ETV Bharat / technology

ಪ್ರವಾಹದ ನೀರಿನಲ್ಲಿ ಮಾರಣಾಂತಿಕ ಬ್ಯಾಕ್ಟೀರಿಯಾ, ಬಾಲಕನ ಕಾಲು ಕಟ್: 'ನೆಕ್ರೋಟೈಸಿಂಗ್ ಫ್ಯಾಸಿಟಿಸ್' ರೋಗದ ಬಗ್ಗೆ ಗೊತ್ತೇ? - Necrotizing Fasciitis Disease - NECROTIZING FASCIITIS DISEASE

Necrotizing Fasciitis Disease: 12 ವರ್ಷದ ಬಾಲಕ 'ನೆಕ್ರೋಟೈಸಿಂಗ್ ಫ್ಯಾಸಿಟಿಸ್' ಎಂಬ ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದು, ಕುಟುಂಬ ಸಂಕಷ್ಟದಲ್ಲಿದೆ. ಸಾಮಾನ್ಯವಾಗಿ, ಮಧುಮೇಹ ರೋಗಿಗಳಲ್ಲಿ ಕಂಡುಬರುವ ಈ ರೋಗ ಮಕ್ಕಳಲ್ಲೂ ಕಾಣಿಸಿಕೊಳ್ಳುತ್ತಿರುವುದು ಆತಂಕಕಾರಿ.

NECROTIZING FASCIITIS  BOY CUT LEG  FLOOD WATER  FLESH EATING DISEASE
ನೆಕ್ರೋಟೈಸಿಂಗ್ ಫ್ಯಾಸಿಟಿಸ್ ರೋಗದ ಮಾಹಿತಿ (File Photos and IANS)
author img

By ETV Bharat Tech Team

Published : Sep 26, 2024, 8:32 AM IST

Updated : Sep 26, 2024, 9:38 AM IST

Necrotizing Fasciitis Disease: 12 ವರ್ಷದ ಬಾಲಕ 'ನೆಕ್ರೋಟೈಸಿಂಗ್ ಫ್ಯಾಸಿಟಿಸ್' ಎಂಬ ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದಾನೆ. ಇದರಿಂದಾಗಿ ಆತನ ಕುಟುಂಬ ತತ್ತರಿಸಿದೆ. ಮಧುಮೇಹ ರೋಗಿಗಳಲ್ಲಿ ಹೆಚ್ಚು ಕಂಡುಬರುವ ಈ ರೋಗ ಮಕ್ಕಳನ್ನೂ ಬಾಧಿಸುತ್ತಿರುವುದು ಆತಂಕ ಉಂಟುಮಾಡುತ್ತಿದೆ. ಯಾವುದೇ ಗಾಯಗಳನ್ನು ಮಾಡದೇ ದೇಹದೊಳಗೆ ಅಪಾಯಕಾರಿ ಬ್ಯಾಕ್ಟೀರಿಯಾಗಳು ಪ್ರವೇಶಿಸಿರುವುದನ್ನು ಗಮನಿಸಿ ವೈದ್ಯರಿಗೂ ಅಚ್ಚರಿಯಾಗಿದೆ.

ಇಂಥ ಬ್ಯಾಕ್ಟೀರಿಯಾಗಳು ದೇಹವನ್ನು ಪ್ರವೇಶಿಸಿ ಮಾಂಸ ತಿನ್ನುತ್ತಿದ್ದರಿಂದ ಬಾಲಕನ ಬಲಗಾಲು ತೊಡೆಯವರೆಗೂ ಕತ್ತರಿಸಲ್ಪಟ್ಟಿದೆ. ರೋಗಾಣುಗಳು ಎಡ ಮೊಣಕಾಲಿನ ಕೆಳಗೆ ಶೇ 30ರಷ್ಟು ಅಂಗಾಂಶವನ್ನು ತಿಂದು ಹಾಕಿವೆ. ಈ ರೋಗವನ್ನು 'ನೆಕ್ರೋಟೈಸಿಂಗ್ ಫ್ಯಾಸಿಟಿಸ್' ಎಂದು ಕರೆಯುತ್ತಾರೆ. ಮಾಂಸ ತಿನ್ನುವ ರೋಗ ಎಂಬುದು ಇದರ ಮತ್ತೊಂದು ಹೆಸರು.

ಈ ರೋಗದಿಂದ ಬಳಲುತ್ತಿರುವ ಬಾಲಕ ಇದೀಗ ವಿಜಯವಾಡದ ಕಾರ್ಪೊರೇಟ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಚಿಕಿತ್ಸಾ ವೆಚ್ಚಕ್ಕಾಗಿ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ 10 ಲಕ್ಷ ರೂ. ಮಂಜೂರು ಮಾಡಲಾಗಿದೆ.

ಈ ತಿಂಗಳ ಮೊದಲ ವಾರದಲ್ಲಿ ಎನ್‌ಟಿಆರ್‌ ಜಿಲ್ಲೆಯ ಜಗ್ಗಾಯಪೇಟೆಯ ಬಾಲಕ ಕುಟುಂಬದವರ ಮನೆಗೆ ಪ್ರವಾಹದ ನೀರು ನುಗ್ಗಿತ್ತು. ಮರುದಿನ ನೀರು ಕಡಿಮೆಯಾಗುವವರೆಗೂ ಬಾಲಕ ನೀರಿನಲ್ಲಿಯೇ ಇದ್ದು, ಮನೆಯಲ್ಲಿರುವ ಸಣ್ಣಪುಟ್ಟ ಕೆಲಸಗಳನ್ನೂ ಮಾಡಿದ್ದ. ಅದೇ ರಾತ್ರಿಯಿಂದ ಆತನಲ್ಲಿ ಚಳಿ ಜ್ವರ ಕಾಣಿಸಿಕೊಂಡಿದೆ. ಕೂಡಲೇ ಪೋಷಕರು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದರು. ಆದರೂ ಆರೋಗ್ಯ ಸುಧಾರಿಸದ ಕಾರಣ ಬೇರೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಗ ಡೆಂಗ್ಯೂ ಇರುವುದು ದೃಢಪಟ್ಟಿದೆ. ಅಷ್ಟೇ ಅಲ್ಲದೇ, ಪಾದದಿಂದ ತೊಡೆಯವರೆಗೆ ಊದಿಕೊಂಡಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ವಿಜಯವಾಡದ ಕಾರ್ಪೊರೇಟ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇಷ್ಟರಲ್ಲಿ ಬ್ಯಾಕ್ಟಿರಿಯಾಗಳು ಬಾಲಕನ ಕಾಲಿನ ಮಾಂಸಖಂಡಗಳನ್ನು ತಿಂದಿದ್ದು, ಬಲಗಾಲನ್ನು ತೊಡೆಯವರೆಗೂ ತೆಗೆಯಲಾಗಿದೆ.

ಅಪಾಯಕಾರಿ ರೋಗಾಣುಗಳು: ಇಂಥ ರೋಗಾಣುಗಳು ಹೇಗೆ ದೇಹವನ್ನು ಪ್ರವೇಶಿಸುತ್ತವೆ? ಕಾಲಿನ ಸ್ನಾಯುಗಳು ಅಷ್ಟು ಬೇಗನೆ ಹೇಗೆ ಸೇವಿಸಲ್ಪಟ್ಟವು ಎಂದು ಖಚಿತವಾಗಿ ಹೇಳಲು ವೈದ್ಯರಿಗೂ ಸಾಧ್ಯವಾಗುತ್ತಿಲ್ಲ. ದೇಹದ ಕೊಳೆತ ಭಾಗಗಳಿಂದ ತೆಗೆದ ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಿದಾಗ ಇ-ಕೋಲಿ ಮತ್ತು ಕ್ಲೆಬ್ಸಿಯೆಲ್ಲಾ ಎಂಬ ರೋಗಾಣುಗಳು ದೇಹ ಪ್ರವೇಶಿಸಿರುವುದು ಗೊತ್ತಾಗಿದೆ ಎಂದು ಬಾಲಕನಿಗೆ ಚಿಕಿತ್ಸೆ ನೀಡುತ್ತಿರುವ ಅಂಕುರಾ ಆಸ್ಪತ್ರೆಯ ಮಕ್ಕಳ ತಜ್ಞರಾದ ಡಾ.ವರುಣ್ ಮತ್ತು ಡಾ.ರವಿ ತಿಳಿಸಿದ್ದಾರೆ.

ಈ ಕೀಟಗಳು ಅಪಾಯಕಾರಿ ಜಾತಿಗಳನ್ನೂ ಒಳಗೊಂಡಿವೆ. ಅವು ದೇಹದೊಳಗೆ ಪ್ರವೇಶಿಸುತ್ತವೆ. ಇದಾದ ಬಳಿಕ ಕಾಲುಗಳು ಊದಿಕೊಳ್ಳುತ್ತವೆ. ಕೊಳಚೆ ನೀರು ಪ್ರವಾಹದ ನೀರಿಗೆ ಸೇರಿದಾಗ ಬ್ಯಾಕ್ಟೀರಿಯಾಗಳ ಹರಡುವಿಕೆ ಹೆಚ್ಚು. ಅಂಥ ಸಮಯದಲ್ಲಿ ಬ್ಯಾಕ್ಟೀರಿಯಾ ದೇಹವನ್ನು ಪ್ರವೇಶಿಸಬಹುದು. ಬಾಲಕ ಜ್ವರದಿಂದ ಬಳಲುತ್ತಿದ್ದಾಗ ಪೋಷಕರು ಸ್ಥಳೀಯ ಆರ್‌ಎಂಪಿಗೆ ತೋರಿಸಿದ್ದರು. ಅಲ್ಲಿ ಪೃಷ್ಠಕ್ಕೆ ಆ್ಯಂಟಿಬಯೋಟಿಕ್ ಮತ್ತು ಸ್ಟಿರಾಯ್ಡ್ ಚುಚ್ಚುಮದ್ದು ನೀಡಲಾಗಿದೆ. ಇದನ್ನು ಮಾಡಬಾರದು. ಕಾಲುಗಳ ಊತವನ್ನು ಗಮನಿಸಿದ ನಂತರ ನೀವು ತಕ್ಷಣ ಎಚ್ಚೆತ್ತುಕೊಳ್ಳಬೇಕಾಗಿತ್ತು. ಬಾಲಕ ಸದ್ಯ ಐಸಿಯುನಲ್ಲಿ ಚೇತರಿಸಿಕೊಳ್ಳುತ್ತಿದ್ದಾನೆ. ಸಂಪೂರ್ಣವಾಗಿ ಚೇತರಿಸಿಕೊಳ್ಳಲು ಎರಡರಿಂದ ಮೂರು ತಿಂಗಳು ಬೇಕಾಗುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ.

ನೆಕ್ರೋಟೈಸಿಂಗ್ ಫ್ಯಾಸಿಟಿಸ್ ಎಂದರೇನು?: ಮಾಂಸ ತಿನ್ನುವ ಬ್ಯಾಕ್ಟೀರಿಯಾಗಳು ಮೊದಲು ರಕ್ತನಾಳಗಳ ಮೇಲೆ ದಾಳಿ ಮಾಡುವುದರಿಂದ ಥ್ರಂಬೋಸಿಸ್ ಉಂಟಾಗುತ್ತದೆ. ಇದು ಅಂಗಾಂಶಗಳು ಮತ್ತು ಸ್ನಾಯುಗಳಿಗೆ ರಕ್ತ ಪೂರೈಕೆಗೆ ಅಡಚಣೆ ಉಂಟುಮಾಡುತ್ತವೆ. ಅಂತಿಮವಾಗಿ, ರಕ್ತ ಪೂರೈಕೆಯನ್ನು ಕಡಿತಗೊಳಿಸುತ್ತದೆ ಎಂದು ವೈದ್ಯರು ಹೇಳಿದ್ದಾರೆ. ಈ ಬ್ಯಾಕ್ಟೀರಿಯಾದ ಸೋಂಕು ಉರಿಯೂತವನ್ನು ಪ್ರಚೋದಿಸುತ್ತದೆ. ಜೊತೆಗೆ ಅಂಗಾಂಶಗಳಿಗೆ ಆಮ್ಲಜನಕ, ರಕ್ತ ಪೂರೈಸುವ ಕ್ಯಾಪಿಲ್ಲರಿಗಳನ್ನು ಸಂಕುಚಿತಗೊಳಿಸುತ್ತದೆ. ಇದರಿಂದ ಜೀವಕೋಶದ ಸಾವು, ಅಂಗಾಂಶ ಹಾನಿ ಅಥವಾ ನೈಕ್ರೋಸಿಸ್​ಗೆ ಕಾರಣವಾಗುತ್ತದೆ. ಇದು ಸ್ನಾಯುಗಳನ್ನೂ ಒಳಗೊಳ್ಳಬಹುದು ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.

ದೇಹದಲ್ಲಿ ವೇಗವಾಗಿ ಹರಡುವ ಸೋಂಕು: ನೆಕ್ರೋಟೈಸಿಂಗ್ ಫ್ಯಾಸಿಟಿಸ್ ದೇಹದಲ್ಲಿ ವೇಗವಾಗಿ ಹರಡುವ ಅಪರೂಪದ ಸೋಂಕು. ಸಕಾಲದಲ್ಲಿ ಮತ್ತು ಆರಂಭಿಕ ಚಿಕಿತ್ಸೆ ಪಡೆಯದಿದ್ದರೆ ಇದು ಸಾವಿಗೂ ಕಾರಣವಾಗಬಹುದು. ನೆಕ್ರೋಟೈಸಿಂಗ್ ಫ್ಯಾಸಿಟಿಸ್ ರಕ್ತನಾಳಗಳ ಮೇಲೆ ದಾಳಿ ಮಾಡುತ್ತದೆ. ಮಾಂಸ ತಿನ್ನುವ ಬ್ಯಾಕ್ಟೀರಿಯಾಗಳು ತುಂಬಾ ತೀವ್ರವಾಗಿದ್ದು, ಅವು ದೇಹಕ್ಕೆ ರಕ್ತ ಪೂರೈಕೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸುತ್ತವೆ. 2022ರ ವರದಿಗಳ ಪ್ರಕಾರ, ಅಮೆರಿಕದಲ್ಲಿ ಪ್ರತೀ ವರ್ಷ ಮತ್ತು ವಾರ್ಷಿಕವಾಗಿ 600ರಿಂದ 700 ನೆಕ್ರೋಟೈಸಿಂಗ್ ಫ್ಯಾಸಿಟಿಸ್ ಪ್ರಕರಣಗಳಿಗೆ ಚಿಕಿತ್ಸೆ ನೀಡಲಾಗುತ್ತದೆ. ಈ ಪೈಕಿ ಶೇ.25ರಿಂದ 30ರಷ್ಟು ಪ್ರಕರಣಗಳಲ್ಲಿ ರೋಗಿ ಸಾವನ್ನಪ್ಪುತ್ತಾನೆ. ಈ ಸೋಂಕು ಮಕ್ಕಳಲ್ಲಿ ಅಪರೂಪವಾಗಿ ಸಂಭವಿಸುತ್ತದೆ ಎಂದೂ ಸಹ ವೈದ್ಯರು ಬಹಿರಂಗಪಡಿಸಿದ್ದಾರೆ.

ಇದನ್ನೂ ಓದಿ: 'ಸುಸೈಡ್​ ಕ್ಯಾಪ್ಸುಲ್‌'ನಲ್ಲಿ ವ್ಯಕ್ತಿ ಆತ್ಮಹತ್ಯೆ; ಸ್ವಿಟ್ಜರ್ಲೆಂಡ್​ನಲ್ಲಿ ನಡೆದ ಘಟನೆಯಿಂದ ಜಗತ್ತಿನಲ್ಲಿ ಸಂಚಲನ! - Suicide Capsule

Last Updated : Sep 26, 2024, 9:38 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.