ನವದೆಹಲಿ: ಸುಟ್ಟ ಗಾಯಗಳನ್ನು ತ್ವರಿತವಾಗಿ ಗುಣಪಡಿಸಲು ನೆರವಾಗುವಂಥ ಜೈವಿಕ ವಿಘಟನೀಯ ವಸ್ತುಗಳಿಂದ ಅಭಿವೃದ್ಧಿಪಡಿಸಿದ ಮತ್ತು ವಿಟಮಿನ್ ಸಿ ಯಿಂದ ತುಂಬಿದ ಹೊಸ ಬ್ಯಾಂಡೇಜ್ ಒಂದನ್ನು ಇಟಲಿಯ ಸಂಶೋಧಕರು ಆವಿಷ್ಕರಿಸಿದ್ದಾರೆ.
ಇಟಾಲಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ)ಯ ಸಂಶೋಧಕರ ತಂಡವು ಅಭಿವೃದ್ಧಿಪಡಿಸಿದ ಬ್ಯಾಂಡೇಜ್ ಮೆಕ್ಕೆಜೋಳದಿಂದ ಪಡೆದ ಜೀನ್ ಎಂಬ ಪ್ರೋಟೀನ್, ಸೇಬಿನಂತಹ ಅನೇಕ ಹಣ್ಣುಗಳ ಸಿಪ್ಪೆಯಲ್ಲಿ ಕಂಡುಬರುವ ಸಕ್ಕರೆ ಪೆಕ್ಟಿನ್ ಮತ್ತು ಸೋಯಾ ಲೆಸಿಥಿನ್ ಹೆಸರಿನ ಸಸ್ಯದಿಂದ ಪಡೆದ ಸೋಯಾ ಲೆಸಿಥಿನ್ ಎಂಬ ಅಂಶಗಳನ್ನು ಒಳಗೊಂಡಿದೆ.
ದೇಹಕ್ಕೆ ಸುಟ್ಟ ಗಾಯವಾದಾಗ ದೇಹದ ನೈಸರ್ಗಿಕ ರಕ್ಷಣಾ ಕಾರ್ಯವಿಧಾನದ ಕಾರಣದಿಂದ ಆ ಜಾಗದಲ್ಲಿ ಉರಿಯೂತ ಅಥವಾ ನೋವು ಉಂಟಾಗುತ್ತದೆ. ನೋವಿನ ಕಾರಣದಿಂದ ಗಾಯವಾದ ಜಾಗದಲ್ಲಿ ಕೆಂಪಾಗಿ ಊದಿಕೊಳ್ಳುತ್ತದೆ. ಆದರೆ ಉರಿಯೂತವು ಜಾಸ್ತಿಯಾದಲ್ಲಿ ಆ ಜಾಗದಲ್ಲಿ ಆಮ್ಲಜನಕ ಮುಕ್ತ ರಾಡಿಕಲ್ಗಳ ಉತ್ಪಾದನೆಯು ಹೆಚ್ಚಾಗುತ್ತದೆ ಮತ್ತು ಇದೇ ಕಾರಣದಿಂದ ಗಾಯ ಗುಣಮುಖವಾಗುವ ಪ್ರಕ್ರಿಯೆಗೆ ಅಡ್ಡಿಯಾಗುತ್ತದೆ.
ಎಸಿಎಸ್ ಅಪ್ಲೈಡ್ ಬಯೋ ಮೆಟೀರಿಯಲ್ಸ್ ಜರ್ನಲ್ನಲ್ಲಿ ವಿವರಿಸಲಾದ ಹೊಸ ಬ್ಯಾಂಡೇಜ್, ಉರಿಯೂತದ ಮಟ್ಟದಲ್ಲಿನ ಹೆಚ್ಚಳವನ್ನು ತಡೆಗಟ್ಟುವ ಮತ್ತು ಫ್ರೀ ರಾಡಿಕಲ್ಗಳ ಸಂಖ್ಯೆಯನ್ನು ಕಡಿತಗೊಳಿಸುವ ಸಾಮರ್ಥ್ಯವನ್ನು ಹೊಂದಿರುವುದರಿಂದ ಗಾಯ ಗುಣಮುಖವಾಗುವ ಅವಧಿಯನ್ನು ಕಡಿಮೆ ಮಾಡುತ್ತದೆ. ಎಂದು ತಿಳಿಸಲಾಗಿದೆ.
"ಈ ವರ್ಗದ ಸ್ಮಾರ್ಟ್ ಚಿಕಿತ್ಸಾ ಸಾಮಗ್ರಿಗಳ ಪೈಕಿ ಇದು ಸಂಭಾವ್ಯ ಅಪ್ಲಿಕೇಶನ್ಗಳಲ್ಲಿ ಒಂದಾಗಿದೆ. ಸುಟ್ಟಗಾಯಗಳು ಮಾತ್ರವಲ್ಲದೆ ಇತರ ರೀತಿಯ ಗಾಯಗಳಾದ ಕಡಿತಗಳು ಅಥವಾ ಚರ್ಮದ ಹುಣ್ಣುಗಳು, ರೋಗಲಕ್ಷಣಗಳನ್ನು ಗುಣಪಡಿಸುವ ಸಾಮರ್ಥ್ಯವಿರುವ ಇತರ ಸಾಧನಗಳನ್ನು ತಯಾರಿಸಲು ನಾವು ಕೆಲಸ ಮಾಡುತ್ತಿದ್ದೇವೆ" ಎಂದು ಐಐಟಿಯ ಸ್ಮಾರ್ಟ್ ಮೆಟೀರಿಯಲ್ಸ್ ಘಟಕದ ಪ್ರಧಾನ ಸಂಶೋಧಕಿ ಅಥಾನಾಸಿಯು ಹೇಳಿದರು.
ಮುಖ್ಯವಾಗಿ ಹೊಸದಾಗಿ ಕಂಡು ಹಿಡಿದಿರುವ ಈ ಬ್ಯಾಂಡೇಜ್ ನೈಸರ್ಗಿಕವಾಗಿ ಕೆಲವೇ ದಿನಗಳಲ್ಲಿ ತಾನೇ ಕರಗಿ ಹೋಗುತ್ತದೆ. ಹೀಗಾಗಿ ಇದು ಪ್ರಸ್ತುತ ಚರ್ಮಕ್ಕೆ ಅಂಟಿಸುವ ಗಾಯದ ಬ್ಯಾಂಡೇಜ್ಗಳಿಗೆ ಪರಿಸರ ಸ್ನೇಹಿ ಪರ್ಯಾಯವನ್ನು ಒದಗಿಸುತ್ತದೆ ಎಂದು ತಂಡ ಹೇಳಿದೆ.
ಬ್ಯಾಂಡೇಜ್ ಮಹತ್ವ: ಗಾಯ ಇರುವಲ್ಲಿ ಡ್ರೆಸ್ಸಿಂಗ್ ಜೊತೆಗೆ ಬ್ಯಾಂಡೇಜ್ ಅನ್ನು ಬಳಸಲಾಗುತ್ತದೆ. ಡ್ರೆಸ್ಸಿಂಗ್ ಅನ್ನು ಭದ್ರಪಡಿಸಲು ರೋಲರ್ ಬ್ಯಾಂಡೇಜ್ ಅನ್ನು ಬಳಸಲಾಗುತ್ತದೆ. ತ್ರಿಕೋನಾಕಾರದ ಬ್ಯಾಂಡೇಜ್ ಅನ್ನು ರಕ್ತಸ್ರಾವವನ್ನು ನಿಯಂತ್ರಿಸಲು ತೋಳಿನ ಸ್ಲಿಂಗ್ ಅಥವಾ ಪ್ಯಾಡ್ ಆಗಿ ಬಳಸಲಾಗುತ್ತದೆ. ಮೂಳೆ ಅಥವಾ ಕೀಲಿಗೆ ಆದ ಗಾಯವನ್ನು ಶಮನಗೊಳಿಸಲು ಅಥವಾ ನಿಶ್ಚಲಗೊಳಿಸಲು ಅಥವಾ ನೋವಿನ ಗಾಯದ ಮೇಲೆ ಸುಧಾರಿತ ಪ್ಯಾಡಿಂಗ್ ಆಗಿಯೂ ಇದನ್ನು ಬಳಸಬಹುದು.
ಇದನ್ನೂ ಓದಿ : ಚೀನಾದ ಚಾಂಗ್'ಇ-6 ಯಶಸ್ವಿ ಉಡಾವಣೆ: ಚಂದ್ರನ ಮಣ್ಣು ಭೂಮಿಗೆ ತರಲಿದೆ ನೌಕೆ - China Lunar Mission