ETV Bharat / technology

ಫೆಬ್ರವರಿಯಲ್ಲಿ ಫೇಸ್​ಬುಕ್​ & ಇನ್​ಸ್ಟಾದಲ್ಲಿನ 18 ಮಿಲಿಯನ್ ಪೋಸ್ಟ್​ ತೆಗೆದು ಹಾಕಿದ ಮೆಟಾ - Meta - META

ಫೆಬ್ರವರಿಯಲ್ಲಿ ಫೇಸ್​ಬುಕ್ ಮತ್ತು ಇನ್​ಸ್ಟಾಗ್ರಾಮ್​ನಲ್ಲಿನ 18 ಮಿಲಿಯನ್​ ಪೋಸ್ಟ್​ಗಳನ್ನು ತೆಗೆದು ಹಾಕಲಾಗಿದೆ ಎಂದು ಮೆಟಾ ತಿಳಿಸಿದೆ.

Meta purged over 18 mn pieces of bad content on FB, Insta in India in February

author img

By ETV Bharat Karnataka Team

Published : Apr 2, 2024, 7:28 PM IST

ನವದೆಹಲಿ: ಭಾರತದಲ್ಲಿ ಫೆಬ್ರವರಿಯಲ್ಲಿ ಫೇಸ್​ಬುಕ್​ನ 13 ನಿಯಮಗಳ ಅಡಿಯಲ್ಲಿ 13.8 ಮಿಲಿಯನ್ ಮತ್ತು ಇನ್​ಸ್ಟಾಗ್ರಾಮ್​ನ 12 ನಿಯಮಗಳ ಅಡಿಯಲ್ಲಿ 4.8 ಮಿಲಿಯನ್ ಆಕ್ಷೇಪಾರ್ಹ ಪೋಸ್ಟ್​ಗಳನ್ನು ತೆಗೆದುಹಾಕಲಾಗಿದೆ ಎಂದು ಮೆಟಾ ಹೇಳಿದೆ. ಫೆಬ್ರವರಿಯಲ್ಲಿ ಫೇಸ್​ಬುಕ್​ಗೆ ಭಾರತೀಯ ಕುಂದುಕೊರತೆ ನಿವಾರಣೆ ವ್ಯವಸ್ಥೆಯ ಮೂಲಕ 18,512 ದೂರುಗಳು ಬಂದಿವೆ ಮತ್ತು ಇದರಲ್ಲಿನ 9,300 ಪ್ರಕರಣಗಳಲ್ಲಿ ಬಳಕೆದಾರರು ತಮ್ಮ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಮಾರ್ಗಗಳನ್ನು ಒದಗಿಸಲಾಗಿದೆ ಎಂದು ಮೆಟಾ ತಿಳಿಸಿದೆ.

ನಿರ್ದಿಷ್ಟ ನಿಯಮಗಳನ್ನು ಉಲ್ಲಂಘಿಸಿದ ಕಂಟೆಂಟ್​ ಬಗ್ಗೆ ದೂರು ನೀಡಲು ಪೂರ್ವ-ಸ್ಥಾಪಿತ ಚಾನೆಲ್​ಗಳು, ಬಳಕೆದಾರರು ತಮ್ಮ ಡೇಟಾವನ್ನು ಡೌನ್​​ಲೋಡ್ ಮಾಡಬಹುದಾದ ಸ್ವಯಂ-ಪರಿಹಾರ ಮಾರ್ಗಗಳು, ಖಾತೆ ಹ್ಯಾಕ್ ಆದಾಗ ಪರಿಹರಿಸುವ ಮಾರ್ಗಗಳು ಇತ್ಯಾದಿಗಳನ್ನು ಇವು ಒಳಗೊಂಡಿವೆ ಎಂದು ಐಟಿ (ಮಧ್ಯವರ್ತಿ ಮಾರ್ಗಸೂಚಿಗಳು ಮತ್ತು ಡಿಜಿಟಲ್ ಮಾಧ್ಯಮ ನೈತಿಕ ಸಂಹಿತೆ) ನಿಯಮಗಳು, 2021 ಕ್ಕೆ ಅನುಸಾರವಾಗಿ ಮೆಟಾ ತನ್ನ ಮಾಸಿಕ ವರದಿಯಲ್ಲಿ ತಿಳಿಸಿದೆ.

"ವಿಶೇಷ ಪರಿಶೀಲನೆಯ ಅಗತ್ಯವಿರುವ ಇತರ 9,212 ದೂರುಗಳ ಪೈಕಿ ನಾವು ನಮ್ಮ ನೀತಿಗಳ ಪ್ರಕಾರ ಕಂಟೆಂಟ್​ ಅನ್ನು ವಿಶ್ಲೇಷಿಸಿದ್ದೇವೆ ಮತ್ತು ಒಟ್ಟು 2,970 ದೂರುಗಳ ಮೇಲೆ ಕ್ರಮ ಕೈಗೊಂಡಿದ್ದೇವೆ. ಉಳಿದ 6,242 ಕುಂದುಕೊರತೆಗಳನ್ನು ಪರಿಶೀಲಿಸಲಾಗಿದೆ, ಆದರೆ ಇವುಗಳ ಮೇಲೆ ಯಾವುದೇ ಕ್ರಮ ಕೈಗೊಂಡಿಲ್ಲ" ಎಂದು ಮೆಟಾ ಹೇಳಿದೆ.

ಇನ್​ಸ್ಟಾಗ್ರಾಮ್​ನ ಭಾರತೀಯ ಕುಂದುಕೊರತೆ ನಿವಾರಣಾ ವ್ಯವಸ್ಥೆಯ ಮೂಲಕ ಕಂಪನಿಗೆ 12,709 ದೂರುಗಳು ಬಂದಿವೆ. ಇವುಗಳ ಪೈಕಿ 5,344 ಪ್ರಕರಣಗಳಲ್ಲಿ ಬಳಕೆದಾರರು ತಮ್ಮ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಸಾಧನಗಳನ್ನು ಒದಗಿಸಲಾಗಿದೆ. ವಿಶೇಷ ಪರಿಶೀಲನೆಯ ಅಗತ್ಯವಿರುವ ಇತರ 7,365 ವರದಿಗಳಲ್ಲಿ ಮೆಟಾ ಕಂಟೆಂಟ್​ ಅನ್ನು ವಿಶ್ಲೇಷಿಸಿದೆ ಮತ್ತು ಒಟ್ಟು 2,470 ದೂರುಗಳ ಮೇಲೆ ಕ್ರಮ ಕೈಗೊಂಡಿದೆ. ಉಳಿದ 4,895 ವರದಿಗಳನ್ನು ಪರಿಶೀಲಿಸಲಾಗಿದೆ, ಆದರೆ ಕ್ರಮ ಕೈಗೊಂಡಿಲ್ಲ ಎಂದು ಮೆಟಾ ಮಾಹಿತಿ ನೀಡಿದೆ.

ಹೊಸ ಐಟಿ ನಿಯಮಗಳು 2021 ರ ಅಡಿಯಲ್ಲಿ 5 ದಶಲಕ್ಷಕ್ಕೂ ಹೆಚ್ಚು ಬಳಕೆದಾರರನ್ನು ಹೊಂದಿರುವ ದೊಡ್ಡ ಡಿಜಿಟಲ್ ಮತ್ತು ಸಾಮಾಜಿಕ ಮಾಧ್ಯಮ ಪ್ಲಾಟ್​ಫಾರ್ಮ್​ಗಳು ಮಾಸಿಕ ಅನುಸರಣೆ ವರದಿಗಳನ್ನು ಪ್ರಕಟಿಸುವುದು ಕಡ್ಡಾಯವಾಗಿದೆ. ಜನವರಿಯಲ್ಲಿ ಮೆಟಾ ಫೇಸ್​ಬುಕ್​ನ 13 ನಿಯಮಗಳ ಅಡಿಯಲ್ಲಿ 17.8 ಮಿಲಿಯನ್ ಮತ್ತು ಇನ್​ಸ್ಟಾಗ್ರಾಮ್​ನ 12 ನಿಯಮಗಳ ಅಡಿಯಲ್ಲಿ 4.8 ಮಿಲಿಯನ್ ಆಕ್ಷೇಪಾರ್ಹ ಪೋಸ್ಟ್​ಗಳನ್ನು ತೆಗೆದುಹಾಕಿತ್ತು.

ಇದನ್ನೂ ಓದಿ : ಜಪಾನ್​ನ ಮೂನ್​ ಲ್ಯಾಂಡರ್ ಮತ್ತೆ ನಿಷ್ಕ್ರಿಯ - Japan Moon Lander

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.