ETV Bharat / technology

ಇ-ವಾಹನ ಕೊಳ್ಳುವುದಷ್ಟೇ ಅಲ್ಲ, ಚಾರ್ಜಿಂಗ್​​​ ಸುರಕ್ಷತೆ, ಬ್ಯಾಟರಿ ನಿರ್ವಹಣೆ ತಿಳಿಯಿರಿ - EV Charging

ಇ-ವಾಹನ ಅಥವಾ ಎಲೆಕ್ಟ್ರಿಕ್‌ ವಾಹನ ಪರಿಸರಸ್ನೇಹಿ ಹೌದು. ಇತ್ತೀಚೆಗೆ ದೇಶದಲ್ಲಿ ಇಂಥ ವಾಹನಗಳ ಖರೀದಿ ಹೆಚ್ಚುತ್ತಿದೆ. ಇ-ವಾಹನಗಳ ಕೊಳ್ಳುವ ಆಸಕ್ತಿ ಅದರ ನಿರ್ವಹಣೆಯಲ್ಲೂ ಇರಬೇಕು. ಬ್ಯಾಟರಿಗಳ ಚಾರ್ಜಿಂಗ್​ ವಿಚಾರವಾಗಿ ಸುರಕ್ಷತಾ ನಿಯಮ ಪಾಲನೆ ಅತ್ಯವಶ್ಯ. ಈ ಸುರಕ್ಷತಾ ನಿಯಮಗಳು ಯಾವುವು ನೋಡೋಣ.

how to take care of your electric vehicle charging safety

author img

By ETV Bharat Karnataka Team

Published : Apr 4, 2024, 4:53 PM IST

ಮಹಾರಾಷ್ಟ್ರ​: ಇಲ್ಲಿನ ಛತ್ರಪತಿ ಸಂಭಾಜಿನಗರ್​ ಟೌನ್​ನಲ್ಲಿ ಇತ್ತೀಚೆಗೆ ಕಟ್ಟಡಕ್ಕೆ ಬೆಂಕಿ ತಗುಲಿ ಒಂದೇ ಕುಟುಂಬದ ಏಳು ಮಂದಿ ಸಾವನ್ನಪ್ಪಿದ್ದರು. ಇದಕ್ಕೆ ಕಾರಣವೇನು ಗೊತ್ತೇ?. ಈ ಮನೆಯ ಮುಂದೆ ಇ-ವಾಹನವನ್ನು ನಿಲ್ಲಿಸಿ ಜಾರ್ಜಿಂಗ್‌ಗೆ ಹಾಕಲಾಗಿತ್ತು. ವಾಹನದ ಚಾರ್ಜರ್​​ ಪಾಯಿಂಟ್​ ಅಂಗಡಿಯೊಳಗಿತ್ತು. ಈ ಚಾರ್ಜರ್​​ ಸ್ಫೋಟಗೊಂಡು, ಬೆಂಕಿ ಹೊತ್ತಿಕೊಂಡಿದೆ. ಇಂಥ ಘಟನೆ ಇ-ವಾಹನಗಳ ಸುರಕ್ಷತಾ ನಿರ್ವಹಣೆಯ ವಿಚಾರವನ್ನು ಮತ್ತೆ ಮುನ್ನೆಲೆಗೆ ತಂದಿದೆ.

ಪ್ರಸ್ತುತ ಮಾರುಕಟ್ಟೆಯಲ್ಲಿ ದೊಡ್ಡ ಸಂಖ್ಯೆಯಲ್ಲಿ ಇ-ವಾಹನಗಳು ಲಭ್ಯವಿದೆ. ದಿನ ಕಳೆದಂತೆ ಜನರು ಕೂಡ ಇ-ವಾಹನಗಳನ್ನು ಕೊಳ್ಳುವತ್ತ ಹೆಚ್ಚು ಆಸಕ್ತಿ ತೋರಿಸುತ್ತಿದ್ದಾರೆ. ಇದಕ್ಕೆ ಮತ್ತೊಂದು ಕಾರಣ ಹೆಚ್ಚುತ್ತಿರುವ ಇಂಧನ ದರ. ಇದರೊಂದಿಗೆ ಸರ್ಕಾರ ಕೂಡ ಇ ವಾಹನಕ್ಕೆ ಉತ್ತೇಜನ ನೀಡುತ್ತಿದೆ. ದಿನದಿಂದ ದಿನಕ್ಕೆ ಇ-ವಾಹನ ಮಾರಾಟವೂ ಏರಿಕೆ ಕಾಣುತ್ತಿದೆ. ಆದರೆ ಖರೀದಿಗೆ ಮುನ್ನ ಜನರಲ್ಲಿ ಜಾಗೃತಿ ಅವಶ್ಯಕ.

ಈ ವಾಹನ ಚಾಲಕರು ವಾಹನವನ್ನು ಹೇಗೆ ನಿರ್ವಹಣೆ ಮಾಡಬೇಕು ಎಂಬ ಅರಿವು ಹೊಂದಿರಬೇಕಿದೆ. ಇ-ವಾಹನವು ವೇಗ ಮಿತಿ ಹೊಂದಿದೆ. ಆದರೆ ಕೆಲವು ಇ-ದ್ವಿಚಕ್ರವಾಹನಗಳಲ್ಲಿ ಅಕ್ರಮವಾಗಿ ಮಾರ್ಪಾಡುಗಳನ್ನು ಮಾಡುವ ಮೂಲಕ ವೇಗ ಹೆಚ್ಚಿಸಲು ಮುಂದಾಗುತ್ತಾರೆ. 2022ರಲ್ಲಿ ಪರೀಕ್ಷೆ ನಡೆಸಿದಾಗ ವಾಹನ ತಯಾರಕರು ಮತ್ತು ವಿತರಕರು ಈ ರೀತಿ ಅಕ್ರಮ ಬದಲಾವಣೆ ಮಾಡುತ್ತಿರುವುದು ಬೆಳಕಿಗೆ ಬಂದಿತ್ತು. ನಂತರ ನಡೆದ ಬೆಳವಣಿಗೆಯಲ್ಲಿ ಅಕ್ರಮ ಮಾರ್ಪಾಡು ಮಾಡಿದ್ದ ಅನೇಕ ಇ-ವಾಹನಗಳನ್ನು ಪೊಲೀಸರು ಜಪ್ತಿ ಮಾಡಿದ್ದರು.

ಚಾರ್ಜಿಂಗ್​ ಸುರಕ್ಷತೆ ಹೇಗೆ? ತಜ್ಞರ ಮಾತು: ಎಲೆಕ್ಟ್ರಿಕ್​ ವಾಹನದ ಬ್ಯಾಟರಿ ಕುರಿತು ಮಾತನಾಡಿರುವ ಯೋಗ್ಟೆಕ್​ ಕಂಪನಿಯ ನಿರ್ದೇಶಕ ಚಿನ್ಮೊಯ್​ ಗೊರೆ, "ಎಲೆಕ್ಟ್ರಿಕ್​ ಬ್ಯಾಟರಿಗಳನ್ನು ಚಾರ್ಜ್​ ಮಾಡುವಾಗ ಸಾಕಷ್ಟು ಜಾಗೃತೆಯಿಂದಿರಬೇಕು. ಬ್ಯಾಟರಿ ಜಾರ್ಜಿಂಗ್​ ವೇಳೆ ಇವು ಸರ್ಕಾರದಿಂದ ಅನುಮೋದನೆ ಪಡೆದ ಸರಿಯಾದ ರೇಟಿಂಗ್​ ಹೊಂದಿರುವ ಬ್ಯಾಟರಿಯೇ ಎಂಬುದನ್ನು ಖಾತರಿಪಡಿಸಿಕೊಳ್ಳಬೇಕು. ಈ ಬ್ಯಾಟರಿಗಳು ಎಎಸ್​ಐ 156 ಅಡಿಯಲ್ಲಿ ಅನುಮೋದಿತವಾಗಿರುವುದು ಅವಶ್ಯಕ. ಬ್ಯಾಟರಿ ಜಾರ್ಜಿಂಗ್​ ಆಗುತ್ತಿರುವಾಗ ಬೇರೆ ಬ್ಯಾಟರಿಯನ್ನು ವಾಹನಕ್ಕೆ ಬಳಸಬೇಡಿ. ಮತ್ತೊಂದು ಪ್ರಮುಖ ಅಂಶವೆಂದರೆ, ಅದೇ ಕಂಪನಿಯ ಬ್ಯಾಟರಿಯನ್ನು ಜಾರ್ಜ್​ ಮಾಡಬೇಕು. ಬ್ಯಾಟರಿಯಲ್ಲಿ ಬಳಕೆ ಮಾಡುವ ಲಿಥಿಯಂ ಐಯಾನ್​ ಸುಡುವ ಲೋಹ. ಇದು ಶಾಖದ ಸೂಕ್ಷ್ಮತೆ ಹೊಂದಿದ್ದು, ಸ್ಪೋಟಗೊಳ್ಳದಂತೆ ನೋಡಿಕೊಳ್ಳಬೇಕು. ಇದನ್ನು ಸರಿಯಾಗಿ ನಿರ್ವಹಣೆ ಮಾಡದೇ ಹೋದಲ್ಲಿ ಹಾನಿಯಾಗುತ್ತದೆ ಎಂದು ಅವರು ಹೇಳುತ್ತಾರೆ.

ಬ್ಯಾಟರಿ ಜಾರ್ಜಿಂಗ್​ಗೆ ನಿರ್ದಿಷ್ಟ ಸಮಯ ನಿಗದಿಪಡಿಸಲಾಗುತ್ತದೆ. ಬ್ಯಾಟರಿ ಜಾರ್ಜ್‌​ ಆದ ಬಳಿಕ ಅದು ಓವರ್​ಜಾರ್ಜ್​ ಆಗದು. ಆದಾಗ್ಯೂ ಈ ಬಗ್ಗೆ ಕಾಳಜಿ ಇರಲಿ. ಅತೀ ಹೆಚ್ಚು ಜಾರ್ಜ್​ ಮಾಡುವುದು ಕೂಡ ಅನಾಹುತಕ್ಕೆ ಕಾರಣವಾಗುತ್ತದೆ. ಅನೇಕ ಬಾರಿ ಇಂಥ ಹಾನಿಗೆ ಕಾರಣ ತಪ್ಪು ನಿರ್ವಹಣೆಯೇ ಆಗಿರುತ್ತದೆ. ಬ್ಯಾಟರಿಗಳನ್ನು ಸರಿಯಾಗಿ ಜಾರ್ಜ್​ ಮಾಡುವ ಜತೆಗೆ ಅದರ ಬಗ್ಗೆ ಎಚ್ಚರಿಕೆಯನ್ನು ಹೊಂದಿರಬೇಕು.

ಮುನ್ನೆಚ್ಚರಿಕೆ ಕ್ರಮಗಳು:

  • ವಾಹನ ಚಾರ್ಜಿಂಗ್​ ವೇಳೆ ತಯಾರಕರು ನೀಡಿರುವ ವೈರ್​ ಮತ್ತು ಅಡಾಪ್ಟರ್​ ಬಳಸಿ.
  • ರಾತ್ರಿಯೆಲ್ಲಾ ಬೈಕ್​ ಜಾರ್ಜ್​ ಮಾಡುವುದರಿಂದ ಚಾರ್ಜರ್​ ಸ್ಪೋಟಗೊಳ್ಳುವ ಅಪಾಯವನ್ನು ತಳ್ಳಿಹಾಕಲಾಗದು. ಇದು ಬ್ಯಾಟರಿ ಸಾಮರ್ಥ್ಯದ ಮೇಲೂ ಪರಿಣಾಮ ಬೀರುತ್ತದೆ.
  • ಬೈಕ್​ಗಳನ್ನು ಸ್ವಿಚ್​ಗಳಿಂದ ನೇರವಾಗಿ ಜಾರ್ಜ್​ ಮಾಡಬೇಡಿ. ಇದಕ್ಕೆ ಎಕ್ಸ್​ಟೆನ್ಷನ್​ ಬಳಕೆ ಬೇಡ.
  • ಸಾಧ್ಯವಾದಲ್ಲಿ ಸ್ಮೋಕ್​ ಪತ್ತೆ ಅಳವಡಿಸಿ.
  • ಹಳೆಯ ಲಿಥಿಯಂ ಅಯನ್​ ಬ್ಯಾಟರಿಯನ್ನು ಸುಮ್ಮನೆ ಮನೆಯಲ್ಲಿರಿಸಬೇಡಿ.
  • ಸಾರ್ವಜನಿಕ ಸ್ಥಳದಲ್ಲಿ ಅನುಮೋದಿತ ಚಾರ್ಜಿಂಗ್​ ಸ್ಟೇಷನ್‌ನ​ಲ್ಲಿ ಜಾರ್ಜ್​ ಮಾಡಿ.
  • ಇ-ವಾಹನ ಬ್ಯಾಟರಿಗಳನ್ನು ಶೇ.40ಕ್ಕಿಂತ ಕಡಿಮೆ ಮತ್ತು ಶೇ.80ಕ್ಕಿಂತ ಹೆಚ್ಚು ಜಾರ್ಜ್​ ಮಾಡಬೇಡಿ.
  • ಬ್ಯಾಟರಿಯನ್ನು ನಿಧಾನ ಚಾರ್ಜಿಂಗ್ ಚಾರ್ಜರ್​ನಿಂದ ಜಾರ್ಜ್​ ಮಾಡಿ.
  • ಬೇಗ ಜಾರ್ಜ್​ ಮಾಡುವ ಜಾರ್ಜ​ರ್​ ಬಳಕೆ ಬೇಡ.
  • ಬ್ಯಾಟರಿ ಚಾರ್ಜ್ ಆದ ಬಳಿಕ ಅದರ ಸ್ವಿಚ್​ ಅನ್ನು ಸರಿಯಾಗಿ ಆಫ್​ ಮಾಡಿ.

ಇದೀಗ ಅನೇಕ ಇ-ಕಾರ್​ಗಳು ಮಾರುಕಟ್ಟೆಯಲ್ಲಿವೆ. ಇವುಗಳನ್ನು ಶೇ.80ಕ್ಕಿಂತ ಹೆಚ್ಚು ಚಾರ್ಜ್ ಮಾಡಿದರೆ, ಎಚ್ಚರಿಕೆ ಗಂಟೆ ಸದ್ದು ಮಾಡುತ್ತದೆ. ಶೇ.90ರಷ್ಟು ಜಾರ್ಜ್ ಆಗುತ್ತಿದ್ದಂತೆ ಅದುವೇ ಚಾರ್ಜಿಂಗ್​ ನಿಲ್ಲಿಸುವ ಸೌಲಭ್ಯ ಹೊಂದಿದೆ.

ಇದನ್ನೂ ಓದಿ: ಇವಿ ಉತ್ಪಾದನಾ ಘಟಕ ಸ್ಥಾಪನೆ: ಸ್ಥಳ ಪರಿಶೀಲನೆಗಾಗಿ ಭಾರತಕ್ಕೆ ಆಗಮಿಸಲಿದೆ ಟೆಸ್ಲಾ ತಂಡ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.