Women Safety APPs in India: ಈಗಷ್ಟೇ ಮಹಿಳೆಯರು ಅಡುಗೆ ಮನೆಯಿಂದ ಹೊರಬರಲಾರಂಭಿಸಿದ್ದಾರೆ. ಅವರು ಸಹ ಪುರುಷರಂತೆ ವಿವಿಧ ರಂಗಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಆದರೆ, ಕೆಲವರು ರಾತ್ರಿ ಪಾಳಿಯಲ್ಲೂ ಡ್ಯೂಟಿ ಮಾಡಬೇಕಾದ ಸ್ಥಿತಿ ಎದುರಾಗಿದೆ. ಹೀಗಿರುವಾಗ ರಾತ್ರಿ ಹೊತ್ತು ಒಂಟಿಯಾಗಿ ಓಡಾಡುವುದು ಹೆಣ್ಣಿಗೆ, ಹೆಣ್ಣು ಮಕ್ಕಳಿಗೆ ಅಷ್ಟೊಂದು ಸುರಕ್ಷಿತವಲ್ಲ. ಗಲಭೆಗಳ ಸಂದರ್ಭದಲ್ಲಿ ಮತ್ತು ದುಷ್ಕರ್ಮಿಗಳ ದಾಳಿಗಳ ವೇಳೆ ಮಹಿಳೆಯರ ರಕ್ಷಣೆಯನ್ನು ಪ್ರಶ್ನಿಸುತ್ತಿವೆ. ಈ ಆಪ್ಗಳು ನಿಮ್ಮ ಫೋನ್ನಲ್ಲಿ ಇದ್ದರೆ ನೀವು ಎಲ್ಲಿಗೆ ಹೋದರೂ ಸುರಕ್ಷಿತವಾಗಿರುತ್ತೀರಿ ಎನ್ನುತ್ತಾರೆ ತಜ್ಞರು.
ಇತ್ತಿಚೇಗೆ ಬೆಂಗಳೂರಿನಲ್ಲಿ ನಡೆದ ಅತ್ಯಾಚಾರ ಯತ್ನ ಪ್ರಕರಣದಲ್ಲಿ ಸಂತ್ರಸ್ತೆ ಎಸ್‌ಒಎಸ್ ಆಪ್ಷನ್ ಮೂಲಕ ತನನ್ನು ತಾನು ರಕ್ಷಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ತುರ್ತು ಸಂದರ್ಭದಲ್ಲಿ ಆ ಸಂತ್ರೆಸ್ತೆಗೆ ಎಸ್‌ಒಎಸ್ ಆಪ್ಷನ್ ಬಹಳ ಉಪಯುಕ್ತವಾಗಿತ್ತು. ಹೀಗಾಗಿ ಮಹಿಳೆಯರ ರಕ್ಷಣೆಗಾಗಿ ಅಂತಹ ಕೆಲ ಆ್ಯಪ್ಗಳ ವಿವರ ನೀಡಲಾಗಿದೆ.
ಆಪತ್ ಕಾಲದಲ್ಲಿ ಮಹಿಳೆಯರಿಗೆ ಸಹಾಯ ಮಾಡುವ ಅಪ್ಲಿಕೇಶನ್‌ಗಳು ಇವೆ:
- 112 APP: ಈ ಅಪ್ಲಿಕೇಶನ್ ಕೇಂದ್ರ ಗೃಹ ಸಚಿವಾಲಯವು ಅಭಿವೃದ್ಧಿಪಡಿಸಿದೆ. ಈ ಆಪ್ ಮೂಲಕ ಮಹಿಳೆಯರು ತುರ್ತು ಸಂದರ್ಭಗಳಲ್ಲಿ ರಕ್ಷಣೆ ಪಡೆಯಬಹುದು. ತುರ್ತು ಸಂದರ್ಭದಲ್ಲಿ, ಈ ಅಪ್ಲಿಕೇಶನ್ ಹತ್ತಿರದ ಪೊಲೀಸ್ ಠಾಣೆಯನ್ನು ಪತ್ತೆ ಮಾಡುತ್ತದೆ ಮತ್ತು ಅವರಿಗೆ ಮಾಹಿತಿಯನ್ನು ಒದಗಿಸುತ್ತದೆ. ಈ ಮೂಲಕ ಪೊಲೀಸರು ಅಪಾಯದಲ್ಲಿರುವವರಿಗೆ ಕೂಡಲೇ ಸಹಾಯಕ್ಕೆ ಮುಂದಾಗುತ್ತಾರೆ.
- AP POLICE SEVA APP: ಎಪಿ ಪೊಲೀಸ್ ಸೇವಾ ಅಪ್ಲಿಕೇಶನ್ ಸಹಾಯದಿಂದ ನೀವು ತುರ್ತು ಸಂದರ್ಭದಲ್ಲಿ ಎಪಿ ಪೊಲೀಸರನ್ನು ಸಂಪರ್ಕಿಸಬಹುದು. ಈ ಆ್ಯಪ್ ಮೂಲಕ ನಿಮ್ಮಿಂದ ಸಿಗ್ನಲ್ ಬಂದ ತಕ್ಷಣ ಹತ್ತಿರದ ಪೊಲೀಸ್ ಠಾಣೆಯಿಂದ ನಿಮಗೆ ತಕ್ಷಣದ ಸಹಾಯ ದೊರೆಯುತ್ತದೆ. ಇದು ಆಂಧ್ರಪ್ರದೇಶದಲ್ಲಿ ಇರುವಾಗ ಸಹಾಯಕ್ಕೆ ಬರುತ್ತದೆ.
- HAWK EYE APP: ಈ HAWK EYE ಆಪ್ ಅನ್ನು ಪೊಲೀಸರೇ ರಚಿಸಿದ್ದಾರೆ. ಇದು ಮಹಿಳೆಯರು ಅಪಾಯದಲ್ಲಿರುವ ಸಮಯದಲ್ಲಿ ಅವರಿಗೆ ರಕ್ಷಣೆ ನೀಡುತ್ತದೆ. ತುರ್ತು ಸಂದರ್ಭದಲ್ಲಿ, ನಿಮ್ಮ ವಿವರಗಳು ಎಸ್‌ಒಎಸ್ ಬಟನ್ ಒತ್ತುವ ಮೂಲಕ ಹತ್ತಿರದ ಪೊಲೀಸ್ ಠಾಣೆ, ಎಸಿಪಿ, ಡಿಸಿಪಿ, ಪೆಟ್ರೋಲಿಂಗ್ ವ್ಯಾನ್‌ಗೆ ತಲುಪುತ್ತದೆ. ಈ ಅಪ್ಲಿಕೇಶನ್ ಮೂಲಕ, ಅವರು ತಕ್ಷಣವೇ ಆ ಕ್ಷೇತ್ರಕ್ಕೆ ಕಾಲಿಟ್ಟು ನಿಮ್ಮನ್ನು ರಕ್ಷಿಸಬಹುದು.
- RAKSHA APP: ಈ ರಕ್ಷಾ ಆ್ಯಪ್ ಅನ್ನು ಮೊಬೈಲ್ನಲ್ಲಿ ಅಳವಡಿಸಿಕೊಂಡರೆ, ಮಹಿಳೆಯರು ಮತ್ತು ಹುಡುಗಿಯರು ಸ್ವಲ್ಪ ಸುರಕ್ಷಿತವಾಗಿರಬಹುದು. ಏಕೆಂದರೆ ಒಂದೇ ಒಂದು ಬಟನ್ ಕ್ಲಿಕ್ ಮಾಡಿದ್ರೆ ಈ ಅಪ್ಲಿಕೇಶನ್‌ನಲ್ಲಿ ಮೊದಲೇ ಆಯ್ಕೆ ಮಾಡಿದ ಸಂಪರ್ಕಗಳಿಗೆ ಸ್ಥಳ ಸೇರಿದಂತೆ ಎಲ್ಲ ವಿವರಗಳು ಹೋಗುತ್ತವೆ. ಇಂಟರ್ನೆಟ್ ಇಲ್ಲದಿದ್ದರೂ, ವಾಲ್ಯೂಮ್ ಬಟನ್ ಅನ್ನು 3 ಬಾರಿ ಒತ್ತಿದ ನಂತರ, ಆಯ್ಕೆ ಮಾಡಿದ ಸಂಪರ್ಕಗಳಿಗೆ ವಿವರಗಳು ತಲುಪುತ್ತವೆ.
- B-SAFE APP: ಈ ಬಿ-ಸೇಫ್ ಆ್ಯಪ್ ಮೂಲಕ ನೀವು ಫೇಕ್ ಕಾಲ್ ಮಾಡಿ ಮಾತನಾಡುವಂತೆ ನಟಿಸಬಹುದು. ಇದರಲ್ಲಿ ಫೇಕ್ ಕಾಲ್ ಫೀಚರ್ ಆಯ್ಕೆ ಇರುವುದರಿಂದ ತುರ್ತು ಸಂದರ್ಭದಲ್ಲಿ ಕರೆ ಮಾಡುವಂತೆ ನಟಿಸಿ ಅಪಾಯದಿಂದ ಪಾರಾಗಬಹುದು. ಇದಲ್ಲದೇ ಮೊಬೈಲ್ ತೆಗೆಯಲು ಸಾಧ್ಯವಾಗದ ಸಂದರ್ಭಗಳಲ್ಲಿ ವಾಯ್ಸ್ ಕಮಾಂಡ್ ಮೂಲಕವೂ ಈ ಆಪ್ಗೆ ಕಮಾಂಡ್ ನೀಡಬಹುದು. ಈ ಅಪ್ಲಿಕೇಶನ್ ಸ್ಥಳ, ಆಡಿಯೋ ಮತ್ತು ವಿಡಿಯೋದಂತಹ ವಿವರಗಳನ್ನು ಸೆಕೆಂಡುಗಳಲ್ಲಿ ನಿಮ್ಮ ಆಪ್ತರಿಗೆ ಒದಗಿಸುತ್ತದೆ.
- MY SAFETIPIN APP: ಈ ಸೇಫ್ಟಿ ಪಿನ್ ಅಪ್ಲಿಕೇಶನ್ ನಿಮಗೆ ಸುರಕ್ಷಿತವಾಗಿರಲು ಸಹಾಯ ಮಾಡುತ್ತದೆ. ಅಪಾಯಕಾರಿ ಪ್ರದೇಶವನ್ನು ಪ್ರವೇಶಿಸುವಾಗ ಇದು ಅಧಿಸೂಚನೆಯನ್ನು ಕಳುಹಿಸುತ್ತದೆ. ಸಾರ್ವಜನಿಕ ಸಾರಿಗೆ, ಸಾರ್ವಜನಿಕ ಸ್ಥಳಗಳು, ಭದ್ರತೆ ಸೇರಿದಂತೆ ಮುಂತಾದ ವಿವರಗಳನ್ನು ಒದಗಿಸುತ್ತದೆ.
- CHILLA APP: ನೀವು ಹಠಾತ್ ದಾಳಿಗೊಳಗಾದರೆ ಈ ಅಪ್ಲಿಕೇಶನ್ ತಕ್ಷಣವೇ ಪತ್ತೆ ಮಾಡುತ್ತದೆ. ಇದು ನಿಮ್ಮ ಧ್ವನಿಯನ್ನು ಗುರುತಿಸುತ್ತದೆ ಮತ್ತು ತಕ್ಷಣವೇ ಪ್ರತಿಕ್ರಿಯಿಸುತ್ತದೆ. ಆಗ ನಿಮ್ಮ ಪ್ರೀತಿಪಾತ್ರರಿಗೆ ಎಚ್ಚರಿಕೆ ಸಂದೇಶವನ್ನು ನೀಡುತ್ತದೆ. ಅಲ್ಲದೇ, ನೀವು ಪವರ್ ಬಟನ್ ಅನ್ನು 5 ಬಾರಿ ಒತ್ತಿದರೆ, ನಿಮ್ಮ ಸ್ಥಳ ಸೇರಿದಂತೆ ಎಲ್ಲಾ ವಿವರಗಳು ನಿಮ್ಮ ಆಪ್ತರಿಗೆ ತಲುಪುತ್ತವೆ.
- SMART24x7 APP: ಈ ಅಪ್ಲಿಕೇಶನ್ ತುರ್ತು ಸಂದರ್ಭಗಳಲ್ಲಿ ಆಡಿಯೋ, ವಿಡಿಯೋ ಮತ್ತು ಫೋಟೋಗಳನ್ನು ರೆಕಾರ್ಡ್ ಮಾಡುತ್ತದೆ ಮತ್ತು ಕಳುಹಿಸುತ್ತದೆ. ತುರ್ತು ಬಟನ್ ಅನ್ನು ಒತ್ತುವುದರಿಂದ ನಿಮ್ಮ ಎಲ್ಲಾ ವಿವರಗಳನ್ನು ನಿಮ್ಮ ಪೂರ್ವ-ಆಯ್ಕೆ ಮಾಡಿದ ಸಂಪರ್ಕಗಳಿಗೆ ಕಳುಹಿಸಲಾಗುತ್ತದೆ.