ETV Bharat / technology

ಮೊದಲ ಟ್ರೈ - ಫೋಲ್ಡ್​ ಸ್ಮಾರ್ಟ್​ಫೋನ್​ ಪರಿಚಯಿಸಲಿರುವ ಸ್ಯಾಮ್​ಸಂಗ್ ​- ಇದರ ವಿಶೇಷತೆ ಹೀಗಿದೆ - SAMSUNG TRI FOLD SMARTPHONE

Samsung Tri-Fold Smartphone: ಸ್ಯಾಮ್​ಸಂಗ್​ ಪ್ರಿಯರಿಗೆ ಕಂಪನಿ ಒಂದು ಶುಭ ಸುದ್ದಿ ನೀಡಿದೆ. ಸ್ಯಾಮ್​ಸಂಗ್​ ಮೊದಲ ಟ್ರೈ-ಫೋಲ್ಡ್​ ಪರಿಚಯಿಸಲಿದ್ದು, ಆದಷ್ಟು ಬೇಗ ಇದು ಮಾರುಕಟ್ಟೆಗೆ ಲಭ್ಯವಾಗಲಿದೆ.

SAMSUNG TRI FOLD RELEASE DATE  HUAWEI TRI FOLD PHONE  TRIPLE FOLDABLE PHONE  SAMSUNG TRIPLE FOLD
ಮೊದಲ ಟ್ರೈ-ಫೋಲ್ಡ್​ ಸ್ಮಾರ್ಟ್​ಫೋನ್​ ಪರಿಚಯಿಸಲಿರುವ ಸ್ಯಾಮ್​ಸಂಗ್ (Samsung)
author img

By ETV Bharat Tech Team

Published : Oct 26, 2024, 7:35 AM IST

Samsung Tri-Fold Smartphone: ಟೆಕ್ ಮಾರುಕಟ್ಟೆಯಲ್ಲಿ ಯಶಸ್ವಿಯಾಗಲು ಕಾಲಕಾಲಕ್ಕೆ ಹೊಸ ರೀತಿಯ ಉತ್ಪನ್ನಗಳನ್ನು ಬಿಡುಗಡೆ ಮಾಡಬೇಕು. ಈ ಹಿನ್ನೆಲೆ ಗ್ರಾಹಕರ ಅಭಿರುಚಿ, ಆಸಕ್ತಿಗೆ ತಕ್ಕಂತೆ ಹೊಸ ಮಾದರಿಯ ಮೊಬೈಲ್​ಗಳನ್ನು ತರಲು ಎಲ್ಲ ಕಂಪನಿಗಳೂ ಆಸಕ್ತಿ ತೋರುತ್ತಿವೆ. ಪ್ರಸ್ತುತ, ಫೋಲ್ಡಬಲ್​ ಮೊಬೈಲ್‌ಗಳು ಮಾರುಕಟ್ಟೆಯಲ್ಲಿ ಟ್ರೆಂಡ್ ಆಗಿದೆ. ಹೀಗಾಗಿ ಸ್ಮಾರ್ಟ್ ಫೋನ್ ತಯಾರಕರು ಫೋಲ್ಡಬಲ್​ ಮೊಬೈಲ್​ಗಳನ್ನು ಹೊರತರಲು ಪೈಪೋಟಿ ನಡೆಸುತ್ತಿದ್ದಾರೆ.

ಈಗಾಗಲೇ ಮಾರುಕಟ್ಟೆಯಲ್ಲಿ ಹಲವು ಕಂಪನಿಗಳಿಂದ ಫೋಲ್ಡಬಲ್​ ಮೊಬೈಲ್​ಗಳು ಮಾರುಕಟ್ಟೆಯಲ್ಲಿ ರಾರಾಜಿಸುತ್ತಿವೆ. ಈ ಹಿನ್ನೆಲೆ ಸ್ಯಾಮ್​ಸಂಗ್ ಸಹ ತನ್ನ ಹೊಸ ಮಾದರಿಯ ಫೋಲ್ಡಬಲ್​ ಮೊಬೈಲ್​ಗಳನ್ನು ಪರಿಚಯಿಸಲು ಉತ್ಸುಕವಾಗಿದೆ. ಸ್ಯಾಮ್‌ಸಂಗ್ ಟ್ರೈ-ಫೋಲ್ಡ್ ಮೊಬೈಲ್ ಅನ್ನು ಹೊರ ತರಲು ಕೆಲಸ ಮಾಡುತ್ತಿದೆ ಎಂಬ ವದಂತಿಗಳು ಕೆಲವು ಸಮಯದಿಂದ ಸುತ್ತುತ್ತಿದ್ದವು. ಆದರೆ, ಇತ್ತೀಚಿನ ZDNet ಕೊರಿಯಾ ವರದಿ ಇವುಗಳ ಬಗ್ಗೆ ಸ್ಪಷ್ಟತೆ ನೀಡಿದೆ.

ಸ್ಯಾಮ್‌ಸಂಗ್ ಎಲೆಕ್ಟ್ರಾನಿಕ್ಸ್ ಎಂಟ್ರಿ - ಲೆವೆಲ್ ಕ್ಲಾಮ್‌ಶೆಲ್ ಶೈಲಿಯ ಫೋಲ್ಡಬಲ್ ಫೋನ್ ಮತ್ತು ಟ್ರೈ-ಫೋಲ್ಡ್ ಮಾಡೆಲ್ ತರಲು ಕೆಲಸ ಮಾಡುತ್ತಿದೆ ಎಂದು ವರದಿ ಬಹಿರಂಗಪಡಿಸುತ್ತದೆ. ಈ ಎರಡು ಫೋಲ್ಡಬಲ್​ ಮೊಬೈಲ್‌ಗಳನ್ನು ಮುಂದಿನ ವರ್ಷ ಬಿಡುಗಡೆ ಮಾಡಬಹುದು ಎಂದು ಸ್ಯಾಮ್‌ಸಂಗ್ ಹೇಳಿದೆ.

ಸ್ಯಾಮ್‌ಸಂಗ್ ಮಾತ್ರವಲ್ಲದೇ Xiaomi, Honor, Oppo ನಂತಹ ಇತರ ಸ್ಮಾರ್ಟ್‌ಫೋನ್ ತಯಾರಕರು ಸಹ ತಮ್ಮ ಟ್ರೈ- ಫೋಲ್ಡ್ ಮೊಬೈಲ್‌ಗಳನ್ನು ತರಲು ಕೆಲಸ ಮಾಡುತ್ತಿವೆ ಎಂದು ವರದಿಯಾಗಿದೆ. ಆದರೆ, ಅವರು ತಮ್ಮ ಟ್ರೈ-ಫೋಲ್ಡ್ ಮೊಬೈಲ್‌ಗಳನ್ನು ಬಿಗ್​ ಸ್ಕ್ರೀನ್​ನೊಂದಿಗೆ ಹೊರ ತರಬಹುದು ಎಂದು ತೋರುತ್ತದೆ. ​

Xiaomi ಮತ್ತು Oppo ನಂತಹ ಪ್ರತಿಸ್ಪರ್ಧಿ ಬ್ರ್ಯಾಂಡ್‌ಗಳಿಗೆ ಫೋಲ್ಡಬಲ್ ಡಿಸ್‌ಪ್ಲೇಗಳನ್ನು ಪೂರೈಸುವಲ್ಲಿ Samsung Displays ಪ್ರಮುಖ ಪಾತ್ರ ವಹಿಸಿದೆ. ಆದರೆ, ಈ ZDNet ಕೊರಿಯಾ ವರದಿಯ ಪ್ರಕಾರ ಫೋಲ್ಡಬಲ್​ ಫೋನ್‌ಗಳಲ್ಲಿ ಬಳಸಲಾಗುವ OLED ಡಿಸ್​ಪ್ಲೇಗಳ ಬೇಡಿಕೆ ಈ ವರ್ಷ 10 ಪ್ರತಿಶತದಷ್ಟು ಕಡಿಮೆಯಾಗಿದೆ. ಇದಕ್ಕೆ ಕಾರಣ ಈ ವರ್ಷದ ಆರಂಭದಲ್ಲಿ ಸ್ಯಾಮ್‌ಸಂಗ್ ಬಿಡುಗಡೆ ಮಾಡಿದ Galaxy Z Flip 6 ಮತ್ತು Galaxy Z Fold 6 ಮಾದರಿಗಳಿಗೆ ಬೇಡಿಕೆ ನಿರೀಕ್ಷೆಗಿಂತ ಕಡಿಮೆಯಾಗಿದೆ. ಇದರೊಂದಿಗೆ, ಹೊಸ ಫೋಲ್ಡಬಲ್ ಡಿಸ್​ಪ್ಲೇಗಳ ಅಭಿವೃದ್ಧಿಯಲ್ಲಿ ಪ್ರಮುಖ ಬದಲಾವಣೆ ಕಂಡು ಬರುತ್ತಿದೆ.

ಆದರೆ ಇತ್ತೀಚೆಗೆ Huawei ಕಂಪನಿಯು ವಿಶ್ವದ ಮೊದಲ ಟ್ರೈ-ಫೋಲ್ಡಬಲ್ ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಿದೆ. Huawei ಇದನ್ನು Mate XT ಎಂಬ ಹೆಸರಿನೊಂದಿಗೆ ತಂದಿದೆ. ಈ ಮೊಬೈಲ್ ಮಾರಾಟದಲ್ಲಿ ಜನಪ್ರಿಯತೆ ಗಳಿಸುತ್ತಿದೆ. ಇದರೊಂದಿಗೆ, ಸ್ಯಾಮ್‌ಸಂಗ್ ತನ್ನ ಪ್ರತಿಸ್ಪರ್ಧಿ Huawei ಅನ್ನು ಸೋಲಿಸಲು ಟ್ರೈ-ಫೋಲ್ಡ್ ಸ್ಮಾರ್ಟ್‌ಫೋನ್ ಅನ್ನು ತರಲು ಪ್ರಯತ್ನಿಸುತ್ತಿದೆ. ಈ ಮೊಬೈಲ್ 2025ರಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ.

ಓದಿ: ಮ್ಯಾಕ್​ನ ಹೊಸ ಅಲೆಗಳನ್ನು ಘೋಷಿಸಲು ಸಿದ್ಧವಾಗಿದೆ ಆಪಲ್​!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.