iPhone 15 Price: Apple iPhone 16 ಸರಣಿಯ ಸ್ಮಾರ್ಟ್‌ಫೋನ್‌ಗಳ ಬಿಡುಗಡೆಯು ಟೆಕ್ ಮಾರುಕಟ್ಟೆಯಲ್ಲಿ ಸಾಕಷ್ಟು ನಿರೀಕ್ಷೆ ಸೃಷ್ಟಿಸಿದೆ. ಈ ಸಂದರ್ಭದಲ್ಲಿ, ಅನೇಕ ಬಳಕೆದಾರರು ಹಿಂದಿನ ಐಫೋನ್ 15 ಮಾದರಿಯ ಬೆಲೆಯನ್ನು ಹುಡುಕುತ್ತಿದ್ದಾರೆ. ಹೊಸ ಮಾದರಿಯ ಫೋನ್ ಹೆಚ್ಚು ದುಬಾರಿಯಾಗುವುದರಿಂದ, ಐಫೋನ್ 12 ಮತ್ತು 13 ಮಾದರಿಯ ಬಳಕೆದಾರರು ಟೈಪ್-ಸಿ ಯೊಂದಿಗೆ ಬರುವ ಐಫೋನ್ 15 ಮಾದರಿಗೆ ತಮ್ಮನ್ನು ತಾವು ಅಪ್‌ಗ್ರೇಡ್ ಮಾಡಲು ಸಿದ್ಧರಾಗಿದ್ದಾರೆ. ಅವರ ಹುಡುಕಾಟವನ್ನು ಪರಿಹರಿಸಲು, ಫ್ಲಿಪ್‌ಕಾರ್ಟ್ ಐಫೋನ್ 15 ಮತ್ತು ಬ್ಯಾಂಕ್ ಕೊಡುಗೆಗಳಿಗೆ ಬೆಲೆ ಕಡಿತ ಘೋಷಿಸಿದೆ.

Apple iPhone 15 ವಿಶೇಷತೆಗಳು: ಹಿಂದಿನ ಮಾದರಿ Apple iPhone 15 A16 ಬಯೋನಿಕ್ ಚಿಪ್‌ಸೆಟ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. ಈ ಸ್ಮಾರ್ಟ್ಫೋನ್ iOS 17 ಆಪರೇಟಿಂಗ್ ಸಿಸ್ಟಮ್ ಅನ್ನು ರನ್ ಮಾಡುತ್ತದೆ. ಇದು ಡೈನಾಮಿಕ್ ಐಲ್ಯಾಂಡ್ ಜೊತೆಗೆ 6.1-ಇಂಚಿನ OLED ಸೂಪರ್ ರೆಟಿನಾ XDR ಡಿಸ್ಪ್ಲೇ ಹೊಂದಿದೆ. ಕ್ಯಾಮರಾಕ್ಕೆ ಸಂಬಂಧಿಸಿದಂತೆ ಹಿಂಭಾಗವು OIS ಜೊತೆಗೆ 48-ಮೆಗಾಪಿಕ್ಸೆಲ್ ಪ್ರಾಥಮಿಕ ಸಂವೇದಕವನ್ನು ಮತ್ತು 12-ಮೆಗಾಪಿಕ್ಸೆಲ್ ಅಲ್ಟ್ರಾವೈಡ್ ಕ್ಯಾಮರಾ ಹೊಂದಿದೆ.

ಡಿಸ್‌ಪ್ಲೇಯ ಡೈನಾಮಿಕ್ ಐಲ್ಯಾಂಡ್‌ನಲ್ಲಿ ಸೆಲ್ಫಿಗಳು ಮತ್ತು ವಿಡಿಯೋ ಕರೆಗಳಿಗಾಗಿ 12-ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಸ್ಥಾಪಿಸಲಾಗಿದೆ. ಮುಖ್ಯವಾಗಿ ಐಫೋನ್ 15 ಮಾದರಿಯು ಟೈಪ್-ಸಿ ಚಾರ್ಜಿಂಗ್ ಸಪೋರ್ಟ್ ತಂದ ಮೊದಲನೆಯದು. ಇದು 20W ಸಾಮರ್ಥ್ಯದೊಂದಿಗೆ ಫೋನ್ ಅನ್ನು ಚಾರ್ಜ್ ಮಾಡಬಹುದು. ಅಲ್ಲದೇ, ಇದು ಬಹು-ಕಾರ್ಯವನ್ನು ಸುಲಭಗೊಳಿಸುವ ಆ್ಯಕ್ಟಿವೇಟ್ ಬಟನ್ ಅನ್ನು ಹೊಂದಿದೆ. ಒಂದೇ ಕ್ಲಿಕ್‌ನಲ್ಲಿ ಈ ಬಟನ್ ಮೂಲಕ ಬಹು ಅಪ್ಲಿಕೇಶನ್‌ಗಳನ್ನು ಪ್ರವೇಶಿಸಬಹುದು. ಬಳಕೆದಾರರು ಈ ಸ್ಮಾರ್ಟ್‌ಫೋನ್ಕ ಪ್ಪು, ನೀಲಿ, ಹಸಿರು, ಹಳದಿ ಮತ್ತು ಗುಲಾಬಿ ಎಂಬ ಒಟ್ಟು ಐದು ಬಣ್ಣದ ಆಯ್ಕೆಗಳಲ್ಲಿ ಖರೀದಿಸಬಹುದು.
iPhone 15 ಆಫರ್ ಬೆಲೆ: ಕಳೆದ ವರ್ಷ ಐಫೋನ್ 15 ಸರಣಿಯನ್ನು ಬಿಡುಗಡೆ ಮಾಡಿದಾಗ ಅದರ ಮೂಲ ಬೆಲೆ 79,600 ರೂ.ಯಿಂದ ಪ್ರಾರಂಭವಾಗಿತ್ತು. ಪ್ರಸ್ತುತ ಬಳಕೆದಾರರು ಅದರ 128GB ಸ್ಟೋರೇಜ್ ರೂಪಾಂತರವನ್ನು ಸುಮಾರು ರೂ.13,000 ರ ರಿಯಾಯಿತಿ ಬೆಲೆಯಲ್ಲಿ ಪಡೆಯಬಹುದು. ಆನ್‌ಲೈನ್ ಟ್ರೇಡಿಂಗ್ ಕಂಪನಿ ಫ್ಲಿಪ್‌ಕಾರ್ಟ್‌ನಲ್ಲಿ ಐಫೋನ್ 15 ಸ್ಮಾರ್ಟ್‌ಫೋನ್ ಅನ್ನು ನೋಂದಾಯಿಸುವ ಮೂಲಕ ಈ ಕೊಡುಗೆಯನ್ನು ಪಡೆಯಬಹುದು.
ಐಫೋನ್ 16 ಬಿಡುಗಡೆಯ ನಂತರ, ಫ್ಲಿಪ್‌ಕಾರ್ಟ್ ಐಫೋನ್ 15 ಬೆಲೆಯನ್ನು 69,999 ರೂ.ಗೆ ಪಟ್ಟಿ ಮಾಡಿದೆ. ಫ್ಲಿಪ್ಕಾರ್ಟ್ ಆಕ್ಸಿಸ್ ಬ್ಯಾಂಕ್ ಗ್ರಾಹಕರು ಹೆಚ್ಚುವರಿ ರೂ.3,500 ಕ್ಯಾಶ್ಬ್ಯಾಕ್ ಪಡೆಯಬಹುದು. ಅದರಂತೆ, ನೀವು 66,499 ಬೆಲೆಯಲ್ಲಿ iPhone 15 ಸ್ಮಾರ್ಟ್‌ಫೋನ್ ಅನ್ನು ಪಡೆಯಬಹುದು. ಇದಲ್ಲದೆ, ನೀವು ನಿಮ್ಮ ಹಳೆಯ ಫೋನ್ ಅನ್ನು ವಿನಿಮಯ ಮಾಡಿಕೊಳ್ಳುವುದರಿಂದ ಹೆಚ್ಚುವರಿ ರಿಯಾಯಿತಿ ಪಡೆಯಬಹುದು. ಹೊಸ ಮಾದರಿಯ iPhone 16 ನ ಬೆಲೆ ಇದಕ್ಕಿಂತ ಸುಮಾರು 13,000 ರೂ.ಗೂ ಹೆಚ್ಚಿದೆ.
ಓದಿ: ಐಫೋನ್ 16 ಸೀರಿಸ್ ಸ್ಮಾರ್ಟ್‌ಪೋನ್ ಏಕೆ ಖರೀದಿಸಬೇಕು? ಇಲ್ಲಿದೆ 10 ಕಾರಣಗಳು - IPhone 16 Series Highlights