ಹೈದಾರಬಾದ್: ಟೆಕ್ ದೈತ್ಯ ಗೂಗಲ್ ಆಂಡ್ರಾಯ್ಡ್ ಸಾಧನಗಳಿಗೆ ತನ್ನ ಹೊಸ ಫೈಂಡ್ ಮೈ ಡಿವೈಸ್ ಅನ್ನು ವಿಶ್ವದಾದ್ಯಂತ ಪರಿಚಯಿಸುತ್ತಿದೆ. ಇದು ಮೊದಲ ಹಂತದಲ್ಲಿ ಯುನೈಟೆಡ್ ಸ್ಟೇಟ್ಸ್ ಮತ್ತು ಕೆನಡಾದಲ್ಲಿ ಪ್ರಾರಂಭವಾಗುತ್ತಿದೆ. ಫೈಂಡ್ ಮೈ ಡಿವೈಸ್ ನೆಟ್ ವರ್ಕ್ ಆಂಡ್ರಾಯ್ಡ್ ಬಳಕೆದಾರರಿಗೆ ಕಳೆದುಹೋದ ಸಾಧನಗಳನ್ನು ಟ್ರ್ಯಾಕ್ ಮಾಡಲು ಮತ್ತು ಪತ್ತೆಗೆ ಅನುವು ಮಾಡಿಕೊಡುತ್ತದೆ. ಆಂಡ್ರಾಯ್ಡ್ ಸಾಧನಗಳಲ್ಲಿ ಹೊಸ ಫೈಂಡ್ ಮೈ ಡಿವೈಸ್ ಬಳಸಲು ಕೆಳಗಿನ ಐದು ಮಾರ್ಗಗಳನ್ನು ಅನುಸರಿಸಿ.
1.ಆಫ್ ಲೈನ್ ಸಾಧನಗಳ ಪತ್ತೆ: ಆಂಡ್ರಾಯ್ಡ್ ಫೋನ್ ಮತ್ತು ಟ್ಯಾಬ್ಲೆಟ್ಗಳು ಆಫ್ ಲೈನ್ನಲ್ಲಿದ್ದರೂ ಸಹ ಅವುಗಳನ್ನು ರಿಂಗ್ ಮಾಡುವ ಮೂಲಕ ಅಥವಾ ಮ್ಯಾಪ್ ಅಪ್ಲಿಕೇಶನ್‌ನಲ್ಲಿ ಇರುವ ಸ್ಥಳ ವೀಕ್ಷಿಸುವ ಮೂಲಕ ಅವುಗಳನ್ನು ಪತ್ತೆ ಮಾಡಬಹುದಾಗಿದೆ. ವಿಶೇಷವಾಗಿ ಪಿಕ್ಸೆಲ್ ಹಾರ್ಡ್‌ವೇರ್‌ನಿಂದಾಗಿ ಗೂಗಲ್ ಪಿಕ್ಸೆಲ್ 8 ಮತ್ತು 8 ಪ್ರೊ ಬಳಕೆದಾರರು ತಮ್ಮ ಸಾಧನಗಳು ಸ್ವಿಚ್ಡ್ ಆಫ್ ಆಗಿದ್ದರೆ ಅಥವಾ ಬ್ಯಾಟರಿ ಖಾಲಿಯಾಗಿ ಡೆಡ್ ಆದರೂ ಸಹ ಸುಲಭವಾಗಿ ಪತ್ತೆ ಹಚ್ಚಬಹುದು. ಈ ವ್ಯವಸ್ಥೆ ಮೇ ತಿಂಗಳಿನಿಂದ ಬಳಕೆಗೆ ಮುಕ್ತವಾಗಲಿದೆ.
2. ಬ್ಲೂಟೂತ್ ಟ್ಯಾಗ್‌ಗಳು: ಫೈಂಡ್ ಮೈ ಡಿವೈಸ್ ಅಪ್ಲಿಕೇಶನ್‌ನಲ್ಲಿ ಚಿಪೋಲೋ ಮತ್ತು ಪೆಬಲ್‌ಬೀಯಿಂದ ಬ್ಲೂಟೂತ್ ಟ್ರ್ಯಾಕರ್ ಟ್ಯಾಗ್‌ಗಳೊಂದಿಗೆ ಬಳಕೆದಾರರು ತಮ್ಮ ಕೀಗಳು, ವಾಲೆಟ್ ಅಥವಾ ಲಗೇಜ್‌ನಂತಹ ದೈನಂದಿನ ವಸ್ತುಗಳನ್ನು ಪತ್ತೆಹಚ್ಚಲು ಸಾಧ್ಯವಾಗುತ್ತದೆ. ಇದು ಸೌಲಭ್ಯ ಮುಂದಿನ ತಿಂಗಳಿನಿಂದ ಪ್ರಾರಂಭವಾಗುತ್ತದೆ. ಫೈಂಡ್ ಮೈ ಡಿವೈಸ್ ನೆಟ್ ವರ್ಕ್ಗಾಗಿ ನಿರ್ಮಿಸಲಾದ ಈ ಟ್ಯಾಗ್‌ಗಳು, ಅಪರಿಚಿತ ಟ್ರ್ಯಾಕರ್ಗಳಿಂದ ರಕ್ಷಿಸುತ್ತದೆ.
3. ಹತ್ತಿರದಲ್ಲಿರುವ ವಸ್ತುಗಳ ಪತ್ತೆಗೆ ಸಹಾಯ: ಬಳಕೆದಾರರು ತಮ್ಮ ಕಳೆದುಹೋದ ಸಾಧನ ಹತ್ತಿರದಲ್ಲಿದ್ದರೆ ಅದನ್ನು ಪತ್ತೆಹಚ್ಚಲು ಸಹಾಯ ಮಾಡಲು "“Find nearby" ಬಟನ್ ವ್ಯವಸ್ಥೆ ಇರಲಿದೆ. ಮೇ ತಿಂಗಳಲ್ಲಿ ಬ್ಲೂಟೂತ್ ಟ್ಯಾಟ್ಗಳು ಪ್ರಾರಂಭವಾದಾಗ ಬಳಕೆದಾರರು ತಮ್ಮ ವ್ಯಾಲೆಟ್ ಅಥವಾ ಕೀಗಳಂತಹ ದೈನಂದಿನ ವಸ್ತುಗಳನ್ನು ಹುಡುಕಲು ಇದನ್ನು ಬಳಸಬಹುದು.
4. ನೆಸ್ಟ್‌ನೊಂದಿಗೆ ಮನೆಯಲ್ಲಿ ಕಳೆಹೋದ ವಸ್ತುಗಳ ಪತ್ತೆ ಸುಲಭ: ಮನೆಯಲ್ಲಿಯೇ ಕಳೆದುಹೋದ ವಸ್ತುಗಳ ಪತ್ತೆಗೆ ಫೈಂಡ್ ಮೈ ಡಿವೈಸ್ Nest ಸಾಧನಗಳೊಂದಿಗೆ ಸಂಯೋಜನೆಗೊಳ್ಳುತ್ತದೆ. ಇದು ಕಳೆದುಹೋದ ಸಾಧನ ಎಲ್ಲಿದೆ ಎಂದು ಹುಡುಕಲು ಅನುವು ಮಾಡಿ ಕೊಡುತ್ತದೆ ಮತ್ತು ಹುಡುಕಾಟವನ್ನು ಸರಳಗೊಳಿಸುತ್ತದೆ.
5. ಸ್ನೇಹಿತರು ಮತ್ತು ಕುಟುಂಬಸ್ಥರೊಂದಿಗೆ ವಸ್ತುಗಳ ಮಾಹಿತಿ ಹಂಚಿಕೊಳ್ಳಿ: ಬಳಕೆದಾರರು ಆ್ಯಪ್ ಮೂಲಕ ವಸ್ತುಗಳ ಮಾಹಿತಿಯನ್ನು ಹಂಚಿಕೊಳ್ಳಬೇಕು. ಇದರಿಂದ ಪ್ರತಿಯೊಬ್ಬರೂ ತಮ್ಮ ಫೋನ್ ಮೂಲಕವೇ ವಸ್ತುಗಳ ಮೇಲೆ ಕಣ್ಣಿಡಬಹುದು ಎಂದು ಗೂಗಲ್ ತಿಳಿಸಿದೆ. ಉದಾಹರಣೆಗೆ, ನಿಮ್ಮ ರೂಮ್‌ಮೇಟ್‌ನೊಂದಿಗೆ ಮನೆಯ ಕೀಲಿ ಇಟ್ಟಿರುವ ಮಾಹಿತಿ.
ಇದನ್ನೂ ಓದಿ: ಸ್ಯಾಮ್ಸಂಗ್ ಗ್ಯಾಲಕ್ಸಿ M ಸರಣಿಯ ಹೊಸ ಸ್ಮಾರ್ಟ್ಫೋನ್ ಬಿಡುಗಡೆ: ₹__ಆರಂಭಿಕ ಬೆಲೆಯಲ್ಲಿ ಲಭ್ಯ - Samsung Smartphones