Honor 200 Lite launched: ಚೀನಾದ ಪ್ರಸಿದ್ಧ ಸ್ಮಾರ್ಟ್‌ಫೋನ್ ಬ್ರ್ಯಾಂಡ್ ತಯಾರಕ ಹಾನರ್ ಹೊಸ ಸ್ಮಾರ್ಟ್‌ಫೋನ್ ಅನ್ನು ಭಾರತೀಯ ಮಾರುಕಟ್ಟೆಗೆ ತಂದಿದೆ. ಈಗಾಗಲೇ Honor 200 ಮತ್ತು Honor 200 Pro ಫೋನ್‌ಗಳನ್ನು ರಿಲೀಸ್ ಮಾಡಿರುವ ಕಂಪನಿ ಇತ್ತೀಚೆಗೆ ತನ್ನ 200 ಸರಣಿಯ ಮೂರನೇ ಸ್ಮಾರ್ಟ್‌ಫೋನ್ ಬಿಡುಗಡೆಗೊಳಿಸಿದೆ.
Honor 200 Lite ಎಂಬ ಹೊಸ ಫೋನ್‌ನಲ್ಲಿ ಅತ್ಯಧಿಕ ಕ್ಯಾಮೆರಾ ರೆಸಲ್ಯೂಶನ್ ಮತ್ತು AI ವ್ಯವಸ್ಥೆ ಇದೆ. ಇದು ಆಂಡ್ರಾಯ್ಡ್ ಮ್ಯಾಜಿಕ್ ಓಎಸ್ 8.0ನಲ್ಲಿ ಕಾರ್ಯನಿರ್ವಹಿಸುತ್ತದೆ. ಸೆಪ್ಟಂಬರ್ 26ರಿಂದ ಈ ಫೋನ್ Amazonನಲ್ಲಿ ಮಾರಾಟಕ್ಕೆ ಸಿಗಲಿದೆ.
Honor 200 Lite ವಿಶೇಷತೆಗಳು:
- ಡಿಸ್ಪ್ಲೇ: 6.7 ಇಂಚಿನ ಫುಲ್ HD+ AMOLED
- ಬ್ಯಾಟರಿ ಸಾಮರ್ಥ್ಯ: 4,500mAh
- ಬ್ರೈಟ್ನೆಸ್: 2,000 ನಿಟ್ಸ್
- ಸ್ಕ್ರೀನ್ ಟು ಬಾಡಿ ರೆಷಿಯೊ: 93.7 ಶೇಕಡಾ
- ವಿಶೇಷತೆ: ಐ ಪ್ರೊಟೆಕ್ಷನ್
- ಪ್ರೈಮರಿ ಕ್ಯಾಮೆರಾ: 108MP
- ಅಲ್ಟ್ರಾ ವೈಡ್ ಆ್ಯಗಲ್ ಲೆನ್ಸ್: 5MP
- ಮ್ಯಾಕ್ರೋ ಸೆನ್ಸಾರ್: 2MP
- ಫ್ರಂಟ್ ಕ್ಯಾಮೆರಾ: 50MP
- ಪ್ರೊಸೆಸರ್: ಮೀಡಿಯಾ ಟೆಕ್ ಡೈಮೆನ್ಶನ್ 6080 ಚಿಪ್ಸೆಟ್
- 8GB ವರ್ಚುವಲ್ RAM ಮತ್ತು 256GB ಇಂಟರ್ನಲ್ ಸ್ಟೋರೇಜ್
- AI ವೈಶಿಷ್ಟ್ಯಗಳು
- ಮ್ಯಾಜಿಕ್ 8.0 ಆಪರೇಟಿಂಗ್ ಸಿಸ್ಟಮ್
- 35W ಸ್ಪೀಡ್ ಚಾರ್ಜಿಂಗ್
ಭದ್ರತಾ ವೈಶಿಷ್ಟ್ಯಗಳು:
- ಸೈಡ್ ಫಿಂಗರ್‌ಪ್ರಿಂಟ್ ಸೆನ್ಸಾರ್
- ಫೇಸ್ ಅನ್‌ಲಾಕ್
ಕನೆಕ್ಟಿವಿಟಿ ವೈಶಿಷ್ಟ್ಯಗಳು:
- ವೈ-ಫೈ
- ಜಿಪಿಎಸ್
- ಬ್ಲೂಟೂತ್
- ಡ್ಯುಯಲ್ ಸಿಮ್ ಸ್ಲಾಟ್
- USB ಟೈಪ್-ಸಿ ಪೋರ್ಟ್
Honor 200 ಲೈಟ್ ಕಲರ್ಸ್:
- ಮಿಡ್ನೈಟ್ ಬ್ಲ್ಯಾಕ್
- ಸಿಯಾನ್ ಲೇಕ್
- ಸ್ಟಾರಿ ಬ್ಲೂ
Honor 200 Lite ಬೆಲೆ: 15,999 ರೂ.ಯಿಂದ ಪ್ರಾರಂಭ
Honor 200 Lite Camera: Honor 200 Lite ಸ್ಮಾರ್ಟ್‌ಫೋನ್ 108MP ಪ್ರೈಮೆರಿ ಸೆನ್ಸಾರ್, 5MP ಅಲ್ಟ್ರಾ ವೈಡ್ ಆ್ಯಂಗಲ್ ಲೆನ್ಸ್, 2MP ಮ್ಯಾಕ್ರೋ ಸೆನ್ಸರ್‌ಗಳನ್ನು ಹೊಂದಿದೆ. ಇದರೊಂದಿಗೆ, ಸೆಲ್ಫಿಗಾಗಿ 50MP ಮುಂಭಾಗದ ಕ್ಯಾಮೆರಾ ಹೊಂದಿದೆ.
ಹಾನರ್ 200 ಲೈಟ್ ಬ್ಯಾಟರಿ: 4,500mAh ಬ್ಯಾಟರಿ ಹೊಂದಿದೆ. 35W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಕನೆಕ್ಟಿವಿಟಿಗಾಗಿ ವೈ-ಫೈ, ಜಿಪಿಎಸ್, ಬ್ಲೂಟೂತ್, ಡ್ಯುಯಲ್ ಸಿಮ್ ಸ್ಲಾಟ್, ಯುಎಸ್‌ಬಿ ಟೈಪ್-ಸಿ ಪೋರ್ಟ್‌ನಂತಹ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ.
ಇದನ್ನೂ ಓದಿ: 2,104 ಕೋಟಿ ರೂಪಾಯಿ ವೆಚ್ಚದ ಚಂದ್ರಯಾನ-4 ಯೋಜನೆಗೆ ಕೇಂದ್ರ ಒಪ್ಪಿಗೆ - Chandrayaan 4 Mission