OnePlus Community Sale: ಪ್ರಮುಖ ಸ್ಮಾರ್ಟ್‌ಫೋನ್ ತಯಾರಕ ಒನ್‌ಪ್ಲಸ್ ವರ್ಷಾಂತ್ಯದ ಕಮ್ಯೂನಿಟಿ ಸೇಲ್ಘೋಷಿಸಿದೆ. ಈ ಸೇಲ್‌ನಲ್ಲಿ ಕಂಪನಿಯು ತನ್ನ ಆಯ್ದ ಫೋನ್‌ಗಳು, ಇಯರ್‌ಬಡ್‌ಗಳು, ಟ್ಯಾಬ್ಲೆಟ್‌ಗಳು ಮತ್ತು ಇತರ ಉತ್ಪನ್ನಗಳ ಮೇಲೆ ಆಕರ್ಷಕ ಕೊಡುಗೆಗಳನ್ನು ನೀಡುತ್ತಿದೆ. ಇದು ಬ್ಯಾಂಕ್ ರಿಯಾಯಿತಿಗಳು ಮತ್ತು ನೋ-ಕಾಸ್ಟ್ ಇಎಂಐ ಸೌಲಭ್ಯವನ್ನು ಸಹ ನೀಡುತ್ತದೆ. ಇದರ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ..
ಸ್ಮಾರ್ಟ್‌ಫೋನ್‌ಗಳ ಡೀಲ್ಸ್ ಹೀಗಿವೆ: ಈ ಸೇಲ್‌ನಲ್ಲಿ ಕಂಪನಿಯು 'OnePlus 12' ಮೊಬೈಲ್‌ನಲ್ಲಿ ಭಾರಿ ರಿಯಾಯಿತಿಯನ್ನು ನೀಡುತ್ತಿದೆ. 12GB RAM ಮತ್ತು 256GB ಸ್ಟೋರೇಜ್ ಫೋನ್ ರೂ.64,999 ಬೆಲೆಯಲ್ಲಿ ಬಿಡುಗಡೆ ಮಾಡಲಾಗಿತ್ತು. ಈಗ ಇದರ ಬೆಲೆ ಕೇವಲ 58,999 ರೂ.ಗಳಲ್ಲಿ ಲಭ್ಯವಾಗುತ್ತಿದೆ. ಅಂದ್ರೆ 6 ಸಾವಿರ ರೂ.ಗಳ ರಿಯಾಯಿತಿ ನೀಡಲಾಗುತ್ತಿದೆ. ಮೇಲಾಗಿ ಐಸಿಐಸಿಐ ಬ್ಯಾಂಕ್, ಒನ್ ಕಾರ್ಡ್, ಆರ್ಬಿಎಲ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಕೆದಾರರು ರೂ.7 ಸಾವಿರದವರೆಗೆ ರಿಯಾಯಿತಿ ಪಡೆಯಬಹುದಾಗಿದೆ.
ಮತ್ತೊಂದೆಡೆ, ಕಂಪನಿಯು 'ಒನ್‌ಪ್ಲಸ್ 12 ಆರ್' ಫೋನ್‌ನಲ್ಲಿ ರೂ. 6 ಸಾವಿರ ಮತ್ತು ಬ್ಯಾಂಕ್ ಕಾರ್ಡ್‌ಗಳ ಮೇಲೆ ರೂ. 3 ಸಾವಿರ ಡಿಸ್ಕೌಂಟ್ ನೀಡುವುದಾಗಿ ಕಂಪನಿ ಹೇಳಿದೆ. ಸದ್ಯ ಈ ಫೋನ್ ಆಫರ್ನೊಂದಿಗೆ 35,999 ರೂ.ಗೆ ಲಭ್ಯವಾಗುತ್ತಿದೆ.
ಈ ಸೇಲ್‌ನಲ್ಲಿ ಕಂಪನಿಯು ಇತ್ತೀಚಿನ 'Oneplus Nord 4' ಸ್ಮಾರ್ಟ್‌ಫೋನ್‌ಗಳಲ್ಲಿ ಆಕರ್ಷಕ ಕೊಡುಗೆಗಳನ್ನು ಸಹ ನೀಡುತ್ತಿದೆ. ಈ ಮಾದರಿಯ ಆಯ್ದ ರೂಪಾಂತರಗಳ ಮೇಲೆ ರೂ.3,000 ರಿಯಾಯಿತಿ ಮತ್ತು ರೂ.2,000 ಇನ್‌ಸ್ಟಂಟ್ ಬ್ಯಾಂಕ್ ಡಿಸ್ಕೌಂಟ್ ಸಹ ನೀಡುತ್ತಿದೆ.
ಇವುಗಳೊಂದಿಗೆ ಒನ್‌ಪ್ಲಸ್ 'Nord CE4' ಮತ್ತು 'Nord CE4 Lite' ಮೊಬೈಲ್‌ಗಳ ಮೇಲೆ ರೂ.2 ಸಾವಿರ ರಿಯಾಯಿತಿ ಮತ್ತು ರೂ.1000 ಇನ್‌ಸ್ಟಂಟ್ ಬ್ಯಾಂಕ್ ರಿಯಾಯಿತಿಯನ್ನು ನೀಡುತ್ತಿದೆ. ಇದರೊಂದಿಗೆ ಈ ಮೊಬೈಲ್ ಬೆಲೆ ರೂ.24,999 ರಿಂದ ರೂ.22,999ಕ್ಕೆ ಇಳಿಯಲಿದೆ. ಜೊತೆಗೆ, ನೀವು ಒನ್‌ಪ್ಲಸ್ 'Nord Buds 2R' ಅನ್ನು ಪಡೆಯಬಹುದಾಗಿದೆ.
ಕಂಪನಿಯು ಜಾಗತಿಕವಾಗಿ ಬಿಡುಗಡೆಯಾದ 'ಒನ್‌ಪ್ಲಸ್ ಓಪನ್' ಎಂದು ಕರೆಯಲ್ಪಡುವ ತನ್ನ ಮೊಟ್ಟಮೊದಲ ಫೋಲ್ಡಬಲ್ ಫೋನ್‌ನಲ್ಲಿಯೂ ಸಹ ಅದೇ ಕೊಡುಗೆಯನ್ನು ನೀಡುತ್ತಿದೆ. ಈ ಫೋನ್‌ನ ಬೆಲೆ ರೂ.1,49,999 ಆಗಿದೆ. ಈ ಸೇಲ್‌ನ ಭಾಗವಾಗಿ ನೀಡಲಾಗುವ ರಿಯಾಯಿತಿಯಲ್ಲಿ ನೀವು ಅದನ್ನು ಕೇವಲ ರೂ.1,34,999 ಕ್ಕೆ ಪಡೆಯಬಹುದಾಗಿದೆ. ಅಂದ್ರೆ ಸುಮಾರು 15 ಸಾವಿರ ರೂಪಾಯಿ ಆಫರ್ ದೊರೆಯುತ್ತಿದೆ.
'Oneplus Pad Go' ಟ್ಯಾಬ್ಲೆಟ್‌ನ ಬೆಲೆ ರೂ.37,999 ರಿಂದ ರೂ.27,999 ಕ್ಕೆ ಇಳಿಕೆಯಾಗಿದೆ. ಇವುಗಳ ಹೊರತಾಗಿ, ಈ ಮಾರಾಟವು 'OnePlus Pad 2' ಮತ್ತು 'OnePlus Nord CE4 Lite' ಮೇಲೆ ರೂ.2,000 ರಿಯಾಯಿತಿಯನ್ನು ಹೊಂದಿದೆ. ಹಾಗೆಯೇ ನೀವು OnePlus 'Nord CE4 Lite' ಮೊಬೈಲ್ ಮತ್ತು OnePlus 'Bullets Wireless Z2' ಬ್ಲೂಟೂತ್‌ನಲ್ಲಿ ರೂ.1000 ಇನ್‌ಸ್ಟಂಟ್ ಬ್ಯಾಂಕ್ ರಿಯಾಯಿತಿಯನ್ನು ಸಹ ಪಡೆಯಬಹುದಾಗಿದೆ.
ವಾಚ್, ಬಡ್ಸ್ ಮೇಲೆ ರಿಯಾಯಿತಿ!: ಒನ್‌ಪ್ಲಸ್ ಕಮ್ಯೂನಿಟಿ ಸೇಲ್‌ನ ಭಾಗವಾಗಿ, ಕಂಪನಿಯು ಆಯ್ದ ವಾಚ್‌ಗಳು ಮತ್ತು ಇಯರ್‌ಬಡ್‌ಗಳ ಮೇಲೆ ಉತ್ತಮ ರಿಯಾಯಿತಿಗಳನ್ನು ನೀಡುತ್ತಿದೆ. 'OnePlus Watch 2' ಮತ್ತು 'OnePlus Watch 2R' ಬೆಲೆಗಳು ರೂ.3,000 ವರೆಗೆ ಇಳಿಕೆಯಾಗಿದೆ. ಹೆಚ್ಚುವರಿಯಾಗಿ, ಇನ್‌ಸ್ಟಂಟ್ ಬ್ಯಾಂಕ್ ಡಿಸ್ಕೌಂಟ್ ಕೂಡ 'OnePlus Watch2' ಮೇಲೆ ರೂ.3,000 ಮತ್ತು 'OnePlus Watch2R' ಮೇಲೆ ರೂ.2,000 ರಿಯಾಯಿತಿಯನ್ನು ನೀಡುತ್ತಿದೆ. ಇದರೊಂದಿಗೆ 'ಒನ್‌ಪ್ಲಸ್ ವಾಚ್ 2' ಬೆಲೆ ರೂ.24,999ರಿಂದ ರೂ.20,999ಕ್ಕೆ ಇಳಿಕೆಯಾಗಿದೆ.
ಮತ್ತೊಂದೆಡೆ, OnePlus Buds Pro 3 ರೂ.1,000 ರಿಯಾಯಿತಿಯನ್ನು ನೀಡುತ್ತಿದೆ. ಅಲ್ಲದೇ ಇನ್‌ಸ್ಟಂಟ್ ಬ್ಯಾಂಕ್ ರಿಯಾಯಿತಿ ರೂ.1,000 ದೊಂದಿಗೆ ರೂ.11,999ಕ್ಕೆ ಇಳಿಕೆಯಾಗಿದೆ. 'OnePlus Buds Pro2' ನಲ್ಲಿ ಭಾರೀ ರಿಯಾಯಿತಿಯೊಂದಿಗೆ ನೀವು ಕೇವಲ 7,999 ರೂ.ಗೆ ದೊರೆಯುತ್ತದೆ. ಕಂಪನಿಯು ಇದನ್ನು ರೂ.11,999 ಬೆಲೆಯಲ್ಲಿ ಪರಿಚಯಿಸಿತ್ತು.
ಈ ಒನ್‌ಪ್ಲಸ್ ಸಮುದಾಯ ಮಾರಾಟವು ಡಿಸೆಂಬರ್ 6 ರಿಂದ 17ರ ವರೆಗೆ ಲಭ್ಯವಿರುತ್ತದೆ. ಕಂಪನಿಯ ಅಧಿಕೃತ ವೆಬ್‌ಸೈಟ್, ಅಮೆಜಾನ್, ಫ್ಲಿಪ್‌ಕಾರ್ಟ್, ಮೈಂತ್ರಾ, ರಿಲಯನ್ಸ್ ಡಿಜಿಟಲ್, ಕ್ರೋಮಾ ಮತ್ತು ವಿಜಯ್ ಸೇಲ್ಸ್‌ನಂತಹ ಆನ್‌ಲೈನ್ ಸ್ಟೋರ್‌ಗಳಲ್ಲಿ ಆಫರ್‌ಗಳು ಲಭ್ಯವಿದೆ.
ಓದಿ: ಈಗ ಕಾರು ಖರೀದಿಸುವವರಿಗೆ ಸುವರ್ಣಾವಕಾಶ - ಮುಂದಿನ ವರ್ಷದಿಂದ ಗ್ರಾಹಕರ ಜೇಬಿಗೆ ಕತ್ತರಿ