ETV Bharat / technology

ಬೇರೆ ಗ್ರಹದಲ್ಲಲ್ಲ, ಭೂಮಿ ಮೇಲೆ ನಮ್ಮ ನಡುವೆಯೇ ಇವೆ ಏಲಿಯನ್ಸ್​; ಹಾರ್ವಡ್​​ ವಿವಿ ಸಂಶೋಧಕರ ವಾದ - Aliens are among us

author img

By ETV Bharat Karnataka Team

Published : Jun 19, 2024, 12:02 PM IST

2016ರಲ್ಲಿ ಹಾರ್ವಡ್​​ ವಿಶ್ವವಿದ್ಯಾಲಯ ಈ ಕುರಿತು ತನಿಖೆಗೆ ಮುಂದಾಗಿದ್ದು, ಈ ಕುರಿತು ಹೊಸ ವಾದವನ್ನು ಮಂಡಿಸಿದೆ.

harvard-researchers-says-aliens-may-be-living-among-us
ಏಲಿಯನ್ಸ್​ (ಸಂಗ್ರಹ ಚಿತ್ರ)

ಹೈದರಾಬಾದ್​: ಮನುಷ್ಯರಂತೆ ಇರುವ ಜೀವಿಗಳು ಅನ್ಯಗ್ರಹದಲ್ಲಿದೆಯೇ, ಭೂಮಿಯೊಂದರಲ್ಲಿ ಮಾತ್ರವೇ ಜೀವಿಗಳಿರುವುದಾ ಎಂಬ ಕುತೂಹಲಕ್ಕೆ ಹಲವಾರು ವರ್ಷಗಳಿಂದ ಶೋಧ ನಡೆಯುತ್ತಿದೆ. ಆದರೆ, ಇದುವರೆಗೂ ಈ ಕುರಿತು ನಿಖರ ಪತ್ತೆಯಾಗಿಲ್ಲ. ಈ ಹಿನ್ನೆಲೆಯಲ್ಲಿ ಕೆಲವು ವಿಜ್ಞಾನಿಗಳು ಇಡೀ ಜಗತ್ತಿನಲ್ಲಿನ ನಮ್ಮಂತೆ ಇರುವ ಜನರಿಲ್ಲ ಎಂದು ವಾದಿಸುತ್ತಾರೆ. ಈ ಸಂಬಂಧ ಅನೇಕ ಸಿದ್ಧಾಂತಗಳನ್ನು ಮುಂದಿಡುತ್ತಾರೆ. ಇದೀಗ ಹಾರ್ವಡ್​​ ವಿಶ್ವವಿದ್ಯಾಲಯ ಮತ್ತೊಂದು ಹೊಸ ವಾದವನ್ನು ತಂದಿದೆ. ಅದರ ಅನುಸಾರ ನಾವು ಹುಡುಕುತ್ತಿರುವ ಏಲಿಯನ್​ಗಳು ಬೇರೆಲ್ಲೋ ಇಲ್ಲ. ನಮ್ಮ ಮಧ್ಯೆ ನಮಗೆ ತಿಳಿಯದಂತೆ ಇದ್ದಾರೆ ಎನ್ನುವ ಹೇಳಿಕೆ ಮೂಲಕ ಅಚ್ಚರಿ ಮೂಡಿಸಿದೆ.

2016ರಲ್ಲಿ ಹಾರ್ವಡ್​​ ವಿಶ್ವವಿದ್ಯಾಲಯ ಮಾನವ ಸಮೃದ್ಧಿ ಕಾರ್ಯಕ್ರಮಗಳನ್ನು ಪ್ರಾರಂಭಿಸಿದೆ. ಇತ್ತೀಚಿಗೆ ಈ ಅಧ್ಯಯದಲ್ಲಿ ಅನ್ಯಗ್ರಹ ಜೀವಿಗಳ ಕುರಿತು ಹೊಸ ವಾದ ಮಂಡಿಸಲಾಗಿದೆ. ಗುರುತಿಸಲಾಗದ ಅಸಂಗತ ವಿದ್ಯಮಾನಗಳು (ಯುಎಪಿ) ಕುರಿತು ತಿಳಿಸಲಾಗಿದೆ. ಅಂದರೆ ಯುಎಫ್​ಒ ಮತ್ತು ಹಾರುವ ತಟ್ಟೆಗಳನ್ನು ಅನ್ಯಗ್ರಹ ಜೀವಿಗಳ ಜೀವನಕ್ಕೆ ಸಂಬಂಧ ಕಲ್ಪಿಸಲಾಗಿದೆ. ಅಷ್ಟೇ ಅಲ್ಲದೇ, ಈ ಅನ್ಯಗ್ರಹ ಜೀವಿಗಳು ಭೂಮಿ ಮತ್ತು ಚಂದ್ರನ ಮೇಲೆ ನಮ್ಮೊಂದಿಗೆ ಹೆಜ್ಜೆ ಹಾಕುತ್ತಿದ್ದಾರೆ. ಏಲಿಯನ್​ಗಳು ಭೂಮಿ ಮೇಲಿನ ತಮ್ಮ ಗೆಳೆಯರನ್ನು ಭೇಟಿಯಾಗಲು ಫ್ಲೈಯಿಂಗ್​ ಸಾಸರ್​​ಗಳ ಬಳಕೆ ಮಾಡುತ್ತಿದ್ದಾರೆ ಎಂದಿದ್ದಾರೆ. ಈ ಅಧ್ಯಯನದ ಹೊಸ ಕಲ್ಪನೆಯನ್ನು ಕ್ರಿಪ್ಟೊ - ಟೆರಿಸ್ಟ್ರಿಯಲ್​ ಎಂದು ಕರೆಯಲಾಗಿದೆ.

ಕ್ರಿಪ್ಟೊ ಟೆರಿಸ್ಟ್ರಿಯಲ್​ ಎಂಬುದು ವಿಶಿಷ್ಟ ಮತ್ತು ನಿಗೂಢ ಅನ್ಯ ಜೀವಿಯಾಗಿದ್ದು, ಇವು ಭವಿಷ್ಯದಲ್ಲಿ ಮತ್ತು ಬುದ್ದಿವಂತ ಡೈನೋಸರ್​ಗಳಿಗೆ ಮೊದಲೇ ಭೂಮಿ ಮೇಲೆ ಇದ್ದವು ಎಂದು ತಿಳಿಸಲಾಗಿದೆ. ಆಳವಾದ ಅರ್ಥೈಸುವಿಕೆ ಆಧಾರದ ಮೇಲೆ ಈ ಕಲ್ಪನೆಯನ್ನು ಸಂಶೋಧಕರು ಪ್ರಸ್ತಾಪಿಸಿದ್ದಾರೆ. ಇದು ತಾತ್ಕಲಿಕವಾಗಿ ಈ ಸಿದ್ಧಾಂತವನ್ನು ಬಲಗೊಳಿಸುತ್ತದೆ. ಇದು ಸತ್ಯವಾದರೆ, ಏಲಿಯನ್ಸ್​ಗಳು ನಮ್ಮ ಮನೆಯ ಸಮೀಪವೇ ವಾಸಿಸುತ್ತಿವೆ ಎಂಬುದರ ಬಗ್ಗೆ ಆಶ್ಚರ್ಯ ಪಡಬೇಕಿಲ್ಲ.

ನಾಲ್ಕು ಅಂಶಗಳ ಪ್ರತಿಪಾದನೆ: ಅನ್ಯಗ್ರಹ ಜೀವನಗಳ ವಿಧಗಳ ಕುರಿತು ಹೊಸ ಅಧ್ಯಯನದಲ್ಲಿ ನಾಲ್ಕು ಅಂಶವನ್ನು ತಿಳಿಸಲಾಗಿದೆ.

ಮಾನವ ಕ್ರಿಪ್ಟೊ ಟೆರಿಸ್ಟ್ರಿಯಲ್​: ಅಭಿವೃದ್ಧಿ ತಂತ್ರಜ್ಞಾನದೊಂದಿಗೆ ಪ್ರಾಚೀನ ಮಾನವ ನಾಗರಿಕತೆ ಆಗಿದೆ. ಬಹಳ ಹಿಂದೆಯೇ ಬಹುತೇಕರು ಸಾವನ್ನಪ್ಪಿದ್ದು, ಇದು ಉಳಿದ ರೀತಿಯಲ್ಲಿ ಮುಂದುವರೆದಿದೆ.

ಹೋಮಿನಿಡ್ ಅಥವಾ ಥೆರೋಪಾಡ್ ಕ್ರಿಪ್ಟೋಟೆರೆಸ್ಟ್ರಿಯಲ್ಸ್: ತಾಂತ್ರಿಕವಾಗಿ ಮುಂದುವರಿದ ಮಾನವ ಹೊರತಾದ ನಾಗರಿಕತೆಯಾಗಿದೆ. ಕೆಲವು ಪ್ರಾಣಿಗಳು ಭೂಗತವಾಗಿ ಎಲ್ಲರಿಂದ ದೂರವಾಗಿ ಅಜ್ಞಾತವಾಗಿ ಬದುಕಲು ವಿಕಸನಗೊಂಡಿವೆ. ಈ ಪ್ರಾಚೀನ ಜೀವಿಗಳು ಮಂಗನಂತಹ ಹೋಮಿನಡ್​ ಮಾನವರಾಗಿದ್ದಾರೆ. ಅಥವಾ ಈ ಮೊದಲಿನ ಅಪರಿಚಿತ ಬುದ್ಧಿವಂತ ಡೈನೋಸಾರ್​ ರೂಪಗಳಾಗಿವೆ.

ಹಿಂದಿನ ಅನ್ಯಗ್ರಹ ಜೀವಿಗಳು ಅಥವಾ ಎಕ್ಸ್‌ಟ್ರಾಟೆಂಪೆಸ್ಟ್ರಿಯನ್ ಕ್ರಿಪ್ಟೋಟೆರೆಸ್ಟ್ರಿಯಲ್‌ಗಳು: ಇವು ಜಗತ್ತಿನ ಮತ್ತೊಂದು ಭಾಗದಿಂದ ಭೂಮಿಗೆ ಬಂದ ಅಥವಾ ಭವಿಷ್ಯದಲ್ಲಿ ಬರಲಿರುವ ಮಾನವರಾಗಿದ್ದಾರೆ. ಇವು ಚಂದ್ರನಂತಹ ಸ್ಥಳಗಳಲ್ಲಿ ಅಡಗಿಕೊಂಡಿರಬಹುದು. ಇವು ಬ್ರಹ್ಮಾಂಡದ ಇನ್ನೊಂದು ಭಾಗದಿಂದ ಭೂಮಿಗೆ ಬಂದ ಜೀವಿಗಳು ಅಥವಾ ಭವಿಷ್ಯದ ಮಾನವರು. ಅದು ಚಂದ್ರನಂತಹ ಸ್ಥಳಗಳಲ್ಲಿ ಅಗೋಚರವಾಗಿ ಅಡಗಿಕೊಂಡಿರಬಹುದು.

ಮ್ಯಾಜಿಕಲ್​ ಕ್ರಿಪ್ಟೊಟೆರಿಸ್ಟಿಯಲ್: ಇವು ಭೂಮಿಯ ಮೇಲೆ ಕಡಿಮೆ ಬೆಳವಣಿಗೆ ಕಾಣುವ ಅನ್ಯಗ್ರಹ ಜೀವಿಗಳಾಗಿದೆ. ಇವು ಭೂಮಿಯ ಮೇಲಿನ ಸುಂದರಿಯರಿಗಿಂತ ಹೆಚ್ಚು. ಇವರು ಯಕ್ಷಿಣಿ ಮತ್ತು ಕಿನ್ನರಿಯ ರೀತಿ ತಾಂತ್ರಿಕವಾಗಿ ಬುದ್ಧಿವಂತರಲ್ಲ. ಆದರೆ, ಇವರು ಪವಾಡ ಸೃಷ್ಟಿಸುತ್ತಾರೆ.

ಇದೆಲ್ಲಾ ನಿಜವೇ?: ಈ ಎಲ್ಲ ವಾದ ಮಂಡಿಸಿರುವ ಹಾರ್ವಡ್​​ ಯೂನಿವರ್ಸಿಟಿಯ ಕಲ್ಪನೆಗಳು ಅನೇಕ ವಿಜ್ಞಾನಿಗಳಲ್ಲಿ ಮನವರಿಕೆ ಮಾಡುವಲ್ಲಿ ವಿಫಲವಾಗಿದೆ. ಸಂಶೋಧಕರು ಕೂಡ ಈ ವಾದವನ್ನು ತರ್ಕ ಮತ್ತು ವಿಶಾಲ ವ್ಯಕ್ತಿಯಲ್ಲಿ ಮತ್ತೊಮ್ಮೆ ಪರೀಕ್ಷಿಸಿ ಯೋಚಿಸಬೇಕು ಎನ್ನುತ್ತಾರೆ. ಯಾವುದೇ ಪರಿಪೂರ್ಣ ತನಿಖೆ ಇಲ್ಲದೇ, ಇವುಗಳನ್ನು ತಳ್ಳಿಹಾಕುವುದು ಕೂಡ ದಡ್ಡತನ ಎನ್ನುತ್ತಾರೆ. ಈ ಅಧ್ಯಯನ ಕುರಿತು ಮತ್ತಷ್ಟು ತನಿಖೆಯ ಅಗತ್ಯವಿದೆ.

ರಕ್ಷಣೆ: ಅನ್ಯಗ್ರಹ ಜೀವಿಗಳ ಅಸ್ತಿತ್ವ ಕುರಿತು ವಾದಗಳು ಮುಂದುವರೆದಂತೆಲ್ಲಾ ಲೇಖಕ ರಾನ್​ ಹಾಲ್ಲಿಡೇ ಮತ್ತೊಂದು ಅಂಶವನ್ನು ಪ್ರಶ್ನಿಸಿದ್ದಾರೆ. ಅವರು ಯೋಚಿಸುವಂತೆ ಕೆಲವು ರಹಸ್ಯ ರಚನೆಗಳು ಈ ಅನ್ಯಗ್ರಹ ಜೀವಿಗಳನ್ನು ರಕ್ಷಿಸಿದೆ ಎಂದಿದ್ದಾರೆ. ಸ್ಕಾರಾ ಬ್ರೀ ಕಲ್ಲಿನ ರಚನೆ, ಮೆಶೋವಿ ಗುಡಿಸಲು ಮತ್ತು ಸ್ಕಾಟ್ಲೆಂಡ್‌ನ ಬ್ರಾಕ್ಸ್ ಕಲ್ಲಿನ ಗೋಡೆಯಂತಹ ರಹಸ್ಯ ರಚನೆಗಳನ್ನು ಅನ್ಯಗ್ರಹದ ಜೀವಿಗಳಿಂದ ಅಪಾಯಗಳಿಂದ ರಕ್ಷಿಸಲು ನಿರ್ಮಿಸಲಾಗಿದೆ ಎಂದಿದ್ದಾರೆ.

ಈ ಕಲ್ಲುಗಳ ಮೇಲೆ ಜನಪದ ಕಥೆಗಳನ್ನು ನೆನಪಿಸುವ ಚಿತ್ರಗಳಿವೆ ಎಂದು ಹೇಳಲಾಗಿದೆ. ಆದರೆ, ಅವುಗಳ ಚಿತ್ರಗಳು ಉಲ್ಲೇಖಿಸುವುದಕ್ಕಿಂತ ಸಂಪೂರ್ಣ ವಿಭಿನ್ನ ಕಥೆ ನೀಡುತ್ತವೆ. ಈ ಕಟ್ಟಡಗಳ ರಚನೆ ಮತ್ತು ಉದ್ದೇಶಗಳು ಅರ್ಥವಾಗುತ್ತಿಲ್ಲ ಎಂದು ಪುರಾತತ್ವಜ್ಞರು ತಿಳಿಸುತ್ತಾರೆ. ಬ್ರಾಕ್ಸ್‌ನ ಕಲ್ಲಿನ ಗೋಪುರಗಳನ್ನು ಅನ್ಯಗ್ರಹ ಜೀವಿಗಳೊಂದಿಗೆ ಸಂಪರ್ಕಿಸಲು ನಿರ್ಮಿಸಲಾಗಿದೆ. ಇವು ಪಿರಮಿಡ್‌ಗಳಂತಹ ರಹಸ್ಯ ರಚನೆಗಳನ್ನು ಹೋಲುತ್ತವೆ ಎಂದಿದ್ದಾರೆ.

ಇದನ್ನೂ ಓದಿ: ಮೆಕ್ಸಿಕೋ ಸಂಸತ್ತಿನಲ್ಲಿ 1,800 ವರ್ಷಗಳಷ್ಟು ಹಳೆಯ ಅನ್ಯಗ್ರಹ ಜೀವಿಗಳ ಪಳೆಯುಳಿಕೆ ಪ್ರದರ್ಶನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.