ETV Bharat / technology

ದೇಶಾದ್ಯಂತ ರಿಲಯನ್ಸ್​ ಜಿಯೋ ನೆಟ್​ವರ್ಕ್​ ಡೌನ್​ ವರದಿ: ಪರದಾಡಿದ ಗ್ರಾಹಕರು - Reliance Jio Down - RELIANCE JIO DOWN

ಜಿಯೋ ಟೆಲಿಕಾಂ ಸೇವೆಗಳು ಮಂಗಳವಾರ ದೇಶಾದ್ಯಂತ ಸ್ಥಗಿತಗೊಂಡಿತ್ತು. ಜಿಯೋ ಮೊಬೈಲ್ ನೆಟ್‌ವರ್ಕ್ ಜೊತೆಗೆ ಜಿಯೋ ಫೈಬರ್ ಸೇವೆಗಳನ್ನು ಸಹ ಸ್ಥಗಿತಗೊಳಿಸಲಾಗಿತ್ತು. ಈ ಬಗ್ಗೆ ಬಳಕೆದಾರರು ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚು ಪೋಸ್ಟ್​ಗಳನ್ನು ಮಾಡಿದ್ದಾರೆ.

Reliance Jio Down
Reliance Jio Down (ETV Bharat)
author img

By ETV Bharat Karnataka Team

Published : Jun 19, 2024, 7:30 AM IST

ರಾಜ್ಯ ಸೇರಿದಂತೆ ದೇಶಾದ್ಯಂತ ಜಿಯೋ ಇಂಟರ್ನೆಟ್​ ಸೇವೆ ಸ್ಥಗಿತಗೊಂಡು, ವಾಟ್ಸ್ಯಾಪ್​, ಇನ್​ಸ್ಟಾಗ್ರಾಂ, ಸ್ನಾಪ್​ಚ್ಯಾಟ್​, ಯೂಟ್ಯೂಬ್​ ಓಪನ್​ ಆಗದೇ ಗ್ರಾಹಕರು ಪರದಾಡಿದ ಘಟನೆ ಮಂಗಳವಾರ ಸಂಜೆ ನಡೆದಿದೆ. ಅದರಲ್ಲೂ ಮೊಬೈಲ್​ ಇಂಟರ್ನೆಟ್​ ಸೇವೆಯಲ್ಲಿ ತೀವ್ರ ಅಡಚಣೆ ಉಂಟಾಗಿದ್ದು, ಗ್ರಾಹಕರು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್​ಗಳನ್ನು ಹಂಚಿಕೊಂಡು ಜಿಯೋ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮೊಬೈಲ್​ ಇಂಟರ್ನೆಟ್​ ಸೇವೆ ಇಲ್ಲದ ಕಾರಣದಿಂದಾಗಿ ಬಳಕೆದಾರರು ವಾಟ್ಸ್ಯಾಪ್​, ಇನ್​ಸ್ಟಾಗ್ರಾಂ, ಸ್ನ್ಯಾಪ್​ಚ್ಯಾಟ್​ ಹಾಗೂ ಯೂಟ್ಯೂಬ್​ ಅನ್ನೂ ಪ್ರವೇಶಿಸಲು ಸಾಧ್ಯವಾಗುತ್ತಿಲ್ಲ ಎಂದು ದೂರಿದ ಘಟನೆಗಳು ವರದಿಯಾಗಿವೆ. ಗೂಗಲ್​ ಸರ್ಚ್​ ಕೂಡ ಮಾಡಲು ಸಾಧ್ಯವಾಗದೆ ಗ್ರಾಹಕರು ತೀವ್ರ ಸಂಕಟಕ್ಕೆ ಸಿಲುಕಿದರು. ಜಿಯೋ ಗ್ರಾಹಕರಲ್ಲಿ ಶೇ 54ರಷ್ಟು ಜನ ಮೊಬೈಲ್​ ಇಂಟರ್ನೆಟ್​ ಅಡಚಣೆ ಮತ್ತು ಶೇ.38ರಷ್ಟು ಜನ ಜಿಯೋ ಫೈಬರ್​ಗೆ ಸಂಬಂಧಿಸಿದಂತೆ ದೂರು ನೀಡಿರುವುದು ವರದಿಯಾಗಿದೆ.

ಸರ್ವರ್​ಗಳ ಮೇಲೆ ನಿಗಾ ಇಡುವ ಡೌನ್ ಡಿಟೆಕ್ಟರ್ ವೆಬ್‌ಸೈಟ್ ಪ್ರಕಾರ, ಜಿಯೋ ಫೈಬರ್ ಮತ್ತು ಮೊಬೈಲ್ ನೆಟ್‌ವರ್ಕ್ ಬಳಕೆದಾರರು ಮಂಗಳವಾರ ಮಧ್ಯಾಹ್ನದಿಂದ ಇಂಟರ್ನೆಟ್ ಸಮಸ್ಯೆಯನ್ನು ಎದುರಿಸಿದ್ದು, ಸಾಮಾಜಿಕ ಜಾಲತಾಣಗಳಿಗೆ ಪ್ರವೇಶಿಸಲು ಸಾಧ್ಯವಾಗುತ್ತಿರಲಿಲ್ಲ. ಆದರೆ ಇದಕ್ಕೆ ಕಾರಣ ಇನ್ನೂ ತಿಳಿದು ಬಂದಿಲ್ಲ. ಈ ಬಗ್ಗೆ ಜಿಯೋ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಕಸ್ಟಮರ್ ಕೇರ್​ಗೆ ಕರೆ ಮಾಡಿದರೂ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ಹಲವು ಬಳಕೆದಾರರು ಅಸಹನೆ ವ್ಯಕ್ತಪಡಿಸಿದರು.

ಪದೇ ಪದೇ ಮರುಕಳಿಸುತ್ತಿರುವ ಸಮಸ್ಯೆ: ಇತ್ತೀಚಿನ ದಿನಗಳಲ್ಲಿ ಜಿಯೋ ಸೇವೆಗಳಲ್ಲಿ ಪದೇ ಪದೇ ಸಮಸ್ಯೆಗಳು ಎದುರಾಗುತ್ತಿವೆ. ಬಳಕೆದಾರರು ಇಂಟರ್ನೆಟ್ ಸ್ಥಗಿತದಿಂದ ಸಾಮಾಜಿಕ ಜಾಲತಾಣಗಳು, ವೆಬ್​ಸೈಟ್​ಗಳಿಗೆ ಪ್ರವೇಶಿಸಲು ಸಾಧ್ಯವಾಗುವುದಿಲ್ಲ ಮತ್ತು ಉದ್ಯೋಗ ಸಂಬಂಧಿತ ಕೆಲಸಗಳನ್ನು ಮಾಡಲು ಸಾಧ್ಯವಾಗುವುದಿಲ್ಲ. ಅದರಲ್ಲೂ ಮನೆಯಿಂದಲೇ ಕೆಲಸ ಮಾಡುವ ಉದ್ಯೋಗಿಗಳು ಹೆಚ್ಚಿನ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಮುಖ್ಯವಾಗಿ ಜಿಯೋ ಫೈಬರ್ ಮತ್ತು ಮೊಬೈಲ್ ಇಂಟರ್ನೆಟ್ ಸೇವೆಗಳಲ್ಲಿ ಅಡಚಣೆಗಳು ಉಂಟಾಗುತ್ತಿವೆ.

ನೋ ಕಾಮೆಂಟ್: ರಿಲಯನ್ಸ್ ಜಿಯೋ ಇದುವರೆಗೆ ಇಂಟರ್ನೆಟ್ ಸ್ಥಗಿತದ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂಬುದು ಗಮನಾರ್ಹ. ಆದಾಗ್ಯೂ, ಇಂಟರ್ನೆಟ್ ಸ್ಥಗಿತದ ಬಗ್ಗೆ ಬಳಕೆದಾರರು ತಮ್ಮ ಆಕ್ರೋಶವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಕ್ತಪಡಿಸಿದ್ದಾರೆ. ಜಿಯೋ ಕಸ್ಟಮರ್ ಕೇರ್, ಗ್ರಾಹಕರು ನೀಡಿದ ದೂರುಗಳಿಗೆ ಸ್ಪಂದಿಸಿಲ್ಲ. ಇಂಟರ್ನೆಟ್ ವೇಗ ತುಂಬಾ ಕಡಿಮೆಯಾಗಿದ್ದು, ಗ್ರಾಹಕ ಸೇವೆ ಜೊತೆ ಮಾತನಾಡಲು ಪ್ರಯತ್ನಿಸಿದರೆ, ಕಸ್ಟಮರ್​ ಕೇರ್​ ಕರೆಯನ್ನು ಕಡಿತಗೊಳಿಸುತ್ತಿದ್ದಾರೆ ಎಂದು ಬಳಕೆದಾರರು ಎಕ್ಸ್​ ಖಾತೆಗಳಲ್ಲಿ ಪೋಸ್ಟ್​ ಹಂಚಿಕೊಂಡಿದ್ದಾರೆ. ಕೆಲವರು ರಿಲಯನ್ಸ್ ಜಿಯೋವನ್ನು ಗೇಲಿ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಮೀಮ್‌ಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಇನ್ನು ಕೆಲವರು ಇತರ ಟೆಲಿಕಾಂ ಕಂಪನಿಗಳ ಹಾಟ್‌ಸ್ಪಾಟ್ ಸೇವೆಗಳು ಉತ್ತಮವಾಗಿವೆ ಎಂದು ವ್ಯಂಗ್ಯಭರಿತ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ.

ಇದನ್ನೂ ಓದಿ: ಫ್ರೀ ಫ್ರೀ ಫ್ರೀ... ಜಿಯೋ ಫೈಬರ್ - ಏರ್ ಫೈಬರ್ ಗ್ರಾಹಕರಿಗೆ ಭರ್ಜರಿ ಆಫರ್ - Jio new plan

ETV Bharat Logo

Copyright © 2025 Ushodaya Enterprises Pvt. Ltd., All Rights Reserved.