Redmi Note 14 5G Series: ಸ್ಮಾರ್ಟ್ಫೋನ್ ಪ್ರಿಯರಿಗೆ ಸಿಹಿ ಸುದ್ದಿ. ಮುಂದಿನ ದಿನಗಳಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಹೊಸ - ಹೊಸ ಮೊಬೈಲ್‌ಗಳು ರಾರಾಜಿಸಲಿವೆ. ಪ್ರಮುಖ ಮೊಬೈಲ್ ಉತ್ಪಾದನಾ ಕಂಪನಿ Xiaomi ಯ ಉಪ-ಬ್ರಾಂಡ್ Redmi Note 14 5G ಸೀರಿಸ್ ಪ್ರಾರಂಭಿಸಲಾಗುವುದು ಎಂದು ಕಂಪನಿಯು ಅಧಿಕೃತವಾಗಿ ಘೋಷಿಸಿದೆ. ಈ ಮಟ್ಟಿಗೆ, Xiaomi ಇಂಡಿಯಾ ಬುಧವಾರ ಮಧ್ಯರಾತ್ರಿ 'For the Worthy' ಇನ್ಸ್ಟಾಗ್ರಾಂ ಪೇಜ್ನಲ್ಲಿ ಟೀಸರ್ ಬಿಡುಗಡೆ ಮಾಡಿದೆ.
ಮೂರು ಸ್ಮಾರ್ಟ್ ಫೋನ್ ಬಿಡುಗಡೆ?: ಸೆಪ್ಟೆಂಬರ್ ತಿಂಗಳಿನಲ್ಲಿ ಚೀನಾ ಮಾರುಕಟ್ಟೆಯಲ್ಲಿ 'ರೆಡ್ಮಿ ನೋಟ್ 14', 'ರೆಡ್ಮಿ ನೋಟ್ 14 ಪ್ರೊ' ಮತ್ತು 'ರೆಡ್ಮಿ ನೋಟ್ 14 ಪ್ರೊ ಪ್ಲಸ್' ಮೊಬೈಲ್‌ಗಳು ಬಿಡುಗಡೆಯಾಗಿವೆ. ಇದರೊಂದಿಗೆ ಈ ಸೀರಿಸ್ನ ಮೂರು ಸ್ಮಾರ್ಟ್‌ಫೋನ್‌ಗಳು ಭಾರತದಲ್ಲೂ ಬಿಡುಗಡೆಯಾಗುವ ಸಾಧ್ಯತೆಯಿದೆ. ಚೈನೀಸ್ ಆವೃತ್ತಿಗೆ ಹೋಲಿಸಿದರೆ ಕಂಪನಿಯು ಈ ಫೋನ್ಗಳ ಫೀಚರ್ಗಳಲ್ಲಿ ಸ್ವಲ್ಪ ಬದಲಾವಣೆಗಳೊಂದಿಗೆ ನೋಟ್ 14 ಸೀರಿಸ್ ಅನ್ನು ಭಾರತದಲ್ಲಿ ಪ್ರಾರಂಭಿಸಬಹುದು. ಆದರೆ ಫೋನ್‌ನ ಡಿಸೈನ್ ಅನ್ನು ಹಾಗೆಯೇ ಇಡುವ ಸಾಧ್ಯತೆಯಿದೆ.
ರೆಡ್ಮಿ ನೋಟ್ 14 5ಜಿ ಸೀರಿಸ್ ವಿಶೇಷತೆಗಳು: ಮಾಹಿತಿಯ ಪ್ರಕಾರ, 'ರೆಡ್ಮಿ ನೋಟ್ 14' ಸೀರಿಸ್ನ ಎಲ್ಲಾ ಮಾದರಿಗಳು 6.67-ಇಂಚಿನ OLED ಸ್ಕ್ರೀನ್, 120Hz ರಿಫ್ರೆಶ್ ರೇಟ್ನೊಂದಿಗೆ ಬರುತ್ತವೆ. Snapdragon 7s Gen 3 ಮತ್ತು ಡೈಮೆನ್ಶನ್ 7300 ಅಲ್ಟ್ರಾ ಪ್ರೊಸೆಸರ್‌ಗಳನ್ನು ಕ್ರಮವಾಗಿ 'ರೆಡ್ಮಿ ನೋಟ್ 14 ಪ್ರೋ' ಮತ್ತು 'ರೆಡ್ಮಿ ನೋಟ್ 14 ಪ್ರೋ ಪ್ಲಸ್' ರೂಪಾಂತರಗಳಲ್ಲಿ ನೀಡಬಹುದು. ಆದರೆ, ಮೂಲ ಮಾದರಿಯು ಮೀಡಿಯಾ ಟೆಕ್ ಡೈಮೆನ್ಶನ್ 7025 ಅಲ್ಟ್ರಾ ಪ್ರೊಸೆಸರ್ ಹೊಂದಿದೆ.
ರೆಡ್ಮಿ ನೋಟ್ 14 ಪ್ರೋ ಮತ್ತು ರೆಡ್ಮಿ ನೋಟ್ 14 ಪ್ರೋ ಪ್ಲಸ್ ಮೊಬೈಲ್‌ಗಳು ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿರಬಹುದು. ಇದು 50 - ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಮತ್ತು 8-ಮೆಗಾಪಿಕ್ಸೆಲ್ ಅಲ್ಟ್ರಾವೈಡ್ ಕ್ಯಾಮೆರಾ ಹೊಂದಿದೆ. ರೆಡ್ಮಿ ನೋಟ್ 14 ಪ್ರೋ ಪ್ಲಸ್ ರೂಪಾಂತರವು 50-ಮೆಗಾಪಿಕ್ಸೆಲ್ ಪೋರ್ಟ್ರೇಟ್ ಟೆಲಿಫೋಟೋ ಕ್ಯಾಮೆರಾವನ್ನು ಸಹ ಹೊಂದಿದೆ. 'ಪ್ರೊ' ಮಾದರಿಯು 2-ಮೆಗಾಪಿಕ್ಸೆಲ್ ಮ್ಯಾಕ್ರೋ ಕ್ಯಾಮೆರಾವನ್ನು ಹೊಂದಿರುವ ಸಾಧ್ಯತೆಯಿದೆ. ಡಿಸೆಂಬರ್ 9 ರಂದು ಈ ಸೀರಿಸ್ ಮೊಬೈಲ್‌ಗಳನ್ನು ಬಿಡುಗಡೆ ಮಾಡುವುದಾಗಿ ಕಂಪನಿ ತಿಳಿಸಿದೆ.
ಓದಿ: ವಾಯ್ಸ್ ಮೆಸೇಜ್ ಟ್ರಾನ್ಸ್‌ಸ್ಕ್ರಿಪ್ಟ್: ಮತ್ತೊಂದು ಹೊಸ ಫೀಚರ್ ಪರಿಚಯಿಸಿದ ವಾಟ್ಸ್‌ಆ್ಯಪ್