ನವದೆಹಲಿ: ಮಹಿಳೆ ಮನೆಯಿಂದ ಹೊರಟ ಕ್ಷಣದಿಂದ ಮತ್ತೆ ಮನೆ ಸೇರುವ ತನಕ ಮನದ ಮೂಲೆಯಲ್ಲೆಲ್ಲೋ ಭಯ ಅವಿತು ಕುಳಿತಿರುತ್ತದೆ. ಕುಟುಂಬಸ್ಥರಲ್ಲೂ ಈ ಆತಂಕ ಸಹಜವೇ. ಆಕೆ ನಿಗದಿತ ಸಮಯಕ್ಕೆ ಮನೆಗೆ ಆಗಮಿಸದೇ ಹೋದರೆ ಕಳವಳ ಹೆಚ್ಚುತ್ತದೆ. ಈ ಹಿನ್ನೆಲೆಯಲ್ಲಿ ಮಹಿಳೆಯರು ಮುಂಜಾಗ್ರತಾ ಕ್ರಮವಾಗಿ ತಮ್ಮ ಫೋನ್ಗಳಲ್ಲಿ ಸುರಕ್ಷತಾ ಆ್ಯಪ್ ಅಳವಡಿಸಿಕೊಳ್ಳುವುದು ಉತ್ತಮ. ಇದರಿಂದ ಸಂಭಾವ್ಯ ಆಪತ್ತಿನಿಂದ ಪಾರಾಗಬಹುದು.
ಇಂದಿನ ಡಿಜಿಟಲ್ ಜಗತ್ತಿನಲ್ಲಿ ಮಹಿಳೆಯರು ತಮ್ಮ ಮೊಬೈಲ್ನಲ್ಲಿ 'ಮೈ ಸೈಫ್ಟಿಪಿನ್ ಆ್ಯಪ್' (My Safetipin app) ಹೊಂದಿರುವುದು ಅವಶ್ಯಕ. ಗೂಗಲ್ ಫ್ಲೇ ಸ್ಟೋರ್ನಲ್ಲಿ ಆ್ಯಪ್ ಲಭ್ಯವಿದೆ. My Safetypin ಅಪ್ಲಿಕೇಶನ್ ವಿವಿಧ ಪ್ರದೇಶಗಳಲ್ಲಿ ಸುರಕ್ಷಿತ ಮತ್ತು ಅಸುರಕ್ಷಿತ ಸ್ಥಳಗಳ ಬಗ್ಗೆ ಮಾಹಿತಿ ಒದಗಿಸುತ್ತದೆ. ಅಷ್ಟೇ ಅಲ್ಲ, ಜನನಿಬಿಡ ಪ್ರದೇಶಗಳಲ್ಲಿ ಅವರ ರಕ್ಷಣೆಗೆ ಸಹಾಯ ಮಾಡುತ್ತದೆ.
2013ರಲ್ಲಿ ಮಹಿಳಾ ಹಕ್ಕುಗಳ ಕಾರ್ಯಕರ್ತೆ ಕಲ್ಪನಾ ವಿಶ್ವನಾಥ್ ಮತ್ತು ಆಶಿಶ್ ಬಸು ಜಂಟಿಯಾಗಿ ಮೈಸೆಪ್ಟಿಪಿನ್ ಅಪ್ಲಿಕೇಶನ್ ಅಭಿವೃದ್ಧಿಪಡಿಸಿದ್ದಾರೆ.
ಆ್ಯಪ್‌ಗೆ ಲಾಗಿನ್ ಆಗುವುದು ಹೇಗೆ?: ಪ್ಲೇ ಸ್ಟೋರ್‌ನಿಂದ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿದ ನಂತರ ಅದು ಸ್ಥಳದ ವಿವರ ಕೇಳುತ್ತದೆ. ಹೆಸರು ಮತ್ತು ಫೋನ್ ಸಂಖ್ಯೆಯನ್ನು ಒದಗಿಸಿ. ನಮೂದಿಸಿದ ಫೋನ್ ನಂಬರ್ಗೆ ಒಟಿಪಿ ಕಳುಹಿಸಲಾಗುತ್ತದೆ. ನೀವು ಅದರ ಮೂಲಕ ಲಾಗ್ ಇನ್ ಮಾಡಬಹುದು.
ಗೊತ್ತಿಲ್ಲದ ಸ್ಥಳಗಳಿಗೆ ಭೇಟಿ ನೀಡಿದಾಗ, ರಾತ್ರಿ ಒಬ್ಬಂಟಿಯಾಗಿ ನಡೆದು ಹೋಗುವಾಗ ಭಯ ಎದುರಾದರೆ, ಈ ಅಪ್ಲಿಕೇಷನ್ ನಿಮ್ಮವರಿಗೆ ನೀವು ಎಲ್ಲಿದ್ದೀರಾ ಎಂದು ಟ್ರ್ಯಾಕ್ ಮಾಡಲು ಸಹಾಯ ಮಾಡುತ್ತದೆ.
ಅಪ್ಲಿಕೇಶನ್‌ಗೆ ಲಾಗ್ ಇನ್ ಆಗುವಾಗ, ಐದು ಜನರ ಫೋನ್ ಸಂಖ್ಯೆ ಒದಗಿಸಬೇಕಾಗಿದೆ. ಇದರಿಂದ ಅವರು ನಿಮ್ಮ ಕಷ್ಟದ ಸಮಯಕ್ಕೆ ಲಭ್ಯವಿದ್ದು, ನೀವು ಎಲ್ಲಿದ್ದೀರಿ ಎಂದು ತಿಳಿದು ರಕ್ಷಿಸಲು ಸಾಧ್ಯವಾಗುತ್ತದೆ.
ಆ್ಯಪ್ ಅನುಕೂಲಗಳು: ಬಳಕೆದಾರರು ಯಾವುದಾದರೂ ಸ್ಥಳಕ್ಕೆ ಹೋದಾಗ ರೇಟಿಂಗ್ ರೂಪದಲ್ಲಿ ಆ ಸ್ಥಳ ಎಷ್ಟು ಸುರಕ್ಷಿತವಾಗಿದೆ ಎಂಬುದನ್ನು ಹೇಳುತ್ತದೆ. ಅಲ್ಲದೆ, ಈ ಅಪ್ಲಿಕೇಶನ್ ಮೂಲಕ ಸಂದೇಶಗಳು ಯಾವಾಗಲೂ ನಿಮ್ಮ ಕುಟುಂಬ ಸದಸ್ಯರಿಗೆ ಹೋಗುತ್ತವೆ. ಪ್ರಯಾಣ ಮಾಡುವಾಗ ಅಸುರಕ್ಷತೆ ಕಾಡಿದರೆ, ಅಪ್ಲಿಕೇಶನ್ ಆನ್ ಮಾಡಿದರೆ, ನಮ್ಮನ್ನು ರಕ್ಷಿಸುವವರಿಗೆ ಸಂದೇಶ ತಲುಪುತ್ತದೆ. ಇದಕ್ಕಾಗಿ ಫೈಂಡ್ ಸಪೋರ್ಟ್ ಆಯ್ಕೆ ಆ್ಯಪ್‌ನಲ್ಲಿದೆ.
ಕ್ಯಾಬ್‌ಗಳು ಮತ್ತು ಬಸ್‌ಗಳಲ್ಲಿ ಸಂಚರಿಸುವಾಗ ನಿಮ್ಮವರಿಗೆ ನಿಮ್ಮನ್ನು ಟ್ರ್ಯಾಕ್ ಮಾಡಲು ನೆರವಾಗುತ್ತದೆ. ಇದರ ಜೊತೆಗೆ ಹೊಸ ಸ್ಥಳಗಳಿಗೆ ಹೋದರೆ ಆ್ಯಪ್‌ನಲ್ಲಿ ನೀಡುತ್ತಿರುವ ಸೌಲಭ್ಯಗಳ ಬಗ್ಗೆ ತಿಳಿದುಕೊಳ್ಳಬಹುದು. ಸಂಚಾರ ದಟ್ಟಣೆ, ಬಸ್ ನಿಲ್ದಾಣ, ರೈಲು ನಿಲ್ದಾಣ, ಪೊಲೀಸ್ ಠಾಣೆ, ಆಸ್ಪತ್ರೆ ಎಷ್ಟು ದೂರದಲ್ಲಿದೆ ಎಂಬೆಲ್ಲ ಮಾಹಿತಿಯನ್ನೂ ಸುಲಭವಾಗಿ ತಿಳಿದುಕೊಳ್ಳಬಹುದು.
ಆ್ಯಪ್ ಬಳಸುವ ವ್ಯಕ್ತಿ ನಾಪತ್ತೆಯಾದರೆ, ಅವರ ಸ್ಥಳವನ್ನು ಸುಲಭವಾಗಿ ಪತ್ತೆ ಹಚ್ಚಬಹುದು. ಅಲ್ಲದೆ, ನಾವು ಅಸುರಕ್ಷಿತ ಸ್ಥಳದಲ್ಲಿದ್ದರೆ, ಸ್ಥಳದ ಕುರಿತು ನೋಂದಾಯಿಸಲಾದ ಸಂಖ್ಯೆಗೆ ನೋಟಿಫಿಕೇಷನ್ ಹೋಗುತ್ತದೆ. ಹೀಗಾಗಿ ಮಹಿಳೆಯರು ತಮ್ಮ ಸುರಕ್ಷತೆಯ ದೃಷ್ಟಿಯಲ್ಲಿ ಈ ಆ್ಯಪ್ ಹೊಂದುವುದು ಒಳ್ಳೆಯದು.
ಇದನ್ನೂ ಓದಿ: ಹುಡುಗಿಯರೇ.. ಈ ಕೋರ್ಸ್ ಮಾಡಿ ನೋಡಿ.. ನಿಮ್ಮ ಭವಿಷ್ಯ ಸೂಪರ್ ಆಗಿರುತ್ತೆ: ಇಶಾ ಅಂಬಾನಿ ನೀಡಿದರು ಒಂದೊಳ್ಳೆ ಸಲಹೆ