ನವದೆಹಲಿ: ಪ್ರಖ್ಯಾತ ಸ್ಮಾರ್ಟ್ ಫೋನ್ ಬ್ರಾಂಡ್ ಆಗಿರುವ ಇನ್ಫಿನಿಕ್ಸ್ ಶುಕ್ರವಾರ ತನ್ನ ಹೊಸ ಸ್ಮಾರ್ಟ್ ಫೋನ್ ಸ್ಮಾರ್ಟ್ 8 ಪ್ಲಸ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಗ್ಯಾಲಕ್ಸಿ ವೈಟ್, ಟಿಂಬರ್ ಬ್ಲ್ಯಾಕ್ ಮತ್ತು ಶೈನಿ ಗೋಲ್ಡ್ ಎಂಬ ಮೂರು ಬಣ್ಣಗಳಲ್ಲಿ ಲಭ್ಯವಿರುವ ಈ ಹೊಸ ಸ್ಮಾರ್ಟ್ ಫೋನ್ ಅನ್ನು ಬಳಕೆದಾರರು ಮಾರ್ಚ್ 9 ರಿಂದ ಫ್ಲಿಪ್ ಕಾರ್ಟ್ನಲ್ಲಿ 6,999 ರೂ.ಗೆ (ಬ್ಯಾಂಕ್ ಆಫರ್ಗಳು ಲಭ್ಯ) ಖರೀದಿಸಬಹುದು.
"ಇನ್ಫಿನಿಕ್ಸ್ನ ಇತ್ತೀಚಿನ ಸ್ಮಾರ್ಟ್ ಫೋನ್ ಶೈಲಿ, ನಾವೀನ್ಯತೆ ಮತ್ತು ಕಾರ್ಯಕ್ಷಮತೆಯನ್ನು ಸಂಯೋಜಿಸುವ ವೈಶಿಷ್ಟ್ಯಗಳನ್ನು ಹೊಂದಿದೆ" ಎಂದು ಕಂಪನಿ ಹೇಳಿದೆ. ಸ್ಮಾರ್ಟ್ 8 ಪ್ಲಸ್ 50 ಎಂಪಿ ಡ್ಯುಯಲ್ ಎಐ ಕ್ಯಾಮೆರಾ ಹೊಂದಿದ್ದು, ಯಾವುದೇ ಬೆಳಕಿನ ಸ್ಥಿತಿಯಲ್ಲಿ ವೃತ್ತಿಪರ ದರ್ಜೆಯ ಛಾಯಾಗ್ರಹಣಕ್ಕಾಗಿ ಕ್ವಾಡ್-ಎಲ್ಇಡಿ ರಿಂಗ್ ಫ್ಲ್ಯಾಶ್ ಇದರಲ್ಲಿರುವುದು ವಿಶೇಷವಾಗಿದೆ.
ಸೆಲ್ಫಿ ತೆಗೆದುಕೊಳ್ಳಲು ಎಲ್ಇಡಿ ಫ್ಲ್ಯಾಶ್ ಹೊಂದಿರುವ 8 ಎಂಪಿ ಮುಂಭಾಗದ ಕ್ಯಾಮೆರಾ, 128 ಜಿಬಿ ಆಂತರಿಕ ಮೆಮೊರಿ ಮತ್ತು 8 ಜಿಬಿ ರ್ಯಾಮ್ (4 ಜಿಬಿ + 4 ಜಿಬಿ ವರ್ಚುವಲ್ ರಾಮ್) ವೈಶಿಷ್ಟ್ಯಗಳನ್ನು ಈ ಸ್ಮಾರ್ಟ್ ಫೋನ್ ಹೊಂದಿದೆ. ಕಂಪನಿಯ ಪ್ರಕಾರ, ಸ್ಮಾರ್ಟ್ 8 ಪ್ಲಸ್ ನ ಸೈಡ್-ಮೌಂಟೆಡ್ ಫಿಂಗರ್ ಪ್ರಿಂಟ್ ಸ್ಕ್ಯಾನರ್ ಮತ್ತು ಮುಖ ಗುರುತಿಸುವಿಕೆ ತಂತ್ರಜ್ಞಾನವು ಬಳಕೆದಾರರ ಡೇಟಾಕ್ಕೆ ಅತ್ಯುನ್ನತ ಮಟ್ಟದ ಸುರಕ್ಷತೆ ಮತ್ತು ಭದ್ರತೆಯನ್ನು ಒದಗಿಸುತ್ತದೆ.
ಮೀಡಿಯಾಟೆಕ್ ಹೆಲಿಯೊ ಜಿ 36 2.2 ಗಿಗಾಹರ್ಟ್ಸ್ ಆಕ್ಟಾ ಕೋರ್ ಪ್ರೊಸೆಸರ್ನಿಂದ ಕಾರ್ಯನಿರ್ವಹಿಸುವ ಸ್ಮಾರ್ಟ್ 8 ಪ್ಲಸ್ ವೇಗದ ಕಾರ್ಯಕ್ಷಮತೆ ಮತ್ತು ತಡೆರಹಿತ ಮಲ್ಟಿಟಾಸ್ಕಿಂಗ್ ಸಾಮರ್ಥ್ಯಗಳನ್ನು ಹೊಂದಿದೆ. ಈ ಸಾಧನವು ಆಂಡ್ರಾಯ್ಡ್ 13 ಗೋ (ಎಕ್ಸ್ಒಎಸ್ 13) ಆವೃತ್ತಿಯ ಆಪರೇಟಿಂಗ್ ಸಿಸ್ಟಮ್ ಹೊಂದಿದ್ದು, ಬಳಸಲು ತುಂಬಾ ಆರಾಮದಾಯಕವಾಗಿದೆ.
ಇದು 6.6 ಇಂಚಿನ ಐಪಿಎಸ್ ಫುಲ್-ಎಚ್ ಡಿ ಎಲ್ ಸಿಡಿ ಡಿಸ್ ಪ್ಲೇ ಹೊಂದಿದ್ದು, 90 ಹೆರ್ಟ್ಜ್ ರಿಫ್ರೆಶ್ ರೇಟ್ ಹೊಂದಿದೆ. ಈ ಸಾಧನವು 18 ವ್ಯಾಟ್ ಫಾಸ್ಟ್ ಚಾರ್ಜಿಂಗ್ ಬೆಂಬಲದೊಂದಿಗೆ 6,000 ಎಂಎಎಚ್ ಬ್ಯಾಟರಿಯನ್ನು ಹೊಂದಿದೆ. ಕಂಪನಿಯ ಹೇಳಿಕೆಯ ಪ್ರಕಾರ, ಬ್ಯಾಟರಿಯನ್ನು ಒಮ್ಮೆ ಚಾರ್ಜ್ ಮಾಡಿದರೆ, 47 ಗಂಟೆಗಳವರೆಗೆ ಟಾಕ್ ಟೈಮ್, 90 ಗಂಟೆಗಳ ಮ್ಯೂಸಿಕ್ ಪ್ಲೇಬ್ಯಾಕ್ ಸಮಯ ಮತ್ತು 45 ಗಂಟೆಗಳ ವೀಡಿಯೊ ಪ್ಲೇಬ್ಯಾಕ್ ಸಮಯವನ್ನು ಒದಗಿಸುತ್ತದೆ.
ಇದನ್ನೂ ಓದಿ : ಹೊಸ 'ಆಫೀಸ್ ಜೆಟ್ ಪ್ರೊ' ಪ್ರಿಂಟರ್ ಬಿಡುಗಡೆ ಮಾಡಿದ ಎಚ್ಪಿ