ETV Bharat / technology

ವಾರ್ಷಿಕ ಯೋಜನೆ: ಜಿಯೋ, ಏರ್​ಟೆಲ್​, ವೊಡಾಫೋನ್​ಗೆ ಠಕ್ಕರ್​ ನೀಡಲಿದೆಯಾ ಬಿಎಸ್​ಎನ್​ಎಲ್​? - YEAR RECHARGE PLAN

Year Recharge Plan: ಹೊಸ ವರ್ಷದ ಆರಂಭದ ಮೊದಲು ನೀವು ಅಗ್ಗದ ರೀಚಾರ್ಜ್ ಬಗ್ಗೆ ಯೋಚಿಸುತ್ತಿದ್ದರೆ, ಅಂತಹ ರೀಚಾರ್ಜ್ ಯೋಜನೆಗಳ ಬಗ್ಗೆ ಇಲ್ಲಿದೆ ಮಾಹಿತಿ..

JIO AIRTEL VI AND BSNL  MOBILE RECHARGE PLAN  RECHARGE PRICE AND BENEFITS
ಜಿಯೋ, ಏರ್​ಟೆಲ್​, ವೊಡಾಫೋನ್​ಗೆ ಠಕ್ಕರ್​ ನೀಡಲಿದೇಯಾ ಬಿಎಸ್​ಎನ್​ಎಲ್​? (File Photo)
author img

By ETV Bharat Tech Team

Published : Dec 9, 2024, 9:42 AM IST

Recharge Plan: ಈಗಾಗಲೇ ಹೊಸ ವರ್ಷಕ್ಕೆ ದಿನಗಣನೆ ಆರಂಭವಾಗಿದೆ. ಬಹುತೇಕ ಜನರ ವಾರ್ಷಿಕ ಯೋಜನೆಯ ಅವಧಿಯ ಮುಕ್ತಾಯವೂ ಸಮೀಪಗೊಳ್ಳುತ್ತಿದೆ. ಹೀಗಾಗಿ ಮುಂಬರುವ ವಾರ್ಷಿಕ ರೀಚಾರ್ಜ್ ಯೋಜನೆಗಳಿಗೆ ಯಾವುದು ಉತ್ತಮ ಮತ್ತು ಈ ವಾರ್ಷಿಕ ರೀಚಾರ್ಜ್ ಯೋಜನೆಗಳ ಕುರಿತು ರಿಲಯನ್ಸ್ ಜಿಯೋ, ಏರ್‌ಟೆಲ್, ವೊಡಾಫೋನ್ ಐಡಿಯಾ ಮತ್ತು ಬಿಎಸ್‌ಎನ್‌ಎಲ್ ಯಾವರೀತಿ ಆಫರ್​ ನೀಡುತ್ತಿವೆ ಎಂಬುದರ ವಿವರ ಇಲ್ಲಿದೆ..

ಅಗ್ಗದ ರೀಚಾರ್ಜ್ ಯೋಜನೆಗಳನ್ನು ರಿಲಯನ್ಸ್ ಜಿಯೋ, ಏರ್‌ಟೆಲ್, ವೊಡಾಫೋನ್ ಐಡಿಯಾ ಮತ್ತು ಬಿಎಸ್‌ಎನ್‌ಎಲ್ ನೀಡುತ್ತಿವೆ. ಇವು ವಾರ್ಷಿಕ ರೀಚಾರ್ಜ್ ಯೋಜನೆಗಳಾಗಿದ್ದು, ಅದರ ವಿವರಗಳು ಕೆಳಗೆ ನೀಡಲಾಗಿದೆ.

ಜಿಯೋ ರೀಚಾರ್ಜ್ ಪ್ಲಾನ್​: ಜಿಯೋ 336 ಮತ್ತು 365 ದಿನಗಳ ಮಾನ್ಯತೆಯೊಂದಿಗೆ ವಾರ್ಷಿಕ ರೀಚಾರ್ಜ್ ಯೋಜನೆಗಳನ್ನು ನೀಡುತ್ತದೆ. 336 ದಿನಗಳ ವ್ಯಾಲಿಡಿಟಿ ಹೊಂದಿರುವ ಯೋಜನೆಯ ಬೆಲೆ 895 ರೂಪಾಯಿ. ಈ ಯೋಜನೆಯಲ್ಲಿ ಒಟ್ಟು 24 GB ಹೈ ಸ್ಪೀಡ್ ಡೇಟಾ ಲಭ್ಯವಿದೆ. ಅಲ್ಲದೆ, ನೀವು ಅನಿಯಮಿತ ಕರೆ, ಪ್ರತಿ 28 ದಿನಗಳಿಗೊಮ್ಮೆ 50 SMS, Jio TV, Jio ಸಿನಿಮಾ ಮತ್ತು Jio ಕ್ಲೌಡ್‌ಗೆ ಉಚಿತ ಪ್ರವೇಶವನ್ನು ಪಡೆಯುತ್ತೀರಿ.

ಜಿಯೋದ ಮತ್ತೊಂದು ಒಂದು ವರ್ಷದ ಪ್ಲಾನ್​ 3,599 ರೂಪಾಯಿ. ಇದರಲ್ಲಿ, ನೀವು ಪ್ರತಿದಿನ 2.5GB ಡೇಟಾ, ಅನಿಯಮಿತ ಕರೆ ಮತ್ತು 100 SMS ಗಳ ಪ್ರಯೋಜನವನ್ನು ಪಡೆಯುತ್ತೀರಿ. ಜಿಯೋ ಅಪ್ಲಿಕೇಶನ್‌ಗಳ ಪ್ರಯೋಜನಗಳು ಈ ಯೋಜನೆಯೊಂದಿಗೆ ಲಾಭ ಪಡೆಯುವಿರಿ.

Airtel ಮತ್ತು Vi ನ 365 ದಿನಗಳ ಯೋಜನೆ : ಏರ್‌ಟೆಲ್ ಮತ್ತು ವೊಡಾಫೋನ್ ಕಂಪನಿಗಳು ತನ್ನ ರೀಚಾರ್ಜ್​ ಪ್ಲಾನ್‌ಗಳನ್ನು 365 ದಿನಗಳ ಮಾನ್ಯತೆಯೊಂದಿಗೆ ನೀಡುತ್ತವೆ. 1 ವರ್ಷದ ಅಗ್ಗದ ಯೋಜನೆಯು ರೂ. 1999 ಆಗಿದೆ. ಎರಡೂ ಕಂಪನಿಗಳು ಪ್ರತಿದಿನ 24 GB ಹೈ ಸ್ಪೀಡ್ ಡೇಟಾ, ಅನಿಯಮಿತ ಕರೆ ಮತ್ತು 100 SMS ಗಳ ಪ್ರಯೋಜನವನ್ನು ನೀಡುತ್ತವೆ.

ಬಿಎಸ್​ಎನ್​ಎಲ್​ ವರ್ಷದ ರೀಚಾರ್ಜ್ ಯೋಜನೆ: ಬಿಎಸ್​ಎನ್​ಎಲ್​ನ 365 ದಿನಗಳ ಯೋಜನೆಯು 2,999 ರೂ.ಗೆ ಬರುತ್ತದೆ. ಈ ರೀಚಾರ್ಜ್ ಯೋಜನೆಯಲ್ಲಿ 4G ನೆಟ್‌ವರ್ಕ್‌ನ ಹೆಚ್ಚಿನ ವೇಗದ ಇಂಟರ್ನೆಟ್ ಬೆಂಬಲದೊಂದಿಗೆ ಪ್ರತಿದಿನ 3GB ಡೇಟಾ ಲಭ್ಯವಿದೆ. ನೀವು 100 SMS ಮತ್ತು ಅನಿಯಮಿತ ಕರೆಗಳ ಪ್ರಯೋಜನವನ್ನು ಪಡೆಯುತ್ತೀರಿ.

ಓದಿ: ವಾಟ್ಸಾಪ್​ನಲ್ಲಿ ಮತ್ತೊಂದು ಇನ್ಟ್ರೆಸ್ಟಿಂಗ್​ ಫೀಚರ್- ಇನ್ಮುಂದೆ ಗ್ರೂಪ್​ ಚಾಟ್​ನಲ್ಲಿ ನೋ ಕನ್ಫೂಷನ್​!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.