ETV Bharat / technology

ವಾಟ್ಸ್​​ಆ್ಯಪ್​ನಲ್ಲಿ ಮೆಟಾ ಎಐ ತಂತ್ರಾಂಶ: ಅದರ ಬಳಕೆ ಹೇಗೆ, ಲಾಭಗಳೇನು ಗೊತ್ತಾ? - HOW TO USE META AI - HOW TO USE META AI

ವಾಟ್ಸ್​ಆ್ಯಪ್​, ಫೇಸ್​ಬುಕ್​, ಇನ್​ಸ್ಟಾಗ್ರಾಮ್​ನ ಮಾತೃಸಂಸ್ಥೆಯಾದ ಮೆಟಾ ತನ್ನೆಲ್ಲಾ ಬಳಕೆದಾರರಿಗೆ ಎಐ ತಂತ್ರಜ್ಞಾನದ ನೆರವು ನೀಡುತ್ತಿದೆ. ಎಐ ತಂತ್ರಾಂಶವನ್ನು ಈಗ ವಾಟ್ಸ್​ಆ್ಯಪ್​ನಲ್ಲೂ ಪಡೆಯಬಹುದು.

META AI
ಎಐ ತಂತ್ರಾಂಶ (Meta)
author img

By ETV Bharat Karnataka Team

Published : Jul 8, 2024, 5:27 PM IST

HOW TO USE META AI : ಅತಿ ಜನಪ್ರಿಯ ಮೈಕ್ರೋಬ್ಲಾಗಿಂಗ್​ ಆದ ವಾಟ್ಸ್​ಆ್ಯಪ್​ ಹತ್ತು ಹಲವು ವೈಶಿಷ್ಟ್ಯಗಳನ್ನು ನೀಡುತ್ತಾ ಬಂದಿದೆ. WhatsAppನ ಮಾತೃಸಂಸ್ಥೆಯಾದ ಮೆಟಾವು ಬಳಕೆದಾರರನ್ನು ಸೆಳೆಯಲು ಹೊಸ ಅನ್ವೇಷಣೆಯಾದ ಕೃತಕ ಬುದ್ಧಿಮತ್ತೆಯನ್ನೂ (ಎಐ) ಪರಿಚಯಿಸಿದೆ.

ಮೆಟಾ ತನ್ನ ಎಲ್ಲಾ ಪ್ಲಾಟ್‌ಫಾರ್ಮ್‌ಗಳಲ್ಲಿ Llama-3 ಹೆಸರಿನ ಚಾಟ್‌ಬಾಟ್ ವೈಶಿಷ್ಟ್ಯವನ್ನು ಒದಗಿಸಿದೆ. ಅದು ಅಲ್ಗಾರಿದಮ್​ಗೆ ಅನುಗುಣವಾಗಿ ಕೆಲಸ ಮಾಡುತ್ತದೆ. ಬಳಕೆದಾರರು ಕೇಳುವ ಪ್ರಶ್ನೆಗಳು ಮತ್ತು ಇತರ ಕುತೂಹಲಗಳಿಗೆ ಉತ್ತರಿಸುತ್ತದೆ. ಕೋಟ್ಯಂತರ ಬಳಕೆದಾರರನ್ನು ಹೊಂದಿರುವ ವಾಟ್ಸ್​ಆ್ಯಪ್​ ಜೊತೆಗೆ ಫೇಸ್​ಬುಕ್​, ಮೆಸೆಂಜರ್​, ಇನ್​ಸ್ಟಾಗ್ರಾಮ್​ನಲ್ಲೂ ಈ ಎಐ ಚಾಟ್​ಬಾಟ್​ ವೈಶಿಷ್ಟ್ಯವನ್ನು ನೀಡಲಾಗಿದೆ. ಇದು ತುಂಬಾ ಉಪಯುಕ್ತವಾಗಿದೆ ಎಂಬುದು ಹೆಚ್ಚಿನ ಬಳಕೆದಾರರಿಗೆ ಗೊತ್ತಿಲ್ಲ.

ಕ್ಷಣಾರ್ಧದಲ್ಲಿ ವಿವಿಧ ಮಾಹಿತಿಯನ್ನು ನೀಡುವ ಈ ಎಐ ತಂತ್ರಾಂಶವನ್ನ ಕೆಲ ಬಳಕೆದಾರರು ವ್ಯಾಪಕವಾಗಿ ಬಳಸುತ್ತಿದ್ದಾರೆ. ಇದು ನಿಜವಾದ ವರ್ಚುವಲ್ ಸಹಾಯಕನಂತೆ ಕೆಲಸ ಮಾಡುತ್ತದೆ. ನಿಮ್ಮ ವಾಟ್ಸ್​​ಆ್ಯಪ್​ ಖಾತೆಯ ಬಲಭಾಗದಲ್ಲಿ ನೀಲಿ ಬಣ್ಣದಲ್ಲಿನ ವೃತ್ತಾಕಾರವನ್ನು ಕ್ಲಿಕ್​ ಮಾಡಿದಲ್ಲಿ ಎಐ ತೆರೆದುಕೊಳ್ಳುತ್ತದೆ. ಅದರಲ್ಲಿ ನಿಮ್ಮ ಪ್ರಶ್ನೆಯನ್ನು ಟೈಪ್ ಮಾಡಿ ಕಳುಹಿಸಿದಲ್ಲಿ, ಕೆಲ ಸೆಕೆಂಡುಗಳಲ್ಲಿ ಪ್ರಶ್ನೆಗೆ ವಿವರವಾಗಿ ಉತ್ತರಿಸುತ್ತದೆ.

ಇದರ ಮೂಲಕ ಚಿತ್ರವನ್ನು ಕಳುಹಿಸಿದಲ್ಲಿ ಎಐ ರೂಪಿಸಿದ ಅಂದವಾದ ಚಿತ್ರವೂ ನಿಮ್ಮ ಪರದೆ ಮೇಲೆ ಕಾಣಿಸುತ್ತದೆ. ಇಂತಹ ಅದ್ಭುತ ವೈಶಿಷ್ಟ್ಯವನ್ನು ಹೇಗೆ ಬಳಸುವುದು ಎಂದು ನಿಮಗೆ ಗೊತ್ತಿಲ್ಲವಾದಲ್ಲಿ, ಚಿಂತೆ ಬೇಡ. ಈ ಕೆಳಗಿನ ಹಂತಗಳನ್ನು ಅನುಸರಿಸಿದರೆ ಎಐ ಜೊತೆಗೆ ನೀವೂ ಚಾಟ್​ ಮಾಡಬಹುದು.

ವಾಟ್ಸ್​​ಆ್ಯಪ್​ನಲ್ಲಿ Meta AI ಅನ್ನು ಹೇಗೆ ಬಳಸುವುದು?:

  • ಮೊದಲು, ನಿಮ್ಮ ಫೋನ್, ಡೆಸ್ಕ್‌ಟಾಪ್, ಟ್ಯಾಬ್ಲೆಟ್‌ನಲ್ಲಿ ವಾಟ್ಸ್​​​ಆ್ಯಪ್​ ತೆರೆಯಿರಿ.
  • ಚಾಟ್​​ ಲಿಸ್ಟ್​ನ ಬಲಭಾಗದಲ್ಲಿ ಸಣ್ಣ ನೀಲಿ ವೃತ್ತದ ಐಕಾನ್ ಇರುತ್ತದೆ.
  • ನೀಲಿ ವೃತ್ತಾಕಾರದ ಐಕಾನ್ ಅನ್ನು ಕ್ಲಿಕ್ ಮಾಡಿ ಅಥವಾ ಟ್ಯಾಪ್ ಮಾಡಿ.
  • ಐಕಾನ್ ಒತ್ತಿದ ಬಳಿಕ ಮೆಟಾ AI ನ Llama-3 ಓಪನ್​ ಆಗುತ್ತದೆ.
  • ಅದರ ಬಳಕೆಯ ನಿಯಮಗಳನ್ನು ಓದಿ ಮತ್ತು ಅಂಗೀಕರಿಸಿ.
  • ನಂತರ, ಟೈಪಿಂಗ್ ಬಾಕ್ಸ್‌ನಲ್ಲಿ ಯಾವುದೇ ರೀತಿಯ ಪ್ರಶ್ನೆಯನ್ನು ಟೈಪ್ ಮಾಡಬಹುದು.
  • send ಬಟನ್ ಒತ್ತಿದ ನಂತರ, ಮೆಟಾ AI ಪ್ರತಿಕ್ರಿಯಿಸಲು ಆರಂಭಿಸುತ್ತದೆ.
  • ಮೆಟಾದ ಎಐ ಕೆಲವೇ ಸೆಕೆಂಡುಗಳಲ್ಲಿ ನಿಮ್ಮ ಪ್ರಶ್ನೆಗೆ ಉತ್ತರಿಸುತ್ತದೆ.

ಮೆಟ ಎಐನ ಈ ವೈಶಿಷ್ಟ್ಯದಿಂದ ಏನೆಲ್ಲಾ ಲಾಭ?:

AI ಫೋಟೋ ಚಿತ್ರಿಸಿಕೊಳ್ಳಬಹುದು: ನಿಮ್ಮ ಅಥವಾ ಯಾವುದೇ ರೀತಿಯ ಫೋಟೋವನ್ನು ಸೊಗಸಾಗಿ ರೂಪಿಸಲು ಈ ಎಐ ನೆರವಾಗುತ್ತದೆ. ನಿಮಗೆ ಬೇಕಾದ ಚಿತ್ರವನ್ನು ಎಐಗೆ ನಿರ್ದೇಶನ ನೀಡಿದಲ್ಲಿ, ಸುಂದರ ಅನಿಮೇಟೆಡ್​ ಚಿತ್ರವನ್ನು ಅದು ರೂಪಿಸಿ ಕೊಡುತ್ತದೆ.

ದೊಡ್ಡ ಪ್ಯಾರಾಗ್ರಾಫ್​​ಗೆ ಚಿಕ್ಕ ಸಾರಾಂಶ ನೀಡುತ್ತದೆ: ಯಾವುದೇ ವಿಷಯದ ಮೇಲಿನ ದೊಡ್ಡ ದೊಡ್ಡ ಪ್ಯಾರಾಗ್ರಾಫ್​​ಗಳನ್ನು ಓದಲು ಹೆಚ್ಚಿನ ಸಮಯ ತೆಗೆದುಕೊಳ್ಳುತ್ತದೆ. ಕೆಲವೊಮ್ಮೆ ಓದಲೂ ಸಾಧ್ಯವಾಗುವುದಿಲ್ಲ. ಅಂತಹ ಪ್ಯಾರಾವನ್ನು ನೀವು ಎಐಗೆ ಟೈಪಿಸಿ ಕೊನೆಯಲ್ಲಿ 'ಸಾರಾಂಶ' ಎಂದು ನಮೂದಿಸಿದಲ್ಲಿ, ಅದು ಪ್ಯಾರಾವನ್ನು ಚಿಕ್ಕದಾಗಿ ವಿವರಿಸಿದ ಸಾರಾಂಶವನ್ನು ಉತ್ತರವಾಗಿ ನೀಡುತ್ತದೆ. ಕೆಲವೇ ಸೆಕೆಂಡುಗಳಲ್ಲಿ ಅದು ನಿಮಗೆ ಪ್ಯಾರಾಗ್ರಾಫ್‌ನ ಸಾರಾಂಶವನ್ನು ನೀಡುವುದರಿಂದ ನಿಮ್ಮ ಅಮೂಲ್ಯ ಸಮಯ ಉಳಿಯುತ್ತದೆ.

ಯಾವುದೇ ಪ್ರಶ್ನೆಗೆ ಸಿಗಲಿದೆ ಉತ್ತರ: ನೀವು ಯಾವುದೇ ಪ್ರಶ್ನೆಯನ್ನು ಟೈಪ್ ಮಾಡಿ. ಎಐ ಅದನ್ನು ಓದಿಕೊಂಡು, ಕೆಲವೇ ಸೆಕೆಂಡುಗಳಲ್ಲಿ ಡೇಟಾ ಸಹಿತ ಪ್ರತಿಕ್ರಿಯಿಸುತ್ತದೆ. ಇದರ ಜೊತೆಗೆ ಹಾಡುಗಳು, ಕವನಗಳು, ಕಾದಂಬರಿಗಳು, ನಾಟಕಗಳ ಬಗ್ಗೆಯೂ ಕೇಳಬಹುದು. ಗಣಿತದ ಪ್ರಶ್ನೆಗೆ ಉತ್ತರವನ್ನು ಸಹ ಪಡೆದುಕೊಳ್ಳಬಹುದು.

ಇದು ನಿಮ್ಮ ಪ್ರವಾಸವನ್ನೂ ಯೋಜಿಸುತ್ತದೆ. ಈ ಬಗ್ಗೆ ಸಲಹೆಗಳನ್ನೂ ನೀಡುತ್ತದೆ. ಕೋಡ್‌ಗಳನ್ನು ಬರೆಯಬಹುದು. ನಿಮ್ಮ ಯಾವುದೇ ನಿರ್ದೇಶಗನಗಳಿಗೆ ಅದು ಇಂಗ್ಲಿಷ್‌ನಲ್ಲಿ ಮಾತ್ರ ಉತ್ತರಿಸುತ್ತದೆ. ನೀವು ಕೂಡ ಇಂಗ್ಲಿಷ್​​ನಲ್ಲೇ ಚಾಟ್​ ಮಾಡಬೇಕು. ಈ ತಾಂತ್ರಿಕ ಅಂಶವನ್ನು ವಿದ್ಯಾರ್ಥಿಗಳು ಹೆಚ್ಚಿನ ಪ್ರಮಾಣದಲ್ಲಿ ಬಳಸುತ್ತಿದ್ದಾರೆ. ತಮ್ಮ ಅಧ್ಯಯನಕ್ಕೆ ಸಂಬಂಧಿಸಿದ ಪ್ರಶ್ನೆಗಳಿಗೆ ಉತ್ತರಗಳನ್ನು ತಿಳಿಯಲು ಇದರ ನೆರವು ಪಡೆಯುತ್ತಿದ್ದಾರೆ. ಇದರೊಂದಿಗೆ ಕ್ರೀಡೆ, ದೇಶ, ಪ್ರಪಂಚ, ರಾಜಕೀಯ ಘಟನೆಗಳ ಬಗ್ಗೆ ಮಾಹಿತಿಗಾಗಿಯೂ ಇದನ್ನು ಬಳಸಬಹುದು.

ಪ್ಲೇಸ್ಟೋರ್​​ನಿಂದ ಪಡೆದುಕೊಳ್ಳಿ: ಒಂದು ವೇಳೆ ನಿಮ್ಮ ವಾಟ್ಸ್​​ಆ್ಯಪ್​ನಲ್ಲಿ ಮೆಟಾ ಎಐನ ವೈಶಿಷ್ಟ್ಯವು ಕಾಣಸಿಗದಿದ್ದಲ್ಲಿ, ಆ ಅಪ್ಲಿಕೇಶನ್ ಅನ್ನು ಗೂಗಲ್​ ಪ್ಲೇ ಸ್ಟೋರ್​ನಿಂದ ಪಡೆದುಕೊಳ್ಳಬಹುದು. ನಿಮ್ಮ ವಾಟ್ಸ್​​ಆ್ಯಪ್​ ಅನ್ನು ಅಪ್​ಡೇಟ್​ ಮಾಡಿದಲ್ಲಿ ಎಐ ವೈಶಿಷ್ಟ್ಯ ಸಿಗಲಿದೆ. ಫೇಸ್‌ಬುಕ್‌ನಲ್ಲಿಯೂ ಇದನ್ನು ಬಳಸಬಹುದು.

ಗಮನಿಸಿ: ಮೆಟಾ ಎಐ ತಂತ್ರಾಂಶವು ಕೃತಕ ಬುದ್ಧಿಮತ್ತೆಯಿಂದ ಕೆಲಸ ಮಾಡಲಿದ್ದು, ನಿಮ್ಮ ಪ್ರಶ್ನೆಗಳನ್ನು ತಾನು ಅರ್ಥೈಸಿಕೊಂಡಂತೆ ಉತ್ತರಿಸುತ್ತದೆ. ಕೆಲವೊಮ್ಮೆ ಅದು ತಪ್ಪು ಉತ್ತರಗಳನ್ನೂ ನೀಡಬಹುದು. ಹೀಗಾಗಿ ಪ್ರಶ್ನೆಯ ಇತರ ಮೂಲವನ್ನು ಒಮ್ಮೆ ಮರು ಪರಿಶೀಲಿಸಿಕೊಳ್ಳಿ.

ಇದನ್ನೂ ಓದಿ: ಸೈಬರ್ ಸುರಕ್ಷತೆಗಾಗಿ ಎಐ ತಂತ್ರಜ್ಞಾನ ಅಳವಡಿಕೆಗೆ ಶೇ 73ರಷ್ಟು ಕಂಪನಿಗಳ ಒಲವು: ವರದಿ - GenAI for Security

ETV Bharat Logo

Copyright © 2024 Ushodaya Enterprises Pvt. Ltd., All Rights Reserved.