ETV Bharat / technology

ಜಿಯೋ ಬ್ರೈನ್ ಮೂಲಕ ಭಾರತದಲ್ಲಿ AI ವ್ಯವಸ್ಥೆ ಪ್ರಾರಂಭಿಸಲಿರುವ ಅಂಬಾನಿ: ಅಷ್ಟಕ್ಕೂ ಏನಿದು jio-brain? - RIL UNVEILS NEW AI JIO BRAIN - RIL UNVEILS NEW AI JIO BRAIN

Jio Brain: ರಿಲಯನ್ಸ್ ಇಂಡಿಯಾ ಲಿಮಿಟೆಡ್‌ನ ವಾರ್ಷಿಕ ಸಾಮಾನ್ಯ ಸಭೆಯಲ್ಲಿ (AGM) ಕಂಪನಿಯ ಅಧ್ಯಕ್ಷ ಮುಖೇಶ್ ಅಂಬಾನಿ AI ವ್ಯವಸ್ಥೆಯನ್ನು ಘೋಷಿಸಿದ್ದಾರೆ. ಅದಕ್ಕೆ 'ಜಿಯೋ ಬ್ರೈನ್' ಎಂದು ಹೆಸರಿಸಲಾಗಿದೆ. ಇದಲ್ಲದೇ ಕಂಪನಿಯ ಕೆಲವು ಯೋಜನೆಗಳ ಬಗ್ಗೆಯೂ ಮುಖೇಶ್ ಅಂಬಾನಿ ಮಾಹಿತಿ ನೀಡಿದ್ದಾರೆ. ಹಾಗಾದರೆ ಜಿಯೋ ಬ್ರೈನ್ ಎಂದರೇನು ಎಂದು ತಿಳಿಯೋಣ ಬನ್ನಿ..

MUKESH AMBANI LAUNCHES JIO BRAIN  JIO BRAIN AI OF RIL  RELIANCE NEW AI
ಜಿಯೋ ಬ್ರೈನ್ ಮೂಲಕ ಭಾರತದಲ್ಲಿ AI ವ್ಯವಸ್ಥೆ ಪ್ರಾರಂಭಿಸಲಿರುವ ಅಂಬಾನಿ (Getty Images)
author img

By ETV Bharat Tech Team

Published : Aug 30, 2024, 12:18 PM IST

Jio Brain: ರಿಲಯನ್ಸ್ ಅಧ್ಯಕ್ಷ ಮುಖೇಶ್ ಅಂಬಾನಿ ಗುರುವಾರ ರಿಲಯನ್ಸ್ ಇಂಡಿಯಾ ಲಿಮಿಟೆಡ್ (ಆರ್‌ಐಎಲ್) 47 ನೇ ವಾರ್ಷಿಕ ಸಾಮಾನ್ಯ ಸಭೆ (ಎಜಿಎಂ) ಉದ್ದೇಶಿಸಿ ಮಾತನಾಡಿದರು. ಈ ಸಮಯದಲ್ಲಿ, ಜಿಯೋ ಸಂಪೂರ್ಣ AI ಜೀವನಚಕ್ರವನ್ನು ಒಳಗೊಂಡಿರುವ ಉಪಕರಣಗಳು ಮತ್ತು ಪ್ಲಾಟ್‌ಫಾರ್ಮ್‌ಗಳನ್ನು ಅಭಿವೃದ್ಧಿಪಡಿಸುತ್ತಿದೆ. ನಾವು ಅದಕ್ಕೆ ಜಿಯೋ ಬ್ರೈನ್ ಎಂದು ಹೆಸರಿಸಿದ್ದೇವೆ ಎಂದರು.

ಗುಜರಾತ್‌ನ ಜಾಮ್‌ನಗರದಲ್ಲಿ ರಿಲಯನ್ಸ್ ಗಿಗಾವ್ಯಾಟ್-ಸ್ಕೇಲ್ ಎಐ-ರೆಡಿ ಡೇಟಾ ಸೆಂಟರ್ ಅನ್ನು ಸ್ಥಾಪಿಸಲಿದೆ. ಇದು ಕಂಪನಿಯ ಹಸಿರು ಶಕ್ತಿಯಿಂದ ನಡೆಸಲ್ಪಡುತ್ತದೆ. ದೇಶಾದ್ಯಂತ ಬಹು AI ನಿರ್ಣಯ ಸೌಲಭ್ಯಗಳನ್ನು ನಿರ್ಮಿಸಲು ಯೋಜಿಸಿದ್ದೇವೆ. ಬೆಳೆಯುತ್ತಿರುವ ಬೇಡಿಕೆಯನ್ನು ಪೂರೈಸಲು ನಾವು ಅದನ್ನು ಹೆಚ್ಚಿಸುತ್ತೇವೆ ಎಂದು ಅಂಬಾನಿ ಹೇಳಿದ್ದಾರೆ.

ರಿಲಯನ್ಸ್ ವಿಶ್ವದ ಅತ್ಯಂತ ಕಡಿಮೆ AI ನಿರ್ಣಯ ವೆಚ್ಚವನ್ನು ಸೃಷ್ಟಿಸುವ ಗುರಿಯನ್ನು ಹೊಂದಿದೆ. AI ಅನ್ನು ಪ್ರಜಾಪ್ರಭುತ್ವಗೊಳಿಸಲು ನಾವು ಬದ್ಧರಾಗಿದ್ದೇವೆ. AI ಅಪ್ಲಿಕೇಶನ್‌ಗಳನ್ನು ಹೆಚ್ಚು ಕೈಗೆಟುಕುವಂತೆ ಮಾಡಲು ನಾವು ಪ್ರಮುಖ ಜಾಗತಿಕ ಕಂಪನಿಗಳೊಂದಿಗೆ ಪಾಲುದಾರರಾಗುತ್ತೇವೆ ಎಂದು ಮುಕೇಶ್ ಅಂಬಾನಿ ಘೋಷಿಸಿದ್ದಾರೆ.

ಜಿಯೋ ಬ್ರೈನ್ ಎಂದರೇನು?: ರಿಲಯನ್ಸ್ ಇಂಡಿಯಾ ಲಿಮಿಟೆಡ್ ಅಧ್ಯಕ್ಷ ಮುಖೇಶ್ ಅಂಬಾನಿ ಅವರು ಜಿಯೋದಲ್ಲಿ AI ಅಳವಡಿಕೆಯನ್ನು ವೇಗಗೊಳಿಸಲು, ವೇಗವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳಲು, ಹೆಚ್ಚು ನಿಖರವಾದ ಮುನ್ಸೂಚನೆಗಳನ್ನು ನೀಡಲು ಮತ್ತು ಗ್ರಾಹಕರ ಅಗತ್ಯಗಳನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ಜಿಯೋ ಬ್ರೈನ್ ಸಕ್ರಿಯಗೊಳಿಸುತ್ತದೆ ಎಂದು ಅವರು ಹೇಳಿದ್ದಾರೆ.

ಇತರ ರಿಲಯನ್ಸ್ ಆಪರೇಟಿಂಗ್ ಕಂಪನಿಗಳಲ್ಲಿ ಇದೇ ರೀತಿಯ ರೂಪಾಂತರವನ್ನು ತರಲು ಮತ್ತು ಅವರ AI ಪ್ರಯಾಣವನ್ನು ವೇಗಗೊಳಿಸಲು ನಾವು ಜಿಯೋ ಬ್ರೈನ್ ಅನ್ನು ಬಳಸಲು ಪ್ರಾರಂಭಿಸುತ್ತಿದ್ದೇವೆ. ರಿಲಯನ್ಸ್‌ನಲ್ಲಿ ಜಿಯೋ ಬ್ರೈನ್ ಅನ್ನು ಪರಿಪೂರ್ಣಗೊಳಿಸುವ ಮೂಲಕ ನಾವು ಇತರ ಉದ್ಯಮಗಳಿಗೆ ಒದಗಿಸಬಹುದಾದ ಪ್ರಬಲ AI ಸೇವೆಗಳ ವೇದಿಕೆಯನ್ನು ರೂಪಿಸುತ್ತೇವೆ ಎಂದು ನಾನು ಭಾವಿಸುತ್ತೇನೆ ಎಂದು ಅಂಬಾನಿ ಹೇಳಿದರು.

ಏನಿದು ಜಿಯೋ ಎಐ-ಕ್ಲೌಡ್ ?: ತಮ್ಮ ಜಿಯೋ ಎಐ-ಕ್ಲೌಡ್ ಸೇವೆಗಾಗಿ ಮುಖೇಶ್ ಅಂಬಾನಿ ದೀಪಾವಳಿ ಕೊಡುಗೆಯನ್ನು ಘೋಷಿಸಿದ್ದಾರೆ. ಜಿಯೋ ಬಳಕೆದಾರರಿಗೆ 100 ಜಿಬಿ ಉಚಿತ ಡಾಟಾವನ್ನು ನೀಡುತ್ತಿದ್ದಾರೆ. ಈ ವರ್ಷ ದೀಪಾವಳಿಯಿಂದ ಜಿಯೋ ಎಐ-ಕ್ಲೌಡ್ ಸ್ವಾಗತ ಕೊಡುಗೆಯನ್ನು ಪ್ರಾರಂಭಿಸಲು ನಾವು ಯೋಜಿಸುತ್ತಿದ್ದೇವೆ. ಇದು ಶಕ್ತಿಯುತ ಮತ್ತು ಕೈಗೆಟುಕುವ ಪರಿಹಾರವನ್ನು ತರುತ್ತದೆ ಎಂದು ಅಂಬಾನಿ ಪ್ರಕಟಿಸಿದ್ದಾರೆ.

ಕ್ಲೌಡ್ ಡೇಟಾ ಸಂಗ್ರಹಣೆ ಮತ್ತು ಡೇಟಾ-ಚಾಲಿತ AI ಸೇವೆಗಳು ಎಲ್ಲೆಡೆ ಲಭ್ಯವಿರುತ್ತವೆ. ಜಿಯೋ ಬಳಕೆದಾರರು ತಮ್ಮ ಎಲ್ಲಾ ಫೋಟೋಗಳು, ವಿಡಿಯೋಗಳು, ಡಾಕ್ಯುಮೆಂಟ್‌ಗಳು, ಇತರ ಎಲ್ಲ ಡಿಜಿಟಲ್ ವಿಷಯಗಳು ಮತ್ತು ಡೇಟಾವನ್ನು ಸುರಕ್ಷಿತವಾಗಿ ಸಂಗ್ರಹಿಸಲು ಮತ್ತು ಪ್ರವೇಶಿಸಲು ಶೇ.100ರಷ್ಟು ಕ್ಲೌಡ್ ಸಂಗ್ರಹಣೆಯನ್ನು ಪಡೆಯುತ್ತಾರೆ ಎಂದು ಹೇಳಿದರು.

ಡಿಜಿಟಲ್ ನಮ್ಮ ಆಂತರಿಕ ಸಂಶೋಧನೆಯ ಮತ್ತೊಂದು ಪ್ರಮುಖ ಕ್ಷೇತ್ರವಾಗಿದೆ. ನಾವು 6G, 5G, AI-ಲಾರ್ಜ್ ಲ್ಯಾಂಗ್ವೇಜ್ ಮಾಡೆಲ್, AI-ಡೀಪ್ ಲರ್ನಿಂಗ್, ಬಿಗ್ ಡೇಟಾ, ಡಿವೈಸಸ್, ಇಂಟರ್ನೆಟ್ ಆಫ್ ಥಿಂಗ್ಸ್ ಮತ್ತು ನ್ಯಾರೋಬ್ಯಾಂಡ್-IoT ನಲ್ಲಿ ಪೇಟೆಂಟ್‌ಗಳನ್ನು ಸಲ್ಲಿಸಿದ್ದೇವೆ. ತಂತ್ರಜ್ಞಾನ-ಚಾಲಿತ ರೂಪಾಂತರವು ಕಂಪನಿಯನ್ನು ಹೈಪರ್-ಗ್ರೋತ್‌ನ ಹೊಸ ಕಕ್ಷೆಗೆ ಕೊಂಡೊಯ್ಯುತ್ತದೆ ಮತ್ತು ಮುಂಬರುವ ವರ್ಷಗಳಲ್ಲಿ ಅದರ ಮೌಲ್ಯವನ್ನು ಬಹುಪಟ್ಟು ಹೆಚ್ಚಿಸುತ್ತದೆ ಎಂದು ಅಂಬಾನಿ ಇದೇ ವೇಳೆ ಭರವಸೆ ವ್ಯಕ್ತಪಡಿಸಿದ್ದಾರೆ.

ಓದಿ: ಪಡಿತರ ಚೀಟಿ ಇಕೆವೈಸಿ ಮಾಡಿಸದಿದ್ದಲ್ಲಿ ರೇಷನ್​ ಕಟ್​; ಈ ದಿನಾಂಕದೊಳಗೆ ಎಚ್ಚೆತ್ತುಕೊಳ್ಳಿ​! - Ration Card eKYC

ETV Bharat Logo

Copyright © 2025 Ushodaya Enterprises Pvt. Ltd., All Rights Reserved.