ETV Bharat / technology

ಸಿಂಗಾಪುರದಲ್ಲಿ ಪಿಎಂ ಮೋದಿ: ನಾಲ್ಕು ಒಪ್ಪಂದಗಳಿಗೆ ಸಹಿ, ಸೆಮಿಕಂಡಕ್ಟರ್​​ ಘಟಕಕ್ಕೆ ಭೇಟಿ ನೀಡಿದ ಪ್ರಧಾನಿ - SEMICONDUCTOR DEAL - SEMICONDUCTOR DEAL

PM Narendra Modi: ಪ್ರಧಾನಿ ನರೇಂದ್ರ ಮೋದಿ ಅವರ ಸಿಂಗಾಪುರ ಪ್ರವಾಸದ ವೇಳೆ ಸೆಮಿಕಂಡಕ್ಟರ್ ಕ್ಷೇತ್ರದಲ್ಲಿ ಪಾಲುದಾರಿಕೆಗೆ ಸಂಬಂಧಿಸಿದಂತೆ ಉಭಯ ದೇಶಗಳ ನಡುವೆ ಒಪ್ಪಂದಕ್ಕೆ ಸಹಿ ಹಾಕಲಾಯಿತು. ಈಗ ಈ ಒಪ್ಪಂದದ ನಂತರ ಭಾರತಕ್ಕೆ ಸಿಂಗಾಪುರದ ಸೆಮಿಕಂಡಕ್ಟರ್ ಕಂಪನಿಗಳ ಪ್ರವೇಶದ ಹಾದಿ ಸುಲಭವಾಗಲಿದೆ.

PM NARENDRA MODI VISITS SINGAPORE  SINGAPORE PM LAWRENCE WONG  SEMICONDUCTOR UNIT  SEMICONDUCTOR DEAL
ಸಿಂಗಾಪುರದಲ್ಲಿ ಪಿಎಂ ಮೋದಿ (ANI)
author img

By ETV Bharat Karnataka Team

Published : Sep 5, 2024, 3:54 PM IST

ಸಿಂಗಾಪುರ: ಪ್ರಧಾನಿ ನರೇಂದ್ರ ಮೋದಿ ಮತ್ತು ಸಿಂಗಾಪುರದ ಪ್ರಧಾನಿ ಲಾರೆನ್ಸ್ ವಾಂಗ್ ಅವರು ಗುರುವಾರ ಸೆಮಿಕಂಡಕ್ಟರ್ ಘಟಕಕ್ಕೆ ಭೇಟಿ ನೀಡಿದರು. ಸಿಂಗಾಪುರದಲ್ಲಿ ಎಲೆಕ್ಟ್ರಾನಿಕ್ಸ್ ವಲಯದ ಪ್ರಮುಖ ಕೈಗಾರಿಕೆಗಳಲ್ಲಿ ಸಹಕಾರದ ಕುರಿತು ಉಭಯ ನಾಯಕರು ಚರ್ಚಿಸಿದರು. ವಾಂಗ್ ಅವರ ಆಹ್ವಾನದ ಮೇರೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಎರಡು ದಿನ ಭೇಟಿಗಾಗಿ ಸಿಂಗಾಪುರಕ್ಕೆ ತೆರಳಿದ್ದಾರೆ. ಸಿಂಗಾಪುರವು ಅದರ ಸಣ್ಣ ಗಾತ್ರದ ಹೊರತಾಗಿಯೂ ಸೆಮಿಕಂಡಕ್ಟರ್ ಉದ್ಯಮಕ್ಕೆ ಹೆಸರುವಾಸಿಯಾಗಿದೆ. ಎರಡು ಸೌಹಾರ್ದ ದೇಶಗಳ ನಡುವಿನ ವ್ಯಾಪಾರ ಅವಕಾಶಗಳ ದೃಷ್ಟಿಯಿಂದ ಪ್ರಧಾನಿ ಮೋದಿಯವರ ಸೆಮಿಕಂಡಕ್ಟರ್ ಉದ್ಯಮದ ಭೇಟಿಯನ್ನು ಪ್ರಮುಖವೆಂದು ಪರಿಗಣಿಸಲಾಗಿದೆ.

ಸೆಮಿಕಂಡಕ್ಟರ್​ ಘಟಕಕ್ಕೆ ಪ್ರಧಾನಿ ಭೇಟಿ: ಪ್ರಧಾನಿ ನರೇಂದ್ರ ಮೋದಿ ಅವರು ಸಿಂಗಾಪುರದ ಸಹವರ್ತಿ ಲಾರೆನ್ಸ್ ವಾಂಗ್ ಅವರೊಂದಿಗೆ ಸೆಮಿಕಂಡಕ್ಟರ್ ಮತ್ತು ಎಲೆಕ್ಟ್ರಾನಿಕ್ಸ್ ವಲಯದ ಸಿಂಗಾಪುರ ಮೂಲದ ದೆಹಲಿಯಲ್ಲಿರುವ ಕಂಪನಿಯಾದ ಎಇಎಂ ಹೋಲ್ಡಿಂಗ್ಸ್ ಲಿಮಿಟೆಡ್‌ಗೆ ಸೆಪ್ಟೆಂಬರ್ 5 ರಂದು ಭೇಟಿ ನೀಡಿದರು. ಈ ಪ್ರಮುಖ ಉದ್ಯಮದಲ್ಲಿ ಸಹಕಾರದ ಮಾರ್ಗಗಳ ಕುರಿತು ಪ್ರಧಾನಿ ಮೋದಿ ಚರ್ಚಿಸಿದರು. ಜಾಗತಿಕ ಸೆಮಿಕಂಡಕ್ಟರ್ ಮೌಲ್ಯ ಸರಪಳಿಯಲ್ಲಿ AEM ನ ಪಾತ್ರ, ಅದರ ಕಾರ್ಯಾಚರಣೆಗಳು ಬಗ್ಗೆ ಪ್ರಧಾನಿ ಮೋದಿಗೆ ವಿವರಿಸಲಾಯಿತು. ಈ ವೇಳೆ ಅನೇಕ ಇತರ ಸಿಂಗಾಪುರದ ಕಂಪನಿಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು. 11-13 ಸೆಪ್ಟೆಂಬರ್ 2024ರ ವರೆಗೆ ಗ್ರೇಟರ್ ನೋಯ್ಡಾದಲ್ಲಿ ನಡೆಯಲಿರುವ SEMICON ಇಂಡಿಯಾ ಪ್ರದರ್ಶನದಲ್ಲಿ ಭಾಗವಹಿಸಲು ಸಿಂಗಾಪುರದ ಸೆಮಿಕಂಡಕ್ಟರ್ ಕಂಪನಿಗಳನ್ನು ಪ್ರಧಾನಮಂತ್ರಿ ಆಹ್ವಾನಿಸಿದರು.

ಪ್ರಧಾನಿ ಮೋದಿ ಟ್ವೀಟ್​: ಈ ಸಂದರ್ಭದಲ್ಲಿ, ಪ್ರಧಾನಿ ಮೋದಿ, "ನನ್ನ ಸ್ನೇಹಿತ ಪ್ರಧಾನಿ ಲಾರೆನ್ಸ್ ವಾಂಗ್ ಅವರೊಂದಿಗಿನ ಚರ್ಚೆಗಳು ಇಂದಿಗೂ ಮುಂದುವರೆದಿವೆ. ನಾವು ಭಾರತದಲ್ಲಿ ಅನೇಕ ಸಿಂಗಾಪುರಗಳನ್ನು ರಚಿಸಲು ಬಯಸುತ್ತೇವೆ. ಕೌಶಲ್ಯ, ತಂತ್ರಜ್ಞಾನ, ಆರೋಗ್ಯ, AI ಮತ್ತು ಇತರ ಹಲವು ಕ್ಷೇತ್ರಗಳಲ್ಲಿ ಸಹಕಾರವನ್ನು ಹೆಚ್ಚಿಸುವ ಕುರಿತು ನಾವು ಚರ್ಚೆ ನಡೆಸಿದ್ದೇವೆ. ಅವರು ವ್ಯಾಪಾರವನ್ನು ಉತ್ತೇಜಿಸಲು ಒಪ್ಪಿಕೊಂಡಿದ್ದಾರೆ. ಈ ದಿಕ್ಕಿನಲ್ಲಿ ನಾವು ಒಟ್ಟಾಗಿ ಪ್ರಯತ್ನಿಸುತ್ತಿರುವುದಕ್ಕೆ ನಮಗೆ ಸಂತೋಷವಾಗಿದೆ" ಎಂದು ಹೇಳಿದರು.

ನಾಲ್ಕು ಒಪ್ಪಂದಗಳಿಗೆ ಸಹಿ: ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಸಿಂಗಾಪುರದ ಪ್ರಧಾನಿ ಲಾರೆನ್ಸ್ ವಾಂಗ್ ಅವರ ಭೇಟಿಯ ಸಮಯದಲ್ಲಿ ವಿವಿಧ ಕ್ಷೇತ್ರಗಳಲ್ಲಿ ದ್ವಿಪಕ್ಷೀಯ ಪಾಲುದಾರಿಕೆಯನ್ನು ಬಲಪಡಿಸಲು ನಾಲ್ಕು ತಿಳುವಳಿಕೆ ಪತ್ರಗಳಿಗೆ (ಎಂಒಯು) ಸಹಿ ಹಾಕಲಾಯಿತು. ಈ ಒಪ್ಪಂದಗಳು ಡಿಜಿಟಲ್ ತಂತ್ರಜ್ಞಾನದಲ್ಲಿ ಸಹಕಾರ, ಸೆಮಿಕಂಡಕ್ಟರ್ ವಲಯದಲ್ಲಿ ಪಾಲುದಾರಿಕೆ, ಶಿಕ್ಷಣದಲ್ಲಿ ಸಹಕಾರ, ಆರೋಗ್ಯ ಮತ್ತು ವೈದ್ಯಕೀಯ ಕ್ಷೇತ್ರದಲ್ಲಿ ಕೌಶಲ್ಯ ಅಭಿವೃದ್ಧಿಯನ್ನು ಒಳಗೊಂಡಿವೆ.

ವಿದೇಶಾಂಗ ಸಚಿವ ಎಸ್ ಜೈಶಂಕರ್ ಮತ್ತು ಸಿಂಗಾಪುರದ ವಿದೇಶಾಂಗ ವ್ಯವಹಾರಗಳ ಸಚಿವ ವಿವಿಯನ್ ಬಾಲಕೃಷ್ಣನ್ ಅವರು ಸಿಂಗಾಪುರದ ಸಂಸತ್ ಭವನದಲ್ಲಿ ಪ್ರಧಾನಿ ಮೋದಿ ಮತ್ತು ಅವರ ಸಿಂಗಾಪುರದ ಸಹವರ್ತಿ ಲಾರೆನ್ಸ್ ವಾಂಗ್ ಅವರ ಸಮ್ಮುಖದಲ್ಲಿ ಎಂಒಯುಗಳನ್ನು ವಿನಿಮಯ ಮಾಡಿಕೊಂಡರು. ಭಾರತ-ಸಿಂಗಾಪುರ್ ಸೆಮಿಕಂಡಕ್ಟರ್ ಇಕೋಸಿಸ್ಟಮ್ ಪಾಲುದಾರಿಕೆಯಲ್ಲಿ ಎರಡೂ ಕಡೆ ತಿಳುವಳಿಕೆ ಒಪ್ಪಂದವನ್ನು ಸಹ ಪೂರ್ಣಗೊಳಿಸಿದ್ದಾರೆ. ಎರಡೂ ದೇಶಗಳು ಈ ಒಪ್ಪಂದಕ್ಕೆ ಇಂಡಿಯಾ-ಸಿಂಗಾಪುರ್ ಸೆಮಿಕಂಡಕ್ಟರ್ ಇಕೋಸಿಸ್ಟಮ್ ಪಾಲುದಾರಿಕೆ ಎಂದು ಹೆಸರಿಸಿವೆ.

ಅನೇಕ ಪ್ರಯೋಜನಗಳು: ಸೆಮಿ ಕಂಡಕ್ಟರ್ ಕ್ಷೇತ್ರದಲ್ಲಿ ಈ ಒಪ್ಪಂದದಿಂದ ಭಾರತಕ್ಕೆ ಹಲವು ಲಾಭಗಳು ಸಿಗಲಿವೆ. ಮೊದಲನೆಯದಾಗಿ, ಸೆಮಿಕಂಡಕ್ಟರ್ ಕ್ಷೇತ್ರದಲ್ಲಿ ಪ್ರತಿಭೆಯನ್ನು ಅಭಿವೃದ್ಧಿಪಡಿಸಲು ಭಾರತವು ಸಹಾಯವನ್ನು ಪಡೆಯುತ್ತದೆ. ಸಿಂಗಾಪುರದ ವಿಶ್ವವಿದ್ಯಾನಿಲಯಗಳು ಸೆಮಿಕಂಡಕ್ಟರ್​ ಕ್ಷೇತ್ರದಲ್ಲಿ ಕಸ್ಟಮೈಸ್ ಮಾಡಿದ ಕೋರ್ಸ್‌ಗಳನ್ನು ಸಹ ಅಭಿವೃದ್ಧಿಪಡಿಸಿವೆ ಮತ್ತು ಭಾರತವು ಇದರ ಲಾಭವನ್ನು ಪಡೆಯಬಹುದು.

ಭಾರತದಲ್ಲಿ ಕೌಶಲ್ಯ ಅಭಿವೃದ್ಧಿ: ಇನ್ನು ಸೆಮಿಕಂಡಕ್ಟರ್ ಇಂಡಸ್ಟ್ರಿಯಲ್ ಪಾರ್ಕ್‌ನ ತ್ಯಾಜ್ಯ ನಿರ್ವಹಣೆಗೆ ಸಂಬಂಧಿಸಿದ ಮಾಹಿತಿಯನ್ನೂ ಪರಸ್ಪರ ಹಂಚಿಕೊಳ್ಳಲಾಗುವುದು. ಸಿಂಗಾಪುರದಲ್ಲಿ ಭೂಮಿ ಮತ್ತು ಮಾನವಶಕ್ತಿಯ ಕೊರತೆಯಿದೆ. ಆದರೆ ಭಾರತವು ಸಾಕಷ್ಟು ಭೂಮಿ ಮತ್ತು ಕೌಶಲ್ಯಪೂರ್ಣ ಕಾರ್ಮಿಕರನ್ನು ಹೊಂದಿದೆ. ಇಂತಹ ಪರಿಸ್ಥಿತಿಯಲ್ಲಿ ಭಾರತವು ಸಿಂಗಾಪುರದ ಸೆಮಿಕಂಡಕ್ಟರ್​ ಮೌಲ್ಯ ಸರಪಳಿಯ ಭಾಗವಾಗಬಹುದು. ಸಿಂಗಾಪುರ ಕಂಪನಿಗಳನ್ನು ಭಾರತದಲ್ಲಿ ವಿಸ್ತರಿಸಲು ಪ್ರೋತ್ಸಾಹಿಸಬಹುದು.

ಓದಿ: ತಂತ್ರಜ್ಞಾನಕ್ಕೆ ಮತ್ತಷ್ಟು ಶಕ್ತಿ: ಮತ್ತೊಂದು ಸೆಮಿಕಂಡಕ್ಟರ್ ಘಟಕ ಅನುಮೋದಿಸಿದ ಮೋದಿ ಕ್ಯಾಬಿನೆಟ್ - New Semiconductor Unit

ETV Bharat Logo

Copyright © 2025 Ushodaya Enterprises Pvt. Ltd., All Rights Reserved.