್ಟೆಯಲ್ಲಿ 3.99 ಲಕ್ಷದಿಂದ 6.69 ಲಕ್ಷ ರೂಪಾಯಿಗಳಿಗೆ (ಎಕ್ಸ್ ಶೋರೂಂ) ಮಾರಾಟ ಮಾಡಲಾಗುತ್ತಿದೆ.
ಮಹೀಂದ್ರಾ ಜೀತೋ: ಮಹೀಂದ್ರಾದ ಜನಪ್ರಿಯ ವಾಹನ ಮಹೀಂದ್ರ ಜೀತೋ. ಈ ಪಿಕಪ್ ಟ್ರಕ್ ಅನ್ನು 4.38 ಲಕ್ಷದಿಂದ 5.08 ಲಕ್ಷದವರೆಗೆ (ಎಕ್ಸ್ ಶೋರೂಂ) ಮಾರಾಟ ಮಾಡಲಾಗುತ್ತಿದೆ. ಇದು 625 cc ನಾಲ್ಕು ಸ್ಟ್ರೋಕ್, ಪಾಸಿಟಿವ್ ಎಂಜಿನ್ ಮತ್ತು ಇಗ್ನಿಷನ್ ಎಂಜಿನ್ ಅನ್ನು ಹೊಂದಿದೆ, ಇದು 20.1 HP ಮತ್ತು 44 ನ್ಯೂಟನ್ ಮೀಟರ್ ಟಾರ್ಕ್ ಅನ್ನು ಒದಗಿಸುತ್ತದೆ. ಈ ಪಿಕಪ್ ಟ್ರಕ್ 1485 ಕೆಜಿ ತೂಕವನ್ನು ಎಳೆಯುವ ಸಾಮರ್ಥ್ಯವನ್ನು ಹೊಂದಿದೆ.
ಮಾರುತಿ ಸುಜುಕಿ ಸೂಪರ್ ಕ್ಯಾರಿ: ಮಾರುತಿ ಸುಜುಕಿ ತನ್ನ ಸೂಪರ್ ಕ್ಯಾರಿ ಸಣ್ಣ ಪಿಕಪ್ ಟ್ರಕ್‌ನೊಂದಿಗೆ ವಾಣಿಜ್ಯ ವಾಹನ ವಿಭಾಗವನ್ನು ಪ್ರವೇಶಿಸಿತು. ಮಾರುತಿ ತನ್ನ ಸೂಪರ್ ಕ್ಯಾರಿಯನ್ನು 1.196 cc, G12B ಸರಣಿಯ ಎಂಜಿನ್‌ನೊಂದಿಗೆ ಮಾರಾಟ ಮಾಡುತ್ತಿದೆ. ಈ ಎಂಜಿನ್ ಪೆಟ್ರೋಲ್ ಮತ್ತು CNG ಎರಡರಲ್ಲೂ ಲಭ್ಯವಿದೆ. ಪೆಟ್ರೋಲ್‌ನೊಂದಿಗೆ ಇದು 72 ಹೆಚ್‌ಪಿ ಪವರ್ ಮತ್ತು 98 ನ್ಯೂಟನ್ ಮೀಟರ್ ಟಾರ್ಕ್ ನೀಡುತ್ತದೆ. ಆದರೆ ಸಿಎನ್‌ಜಿಯೊಂದಿಗೆ ಈ ಎಂಜಿನ್ 64 ಹೆಚ್‌ಪಿ ಪವರ್ ಮತ್ತು 85 ನ್ಯೂಟನ್ ಮೀಟರ್ ಟಾರ್ಕ್ ನೀಡುತ್ತದೆ. ಇದು ಒಟ್ಟು 1600 ಕೆಜಿ ತೂಕವನ್ನು ಎಳೆಯಬಲ್ಲದು. ಇದರ ಬೆಲೆ ರೂ. 4.14 ಲಕ್ಷ (ಎಕ್ಸ್ ಶೋ ರೂಂ)ದಿಂದ ಆರಂಭಗೊಳ್ಳಲಿದೆ.
ಟಾಟಾ ಇಂಟ್ರಾ ವಿ30: ಅತ್ಯುತ್ತಮ ಪೇಲೋಡ್ ಸಾಮರ್ಥ್ಯದೊಂದಿಗೆ ಬರುವ ಟಾಟಾದ ಮತ್ತೊಂದು ಸಣ್ಣ ಪಿಕಪ್ ಟ್ರಕ್ ಟಾಟಾ ಇಂಟ್ರಾ ವಿ30 ಆಗಿದೆ. ಇದು 1.5-ಲೀಟರ್, 4-ಸಿಲಿಂಡರ್, BS-6 ಎಮಿಷನ್ ಆಧಾರಿತ ಡೀಸೆಲ್ ಎಂಜಿನ್ ಅನ್ನು ಹೊಂದಿದೆ. ಇದು 70 hp ಪವರ್ ಮತ್ತು 140 ನ್ಯೂಟನ್ ಮೀಟರ್ ಟಾರ್ಕ್ ಅನ್ನು ಒದಗಿಸುತ್ತದೆ. ಈ ಎಂಜಿನ್‌ನೊಂದಿಗೆ 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಅನ್ನು ಜೋಡಿಸಲಾಗಿದೆ. ಈ ಪಿಕಪ್ ಟ್ರಕ್ 1,300 ಕೆಜಿ ಪೇಲೋಡ್ ಸಾಮರ್ಥ್ಯದೊಂದಿಗೆ ಬರುತ್ತದೆ. ಬೆಲೆಯ ಬಗ್ಗೆ ಮಾತನಾಡುವುದಾದರೆ, 7.30 ಲಕ್ಷದಿಂದ 7.62 ಲಕ್ಷ (ಎಕ್ಸ್ ಶೋ ರೂಂ) ಬೆಲೆಯಲ್ಲಿ ಮಾರಾಟ ಮಾಡಲಾಗುತ್ತಿದೆ.
ಅಶೋಕ್ ಲೇಲ್ಯಾಂಡ್ ದೋಸ್ತ್+: ಅಶೋಕ್ ಲೇಲ್ಯಾಂಡ್‌ನ ಶಕ್ತಿಶಾಲಿ ಪಿಕಪ್ ಟ್ರಕ್ ಅಂದ್ರೆ ಅದು ಅಶೋಕ್ ಲೇಲ್ಯಾಂಡ್ ದೋಸ್ತ್+, ಇದು ಕೇವಲ ಡೀಸೆಲ್ ಎಂಜಿನ್ ಆಯ್ಕೆಯಲ್ಲಿ ಲಭ್ಯವಿದೆ. Dost+ 1.5-ಲೀಟರ್, 3-ಸಿಲಿಂಡರ್ BS-6 ಹೊರಸೂಸುವಿಕೆ ಆಧಾರಿತ ಡೀಸೆಲ್ ಎಂಜಿನ್ ಅನ್ನು ಬಳಸುತ್ತದೆ. ಇದು 68.9 hp ಪವರ್ ಮತ್ತು 170 ನ್ಯೂಟನ್ ಮೀಟರ್ ಟಾರ್ಕ್ ಅನ್ನು ಒದಗಿಸುತ್ತದೆ. ಈ ಪಿಕಪ್ ಟ್ರಕ್ 1,500 ಕೆಜಿ ಪೇಲೋಡ್ ಸಾಮರ್ಥ್ಯದೊಂದಿಗೆ ಬರುತ್ತದೆ. ಬೆಲೆಯ ಬಗ್ಗೆ ಮಾತನಾಡುವುದಾದರೆ 7.75 ಲಕ್ಷದಿಂದ 8.25 ಲಕ್ಷದವರೆಗೆ (ಎಕ್ಸ್ ಶೋರೂಂ) ಮಾರಾಟ ಮಾಡಲಾಗುತ್ತಿದೆ.
ಓದಿ: 'ಯೂಸರ್ ನೇಮ್'ನಿಂದ ವಾಟ್ಸಾಪ್ ಮೂಲಕ ಸಂದೇಶ, ಇನ್ಮುಂದೆ ಮೊಬೈಲ್ ಸಂಖ್ಯೆ ಅವಶಕತೆಯಿಲ್ಲ! - WHATSAPP NEW FEATIRE